For Quick Alerts
ALLOW NOTIFICATIONS  
For Daily Alerts

'ಹೋಳಿ ಹಬ್ಬದ' ಭರದಲ್ಲಿ ಬಣ್ಣ ಕಣ್ಣಿಗೆ ಹೋಗದಂತೆ ನೋಡಿಕೊಳ್ಳಿ!

By Arshad
|

ಬಣ್ಣಗಳ ಹಬ್ಬ ಹೋಳಿಹಬ್ಬ ಬಂದೇ ಬಿಟ್ಟಿದೆ. ಪ್ರತಿಯೊಬ್ಬರೂ ಈ ಹಬ್ಬವನ್ನು ವರ್ಣರಂಜಿತವಾಗಿ ಆಚರಿಸಲು ಏನಾದರೊಂದು ವ್ಯವಸ್ಥೆ ಮಾಡಿಕೊಂಡೇ ಇರುತ್ತೀರಿ. ಬಣ್ಣಗಳ ಎರಚಾಟದಿಂದ ಮಕ್ಕಳು ಮಾತ್ರವಲ್ಲ, ಹಿರಿಯರೂ, ಹದಿಹರೆಯದವರೂ, ವೃದ್ಧರೂ ಎಲ್ಲರೂ ಸಂಭ್ರಮಪಡುತ್ತಾರೆ. ಹೋಳಿ ಆಚರಣೆ ಬರೀ ಬಣ್ಣದ ಹಬ್ಬ ಮಾತ್ರವಲ್ಲ!

ಇಂದಿನ ದಿನಗಳಲ್ಲಿ ಎಲ್ಲವನ್ನೂ ಲಾಭದ ದೃಷ್ಟಿಯಿಂದಲೇ ನೋಡುತ್ತಿರುವಾಗ ಲಾಭ ಮಾಡಲು ಅಸುರಕ್ಷಿತ ಬಣ್ಣಗಳು ಮಾರುಕಟ್ಟೆಗೆ ಬರುವುದಿಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. ಇದರಲ್ಲಿ ಹೆಚ್ಚಿನ ಬಣ್ಣಗಳು ಅಲರ್ಜಿಕಾರಕವಾಗಿದ್ದು ಚರ್ಮದಲ್ಲಿ ತುರಿಕೆ, ಬಣ್ಣಗೆಡಿಸುವುದು, ಶ್ವಾಸಕ್ರಿಯೆಯಲ್ಲಿ ತೊಂದರೆ ಮತ್ತು ಮುಖ್ಯವಾರಿ ಅಲರ್ಜಿ ಹಾಗೂ ಇತರ ಸೋಂಕುಗಳನ್ನು ತರಬಹುದು. ಹೋಳಿ ಹಬ್ಬದಲ್ಲಿ ಮೈಮರೆತು, ಅಪಾಯಕ್ಕೆ ಆಹ್ವಾನ ನೀಡಬೇಡಿ!

ಕೆಲವು ಸಂದರ್ಭದಲ್ಲಿ ಈ ಸೋಂಕುಕಾರಕ ಬಣ್ಣಗಳು ಕಣ್ಣಿಗೆ ಹೋದರೆ ಮತ್ತು ಸೂಕ್ತಕ್ರಮ ಕೈಗೊಳ್ಳದೇ ಇದ್ದರೆ ಕುರುಡುತನವೂ ಸಂಭವಿಸಬಹುದು. ಹೋಳಿಗಳ ಬಣ್ಣ ಎರಚುವಾಗ ಇದು ಕಣ್ಣಿಗೆ ಬೀಳದಂತೆ ಜಾಗ್ರತೆ ವಹಿಸುವುದು ತುಂಬಾ ಅಗತ್ಯ.

ಆದರೆ ಎದುರಿನಿಂದ ಬಣ್ಣ ಎರಚುವವರು ಹಬ್ಬ ಆಚರಿಸುವ ಸಂಭ್ರಮದಲ್ಲಿದ್ದು ಮುಖ ಕಣ್ಣು ಒಂದೂ ನೋಡದೇ ಬಣ್ಣಗಳನ್ನು ಎರಚಿ 'ಹ್ಯಾಪೀ ಹೋಲಿ' ಎಂದು ಕಿರುಚುತ್ತಾರೆ. ಈ ಬಣ್ಣ ಒಂದು ವೇಳೆ ಕಣ್ಣಿಗೆ ಹೋಯಿತೋ 'ಈ ಆಮ್ ಸಾರಿ' ಎಂಬ ಸಿದ್ಧ ಉತ್ತರವೂ ಇವರಲ್ಲಿರುತ್ತದೆ. ಅಲ್ಲದೇ ಹೋಳಿ ಹಬ್ಬದ ಸಂಭ್ರಮದಲ್ಲಿ ಕಣ್ಣಿಗೆ ಬಣ್ಣ ಹೋದವರ ರೋದನ ಮೂಲೆಗುಂಪಾಗುತ್ತದೆ. ಕಣ್ಣಿನ ಆರೋಗ್ಯಕ್ಕೆ ಬೇಕು, ಸ್ವಲ್ಪ ಸ್ಪೆಷಲ್ ಆರೈಕೆ!

