For Quick Alerts
ALLOW NOTIFICATIONS  
For Daily Alerts

  ಇದು ಲೈಂಗಿಕ ಶಕ್ತಿ ಹೆಚ್ಚಿಸುವ ಪವರ್ ಫುಲ್ 'ಗಿಡಮೂಲಿಕೆಗಳ ಔಷಧಿ'

  By Arshad
  |

  ಮಾಕಾ, ನಮಗೆ ಇದು ಅಪರಿಚಿತವಾದ ಹೆಸರು. ಆದರೆ ಇದರ ಬಗ್ಗೆ ಅರಿತವರು ಇದನ್ನು ಗಡ್ಡೆಗಳ ರಾಜನೆಂದು ಯಾವುದೇ ತಕರಾರಿಲ್ಲದೇ ಒಪ್ಪುತ್ತಾರೆ. lepidium Meyenii ಎಂಬ ವೈಜ್ಞಾನಿಕ ಹೆಸರಿನ ಈ ಗಡ್ಡೆ ದಕ್ಷಿಣ ಅಮೇರಿಕಾದ ಪೆರು ಮತ್ತು ಬೊಲಿವಿಯಾ ದೇಶದ ಮೂಲದ್ದಾಗಿದ್ದು ನೋಡಲಿಕ್ಕೆ ಬಿಳಿ ಮೂಲಂಗಿಯೊಂದು ಬೀಟ್ರೂಟಿನ ವೇಷ ಧರಿಸಿದಂತೆ ಕಾಣುತ್ತದೆ. ಇದರ ರುಚಿ ರುಚಿಯಾದ ಬಾದಾಮಿ ಅಥವಾ ಬಟರ್ ಸ್ಕಾಚ್ಐಸ್ ಕ್ರೀಮ್ ನಂತಿರುತ್ತದೆ.

  ಈ ಗಡ್ಡೆಯಲ್ಲಿಯೂ ಕೆಲವಾರು ವಿಧಗಳಿದ್ದು ರುಚಿಯೂ ಕೊಂಚ ಭಿನ್ನವಾಗಿರುತ್ತದೆ. ಇವುಗಳು ಕಪ್ಪು, ಹಳದಿ, ಕೆಂಪು ಬಣ್ಣಗಳಲ್ಲಿಯೂ ಲಭ್ಯವಿವೆ. ಇವುಗಳನ್ನು ಸಂಸ್ಕರಿಸಿ ಪುಡಿಯನ್ನು ಮಾತ್ರೆಗಳ ರೂಪದಲ್ಲಿ ಅಥವಾ ಒಣಗಿದ ಗಡ್ಡೆಗಳ ರೂಪದಲ್ಲಿ ಹೆಚ್ಚು ಕಾಲ ಕೆಡದಿರುವಂತೆ ಡಬ್ಬಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇದೊಂದು ಗಿಡಮೂಲಿಕೆಯಾದುದರಿಂದ ಯಾವುದೇ ಗ್ರಂಥಿಗೆ ಅಂಗಡಿಯಲ್ಲಿ ಪಡೆಯಬಹುದು.

  ದಿನನಿತ್ಯ 'ಲೈಂಗಿಕ ಕ್ರಿಯೆ' ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ!

  ಆದರೆ ಇದನ್ನೇಕೆ ಇಷ್ಟೊಂದು ಕಾಳಜಿಯಿಂದ ಮಾರಲಾಗುತ್ತಿದೆ ಹಾಗೂ ಸೇವಿಸುವಂತೆ ಪ್ರಚಾರ ಮಾಡಲಾಗುತ್ತಿದೆ? ಈ ಗಡ್ಡೆಯ ಸೇವನೆಯಿಂದ ಲೈಂಗಿಕ ಶಕ್ತಿ ಹೆಚ್ಚುತ್ತದೆ, ಮಾನಸಿಕ ಹಾಗೂ ದೈಹಿಕ ದಾರ್ಢ್ಯತೆಯೂ ಹೆಚ್ಚುತ್ತದೆ. ವಿಶೇಷವಾಗಿ ಲೈಂಗಿಕ ಶಕ್ತಿ ಹೆಚ್ಚಿಸುವಲ್ಲಿ ಇದು ಅದ್ಭುತಗಳನ್ನೇ ಸಾಧಿಸಬಲ್ಲುದು. ಆದ್ದರಿಂದ ಇದರ ಸೇವನೆಯ ಅವಕಾಶ ಒದಗಿಬಂದರೆ ಇದನ್ನು ಖಂಡಿತಾ

