ನೀರು ಕುಡಿಯುವುದಕ್ಕೂ ನೀತಿ-ನಿಯಮವಿದೆ! ಇನ್ನು ಒಟ್ಟಾರೆ ಕುಡಿಯಬೇಡಿ!!

By: Arshad
Subscribe to Boldsky

ನಮ್ಮ ಆರೋಗ್ಯಕ್ಕೆ ನೀರು ಅತ್ಯಂತ ಅವಶ್ಯ. ದೇಹದ ಎಲ್ಲಾ ಕೆಲಸಗಳಿಗೂ ನೀರಿನ ಪೂರೈಕೆ ಆಗುತ್ತಲೇ ಇರಬೇಕು. ಆದರೆ ಒಂದೇ ಸಮನೇ ವಾಹನದ ಪೆಟ್ರೋಲ್ ಟ್ಯಾಂಕ್ ಭರ್ತಿ ಮಾಡಿದಂತೆ ಕುಡಿದರೆ ಇದು ಸರಿಯಾದ ಕ್ರಮವಲ್ಲ. ನೀರನ್ನು ಒಂದು ಕ್ರಮದಲ್ಲಿ ಕುಡಿದರೆ ಮಾತ್ರ ಇದು ಹೆಚ್ಚು ಫಲಕಾರಿಯಾಗಿದೆ. ಉದಾಹರಣೆಗೆ ನೀರು ಕುಡಿದ ಬಳಿಕ ಸ್ನಾನ ಮಾಡುವುದು. ಈ ಕ್ರಮದಿಂದ ನರವ್ಯವಸ್ಥೆ ಸುಲಲಿತವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗುವ 10 ಲಾಭಗಳು

ಆದರೆ ಕೋಪ ಅಥವಾ ಇನ್ನಾವುದೋ ಭಾವನಾತ್ಮಕ ಕಾರಣದಿಂದ ರಕ್ತದೊತ್ತಡ ಏರಿದ್ದರೆ ಆಗ ಸ್ನಾನ ಮಾಡುವುದು ಲಘು ಹೃದಯಾಘಾತ ಅಥಾವಾ ಹೃದ್ರೋಗಿಗಳಲ್ಲಿ ಪ್ರಬಲ ಆಘಾತವನ್ನೂ ಉಂಟುಮಾಡಬಹುದು. ಬೆಳಿಗ್ಗೆದ್ದ ತಕ್ಷಣ ಮೊತ್ತ ಮೊದಲನೆಯ ಆಹಾರವಾಗಿ ತಣ್ಣೀರನ್ನು ಕುಡಿಯುವುದು ಒಂದು ಉತ್ತಮ ಅಭ್ಯಾಸವಾಗಿದ್ದು ಇದು ದೇಹದ ಪ್ರಮುಖ ಅಂಗಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ ಹಾಗೂ ಇಡಿಯ ದಿನ ಚಟುವಟಿಕೆಯಿಂದ ಕಳೆದು ಉಲ್ಲಾಸಿತರಾಗಿರಲು ನೆರವಾಗುತ್ತದೆ. ನೆನಪಿಟ್ಟುಕೊಳ್ಳಿ- ಇನ್ನೆಂದಿಗೂ 'ನಿಂತು ನೀರು' ಕುಡಿಯಬೇಡಿ! 

ಆರೋಗ್ಯ ತಜ್ಞರ ಪ್ರಕಾರ ದಿನದಲ್ಲಿ ಅಗತ್ಯವಿರುವಷ್ಟೇ ನೀರನ್ನು ಕುಡಿಯಬೇಕೇ ವಿನಃ ಅಗತ್ಯಕ್ಕೂ ಹೆಚ್ಚು ನೀರು ಕುಡಿಯುವುದರಿಂದ ಒಳ್ಳೆಯದಕ್ಕಿಂತ ಕೆಟ್ಟದ್ದೇ ಆಗಬಹುದು. ಪ್ರತಿದಿನ ಸುಮಾರು ಎಂಟು ಲೋಟಗಳಷ್ಟು ಮಾತ್ರ ನೀರು ಕುಡಿದರೆ ಸಾಕು. ಇದರಿಂದ ದೇಹದ ನೀರಿನ ಅಗತ್ಯವನ್ನು ಪೂರೈಸಬಹುದು. ಪ್ರತಿ ಎರಡು ಗಂಟೆಗೊಂದು ಲೋಟ ನೀರು ಕುಡಿಯುವ ಮೂಲಕ ದೇಹದ ಅಗತ್ಯತೆಯನ್ನು ಸಮರ್ಪಕವಾಗಿ ಪೂರೈಸಬಹುದು ಹಾಗೂ ಎಲ್ಲಾ ಕಾರ್ಯಗಳು ಸುಲಲಿತವಾಗಿ ನಡೆಯುವಂತೆ ಮಾಡಬಹುದು. ಬನ್ನಿ, ನೀರು ಕುಡಿಯುವ ಸರಿಯಾದ ವಿಧಾನಗಳಾವುವು ಎಂದು ನೋಡೋಣ.....   

