For Quick Alerts
ALLOW NOTIFICATIONS  
For Daily Alerts

ದಿನಕ್ಕೆ ಮೂರು ಮೊಟ್ಟೆಗಳನ್ನು ತಿಂದರೆ, ಆರೋಗ್ಯಕ್ಕೆ ಹತ್ತಾರು ಲಾಭ!

ಮೊಟ್ಟೆಯಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ದೊಡ್ಡ ಮಟ್ಟದಲ್ಲಿ ನೆರವಾಗುವುದು ಮಾತ್ರವಲ್ಲದೆ, ದೇಹವನ್ನು ಆಕ್ರಮಿಸುವ ಹಲವಾರು ರೀತಿಯ ರೋಗಗಳನ್ನು ಇದು ತಡೆಯುತ್ತದೆ.....

By Hemanth
|

ದಿನಕ್ಕೊಂದು ಮೊಟ್ಟೆ ತಿಂದರೆ ತುಂಬುವುದು ಹೊಟ್ಟೆ ಎನ್ನುವ ಮಾತನ್ನು ಕೇಳಿರಬಹುದು. ಮೊಟ್ಟೆ ತಿಂದರೆ ಹಲವಾರು ರೀತಿಯ ಪೋಷಕಾಂಶಗಳು ದೇಹಕ್ಕೆ ಸಿಗುತ್ತದೆ ಎನ್ನುವುದು ತಿಳಿದಿರುವ ವಿಚಾರವಾಗಿದೆ. ಆದರೆ ಹಲವಾರು ವರ್ಷಗಳ ಹಿಂದೆ ಮೊಟ್ಟೆಯಲ್ಲಿರುವ ಕೊಲೆಸ್ಟ್ರಾಲ್ ನಿಂದಾಗಿ ಮೊಟ್ಟೆಯನ್ನು ಹೆಚ್ಚಿಗೆ ತಿನ್ನಬಾರದು ಎಂದು ಹೇಳಲಾಗುತ್ತಾ ಇತ್ತು. ಕೋಳಿ ಮೊಟ್ಟೆಯ ನಗ್ನಸತ್ಯ!, ಹಣಕ್ಕಾಗಿ ನಡೆಯುತ್ತಿದೆ ಕುತಂತ್ರ!

ಆದರೆ ಸತತವಾಗಿ ನಡೆದ ಅಧ್ಯಯನಗಳಿಂದ ತಿಳಿದುಬಂದ ವಿಚಾರವೆಂದರೆ ಮೊಟ್ಟೆಯಿಂದ ಸಿಗುವಂತಹ ಕೊಲೆಸ್ಟ್ರಾಲ್ ದೇಹಕ್ಕೆ ತುಂಬಾ ಒಳ್ಳೆಯದು. ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್ ಇರುವುದರಿಂದ ಯಕೃತ್ ಹೆಚ್ಚಿನ ಕೊಲೆಸ್ಟ್ರಾಲ್ ಬಿಡುಗಡೆಯನ್ನು ಕಡಿಮೆ ಮಾಡುತ್ತದೆ. ಮೊಟ್ಟೆಯಿಂದ ದೇಹಕ್ಕೆ ಕೊಲೆಸ್ಟ್ರಾಲ್ ಮಾತ್ರವಲ್ಲದೆ ಇನ್ನಿತರ ಹಲವಾರು ರೀತಿಯ ಪೋಷಕಾಂಶಗಳು ಒದಗುತ್ತದೆ. ದಿನಕ್ಕೊಂದು ಮೊಟ್ಟೆ ತಿನ್ನುವವರು ಓದಲೇಬೇಕಾದ ಲೇಖನವಿದು...