  ಕಳೆದುಕೊಳ್ಳಬಾರದು. ಮಾಕಾ ದಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ನುಗಳು, ಖನಿಜಗಳು, ಕ್ಯಾಲ್ಸಿಯಂ, ಪೊಟ್ಯಾಶಿಯಂ, ಕಬ್ಬಿಣ, ಅಯೋಡಿನ್, ಬಿ ವಿಟಮಿನ್ನುಗಳು ಹಾಗೂ ಪ್ರೋಟೀನುಗಳು ಹೆಚ್ಚಿನ ಪ್ರಮಾಣದಲ್ಲಿವೆ. ಲೈಂಗಿಕ ಶಕ್ತಿ ಹೆಚ್ಚಿಸಲು ಈ ಗಡ್ಡೆಯನ್ನು ನಿತ್ಯವೂ 1.5 ರಿಂದ 3 ಗ್ರಾಂ ನಷ್ಟು ಸೇವಿಸಬೇಕು. ಇದರಿಂದ ಹಲವಾರು ಪ್ರಯೋಜನಗಳಿವೆ. ಬನ್ನಿ, ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ನೋಡೋಣ...

  ಉತ್ತಮ ಲೈಂಗಿಕ ಶಕ್ತಿ

  ಉತ್ತಮ ಲೈಂಗಿಕ ಶಕ್ತಿ

  ಲೈಫ್ ಎ ಎಂಬ ಸಂಶೋಧನಾ ಸಂಸ್ಥೆ ಈ ಗಡ್ಡೆಯ ಕುರಿತು ಹಲವಾರು ಸಂಶೋಧನೆಗಳನ್ನು ನಡೆಸಿದ್ದು ನಿತ್ಯವೂ ಮೂರು ಗ್ರಾಂ ನಷ್ಟು ಮಾಕಾ ಪೌಡರ್ ಸೇವನೆಯಿಂದ ಲೈಂಗಿಕ ಶಕ್ತಿ ಅಪಾರವಾಗಿ ಹೆಚ್ಚುತ್ತದೆ ಎಂದು ಕಂಡುಕೊಂಡಿದೆ. ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಇದು ಸಮಾನವಾಗಿ ಕಾರ್ಯನಿರ್ವಹಿಸುವ ಮೂಲಕ ಅಫಲವತ್ತತೆ, ನಿರಾಸಕ್ತಿ ಮೊದಲಾದವುಗಳನ್ನು ನಿವಾರಿಸುತ್ತದೆ. ಪುರುಷರಲ್ಲಿ ನಿಮಿರು ದೌರ್ಬಲ್ಯವನ್ನು ಅಪಾರವಾಗಿ ಕಡಿಮೆ ಮಾಡುವ ಈ ಅದ್ಭುತ ಮೂಲಿಕೆ ವೀರ್ಯಾಣುಗಳ ಸಂಖ್ಯೆ ವೃದ್ಧಿಸಲೂ ನೆರವಾಗುತ್ತದೆ.

