For Quick Alerts
ALLOW NOTIFICATIONS  
For Daily Alerts

ದಿನಾ ಬೆಳಿಗ್ಗೆ ಮೂರು ಖರ್ಜೂರ ತಿಂದ್ರೆ 'ಬಿಪಿ' ನಿಯಂತ್ರಣಕ್ಕೆ ಬರುತ್ತೆ!

By Hemanth
|

ನಮ್ಮ ಜೀವನ ಶೈಲಿಗೆ ಅನುಗುಣವಾಗಿ ಕೆಲವೊಂದು ರೋಗಗಳು ದೇಹದೊಳಗೆ ನುಸುಳುತ್ತದೆ. ಅದರಲ್ಲೂ ಇಂದಿನ ದಿನಗಳಲ್ಲಿ ಅತಿಯಾದ ರಕ್ತದೊತ್ತಡ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಾ ಇದೆ. ಕೆಲವೊಂದು ಸಲ ಅತಿಯಾಗಿ ಕೋಪ ಬಂದಾಗ ನನ್ನ ರಕ್ತದೊತ್ತಡ ಹೆಚ್ಚಿಸಬೇಡ ಎನ್ನುವ ಮಾತು ಸಾಮಾನ್ಯವಾಗಿ ಕೇಳಿಬರುತ್ತದೆ. ರಕ್ತದೊತ್ತಡ ಹೆಚ್ಚಾದಾಗ ಹಲವಾರು ಸಮಸ್ಯೆಗಳು ಕಾಡುತ್ತದೆ.

ರಕ್ತದೊತ್ತಡ ಸಮಸ್ಯೆಯನ್ನು ಲಘುವಾಗಿ ಪರಿಗಣಿಸಿದರೆ ಅದರಿಂದ ಹಲವಾರು ಸಮಸ್ಯೆಗಳು ಉಂಟಾಗಬಹುದು. ಅಪಧಮನಿಗಳಲ್ಲಿ ರಕ್ತದ ಅಸಾಮಾನ್ಯ ಅರಿವನ್ನು ರಕ್ತದೊತ್ತಡವೆನ್ನಲಾಗುತ್ತದೆ. ರಕ್ತದೊತ್ತಡ ನಿಯಂತ್ರಣದಲ್ಲಿ ಇಲ್ಲದೆ ಹೋದರೆ ಅದರಿಂದ ಹೃದಯ ಕಾಯಿಲೆ, ಕಿಡ್ನಿ ವೈಫಲ್ಯ, ಹೃದಯ ವೈಫಲ್ಯ, ಪಾರ್ಶ್ವವಾಯು ಮುಂತಾದ ರೋಗಗಳು ಕಾಣಿಸಿಕೊಳ್ಳಬಹುದು. ರಕ್ತದೊತ್ತಡ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಕೆಲವೊಂದು ಮನೆಮದ್ದು ಉಪಯುಕ್ತವಾಗಿದೆ. ಒಂದು ತಿಂಗಳ ಒಳಗಡೆ ರಕ್ತದೊತ್ತಡ ಯಾವ ರೀತಿಯಲ್ಲಿ ನಿಯಂತ್ರಣಕ್ಕೆ ತರಬಹುದು ಎಂದು ತಿಳಿಯಿರಿ.

ನಂಬಲೇಬೇಕು, ಮಾತ್ರೆಯ ಹಂಗಿಲ್ಲದೇ 'ಬಿಪಿ' ನಿಯಂತ್ರಣ!

ಬೇಕಾಗುವ ಸಾಮಗ್ರಿಗಳು
*ಬೀಜವಿಲ್ಲದ ಖರ್ಜೂರ-3
*ಬಿಸಿ ನೀರು- 1 ಲೋಟ

Dates

ಸರಿಯಾದ ಪ್ರಮಾಣದಲ್ಲಿ ಈ ಮನೆಮದ್ದನ್ನು ನಿಯಮಿತವಾಗಿ ಬಳಸಿಕೊಂಡು ಹೋದರೆ ನೈಸರ್ಗಿಕವಾಗಿ ಅಧಿಕ ರಕ್ತದೊತ್ತಡ ಕಡಿಮೆ ಮಾಡಬಹುದು. ಸರಿಯಾದ ಆಹಾರ ಕ್ರಮ ಪಾಲಿಸಿಕೊಂಡು ದಿನನಿತ್ಯ ವ್ಯಾಯಾಮ ಮಾಡುತ್ತಿರಬೇಕು. ಹೀಗೆ ಮಾಡಿದರೆ ಮನೆಮದ್ದು ಉತ್ತಮ ಫಲಿತಾಂಶ ನೀಡಲಿದೆ.