ಟೀ ಕುಡಿಯುವ ಮುನ್ನ ನೀರು ಕುಡಿಯುವುದು

ಟೀ ಕುಡಿಯುವ ಮುನ್ನ ನೀರು ಕುಡಿಯುವುದು

ಕಾಫಿ ಟೀ ಮೊದಲಾದ ಬಿಸಿಯಾದ ಪಾನೀಯಗಳು ಕೊಂಚ ಆಮ್ಲೀಯವಾಗಿರುತ್ತದೆ. ಅಂದರೆ ಇವುಗಳ ಪಿಎಚ್ ಮಟ್ಟ 5 ಮತ್ತು 6 ರ ನಡುವೆ ಇರುತ್ತದೆ. ಇದರಿಂದ ಜೀರ್ಣರಸಗಳ ಆಮ್ಲೀಯತೆ ಕೊಂಚ ಹೆಚ್ಚುತ್ತದೆ ಹಾಗೂ ಹೊಟ್ಟೆಯಲ್ಲಿ ಮತ್ತು ಕರುಳುಗಳಲ್ಲಿ ಹುಣ್ಣು (ಅಲ್ಸರ್) ಆಗುವ ಸಾಧ್ಯತೆ ಇದೆ. ಇದು ಕ್ಯಾನ್ಸರಿಗೂ ತಿರುಗಬಹುದು. ಆದ್ದರಿಂದ ಟೀ ಕಾಫಿ ಕುಡಿಯುವ ಮುನ್ನ ಒಂದು ಲೋಟ ನೀರು ಕುಡಿಯುವುದರಿಂದ ಜೀರ್ಣರಸಗಳ ಆಮ್ಲೀಯತೆ ಹೆಚ್ಚುವುದನ್ನು ಕಡಿಮೆಗೊಳಿಸಬಹುದು.

ಸ್ನಾನಕ್ಕೂ ಮುನ್ನ ನೀರು ಕುಡಿಯುವುದು

ಸ್ನಾನಕ್ಕೂ ಮುನ್ನ ನೀರು ಕುಡಿಯುವುದು

ಸ್ನಾನಕ್ಕೆ ಹೋಗುವ ಮುನ್ನ ಒಂದು ಲೋಟ ನೀರು ಕುಡಿಯುವುದು ಅವಶ್ಯ. ಏಕೆಂದರೆ ಈ ಮೂಲಕ ನರಗಳು ಸಡಿಲಗೊಂಡು ರಕ್ತದೊತ್ತಡ ಕಡಿಮೆಯಾಗಲು ಸಾಧ್ಯವಾಗುತ್ತದೆ. ಆದರೆ ಒಂದು ಎಚ್ಚರಿಕೆಯ ಮಾತೆಂದರೆ ಬಿಸಿನೀರಿನ ಸ್ನಾನ ಮಾಡುವವರಿದ್ದರೆ ಇದಕ್ಕೂ ಮುನ್ನ ತಣ್ಣೀರು ಕುಡಿಯಬಾರದು. ಆರೋಗ್ಯಕ್ಕೆ ಬಿಸಿನೀರಿಗಿಂತಲೂ ಉಗುರುಬೆಚ್ಚನೆಯ ಅಥವಾ ತಣ್ಣೀರಿನ ಸ್ನಾನವೇ ಅತ್ಯುತ್ತಮ.

