For Quick Alerts
ALLOW NOTIFICATIONS  
For Daily Alerts

ಮನೆ ಔಷಧ: ಮಾತ್ರೆಯ ಹಂಗಿಲ್ಲದೇ ತಲೆನೋವು ಮಾಯ!

By Arshad
|

ನಮ್ಮಲ್ಲಿ ಹೆಚ್ಚಿನವರಿಗೆ ಚಿಕ್ಕ ತಲೆನೋವು ಬಂದರೂ ಔಷಧಿ ಅಂಗಡಿಗೆ ಅಥವಾ ವೈದ್ಯರ ಬಳಿ ಹೋಗಿ ಮಾತ್ರೆ ತೆಗೆದುಕೊಂಡು ತಿಂದರೇ ಸಮಾಧಾನ. ಆದರೆ ವಾಸ್ತವವಾಗಿ ಯಾವುದೇ ಮಾತ್ರೆ ಅಡ್ಡಪರಿಣಾಮಗಳ ಹೊರತಾಗಿಲ್ಲ. ಆದ್ದರಿಂದ ಮಾತ್ರೆಗಳ ಬದಲಿಗೆ ನಿಸರ್ಗ ನೀಡಿರುವ ಸಮಾಗ್ರಿಗಳನ್ನೇ ಬಳಸಿ ಚಿಕ್ಕಪುಟ್ಟ ನೋವುಗಳನ್ನು ಏಕೆ ಶಮನಮಾಡಿಕೊಳ್ಳಬಾರದು? ಅಲ್ಲದೇ ಇವುಗಳಲ್ಲಿ ಅಡ್ಡಪರಿಣಾಮಗಳಿಲ್ಲವಾದುದರಿಂದ ಸುರಕ್ಷಿತವೂ ಹೌದು. ಕ್ಷಣಾರ್ಧದಲ್ಲಿ ತಲೆನೋವು ನಿವಾರಿಸುವ ಮನೆಮದ್ದುಗಳು

ತಲೆನೋವಿಗೆ ಕೆಲವಾರು ಕಾರಣಗಳಿವೆ. ಹೆಚ್ಚಿನವು ಮೆದುಳಿಗೆ ರಕ್ತಪರಿಚಲನೆಯಲ್ಲಿ ಆಗುವ ಏರುಪೇರಿನ ಪರಿಣಾಮಗಳಾಗಿವೆ. ಉಳಿದಂತೆ ಮೆದುಳಿನ ನರಗಳಲ್ಲಿ ರಕ್ತ ಪರಿಚಲನೆಗೆ ಅಡ್ಡಿ, ಅಸಾಮಾನ್ಯವಾದ ನ್ಯೂರಾನ್ ಚಟುವಟಿಕೆ, ಅನುವಂಶೀಯ ಕಾರಣಗಳು, ಅತಿ ಹೆಚ್ಚಿನ ಧೂಮಪಾನ, ಮದ್ಯಪಾನ, ದೇಹದಲ್ಲಿ ನೀರಿನ ಕೊರತೆ, ಅತಿ ಹೆಚ್ಚಿನ ನಿದ್ದೆ, ಹೆಚ್ಚಿನ ಪ್ರಮಾಣದಲ್ಲಿ ನೋವು ನಿವಾರಕಗಳ ಸೇವನೆ, ಕಣ್ಣುಗಳ ಒತ್ತಡ, ಕುತ್ತಿಗೆಯ ಒತ್ತಡ ಅಥವಾ ಸೆಳೆತ ಮೊದಲಾದವು ಇದಕ್ಕೆ ಕಾರಣವಾಗಿದೆ. ಈ ತಲೆನೋವಿಗೆ ಸುಲಭ ಶಮನವನ್ನು ನೀಡುವ ಕೆಲವು ನೈಸರ್ಗಿಕ ವಿಧಾನಗಳನ್ನು ಇಂದು ನೋಡೋಣ.....

ಲ್ಯಾವೆಂಡರ್ ಹೂವು

ಲ್ಯಾವೆಂಡರ್ ಹೂವು

ಈ ಹೂವಿನಲ್ಲಿ ಪ್ರತಿಜೀವಕ ಹಾಗೂ ಉರಿಯೂತ ನಿವಾರಕವಿದೆ. ಈ ಹೂವಿನ ಒಣ ಪಕಳೆಗಳನ್ನು ಚಿಕ್ಕದಾಗಿ ಪುಡಿ ಮಾಡಿ ಕುದಿಯುತ್ತಿರುವ ನೀರಿನಲ್ಲಿ ಹಾಕಿ ಆಗ ಏಳುವ ಹಬೆಯಲ್ಲಿ ಮುಖವನ್ನಿಟ್ಟು ಕಣ್ಣುಗಳನ್ನು ಮುಚ್ಚಿಕೊಂಡು ಮೂಗಿನಿಂದ ಗಾಢವಾಗಿ ಉಸಿರಾಡುವ ಮೂಲಕ ಉತ್ತಮ ಪರಿಹಾರ ದೊರಕುತ್ತದೆ.

