For Quick Alerts
ALLOW NOTIFICATIONS  
For Daily Alerts

ಸತತವಾಗಿ 'ತಲೆನೋವು' ಕಾಡುತ್ತಿದ್ದರೆ-ಅಪಾಯ ಕಟ್ಟಿಟ್ಟ ಬುತ್ತಿ!

By Arshad
|

ಒಂದು ವೇಳೆ ನೀವು ಸತತವಾಗಿ ಕಾಡುವ ತಲೆನೋವಿಗೆ ಒಳಗಾಗಿದ್ದರೆ, ಇದನ್ನು ಸಾಮಾನ್ಯ ತಲೆನೋವು ಎಂದು ಪರಿಗಣಸಲು ಸಾಧ್ಯವೇ ಇಲ್ಲ. ಏಕೆಂದರೆ ಈ ತಲೆನೋವು ಬೇರಾವುದೋ ದೊಡ್ಡ ತೊಂದರೆಯೊಂದರ ಪರಿಣಾಮವಾಗಿರಬಹುದು. ದೇಹವನ್ನೇ ನಿತ್ರಾಣವಾಗಿಸಿ ಹಿಂಡಿ ಹಿಪ್ಪೆ ಮಾಡಬಲ್ಲ ನೋವುಗಳಲ್ಲಿ ತಲೆನೋವು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ತಲೆನೋವು ಓಡಿಸುವ ಮನೆ ಮದ್ದು: ಪ್ರಯತ್ನಿಸಿ ನೋಡಿ

ಕೆಲವೊಮ್ಮೆ, ತಲೆನೋವು ತೀವ್ರವಾದಾಗ ಕಣ್ಣುಗಳನ್ನು ತೆರೆಯಲೂ ಸಾಧ್ಯವಾಗುವುದಿಲ್ಲ, ಕಿವಿಯಿಂದ ಕೇಳುವ ಯಾವುದೇ ಶಬ್ದವೂ, ತಣ್ಣಗಿನ ಗಾಳಿ, ಪರಿಮಳ ಮೊದಲಾದ ಸಂವೇದನೆಗಳೂ ತಲೆನೋವನ್ನು ಹೆಚ್ಚಿಸುತ್ತವೆ. ಈ ಸಮಯದಲ್ಲಿ ಸುಮ್ಮನೆ ಮಲಗುವುದೊಂದೇ ಎಲ್ಲರಿಗೆ ಹೊಳೆಯುವ ಪರಿಹಾರ. ಪರಿಣಾಮವಾಗಿ ನಿತ್ಯದ ಕೆಲಸಕಾರ್ಯಗಳೆಲ್ಲಾ ಬಾಧೆಗೊಳಗಾಗುತ್ತವೆ. ಬಾಳೆಹಣ್ಣಿನ ಸಿಪ್ಪೆಯ ಪವರ್‌ಗೆ 'ತಲೆನೋವು' ಮಂಗಮಾಯ!

ತಲೆನೋವು ಎಂದಾಕ್ಷಣ ಹೆಚ್ಚಿನವರು ನೋವು ನಿವಾರಕ ಗುಳಿಗೆಯನ್ನು ಸೇವಿಸುವ ನಿರ್ಧಾರ ಅಥವಾ ಶಿಫಾರಸ್ಸು ಮಾಡುತ್ತಾರೆ.
ಆದರೆ ವಾಸ್ತವವಾಗಿ ನೋವು ನಿವಾರಕಗಳು ನೋವಿನ ಸಂವೇದನೆಯನ್ನು ಮೆದುಳಿಗೆ ತಲುಪಲು ಅಡ್ಡಗಾಲು ಹಾಕುತ್ತವೆಯೇ ಹೊರತು ನೋವನ್ನು ಕಡಿಮೆ ಮಾಡುವುದಿಲ್ಲ. ಮೈಗ್ರೇನ್ ತಲೆನೋವಿಗೆ ಅಡುಗೆ ಮನೆಯಲ್ಲಿಯೇ ಇದೆ ಔಷಧಿ!