  ಪುರುಷರಲ್ಲಿ ಫಲವತ್ತತೆ ಹೆಚ್ಚಿಸುತ್ತದೆ

  ಪುರುಷರಲ್ಲಿ ಫಲವತ್ತತೆ ಹೆಚ್ಚಿಸುತ್ತದೆ

  ಮಾಕಾ ಪುಡಿಯನ್ನು ನಿತ್ಯವೂ ಸೇವಿಸುವ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹೆಚ್ಚುವ ಹಾಗೂ ಇದರಲ್ಲಿ ಆರೋಗ್ಯರಕ ವೀರ್ಯಾಣುಗಳ ಸಂಖ್ಯೆ ಹೆಚ್ಚಿರುವಂತೆ ನೋಡಿಕೊಳ್ಳುವ ಮೂಲಕ ಫಲವತ್ತತೆ ಹೆಚ್ಚುತ್ತದೆ. ವೀರ್ಯಾಣುಗಳ ಗುಣಮಟ್ಟ ಉತ್ತಮವಾದಷ್ಟೂ ಇವು ಗರ್ಭನಾಳದಲ್ಲಿ ಅಂಡಾಣುವೊಡನೆ ಮಿಲಗೊಳ್ಳುವ ಸಾಧ್ಯತೆ ಹೆಚ್ಚುತ್ತದೆ. ತನ್ಮೂಲಕ ಸಂತಾನಹೀನ ಪುರುಷರಿಗೆ ಈ ಮೂಲಿಗೆ ಅದ್ಭುತವಾದ ವರದಾನವಾಗಿದೆ.

  ಸ್ಮರಣಶಕ್ತಿ ಹಾಗೂ ಏಕಾಗ್ರತೆಯನ್ನು ಹೆಚ್ಚಿಸುತ್ತದೆ

  ಸ್ಮರಣಶಕ್ತಿ ಹಾಗೂ ಏಕಾಗ್ರತೆಯನ್ನು ಹೆಚ್ಚಿಸುತ್ತದೆ

  ಮಾಕಾ ಪುಡಿಯ ಸೇವನೆಯ ಕುರಿತು ನಡೆಸಿದ ಇನ್ನೊಂದು ಸಂಶೋಧನೆಯಲ್ಲಿ ಇದು ಸ್ಮರಣಶಕ್ತಿ ಹಾಗೂ ಕಲಿಯುವಿಕೆಯನ್ನು ಉತ್ತಮಗೊಳಿಸುವುದನ್ನು ಕಂಡುಕೊಳ್ಳಲಾಗಿದೆ. ವಿಶೇಷವಾಗಿ ಕಪ್ಪು ಮಾಕಾ ಗಡ್ಡೆಯ ಪುಡಿಯ ಸೇವನೆಯಿಂದ ಸ್ಮರಣಶಕ್ತಿ ಹಾಗೂ ಮೆದುಳಿನ ಕ್ಷಮತೆ ಹೆಚ್ಚುತ್ತದೆ. ಒಂದು ವೇಳೆ ನೀವು ಮಾನಸಿಕವಾಗಿ ಬಹಳಷ್ಟು ಕುಗ್ಗಿದ್ದರೆ ಹಾಗೂ ಕೆಲಸದಲ್ಲಿ ಏಕಾಗ್ರತೆ ಸಾಧಿಸಲು ಹೆಣಗಾಡುತ್ತಿದ್ದರೆ ನಿಮಗೆ ಮಾಕಾ ಪುಡಿಯ ಅಗತ್ಯವಿದೆ. ಇದು ಹಿರಿಯರ ಜೊತೆಗೇ ಮಕ್ಕಳಿಗೂ ಸೂಕ್ತವಾಗಿದ್ದು ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ತನ್ಮೂಲಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಲು ನೆರವಾಗುತ್ತದೆ.