ದಿನಕ್ಕೆ ಮೂರು ಮೊಟ್ಟೆ ಸೇವನೆ ದೇಹಕ್ಕೆ ತುಂಬಾ ಒಳ್ಳೆಯದು ಎನ್ನಲಾಗುತ್ತಿದೆ. ಇದರಿಂದ ಇನ್ನು ತಡ ಮಾಡದೆ ಮೊಟ್ಟೆಯನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಇದರಿಂದ ಯಾವೆಲ್ಲಾ ಲಾಭಗಳು ನಿಮ್ಮ ದೇಹಕ್ಕೆ ಆಗುತ್ತದೆ ಎಂದು ಬೋಲ್ಡ್ ಸ್ಕೈ ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದೆ....

ಪೋಷಕಾಂಶಗಳ ಆಗರ

ಪೋಷಕಾಂಶಗಳ ಆಗರ

ಮೊಟ್ಟೆಯ ಸೇವನೆಯಿಂದ ಉತ್ತಮ ಪ್ರಮಾಣದ ವಿವಿಧ ಪೋಷಕಾಂಶಗಳೂ, ಪ್ರೋಟೀನುಗಳೂ ಸತು ಮತು ಕೊಲೈನ್ ಎಂಬ ಪೋಷಕಾಂಶವೂ ಲಭ್ಯವಾಗುತ್ತದೆ. ಇದು ದಿನದ ಚಟುವಟಿಕೆಗಳಿಗೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಮೊಟ್ಟೆಯನ್ನು ಅತಿ ಕಡಿಮೆ ಸಮಯದಲ್ಲಿ ಸಿದ್ಧಪಡಿಸಲು ಸಾಧ್ಯವಿರುವ ಕಾರಣ ಹೆಚ್ಚಿನ ಜನರ ಮೆಚ್ಚಿನ ಆಯ್ಕೆಯೂ ಆಗಿದೆ.

 ತಜ್ಞರ ಪ್ರಕಾರ

ತಜ್ಞರ ಪ್ರಕಾರ

ಒಂದು ವಾರದಲ್ಲಿ ಮೂರರಿಂದ ಆಮೊಟ್ಟೆಗಳನ್ನು ಸೇವಿಸಿದರೆ ಅಧಿಕ ರಕ್ತದೊತ್ತಡ ಅಥವಾ ಕೊಲೆಸ್ಟ್ರಾಲ್ ಸಂಬಂಧಿತ ತೊಂದರೆ ಎದುರಾಗುವುದಿಲ್ಲ. ಅಂದರೆ ಹೆಚ್ಚೂ ಕಡಿಮೆ ದಿನಕ್ಕೊಂದು ಮೊಟ್ಟೆ ಸಾಕು. ಒಂದು ವೇಳೆ ನಿಮಗೆ ಹೃದಯ ಸಂಬಂಧಿ ತೊಂದರೆ ಇದ್ದರೆ ಈ ಪ್ರಮಾಣವನ್ನು ವಾರಕ್ಕೆ ನಾಲ್ಕಕ್ಕಿಳಿಸಬೇಕು.

ಹಲವಾರು ರೀತಿಯ ಪ್ರೋಟೀನ್‌ಗಳು

ಹಲವಾರು ರೀತಿಯ ಪ್ರೋಟೀನ್‌ಗಳು

ಮೊಟ್ಟೆಯಲ್ಲಿ ವಿಟಮಿನ್ ಎ, ಇ, ಬಿ6, ಬಿ12 ಥೈಮೆನ್, ರಿಬೊಫ್ಲಾವಿನ್ ಫೊಲಾಟೆ, ಕಬ್ಬಿಣ, ಫ್ರೋಸ್ಪರಸ್, ಮೆಗ್ನಿಶಿಯಂ, ಸೆಲೆನಿಯಂ ಮತ್ತು ಇತರ ಹಲವಾರು ರೀತಿಯ ಪೋಷಕಾಂಶಗಳು ಲಭ್ಯವಿದೆ.