ಅಲ್ಲದೇ ಇವುಗಳಿಗೆ ಕೆಲವು ಅಡ್ಡಪರಿಣಾಮಗಳೂ ಇವೆ. ಆದ್ದರಿಂದ ತಲೆನೋವು ಬಂದಾಗ ವೈದ್ಯಕೀಯ ಸಲಹೆ ಪಡೆಯುವುದೇ ಸೂಕ್ತ. ಒಂದು ವೇಳೆ ತಲೆನೋವು ತೀವ್ರವಾಗಿದ್ದು ಸತತವಾಗಿ ಬರುತ್ತಲೇ ಇದ್ದರೆ ಇದು ಬೇರೆ ರೋಗದ ತೊಂದರೆಯ ಅಡ್ಡಪರಿಣಾಮಗಳಿರ ಬಹುದೆಂದು ಈ ಕೆಳಗಿನ ಸಂಜ್ಞೆಗಳು ಸೂಚಿಸುತ್ತವೆ...

ಚಪ್ಪಾಳೆ ಹೊಡೆದಂತೆ ಥಟ್ಟನೇ ನೋವಾಗುವುದು

ಚಪ್ಪಾಳೆ ಹೊಡೆದಂತೆ ಥಟ್ಟನೇ ನೋವಾಗುವುದು

ಸಾಮಾನ್ಯವಾಗಿದ್ದ ವೇಳೆಯಲ್ಲಿ ಒಂದು ವೇಳೆ ತಲೆನೋವು ಥಟ್ಟನೇ, ಚಪ್ಪಾಳೆ ಹೊಡೆದಷ್ಟು ಬೇಗನೇ ಆವರಿಸಿಬಿಟ್ಟು ಕೆಲವಾರು ನಿಮಿಷಗಳವರೆಗೆ ನಿಧಾನವಾಗಿ ಇಳಿಯುತ್ತಾ ಹೋದರೆ ನಿಮ್ಮ ಮೆದುಳಿನಲ್ಲಿ ರಕ್ತಸ್ರಾವ ಅಥವಾ ಗಡ್ಡೆಕಟ್ಟಿರಬಹುದು (brain hemorrhage). ಇದೇ ತಲೆಯೊಳಗೆ ಚಪ್ಪಾಳೆ ಹೊಡೆದಂತೆ ನೋವು ಏರಲು (thunderclap) ಕಾರಣ.

ನೋವಿನಲ್ಲಿ ಏರಿಳಿತವಾಗುತ್ತಾ ಇರುವುದು

ನೋವಿನಲ್ಲಿ ಏರಿಳಿತವಾಗುತ್ತಾ ಇರುವುದು

ಒಂದು ವೇಳೆ ತಲೆನೋವಿನ ತೀವ್ರತೆ ಒಮ್ಮೆ ಅತಿ ಹೆಚ್ಚಾಗಿಯೂ, ಕೆಲವೊಮ್ಮೆ ತೀರಾ ಕಡಿಮೆಯಾಗಿಯೂ ಏರುತ್ತಾ ಇಳಿಯುತ್ತಾ ಇದ್ದು ಒಂದೇ ಹಂತದಲ್ಲಿರದಿದ್ದರೆ ಇದು ಮೈಗ್ರೇನ್ ತಲೆನೋವಿನ ಅಥವಾ brain aneurism ಎಂಬ ಮೆದುಳಿನ ತೊಂದರೆಯಾಗಿರಬಹುದು.ತಲೆನೋವು ತರುವ 10 ಅಭ್ಯಾಸಗಳು!