  ಮಾನಸಿಕ ಒತ್ತಡ ಹಾಗೂ ಉದ್ವೇಗವನ್ನು ಕಡಿಮೆ ಮಾಡುತ್ತದೆ

  ಮಾನಸಿಕ ಒತ್ತಡ ಹಾಗೂ ಉದ್ವೇಗವನ್ನು ಕಡಿಮೆ ಮಾಡುತ್ತದೆ

  ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಮಾಕಾ ಸೇವನೆಯಿಂದ ಮಾನಸಿಕ ಒತ್ತಡ ಹಾಗೂ ಉದ್ವೇಗ ಕಡಿಮೆಯಾಗುತ್ತದೆ. ಅಲ್ಲದೇ ದೈಹಿಕ ದಾರ್ಢ್ಯತೆಯನ್ನೂ ಹೆಚ್ಚಿಸಿ ಖಿನ್ನತೆಯ ವಿರುದ್ಧ ಹೋರಾಡಲು ನೆರವಾಗುತ್ತದೆ. ಒಂದು ವೇಳೆ ನಿಮ್ಮ ಮನೋಭಾವ ಪದೇಪದೇ ಬದಲಾಗುತ್ತಿದ್ದರೆ ಹಾಗೂ ಮಾನಸಿಕ ಕಿರಿಕಿರಿ ಅನುಭವಿಸುತ್ತಿದ್ದರೆ ನಿಮಗೆ ಮಾಕಾ ಸೇವನೆ ಅಗತ್ಯವಾಗಿದೆ.

  ಸಂಧಿವಾತ ಹಾಗೂ ಉರಿಯೂತವನ್ನು ನಿವಾರಿಸುತ್ತದೆ

  ಸಂಧಿವಾತ ಹಾಗೂ ಉರಿಯೂತವನ್ನು ನಿವಾರಿಸುತ್ತದೆ

  ಸಂಧಿವಾತದಿಂದ ಬಳಲುತ್ತಿರುವವರು ಮಾಕಾ ಸೇವನೆಯನ್ನು ಪ್ರಯತ್ನಿಸಬೇಕು. ಇದರಿಂದ ಸಂಧಿವಾತ ಹಾಗೂ ಗಂಟುಗಳಲ್ಲಿ ಉಂಟಾಗಿರುವ ಉರಿಯೂತವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಒಂದು ಸಂಶೋಧನೆಯಲ್ಲಿ ಕಂಡುಕೊಂಡಂತೆ ಮಾಕಾ ಸೇವನೆಯಿಂದ ಮೂಳೆಗಳ ಗಂಟುಗಳಲ್ಲಿ ಉಂಟಾಗಿರುವ ಸಂಧಿವಾತ, ಈ ಭಾಗ ಪೆಡಸಾಗುವುದು ಹಾಗೂ ಉರಿಯನ್ನು ಇಲ್ಲವಾಗಿಸುತ್ತದೆ. ಇದಕ್ಕಾಗಿ 1,500ಮಿಲಿಗ್ರಾಂ ಮಾಕಾ ಪುಡಿಯನ್ನು 300 ಮಿಲಿಗ್ರಾಂ cat's claw (Uncaria tomentosa ಅಥವಾ Uncaria guianensis) ಎಂಬ ಮೂಲಿಕೆಯ ಪುಡಿಯೊಂದಿಗೆ ಬೆರೆಸಿ ನಿತ್ಯವೂ ಸತತವಾಗಿ ಎರಡು ತಿಂಗಳ ಕಾಲ ಸೇವಿಸಬೇಕು. ಇದರಿಂದ ಸಂಧಿವಾತ, ಉರಿ, ಪೆಡಸಾಗಿರುವುದು ಎಲ್ಲವೂ ಗುಣವಾಗುತ್ತವೆ.