ಆದ್ದರಿಂದ ಕಣ್ಣಿಗೆ ಬಣ್ಣ ಬಿದ್ದ ಬಳಿಕ ಅಳುವ ಬದಲು ಇದಕ್ಕೆ ಸಿದ್ಧರಾಗಿಯೇ ಹೋಗಿ ಬಣ್ಣಗಳ ಸಂಭ್ರಮವನ್ನು ಸಂಭ್ರಮಿಸುವುದೇ ಜಾಣತನ. ಬನ್ನಿ, ಈ ಮುನ್ನೆಚ್ಚರಿಕೆಗಳನ್ನು ಹೇಗೆ ಪಡೆಯಬಹುದೆಂಬುದನ್ನು ಈಗ ನೋಡೋಣ...

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ಹೋಳಿ ಬಣ್ಣವನ್ನು ಎದುರಿಸಲು ಹೋಗುವ ಮುನ್ನ ಮುಖಕ್ಕೆ ತೆಳುವಾಗಿ ಕೊಬ್ಬರಿ ಎಣ್ಣೆಯನ್ನು ಲೇಪಿಸಿಕೊಂಡು ಹೋಗಿ. ವಿಶೇಷವಾಗಿ ಕಣ್ಣುಗಳ ಸುತ್ತ ಹೆಚ್ಚು ಹಚ್ಚಿ. ಇದರಿಂದ ಮುಖಕ್ಕೆ ಹಚ್ಚಿದ ಬಣ್ಣವನ್ನು ಸುಲಭವಾಗಿ ನಿವಾರಿಸಲು ಸಾಧ್ಯ ಹಾಗೂ ಅಲರ್ಜಿಯಿಂದಲೂ ರಕ್ಷಿಸಿಕೊಳ್ಳಬಹುದು.

ಕಣ್ಣುಗಳನ್ನು ಮರೆಮಾಚಿ

ಕಣ್ಣುಗಳನ್ನು ಮರೆಮಾಚಿ

ಹೋಳಿ ಹಬ್ಬದ ಬಣ್ಣ ಎರಚುವ ಅಷ್ಟೂ ಸಮಯದಲ್ಲಿ ನಿಮ್ಮ ಕಣ್ಣುಗಳನ್ನು ಯಾವುದಾದರೊಂದು ವಿಧಾನದಿಂದ ಕಣ್ಣುಗಳನ್ನು ಮರೆಯಾಗಿಸಿ. ಇದರಿಂದ ಅಕಸ್ಮಾತ್ ಬಣ್ಣ ಕಣ್ಣಿಗೆ ಬೀಳುವುದನ್ನು ತಪ್ಪಿಸಬಹುದು.

