For Quick Alerts
ALLOW NOTIFICATIONS  
For Daily Alerts

ಮುಟ್ಟಿನ ದಿನಗಳಲ್ಲಿ ಹೀಗೆಲ್ಲಾ ಮಾಡಬೇಡಿ! ಆದಷ್ಟು ಎಚ್ಚರದಿಂದಿರಿ...

ಗೃಹಿಣಿಯರಿಗೆ ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ಕೆಲಸವಿಲ್ಲದ ದಿನಗಳೇ ಇಲ್ಲ. ಆದರೆ ಅನಿವಾರ್ಯ ವಾದರೂ ಸರಿ, ಕೆಲವು ಕೆಲಸಗಳನ್ನು ಮುಟ್ಟಿನ ದಿನಗಳ ಬಳಿಕ ನಿರ್ವಹಿಸುವಂತೆ ಮುಂದೂಡುವುದು ಅಥವಾ ಬೇರೆಯವರಿಂದ ಮಾಡಿಸುವುದು ಅಗತ್ಯ.

By Manu
|

ಹಿಂದಿನ ದಿನಗಳಲ್ಲಿ ಮಾಸಿಕ ದಿನಗಳಲ್ಲಿ ಮಹಿಳೆಯರನ್ನು ಒಂದು ಕೋಣೆಯಲ್ಲಿ ಪ್ರತ್ಯೇಕವಾಗಿರಿಸಲಾಗುತ್ತಿತ್ತು. ಆ ದಿನಗಳಲ್ಲಿ ಮನೆಕೆಲಸದಿಂದ ವಿಶ್ರಾಂತಿ ಪಡೆಯಲು ಸಾಧ್ಯವಾಗುವಂತೆ ಈ ವ್ಯವಸ್ಥೆ ಮಾಡಲಾಗಿತ್ತು. ಇಂದು ಆ ಪದ್ಧತಿ ಇಲ್ಲವಾದರೂ ವಿಶ್ರಾಂತಿ ಮಾತ್ರ ಅಗತ್ಯವಾಗಿದೆ. ಗೃಹಿಣಿಯರಿಗೆ ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ಕೆಲಸವಿಲ್ಲದ ದಿನಗಳೇ ಇಲ್ಲ. ಈ ದಿನಗಳಲ್ಲಿಯೂ ನಿತ್ಯದ ಕೆಲಸವನ್ನು ನಿರ್ವಹಿಸಲೇಬೇಕಾದ ಅನಿವಾರ್ಯತೆ ಇಂದಿನ ಮಹಿಳೆಯರಿಗಿದೆ. ಮನೆ ಔಷಧ: ಒಂದೇ ಗಂಟೆಯಲ್ಲಿ ಮುಟ್ಟಿನ ನೋವು ನಿಯಂತ್ರಣಕ್ಕೆ

ಆದರೆ ಅನಿವಾರ್ಯವಾದರೂ ಸರಿ, ಕೆಲವು ಕೆಲಸಗಳನ್ನು ಈ ದಿನಗಳ ಬಳಿಕ ನಿರ್ವಹಿಸುವಂತೆ ಮುಂದೂಡುವುದು ಅಥವಾ ಬೇರೆಯವರಿಂದ ಮಾಡಿಸುವುದು ಅಗತ್ಯ. ಏಕೆಂದರೆ ಈ ಕೆಲಸಗಳು ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರಬಹುದು. ಕೆಳಹೊಟ್ಟೆಯ ನೋವಿಗೆ ದೇಹದೊಳಗೆ ನಡೆಯುತ್ತಿರುವ ಕೆಲವಾರು ಕಾರ್ಯಗಳೇ ಕಾರಣವಾಗಿದೆ. ಯಮಯಾತನೆ ನೀಡುವ ಮುಟ್ಟಿನ ನೋವಿಗೆ ಪರಿಹಾರವೇನು?