  ಮಹಿಳೆಯರಲ್ಲಿ ರಸದೂತಗಳ ಪ್ರಭಾವವನ್ನು ಸರಿಯಾಗಿಸುತ್ತದೆ

  ಮಹಿಳೆಯರಲ್ಲಿ ರಸದೂತಗಳ ಪ್ರಭಾವವನ್ನು ಸರಿಯಾಗಿಸುತ್ತದೆ

  ಇನ್ನೊಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಮಾಕಾ ಸೇವನೆಯಿಂದ ಮಹಿಳೆಯರಲ್ಲಿ ಎದುರಾಗುವ ರಸದೂತಗಳ ಏರಿಳಿತದ ಪ್ರಭಾವ ಕಡಿಮೆಯಾಗುತ್ತದೆ. ವಿಶೇಷವಾಗಿ ನಲವತ್ತು ವರ್ಷ ದಾಟಿದ ಮಹಿಳೆಯರು ನಿತ್ಯವೂ ಎರಡು ಗ್ರಾಂ ಮಾಕಾ ಪುಡಿಯವನ್ನು ಸೇವಿಸುವ ಮೂಲಕ ರಜೋನಿವೃತ್ತಿಯ ಸೂಚನೆಗಳಿಂದ ಬಿಡುಗಡೆ ಪಡೆಯಬಹುದು. ಅಲ್ಲದೇ ಈ ಸಮಯದಲ್ಲಿ ಎದುರಾಗುವ ರಾತ್ರಿಯ ಹೊತ್ತಿನ ಬೆವರುವಿಕೆ ಹಾಗೂ ದೇಹದ ಕೆಲವು ಭಾಗಗಳು ಬಿಸಿಯಾಗುವುದು ಮೊದಲಾದವುಗಳನ್ನೂ ಇಲ್ಲವಾಗಿಸಬಹುದು. ಅಷ್ಟೇ ಅಲ್ಲ, ಒಂದು ವೇಳೆ ಗರ್ಭಾಶಯದಲ್ಲಿ ಗಡ್ಡೆಗಳಾಗಿದ್ದರೆ ಇವುಗಳನ್ನು ಗುಣಪಡಿಸಲೂ ನೆರವಾಗುತ್ತದೆ.

  ತಾರುಣ್ಯವನ್ನು ಕಾಪಾಡುತ್ತದೆ

  ತಾರುಣ್ಯವನ್ನು ಕಾಪಾಡುತ್ತದೆ

  ಮಾಕಾ ಸೇವನೆಯ ಜೊತೆಗೇ ಮಾಕಾಪುಡಿಯನ್ನು ಮುಖಲೇಪದಂತೆ ಮುಖಕ್ಕೆ ಹಚ್ಚಿಕೊಳ್ಳುವ ಮೂಲಕ ತಾರುಣ್ಯ ಹಾಗೂ ಕಾಂತಿಯುಕ್ತ ತ್ವಚೆಯನ್ನು ಹೆಚ್ಚು ವಯಸ್ಸಿನವರೆಗೆ ಕಾಪಾಡಿಕೊಳ್ಳಬಹುದು. ನಿತ್ಯದ ಮಾಕಾದಲ್ಲಿರುವ ಕಾರ್ಬೋಹೈಡ್ರೇಟುಗಳು ಹಾಗೂ ಇತರ ಪೋಷಕಾಂಶಗಳ ಸೇವನೆಯಿಂದ ನಿತ್ಯದ ಚಟುವಟಿಕೆಗಳಿಗೆ ಅಗತ್ಯವಾದ ಶಕ್ತಿಯನ್ನು ಪಡೆಯುವುದರ ಜೊತೆಗೇ ಸೂರ್ಯನ ವಿಕಿರಣಗಳಿಂದ ರಕ್ಷಣೆಯನ್ನೂ ಪಡೆಯಬಹುದು.

  English summary

  Eat Maca For A Better Sex Life And Much More

  Maca has immense health benefits for your sexual health, mental and physical health, maca can do wonders. You must not miss out on eating maca and avail its wonderful benefits for health. Maca is rich in vitamins, minerals, calcium, potassium, iron, iodine, B vitamins and proteins. You must consume 1.5 to 3 grams of maca powder daily for a better sexual health and many other health benefits. Read on the article to find out the immense health benefits of consuming this amazing fruit, maca.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more