ಕಣ್ಣಿಗೆ ಬಣ್ಣ ಹೋದರೆ ತಕ್ಷಣ ಹೀಗೆ ಮಾಡಿ

ಕಣ್ಣಿಗೆ ಬಣ್ಣ ಹೋದರೆ ತಕ್ಷಣ ಹೀಗೆ ಮಾಡಿ

ನಿಮ್ಮ ಪ್ರಯತ್ನಕ್ಕೂ ಮೀರಿ ಅಕಸ್ಮಾತ್ ಕಣ್ಣಿಗೆ ಬಣ್ಣ ಹೋದರೆ ತಕ್ಷಣವೇ ನಿಮ್ಮ ಎಲ್ಲಾ ಸಂಭ್ರಮವನ್ನು ಬದಿಗಿಟ್ಟು ಉಗುರುಬೆಚ್ಚನೆಯ ನೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳಿ. ಆ ಕ್ಷಣದಲ್ಲಿ ಸಿಗದೇ ಇದ್ದರೆ ಕುಡಿಯುವ ನೀರು ಆದರೂ ಸರಿ. ಆದರೆ ತಡಮಾಡದೇ ನೀರು ಹಾಕುವುದು ಮಾತ್ರ ತುಂಬಾ ಅಗತ್ಯ. ಏಕೆಂದರೆ ನೀರು ಹಾಕದೇ ಇದ್ದರೆ ಬಣ್ಣ ಕಣ್ಣೀರಿನಲ್ಲಿ ಗಟ್ಟಿಯಾಗಿ (ಕಣ್ಣಿರಿನಲ್ಲಿರುವ ಉಪ್ಪಿನಂಶ ಕೆಲವು ಬಣ್ಣಗಳನ್ನು ಹರಳು ಹರಳಾಗಿಸುತ್ತದೆ) ತುರಿಕೆ ಬರಿಸುತ್ತವೆ. ಅಪ್ಪಿ ತಪ್ಪಿಯೂ ಉಜ್ಜಿಕೊಳ್ಳಲು ಹೋಗಬೇಡಿ. ಅಪ್ರಯತ್ನವಾಗಿ ಉಜ್ಜಿಕೊಂಡರೆ ಉರಿ ಖಚಿತ. ಒಂದು ವೇಳೆ ಕಣ್ಣುಗಳಲ್ಲಿ ಉರಿ ಕಡಿಮೆಯಾಗದೇ ಇದ್ದರೆ ಹೋಳಿಯ ಸಂಭ್ರಮ ಬದಿಗಿಟ್ಟು ತಕ್ಷಣವೇ ವೈದ್ಯರನ್ನು ಭೇಟಿಯಾಗಿ.

ಕಣ್ಣುಗಳನ್ನು ಪದೇ ಪದೇ ಮುಟ್ಟಿಕೊಳ್ಳಬೇಡಿ

ಕಣ್ಣುಗಳನ್ನು ಪದೇ ಪದೇ ಮುಟ್ಟಿಕೊಳ್ಳಬೇಡಿ

ಕೆಲವರಿಗೆ ಪದೇ ಪದೇ ತಮ್ಮ ಕಣ್ಣುಗಳನ್ನು ಉಜ್ಜಿಕೊಳ್ಳುವ ಅಭ್ಯಾಸವಿರುತ್ತದೆ. ಹೋಳಿ ಹಬ್ಬದ ಸಮಯದಲ್ಲಿ ಈ ಅಭ್ಯಾಸ ಭಾರಿಯಾಗಬಹುದು. ಏಕೆಂದರೆ ಹೋಳಿ ಹಬ್ಬದ ಸಮಯದಲ್ಲಿ ಗಾಳಿಯಲ್ಲೆಲ್ಲಾ ಬಣ್ಣದ ಸೂಕ್ಷ್ಮ ಕಣಗಳು ತೇಲುತ್ತಿದ್ದು ಇದು ಶ್ವಾಸಕೋಶ, ಶ್ವಾಸನಾಳ, ಮೂಗು, ಕಣ್ಣುಗಳಿಗೆಲ್ಲಾ ಅಂಟಿಕೊಳ್ಳುತ್ತದೆ. ಹೀಗೆ ಬಣ್ಣ ಕಣ್ಣಿಗೆ ಹೋದ ಕ್ಷಣದಿಂದ ಕಣ್ಣುಗಳನ್ನು ಉಜ್ಜಿಕೊಳ್ಳುವಷ್ಟು ನವೆ ಪ್ರಾರಂಭವಾಗುತ್ತದೆ. ಕಣ್ಣುಗಳನ್ನು ಉಜ್ಜಿಕೊಂಡಷ್ಟೂ ನವೆ ಹೆಚ್ಚುತ್ತಾ ಹೊರಪದರವನ್ನು ಘಾಸಿಗೊಳಿಸುತ್ತದೆ. ಇದು ಅಂಧತ್ವಕ್ಕೂ ಕಾರಣವಾಗಬಹುದು.

ಸನ್ ಗ್ಲಾಸ್ ಉಪಯೋಗಿಸಿ

ಸನ್ ಗ್ಲಾಸ್ ಉಪಯೋಗಿಸಿ

ಒಂದು ವೇಳೆ ನೀವು ಕನ್ನಡಕ ಧರಿಸದಿದ್ದರೂ ಹೋಳಿ ಹಬ್ಬದ ಸಂಭ್ರಮ ಮುಗಿಯುವವರೆಗೂ ಸಾದಾ ಅಥವಾ ಕಪ್ಪು ಕನ್ನಡಕವನ್ನು ಧರಿಸಿ. ಇದು ಅಕಸ್ಮಾತ್ತಾಗಿ ಮುಖದ ಮೇಲೆ ಎರಚಿದ ಬಣ್ಣ ಕಣ್ಣಿಗೆ ಬೀಳದಂತೆ ತಡೆಯುತ್ತದೆ.

English summary

Effective Ways To Protect Your Eyes During Holi

How do we protect our eyes during Holi? Today in this article we will be explaining about a few natural ways to protect the eyes during Holi. Here is a list of a few effective ways that will help in preventing your eyes during Holi.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more