ಈ ಮನೆಮದ್ದಿನೊಂದಿಗೆ ವೈದ್ಯರು ನಿಮಗೆ ಸೂಚಿಸಿದ ಔಷಧಿ ತೆಗೆದುಕೊಳ್ಳುತ್ತಾ ಇರಿ. ರಕ್ತದೊತ್ತಡದ ಲಕ್ಷಣ ಕಡಿಮೆಯಾದಾಗ ವೈದ್ಯರಲ್ಲಿ ಮಾತನಾಡಿ ಔಷಧಿ ಕಡಿಮೆ ಮಾಡಿಕೊಳ್ಳಬಹುದು. ಖರ್ಜೂರದಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಲಭ್ಯವಿದ್ದು, ಇದು ತುಂಬಾ ರುಚಿಕರ ಕೂಡ.

ದಿನಕ್ಕೆ ಎರಡೇ ಎರಡು ಖರ್ಜೂರ, ಲಾಭಗಳು ಅಪಾರ!

ಖರ್ಜೂರದಲ್ಲಿ ಕಬ್ಬಿಣಾಂಶ, ವಿಟಮಿನ್ ಎ, ಕ್ಯಾಲ್ಸಿಯಂ, ಆ್ಯಂಟಿಆಕ್ಸಿಡೆಂಟ್ ಇತ್ಯಾದಿ ಪೋಷಕಾಂಶಗಳಿವೆ. ಅಧಿಕ ರಕ್ತದೊತ್ತಡ ಸಮಸ್ಯೆ ನಿವಾರಣೆ ಮಾಡುವ ಜತೆಗೆ ದೃಷ್ಟಿ ಮಂದತೆ, ಮಲಬದ್ಧತೆ, ಕೋಶಗಳಿಗೆ ಆಗಿರುವ ಹಾನಿ ಇತ್ಯಾದಿಗಳನ್ನು ತಡೆಗಟ್ಟುವುದು. ಖರ್ಜೂರದಲ್ಲಿ ಇರುವಂತಹ ಅಧಿಕ ಪ್ರಮಾಣದ ಮೆಗ್ನಿಶಿಯಂ ರಕ್ತನಾಳಗಳನ್ನು ಸುಗಮಗೊಳಿಸಿ ರಕ್ತವು ಸರಾಗವಾಗಿ ಹರಿಯಲು ನೆರವಾಗುವುದು. ಇದರಿಂದ ರಕ್ತದ ಒತ್ತಡ ಕಡಿಮೆಯಾಗಿ ಅಧಿಕ ರಕ್ತದೊತ್ತಡದ ಸಮಸ್ಯೆಯು ನಿವಾರಣೆಯಾಗುವುದು.

ತಯಾರಿಸುವ ವಿಧಾನ
*ಬೆಳಿಗ್ಗೆ ಉಪಹಾರಕ್ಕೆ ಮೊದಲು ಮೂರು ಖರ್ಜೂರ ತಿನ್ನಿ
*ಖರ್ಜೂರ ತಿಂದ ತಕ್ಷಣ ಒಂದು ಲೋಟ ಬಿಸಿ ನೀರು ಕುಡಿಯಿರಿ


*ಈ ಮದ್ದನ್ನು ಒಂದು ತಿಂಗಳ ಕಾಲ ಮುಂದುವರಿಸಿ
*ಒಂದು ತಿಂಗಳ ಬಳಿಕವೂ ಈ ಮದ್ದನ್ನು ಮುಂದುವರಿಸಬಹುದಾಗಿದೆ
English summary

Easy Dates Remedy To Reduce High Blood Pressure In A Month!

Hypertension, if not treated and controlled, can lead to fatal disorders like coronary diseases, kidney failure, heart failure, stroke, etc. High blood pressure is known to be one of the most common conditions that affect people, especially off late, due to the unhealthy lifestyle habits that people follow. So, here is a homemade remedy that can help you reduce high blood pressure, within a month; have a look!
X
Desktop Bottom Promotion