ಊಟಕ್ಕೂ ಮುನ್ನ ನೀರು ಕುಡಿಯುವುದು

ಊಟಕ್ಕೂ ಮುನ್ನ ನೀರು ಕುಡಿಯುವುದು

ಊಟದ ಸಮಯದಲ್ಲಿ ನೀರು ಯಾವಾಗ ಕುಡಿಯಬೇಕೆಂಬುದು ಮುಖ್ಯವಾಗಿದೆ. ತಜ್ಞರ ಪ್ರಕಾರ ಊಟಕ್ಕೂ ಮುನ್ನ ಒಂದು ಲೋಟ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಆದರೆ ಊಟಕ್ಕೂ ಸುಮಾರು ಅರ್ಧ ಗಂಟೆಗೂ ಮುನ್ನ ನೀರು ಕುಡಿಯುವುದು ಅಗತ್ಯ. ಬಳಿಕ ಊಟದ ನಡುವೆ ಹಾಗೂ ಊಟದ ಬಳಿಕ ತಕ್ಷಣವೇ ನೀರು ಕುಡಿಯಬಾರದು. ಬದಲಿಗೆ ಊಟ ಮುಗಿಸಿದ ಒಂದು ಘಂಟೆಯ ಬಳಿಕ ಇನ್ನೊಂದು ಲೋಟ ನೀರು ಕುಡಿಯುವುದರಿಂದ ಹೊಟ್ಟೆಯಲ್ಲಿ ಜೀರ್ಣವಾಗಿದ್ದ ಆಹಾರವನ್ನು ಕರುಳುಗಳು ಹೀರಿಕೊಳ್ಳಲು ಹೆಚ್ಚಿನ ಸಹಾಯ ದೊರಕುತ್ತದೆ.

ರಾತ್ರಿ ಮಲಗುವ ಮುನ್ನ ನೀರು ಕುಡಿಯುವುದು

ರಾತ್ರಿ ಮಲಗುವ ಮುನ್ನ ನೀರು ಕುಡಿಯುವುದು

ರಾತ್ರಿ ಮಲಗುವ ಸಮಯಕ್ಕೂ ಒಂದು ಗಂಟೆ ಮುಂಚಿತವಾಗಿ ಒಂದು ದೊಡ್ಡ ಲೋಟ ನೀರು ಕುಡಿದು ಕೊಂಚ ಕಾಲ ಅಡ್ಡಾಡಿ ಬಳಿಕ ಪಾದಗಳನ್ನು ತಣ್ಣೀರಿನಿಂದ ತೊಳೆದುಕೊಂಡು ಮಲಗುವ ಮೂಲಕ ಗಾಢವಾದ ನಿದ್ದೆ ಆವರಿಸುತ್ತದೆ. ಈ ನೀರು ರಾತ್ರಿಯ ನಿದ್ದೆಯ ಸಮಯದಲ್ಲಿ ನಡೆಯುವ ಅನೈಚ್ಛಿಕ ಕಾರ್ಯಗಳಿಗೆ ಅಗತ್ಯವಾದ ನೀರನ್ನು ಪೂರೈಸುತ್ತದೆ. ಅಲ್ಲದೇ ನೀರಿನ ಕೊರತೆಯಾಗದಂತೆ ನೋಡಿಕೊಂಡು ಹೃದಯಾಘಾತ ಅಥವಾ ಸ್ತಂಭನದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು

ಬೆಳಿಗ್ಗೆದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರು ಕುಡಿಯುವುದು ಅತ್ಯುತ್ತಮವಾದ ಅಭ್ಯಾಸವಾಗಿದೆ. ಇದರಿಂದ ದೇಹದ ವಿಷಕಾರಿ ವಸ್ತುಗಳಗಳನ್ನು ಸುಲಭವಾಗಿ ಹೊರಹಾಕಲು ಸಾಧ್ಯವಾಗುತ್ತದೆ.