ನಿಮ್ಮ ದೇಹದಲ್ಲಿ ಎಲ್ಲೆಲ್ಲಿ ನೋವಾಗುತ್ತಿದೆ ಎಂದು ನಿಮಗೆ ಅರಿವಾಗುತ್ತದೆ ಅಲ್ಲವೇ? ಹೊಟ್ಟೆ ಕಿವುಚಿದಂತೆ, ಒಂದು ಕಡೆಯಿಂದ ಎಳೆದಂತೆ ನೋವಾಗುತ್ತದೆ. ಇವೆಲ್ಲವೂ ನಿಸರ್ಗನಿಯಮವಾಗಿದ್ದು ಕೊಂಚ ನೋವನ್ನು ಅನುಭವಿಸುವುದು ಅನಿವಾರ್ಯ. ಆದರೆ ಈ ನೋವನ್ನು ಕಡಿಮೆಯಾಗಿಸಲು ಮತ್ತು ಕಡಿಮೆ ಅವಧಿಗೆ ಮೀಸಲಿರಿಸಲು ನಿಮ್ಮ ಆಹಾರಕ್ರಮ ಮುಖ್ಯಪಾತ್ರ ವಹಿಸುತ್ತದೆ. ಅಲ್ಲದೇ ಕೆಲವು ಕೆಲಸಗಳೂ ಈ ನೋವನ್ನು ಹೆಚ್ಚಿಸುತ್ತವೆ. ವಿಳಂಬವಾಗುತ್ತಿರುವ ಮುಟ್ಟಿನ ಸಮಸ್ಯೆಗೆ ಆಯುರ್ವೇದದ ಪರಿಹಾರ

ಒಂದು ವೇಳೆ ಅರಿವಿಲ್ಲದೇ ಈ ಕೆಲಸಗಳನ್ನು ನಿರ್ವಹಿಸುತ್ತಿದ್ದರೆ ನಿಮ್ಮ ನೋವು ಹೆಚ್ಚಾಗಿರಲು ಇವೇ ಕಾರಣವಾಗಿರಬಹುದು. ಇಂದಿನ ಲೇಖನದಲ್ಲಿ ವಿವರಿಸಿರುವ ಯಾವುದೇ ಕಾರ್ಯವನ್ನು ನೀವು ಮಾಡುತ್ತಿದ್ದೀರೇ ಆಗಿದ್ದಲ್ಲಿ ತಕ್ಷಣ ಇದನ್ನು ನಿಲ್ಲಿಸಿಬಿಡಿ. ಬನ್ನಿ, ಈ ಕೆಲಸಗಳು ಯಾವುವು ಎಂಬುದನ್ನು ನೋಡೋಣ....

ಅಸುರಕ್ಷಿತ ಸಮಾಗಮ

ಅಸುರಕ್ಷಿತ ಸಮಾಗಮ

ಸಾಮಾನ್ಯವಾಗಿ ಈ ದಿನಗಳಲ್ಲಿ ಸಮಾಗಮಗೊಂಡರೆ ಸುರಕ್ಷಿತ ಎಂಬ ಭಾವನೆಯನ್ನು ಹಲವು ದಂಪತಿಗಳು ಹೊಂದಿದ್ದಾರೆ. ಆದರೆ ಈ ದಿನಗಳ ಸಮಾಗಮವೂ ಫಲ ನೀಡಬಲ್ಲುದು. ಆದರೆ ವಾಸ್ತವವಾಗಿ ಈ ದಿನಗಳಲ್ಲಿ ಯಾವುದೇ ಸೋಂಕು ತಗಲುವ ಸಾಧ್ಯತೆ ಇತರ ದಿನಗಳಿಗಿಂತ ಅತಿ ಹೆಚ್ಚೇ ಇರುವ ಕಾರಣ ಅಸುರಕ್ಷತೆಯ ಸಮಾಗಮ ಸಲ್ಲದು. ಇನ್ನೂ ಉತ್ತಮವೆಂದರೆ ಈ ದಿನಗಳು ಮುಗಿಯುವವರೆಗೂ ಸಮಾಗಮವನ್ನು ಮುಂದೂಡುವುದು.