ಒಳ್ಳೆಯ ಕೊಲೆಸ್ಟ್ರಾಲ್ ಲಭ್ಯ

ಒಳ್ಳೆಯ ಕೊಲೆಸ್ಟ್ರಾಲ್ ಲಭ್ಯ

ಮೊಟ್ಟೆಯಲ್ಲಿ ಉನ್ನತ ಮಟ್ಟದ ಲಿಪೊಪ್ರೋಟೀನ್ (ಎಚ್ ಡಿಎಲ್) ಇದೆ. ಇದು ದೇಹ ಹಾಗೂ ಮೆದುಳಿಗೆ ಅನಿವಾರ್ಯ. ಎಚ್ ಡಿಎಲ್ ದೇಹದಲ್ಲಿ ಪ್ರತಿಯೊಂದು ಕೋಶಗಳಿಗೆ ಸ್ಥಿರತೆಯನ್ನು ಒದಗಿಸುತ್ತದೆ. ಇದರಿಂದ ದೇಹವು ಟೆಸ್ಟೊಸ್ಟೆರಾನ್, ಒಸ್ಟ್ರೋಜನ್ ಮತ್ತು ಕೊರ್ಟಿಸಾಲ್ ಅನ್ನು ಒದಗಿಸುವುದು.

ದೃಷ್ಟಿ ತೀಕ್ಷ್ಣವಾಗುವುದು

ದೃಷ್ಟಿ ತೀಕ್ಷ್ಣವಾಗುವುದು

ಮೊಟ್ಟೆಯಲ್ಲಿ ಲ್ಯುಟೆಯಿನ್ ಮತ್ತು ಝೀಕ್ಸಾಂಥಿನ್, ಕ್ಯಾರೊಟಿನಾಯ್ಡ್ ಅಂಶಗಳು ಇವೆ. ಕಣ್ಣಿನ ಒಳ್ಳೆಯ ದೃಷ್ಟಿಗೆ ಇವುಗಳು ಅಗತ್ಯವಾಗಿ ಬೇಕಾಗಿದೆ. ವಯಸ್ಸಾದವರಲ್ಲಿ ಕಾಣಿಸಿಕೊಳ್ಳುವಂತಹ ಅಕ್ಷಿಪಟಲದ ಅಪಾಯದ ಸಮಸ್ಯೆಯನ್ನು ಇದು ನಿವಾರಣೆ ಮಾಡುವುದು.

ಸ್ನಾಯುಗಳ ಶಕ್ತಿ ಹೆಚ್ಚಳ

ಸ್ನಾಯುಗಳ ಶಕ್ತಿ ಹೆಚ್ಚಳ

ಎರಡು ಮೊಟ್ಟೆಗಳು ಒಂದು ಮಾಂಸಕ್ಕೆ ಸಮಾನವಾಗಿದೆ. ಮೊಟ್ಟೆಯ ಬಿಳಿಭಾಗವನ್ನು ತಿಂದರೆ ಅದರಿಂದ ಬಲಿಷ್ಠ ಸ್ನಾಯುಗಳು ನಿಮ್ಮದಾಗುತ್ತದೆ. ದಿನಕ್ಕೆ ಮೂರು ಮೊಟ್ಟೆಯನ್ನು ತಿಂದರೆ ಅದರಿಂದ ಹೆಚ್ಚಿನ ಲಾಭಗಳು ನಿಮ್ಮದಾಗುತ್ತದೆ.

ಮೂಳೆಗಳಿಗೆ

ಮೂಳೆಗಳಿಗೆ

ಮೊಟ್ಟೆಯಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿದೆ. ಇದು ದೇಹದಲ್ಲಿ ಮೂಳೆಗಳ ಬೆಳವಣಿಗೆಗೆ ನೆರವಾಗುವುದು. ವಿಟಮಿನ್ ಡಿ ದೇಹಕ್ಕೆ ಕ್ಯಾಲ್ಸಿಯಂ ಹೀರಿಕೊಳ್ಳಲು ನೆರವಾಗುವುದು. ಮೊಟ್ಟೆಯನ್ನು ಪ್ರತಿದಿನ ತಿನ್ನುವುದರ ಲಾಭ ಇದಾಗಿದೆ.