ಬೆಳಿಗೆದ್ದ ತಕ್ಷಣವೇ ನೀರು ಕುಡಿಯುವುದು

ಬೆಳಿಗೆದ್ದ ತಕ್ಷಣವೇ ನೀರು ಕುಡಿಯುವುದು

ಬೆಳಿಗ್ಗೆದ್ದು ಕುಳಿತ ತಕ್ಷಣವೇ, ಅಂದರೆ ಹಾಸಿಗೆಯನ್ನು ಬಿಟ್ಟು ಏಳುವ ಮುನ್ನವೇ ಒಂದು ಲೋಟ ನೀರನ್ನು ಕುಡಿದರೆ ಇನ್ನೂ ಉತ್ತಮ. ಏಕೆಂದರೆ ಈ ಮೂಲಕ ನಿದ್ರಾವಸ್ಥೆಯಲ್ಲಿ ಚಟುವಟಿಕೆ ರಹಿತವಾಗಿದ್ದ ಅಂಗಗಳೂ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ. ಈ ನೀರು ಹೆಚ್ಚಿನ ಚೇತನ ನೀಡುವ ಮೂಲಕ ಆರೋಗ್ಯ ಉತ್ತಮಗೊಳ್ಳುತ್ತದೆ ಹಾಗೂ ಉಪಾಹಾರಕ್ಕೂ ಮುನ್ನವೇ ಶೌಚಕ್ರಿಯೆ ಸುಲಭವಾಗಿ ಜರುಗಲು ಸಾಧ್ಯವಾಗುತ್ತದೆ.

ಉಪಾಹಾರ ಅಥವಾ ಎರಡು ಊಟಗಳ ನಡುವಣ ಲಘು ಆಹಾರ ಸೇವಿಸುವಾಗ ನೀರು ಕುಡಿಯುವುದು

ಉಪಾಹಾರ ಅಥವಾ ಎರಡು ಊಟಗಳ ನಡುವಣ ಲಘು ಆಹಾರ ಸೇವಿಸುವಾಗ ನೀರು ಕುಡಿಯುವುದು

ಬೆಳಗ್ಗಿನ ಉಪಾಹಾರ ಅಥವಾ ದಿನತ ಇತರ ಹೊತ್ತಿನಲ್ಲಿ ಊಟದ ಹೊರತು ಬೇರೆ ಹೊತ್ತಿನಲ್ಲಿ ಸೇವಿಸುವ ಲಘು ಉಪಾಹಾರಗಳನ್ನು ಸೇವಿಸುವಾಗ ನಡುನಡುವೆ ಕೊಂಚ ನೀರನ್ನು ಗುಟುಕರಿಸುವುದು ಉತ್ತಮ. ಇದರಿಂದ ಆಹಾರ ಸುಲಭವಾಗಿ ಜೀರ್ಣಗೊಳ್ಳಲು ನೆರವಾಗುತ್ತದೆ ಹಾಗೂ ಆಹಾರ ಗಂಟಲಲ್ಲಿ ಸಿಲುಕಿಕೊಳ್ಳುವುದರಿಂದ ತಪ್ಪಿಸಿದಂತಾಗುತ್ತದೆ.

ವ್ಯಾಯಾಮಕ್ಕೂ ಮುನ್ನ ನೀರು ಕುಡಿಯುವುದು

ವ್ಯಾಯಾಮಕ್ಕೂ ಮುನ್ನ ನೀರು ಕುಡಿಯುವುದು

ಯಾವುದೇ ವ್ಯಾಯಾಮ, ಯೋಗಾಭ್ಯಾಸ, ನಡಿಗೆ, ಈಜು ಮೊದಲಾದ ದೈಹಿಕಶ್ರಮದ ಕಾರ್ಯಕ್ಕೂ ಮುನ್ನ ಒಂದು ಲೋಟ ನೀರು ಕುಡಿಯಬೇಕು ಹಾಗೂ ವ್ಯಾಯಾಮದ ಬಳಿಕ ಕೊಂಚ ವಿಶ್ರಾಂತಿ ಪಡೆದು ಹೃದಯದ ಬಡಿತ ಸಾಮಾನ್ಯಕ್ಕೆ ಇಳಿದ ಬಳಿಕವೂ ಇನ್ನೊಂದು ಲೋಟ ನೀರು ಕುಡಿಯಬೇಕು. ಇದರಿಂದ ವ್ಯಾಯಾಮದ ಹೆಚ್ಚಿನ ಫಲ ದೊರೆತು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ.

 
English summary

Facts About Drinking Water At The Correct Time

Medical experts state that drinking too much of water during the day is also a bad idea, as it may cause certain tremors in the system. It is advisable to drink only 8 glasses of water daily to balance the proportion of hydration in the body. Concentrate on drinking a glass of water every 2 hours to keep your body happy.
Story first published: Thursday, March 16, 2017, 23:31 [IST]
Subscribe Newsletter