ತುಳಸಿ

ತುಳಸಿ

ಇದರ ಪ್ರಯೋಜನಗಳು ಹಲವಾರಿದ್ದು ತಲೆನೋವಿನ ಶಮನಕ್ಕೂ ಉತ್ತಮವಾಗಿದೆ. ತಲೆನೋವಿದ್ದಾಗ ಕೆಲವು ತುಳಸಿ ಎಲೆಗಳನ್ನು ಜಜ್ಜಿ ಈ ಎಲೆಗಳನ್ನು ಹಣೆಯ ಪಕ್ಕದ ಭಾಗ (ಕನ್ನಡಕದ ಕಡ್ಡಿ ತಾಗುವ ಭಾಗ) ಕ್ಕೆ ರಸ ತಗಲುವಂತೆ ಕೊಂಚ ಒತ್ತಿ ಹಚ್ಚಿ. ಇಡಿಯ ಹಣೆಗೆ ಹಚ್ಚುವ ಅಗತ್ಯವಿಲ್ಲ. ತಲೆನೋವಿಗೆ ಇದು ಅತ್ಯುತ್ತಮವಾದ ನೈಸರ್ಗಿಕವಾದ ಪರಿಹಾರವಾಗಿದೆ. ಆರೋಗ್ಯ ರಕ್ಷಕ- ತುಳಸಿ ಎಲೆಯ ವೈಶಿಷ್ಟ್ಯ ಒಂದೇ, ಎರಡೇ?

ಪುದೀನಾ

ಪುದೀನಾ

ಪುದೀನಾ ಎಲೆಗಳನ್ನು ಕುದಿಸಿ ತಯಾರಿಸಿದ ಟೀ ಯನ್ನು ಬಿಸಿಬಿಸಿಯಾಗಿ ಕುಡಿಯುವ ಮೂಲಕ ತಲೆನೋವು ಮತ್ತು ಅರೆತಲೆನೋವು ಕಡಿಮೆಯಾಗುತ್ತದೆ. ಅಲ್ಲದೇ ಹೊಟ್ಟೆಯ ನೋವು, ಅಜೀರ್ಣತೆ, ವಾಕರಿಕೆ ಹಾಗೂ ವಾಯುಪ್ರಕೋಪವನ್ನೂ ಕಡಿಮೆಮಾಡುತ್ತದೆ. ಪುದೀನಾ ಸೊಪ್ಪಿನ ಚಹಾ: ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ರೋಸ್ಮರಿ

ರೋಸ್ಮರಿ

ಈ ಮೂಲಿಕೆಯ ಪುಡಿಯನ್ನು ಕುದಿಸಿ ತಯಾರಿಸಿದ ಟೀಯನ್ನು ಬಿಸಿಬಿಸಿಯಾಗಿ ಹೀರುವ ಮೂಲಕ ತಲೆನೋವು ಕಡಿಮೆಯಾಗುತ್ತದೆ. ಅಲ್ಲದೇ ಚಳಿಗಾಲ ಮತ್ತು ಶರತ್ಕಾಲದಲ್ಲಿ ಖಿನ್ನತೆಗೆ ಒಳಗಾಗುವ seasonal affective disorder (SAD) ಎಂಬ ತೊಂದರೆಗೂ ಈ ಟೀ ಅತ್ಯುತ್ತಮ ಪರಿಹಾರ ಒದಗಿಸುತ್ತದೆ.

ಲೋಳೆಸರ

ಲೋಳೆಸರ

ಇದರಲ್ಲಿರುವ ಅಮೈನೋ ಆಮ್ಲಗಳು ಹಾಗೂ ಕಿಣ್ವಗಳು ಹಲವಾರು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿವೆ. ವಿಶೇಷವಾಗಿ ಚರ್ಮಕ್ಕೆ ಆಗುವ ಘಾಸಿಯನ್ನು ತಡೆಯುವುದು ಹಾಗೂ ತಲೆನೋವಿನಿಂದ ಶಮನವನ್ನೂ ನೀಡುತ್ತದೆ.

ಲವಂಗ ಮತ್ತು ಹರಳುಪ್ಪಿನ ಪೇಸ್ಟ್

ಲವಂಗ ಮತ್ತು ಹರಳುಪ್ಪಿನ ಪೇಸ್ಟ್

ಇದು ತಲೆನೋವಿಗೆ ಪರಿಣಾಮಕಾರಿ ಮನೆ ಮದ್ದು.ನೀವು ಮಾಡಬೇಕಾದ್ದು ಇಷ್ಟೆ,ಲವಂಗ ಮತ್ತು ಹರಳುಪ್ಪು ಕುಟ್ಟಿ ಪುಡಿ ಮಾಡಿ,ಹಾಲಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ ಇಟ್ಟುಕೊಳ್ಳಿ.ಪೇಸ್ಟ್ ನಲ್ಲಿ ಇರುವ ಹರಳುಪ್ಪು ಹೈಗ್ರೋಸ್ಕೊಪಿಕ್ ಆಗಿರುವುದರಿಂದ ತಲೆಯಲ್ಲಿರುವ ದ್ರವವನ್ನು ತೆಗೆದು ತಲೆ ನೋವನ್ನು ಕಡಿಮೆ ಮಾಡುತ್ತದೆ.

ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿ

ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿ

15 ರಿಂದ 20 ನಿಮಿಷ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿದರೆ ತಲೆನೋವು ಕಡಿಮೆಯಾಗುತ್ತದೆ.ಬೇಸಿಗೆಯ ಬಿಸಿಲಿಗೆ ತಲೆನೋವು ಬಂದಾಗ ಈ ರೀತಿ ಮಾಡಿದರೆ ಕೊಬ್ಬರಿ ಎಣ್ಣೆ ತಂಪು ಮಾಡುವುದರ ಮೂಲಕ ತಲೆನೋವನ್ನು ಕಡಿಮೆ ಮಾಡುತ್ತದೆ.

English summary

Goodbye To Painkillers & Use These Best Natural Herbs

There can be many reasons for headaches to happen like physiological changes in the head, constriction of blood vessels, abnormal neuron activity, genetic causes, excessive smoking and drinking, lack of water in the body, oversleeping, overuse of painkillers, eye strain, neck strain and many more. Continue reading this article to know more about these natural remedies for headache.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more