ತೂಕ ಕಳೆದುಕೊಳ್ಳಲು

ತೂಕ ಕಳೆದುಕೊಳ್ಳಲು

ಮೊಟ್ಟೆಯಲ್ಲಿ ಇತರ ಆಹಾರಗಳಲ್ಲಿ ಇರದಂತಹ ಹೆಚ್ಚಿನ ಪೋಷಕಾಂಶಗಳು ಇದೆ. ಬೆಳಗ್ಗೆ ಉಪಹಾರಕ್ಕೆ ಮೊಟ್ಟೆ ಸೇವನೆ ಮಾಡಿದರೆ ಇದರಿಂದ ದಿನಪೂರ್ತಿ ಆಹಾರ ಸೇವನೆ ಮಾಡುವ ಪ್ರಮಾಣ ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ಕಂಡುಕೊಂಡಿವೆ.

ಪಾರ್ಶ್ವವಾಯುವಿನ ಅಪಾಯ ಕಡಿಮೆ

ಪಾರ್ಶ್ವವಾಯುವಿನ ಅಪಾಯ ಕಡಿಮೆ

ನಿಯಮಿತವಾಗಿ ಮೊಟ್ಟೆ ಸೇವೆ ಮತ್ತು ಕಡಿಮೆ ಕ್ಯಾಲರಿ ಇರುವ ಆಹಾರ ಸೇವನೆಯಿಂದ ಪಾರ್ಶ್ವವಾಯುವಿನ ಅಪಾಯ ಕಡಿಮೆಯಾಗುತ್ತದೆ. ಆದರೆ ಟೈಪ್ 2 ಮಧುಮೇಹ ಇರುವವರು ಮೊಟ್ಟೆಯ ಸೇವನೆ ಬಗ್ಗೆ ಗಮನವಿಡಬೇಕು ಎಂದು ಹೇಳಲಾಗಿದೆ.

ಅಮಿನೋ ಅಮ್ಲ

ಅಮಿನೋ ಅಮ್ಲ

ಮೊಟ್ಟೆಯಲ್ಲಿ ಪ್ರಮುಖವಾಗಿರುವಂತಹ ಅಮಿನೋ ಆಮ್ಲವು ಸರಿಯಾದ ಪ್ರಮಾಣದಲ್ಲಿದೆ. ಇದರಿಂದ ದೇಹವು ಸರಿಯಾದ ರೀತಿಯಲ್ಲಿ ಪ್ರೋಟೀನ್ ನ್ನು ಹೀರಿಕೊಳ್ಳಲು ನೆರವಾಗುವುದು.

ಮೊಟ್ಟೆಯ ಹಳದಿಭಾಗ...

ಮೊಟ್ಟೆಯ ಹಳದಿಭಾಗ...

ಒಂದು ವೇಳೆ ನಿಮ್ಮ ರಕ್ತದಲ್ಲಿ ಕೊಲೆಸ್ಟ್ರಾಲ್ ಇದೆ ಎಂದಾದಲ್ಲಿ ಮೊಟ್ಟೆಯ ಹಳದಿಭಾಗವನ್ನು ನಿವಾರಿಸಿ ಕೇವಲ ಬಿಳಿಭಾಗವನ್ನು ಮಾತ್ರ ಸೇವಿಸಲು ತಜ್ಞರು ಸಲಹೆ ನೀಡುತ್ತಾರೆ.

English summary

Eat Three Eggs Every Day For A Week & See What Happens To Your Body!

In this article, we'll let you know what happens when you eat three eggs a day for a week. When you consume foods that contain cholesterol, the liver adjusts itself by decreasing its own production of cholesterol.
X
Desktop Bottom Promotion