ಊಟವನ್ನು ಬಿಡುವುದು

ಊಟವನ್ನು ಬಿಡುವುದು

ಹೊಟ್ಟೆನೋವು, ಈ ಸಮಯದಲ್ಲಿ ಊಟ ಮಾಡಿದರೆ ಇನ್ನಷ್ಟು ಹೆಚ್ಚುತ್ತದೆ ಎಂಬ ಕಾರಣ ನೀಡಿ ಕೆಲವರು ಊಟವನ್ನೇ ಮಾಡುವುದಿಲ್ಲ. ಆದರೆ ವಾಸ್ತವದಲ್ಲಿ ಈ ದಿನಗಳಲ್ಲಿ ದೇಹ ಹೆಚ್ಚಿನ ರಕ್ತವನ್ನೂ, ಈ ರಕ್ತವನ್ನು ದೂಡಲು ಶಕ್ತಿಯನ್ನೂ ಕಳೆದುಕೊಂಡಿರುವುದರಿಂದ ಇವುಗಳನ್ನು ಮರುಪೂರೈಸಲು ನಿಮಗೆ ಇತರ ದಿನಕ್ಕಿಂತಲೂ ಕೊಂಚ ಹೆಚ್ಚಿನ ಮತ್ತು ಪೌಷ್ಟಿಕ ಆಹಾರ ಬೇಕಾಗಿರುತ್ತದೆ. ಆದ್ದರಿಂದ ಊಟ ಬಿಡಲೇಬಾರದು.

ಹೆಚ್ಚಿನ ಶಕ್ತಿ ವ್ಯಯಿಸುವ ವ್ಯಾಯಾಮಗಳು

ಹೆಚ್ಚಿನ ಶಕ್ತಿ ವ್ಯಯಿಸುವ ವ್ಯಾಯಾಮಗಳು

ಒಂದು ವೇಳೆ ನೀವು ನಿತ್ಯವೂ ವ್ಯಾಯಾಮ ಮಾಡುವ ವ್ಯಕ್ತಿಯಾಗಿದ್ದರೆ ಈ ದಿನಗಳಲ್ಲಿ ನಿಮ್ಮ ವ್ಯಾಯಾಮವನ್ನು ಕೇವಲ ಕೈ ಕಾಲುಗಳಿಗೆ ಮಾತ್ರ ಸೀಮಿತವಾಗಿರಿಸಬೇಕು. ಏಕೆಂದರೆ ಈ ದಿನಗಳಲ್ಲಿ ಬೆನ್ನು ಮತ್ತು ಹೊಟ್ಟೆಯ ಭಾಗಗಳಲ್ಲಿ ಹೆಚ್ಚಿನ ನೋವಿದ್ದು ತೀರಾ ಸೂಕ್ಷ್ಮಸಂವೇದಿಯಾಗಿರುತ್ತದೆ. ಆದ್ದರಿಂದ ಸೊಂಟ ಬಗ್ಗಿಸುವ ಯಾವುದೇ ವ್ಯಾಯಾಮ ಬೇಡ.

ಸಿದ್ಧ ಆಹಾರವೂ ಬೇಡ

ಸಿದ್ಧ ಆಹಾರವೂ ಬೇಡ

ಆರ್ಡರ್ ಮಾಡಿದ ತಕ್ಷಣ ಬರುತ್ತದೆ ಎಂಬ ಕಾರಣ ನೀಡಿ ಈ ದಿನಗಳಲ್ಲಿ ಸಿದ್ಧ ಆಹಾರಗಳನ್ನು ಕೊಳ್ಳಬೇಡಿ. ಏಕೆಂದರೆ ಈ ಆಹಾರಗಳು ಅನಾರೋಗ್ಯಕರವಾಗಿದ್ದು ವಿಶೇಷವಾಗಿ ಈ ದಿನಗಳಲ್ಲಿ ಅನಗತ್ಯ ಮತ್ತು ವಿಷಕಾರಿ ಅಂಶಗಳನ್ನು ದೇಹಕ್ಕೆ ಸೇರಿಸುವ ಮೂಲಕ ಆರೋಗ್ಯವನ್ನು ಕೆಡಿಸಬಹುದು.