ಕಣ್ಣ ಹಿಂದೆ ಕೇಂದ್ರೀಕೃತಗೊಳ್ಳುವ ನೋವು

ಕಣ್ಣ ಹಿಂದೆ ಕೇಂದ್ರೀಕೃತಗೊಳ್ಳುವ ನೋವು

ಒಂದು ವೇಳೆ ನೋವು ನಿಮ್ಮ ತಲೆಯ ನಟ್ಟ ನಡುವೆ, ಅಂದರೆ ಕಣ್ಣುಗುಡ್ಡೆಗಳ ಹಿಂಭಾಗದ ನಡುವಿನ ಭಾಗದಲ್ಲಿದ್ದಂತೆ ಅನ್ನಿಸಿದರೆ ಇದು ಕಣ್ಣಿನ ಭೀಕರ ಕಾಯಿಲೆಯಾದ ಗ್ಲೌಕೋಮಾ ಅಥವಾ ಕುಹರದ (ಸೈನಸ್) ಸೋಂಕಿನಿಂದ ಆಗಿರುವ ಸೈನುಸೈಟಿಸ್ ಆಗಿರಬಹುದು.

ಕೇವಲ ಬೆಳಗ್ಗಿನ ಸಮಯದ ತಲೆನೋವು

ಕೇವಲ ಬೆಳಗ್ಗಿನ ಸಮಯದ ತಲೆನೋವು

ಒಂದು ವೇಳೆ ಬೆಳಿಗ್ಗೆದ್ದಾಗ ಅತಿ ಹೆಚ್ಚಾಗಿದ್ದು ಬಿಸಿಲೇರಿದಂತೆಲ್ಲಾ ನೋವು ಕಡಿಮೆಯಾಗುತ್ತಾ ಹೋದರೆ ಇದು ಸೌಮ್ಯ ಪ್ರಮಾಣದ ಸೈನುಸೈಟಿಸ್ ಅಥವಾ ಕುಹರದ ಸೋಂಕಿನ ಸಂಕೇತವಾಗಿರಬಹುದು. ಇದರಿಂದ ರಾತ್ರಿಯ ಸಮಯದಲ್ಲಿ ಮೂಗಿನ ಒಳಭಾಗದ ಸೋಂಕು ಹೆಚ್ಚಾಗಿದ್ದು ಬೆಳಿಗ್ಗೆದ್ದ ತಕ್ಷಣ ತಲೆನೋವಿಗೆ ಕಾರಣವಾಗಿರುತ್ತದೆ.

ತಲೆನೋವಿನ ಜೊತೆಗೆ ತಲೆಸುತ್ತುವುದು

ತಲೆನೋವಿನ ಜೊತೆಗೆ ತಲೆಸುತ್ತುವುದು

ಒಂದು ವೇಳೆ ನಿಮಗೆ ಅತೀವ ತಲೆನೋವಿದ್ದು ತಿಂಗಳಿಗೂ ಹೆಚ್ಚು ಕಾಲ ಕಾಡಿದರೆ ಮತ್ತು ಇದರೊಂದಿಗೆ ತಲೆತಿರುಗಿ ಬೀಳುವಷ್ಟು ನಿತ್ರಾಣ ಕಾಡಿದರೆ ಇದು ಹೃದಯಾಘಾತವಾಗುವ ಸಂಭವ ಹೆಚ್ಚಿರುವುದನ್ನು ಸೂಚಿಸುತ್ತದೆ.

ತಲೆನೋವಿನ ಜೊತೆ ವಾಂತಿಯಾಗುವ ಲಕ್ಷಣ ಕಂಡುಬಂದರೆ

ತಲೆನೋವಿನ ಜೊತೆ ವಾಂತಿಯಾಗುವ ಲಕ್ಷಣ ಕಂಡುಬಂದರೆ

ತಲೆನೋವು ತೀವ್ರವಾಗಿದ್ದು ಈ ಸಮಯದಲ್ಲಿ ವಾಂತಿ ಬಂದಂತಾಗುವುದು, ಆದರೆ ವಾಂತಿಯಾಗದೇ ಇರುವುದು ಮೈಗ್ರೇನ್ ತಲೆನೋವಿನ ಲಕ್ಷಣವಾಗಿದೆ.

English summary

Dangerous Signs Your Headache Is Not Normal!

Sometimes, people experiencing a severe form of headache will not even be able to keep their eyes open and will not be able to function normally, thus hampering their daily activities. Taking painkillers to get rid of a bad headache, every time you experience one, can prove to be very unhealthy and can cause negative side effects. Here are a few signs that indicate your headache may be something more complicated.
X
Desktop Bottom Promotion