ರಾತ್ರಿ ನಿದ್ದೆಗೆಡಬೇಡಿ

ರಾತ್ರಿ ನಿದ್ದೆಗೆಡಬೇಡಿ

ನಿಮ್ಮ ಉದ್ಯೋಗ ಅಥವಾ ಬೇರಾವುದೋ ಕಾರಣದಿಂದ ರಾತ್ರಿ ಎಚ್ಚರಿರಬೇಕಾದ ಅನಿವಾರ್ಯತೆ ಇದ್ದರೂ ನಿದ್ದೆಗೆಡಬಾರದು. ವಾಸ್ತವದಲ್ಲಿ ಈ ದಿನಗಳಲ್ಲಿ ಒಂಬತ್ತು, ಅತಿ ತಡವೆಂದರೆ ಹತ್ತು ಘಂಟೆಗೇ ಮಲಗಿಬಿಡಬೇಕು. ಇದರಿಂದ ರಾತ್ರಿ ಹೊತ್ತಿನಲ್ಲಿ ದೇಹಕ್ಕೆ ಉಳಿದ ಕೆಲಸಗಳನ್ನು ಪೂರೈಸಿಕೊಳ್ಳಲು ಹೆಚ್ಚಿನ ಸಮಯಾವಕಾಶ ದೊರಕುತ್ತದೆ.

ಸೌತೆಕಾಯಿ ತಿನ್ನಬೇಡಿ

ಸೌತೆಕಾಯಿ ತಿನ್ನಬೇಡಿ

ಈ ಸಮಯದಲ್ಲಿ ಸೌತೆಕಾಯಿಯ ಸೇವನೆ ಸಲ್ಲದು. ಏಕೆಂದರೆ ಇದರಲ್ಲಿರುವ ಪೋಷಕಾಂಶಗಳು ಮತ್ತು ವಿಶೇಷವಾಗಿ ಹೆಚ್ಚಿನ ಪ್ರಮಾಣದ ನೀರು, ಗರ್ಭಕೋಶದ ಗೋಡೆಯಲ್ಲಿ ನೀರು ನಿಲ್ಲಲು ಕಾರಣವಾಗುತ್ತವೆ ಹಾಗೂ ಇದು ಸ್ರಾವವನ್ನು ಇನ್ನೂ ಹೆಚ್ಚಿನ ಕಾಲ ಮುಂದುವರೆಸಲು ಕಾರಣವಾಗುತ್ತದೆ.

ಐಸ್ ನೀರು/ಸೋಡಾ ಕುಡಿಯದಿರಿ

ಐಸ್ ನೀರು/ಸೋಡಾ ಕುಡಿಯದಿರಿ

ಐಸ್ ಸೇರಿಸಿದ, ಸೋಡಾ ಅಥವಾ ಬುರುಗುಬರುವ ಯಾವುದೇ ಪಾನೀಯವನ್ನು ಈ ದಿನಗಳಲ್ಲಿ ಕುಡಿಯದಿರಿ. ಇವೂ ಗರ್ಭಕೋಶದ ಗೋಡೆಯಲ್ಲಿ ಹೆಚ್ಚಿನ ನೀರನ್ನು ಹಿಡಿದಿಟ್ಟುಕೊಳ್ಳಲು ನೆರವಾಗುವ ಕಾರಣ ಸ್ರಾವ ಹಚ್ಚು ಕಾಲ ಮುಂದುವರೆಯುತ್ತದೆ. ಅಲ್ಲದೇ ಸತತವಾಗಿ ಕುಡಿಯುತ್ತಿರುವವರಲ್ಲಿ ಐದರಿಂದ ಹತ್ತು ವರ್ಷದ ಬಳಿಕ ಗರ್ಭಗೋಶದ ಗೋಡೆಯಲ್ಲಿ ಗಡ್ಡೆ, ಕ್ಯಾನ್ಸರ್ ಅಥವಾ ದುರ್ಮಾಂಸ ಬೆಳೆಯಲು ಕಾರಣವಾಗಬಹುದು. ಆ ದಿನಗಳಲ್ಲಿ ಕಾಡುವ ಅತೀವ ರಕ್ತಸ್ರಾವ! ಕಾರಣವೇನು?

English summary

Don't Do This When You Have Periods; It Can Be Dangerous

Did you know that half the problems that we face during our periods can be solved by eating right? Further, some things that we do during our periods can turn out to be very dangerous. So, if you have been doing any of the things that are listed in this article, it is advised to immediately stop doing it. So, continue reading this article to know more about the things to avoid during menstruation.
X
Desktop Bottom Promotion