For Quick Alerts
ALLOW NOTIFICATIONS  
For Daily Alerts

ಮಲೇರಿಯಾ ಬಗ್ಗೆ ಮುನ್ನೆಚ್ಚರಿಕೆ ಇರಲಿ, ಇದು ಬಲು ಅಪಾಯಕಾರಿ!

ಮಲೇರಿಯಾ ಸೋಂಕುಳ್ಳ ಸೊಳ್ಳೆಯ ಕಡಿತದಿಂದ ಉಂಟಾಗುವ ರೋಗವಾಗಿದ್ದು ಸೋಂಕಿತ ಸೊಳ್ಳೆಯು ಕಚ್ಚುವುದದಿಂದ ಈ ರೋಗ ಉಂಟಾಗುತ್ತದೆ....

By Jaya subramanya
|

ಬೇಸಿಗೆಯ ಬಿರುಬಿಸಿಲಿನ ಜೊತೆಗೆ ಸಾಂಕ್ರಾಮಿಕ ರೋಗಗಳೂ ನಿಮ್ಮನ್ನು ಬಾಧಿಸುತ್ತವೆ. ಅದರಲ್ಲೂ ಸೊಳ್ಳೆಗಳ ಕಾಟ ವಿಪರೀತವಾಗಿರುತ್ತದೆ. ನಮ್ಮ ದೇಹದಲ್ಲಿರುವ ಬೆವರು ಮತ್ತು ಅದರ ವಾಸನೆಯಿಂದ ಸೊಳ್ಳೆಗಳು ನಮ್ಮನ್ನು ಬಾಧಿಸುವುದೇ ಬಿಡುವುದಿಲ್ಲ. ಈ ಸಮಯದಲ್ಲಿ ನೀರು ಅತ್ಯಲ್ಪ ಪ್ರಮಾಣದಲ್ಲಿ ಇರುವುದರಿಂದ ಇವು ನೀರನ್ನು ಅರಸಿ ಮನೆಗಳಿಗೆ ದಾಳಿ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ.

ಸೊಳ್ಳೆ ಕಡಿತದಿಂದ ತೀವ್ರವಾಗಿ ಬರುವ ರೋಗವಾಗಿದೆ ಮಲೇರಿಯಾ. ಅನಾಫಿಲಿಸ್ ಸೊಳ್ಳೆಯ ಕಡಿತವೇ ಈ ಜ್ವರಕ್ಕೆ ಕಾರಣವಾಗಿದೆ. ಸೊಳ್ಳೆಯ ಕಡಿತದಿಂದ ನಮ್ಮ ರಕ್ತಕ್ಕೆ ಆಗಮಿಸುವ ಪ್ಲಾಸ್ಮೋಡಿಯಂ ಎಂಬ ಅತಿಸೂಕ್ಷ್ಮ ವೈರಾಣುಗಳು ರಕ್ತದ ಕೆಂಪುಕಣಗಳು ಗುಂಪುಗೂಡುವಂತೆ ಮಾಡುತ್ತವೆ. ಪ್ರಥಮವಾಗಿ ಇದು ನಮ್ಮ ಯಕೃತ್ತನ್ನು (ದೇಹದ ಲಿವರ್) ಬಾಧಿಸುತ್ತದೆ. ಕ್ರಮೇಣ ದೇಹದ ಇತರ ಭಾಗಗಳನ್ನೂ ಬಾಧಿಸುತ್ತಾ ಹೋಗುತ್ತದೆ. ಮಲೇರಿಯಾ ರೋಗ ಗುಣಪಡಿಸುವ ಪವರ್‌ಫುಲ್ ಮನೆಮದ್ದು

ಈ ವೈರಾಣುಗಳನ್ನು ನಿಗ್ರಹಿಸಲು ದೇಹ ತಾಪಮಾನವನ್ನು ವಿಪರೀತವಾಗಿ ಏರಿಸುತ್ತದೆ. ಈ ಹಂತಕ್ಕೇರುವ ಮುನ್ನ ಸೂಕ್ತ ವಿಧಾನಗಳನ್ನು ಅಳವಡಿಸಿಕೊಂಡರೆ ವೈರಾಣುಗಳ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ. ಇಂದಿನ ಲೇಖನದಲ್ಲಿ ಮಲೇರಿಯಾ ರೋಗದಿಂದ ನಮಗುಂಟಾಗುವ ಅಪಾಯಗಳೇನು ಎಂಬುದನ್ನು ಇಲ್ಲಿ ಕಂಡುಕೊಳ್ಳೋಣ....

ಸೆರೆಬ್ರಲ್ ಮಲೇರಿಯಾ

ಸೆರೆಬ್ರಲ್ ಮಲೇರಿಯಾ

ಇದು ನಮ್ಮ ಮೆದುಳಿಗೆ ಏರಿದರೆ ಮೆದುಳಿಗೆ ಹಾನಿಯುಂಟಾಗುವ ಸಾಧ್ಯತೆ ಇರುತ್ತದೆ. ಇದನ್ನು ಸೆರೆಬ್ರಲ್ ಮಲೇರಿಯಾ ಎಂದು ಕರೆಯುತ್ತಾರೆ. ಇದರಿಂದ ಪಾರ್ಶ್ವವಾಯು ಉಂಟಾಗುವ ಸಾಧ್ಯತೆ ಕೂಡ ಇದೆ.

ತೀವ್ರ ಉಸಿರಾಟ ತೊಂದರೆ

ತೀವ್ರ ಉಸಿರಾಟ ತೊಂದರೆ

ಮಲೇರಿಯಾ ರೋಗದಲ್ಲಿರುವ ತೊಂದರೆ ಇದಾಗಿದೆ. ಇದು ಉಸಿರಾಟ ಸಮಸ್ಯೆಗಳನ್ನು ರೋಗಿಗೆ ಉಂಟುಮಾಡುತ್ತದೆ.

ಕನ್ವಲ್ಶನ್

ಕನ್ವಲ್ಶನ್

ಸೆರೆಬ್ರಲ್ ಮಲೇರಿಯಾಗೆ ಇದು ಸಂಬಂಧಿತವಾಗಿದೆ. ತೀವ್ರ ಜ್ವರದಿಂದ ಕನ್ವಲ್ಶನ್ ಉಂಟಾಗಬಹುದು. ಮಲೇರಿಯಾದಿಂದ ಉಂಟಾಗುವ ತೀವ್ರ ತೊಂದರೆ ಇದಾಗಿದೆ.

ಹೆಮೋಲಿಸಿಸ್

ಹೆಮೋಲಿಸಿಸ್

ಪರಾವಲಂಬಿ ಆರ್‌ಬಿಸಿಗಳನ್ನು ಇದು ನಾಶ ಮಾಡುತ್ತದೆ. ಇದರಿಂದ ಹೆಮೋಲಿಸಿಸ್ ಉಂಟಾಗುತ್ತದೆ. ಕಿಡ್ನಿಗೆ ಇದು ನೇರದಾಳಿಯನ್ನು ಮಾಡಿ ಕಿಡ್ನಿ ವಿಫಲತೆಯನ್ನುಂಟು ಮಾಡುತ್ತದೆ.

ರಕ್ತದಲ್ಲಿರುವ ಸಕ್ಕರೆ ಮಟ್ಟದಲ್ಲಿ ಏರಿಳಿತ

ರಕ್ತದಲ್ಲಿರುವ ಸಕ್ಕರೆ ಮಟ್ಟದಲ್ಲಿ ಏರಿಳಿತ

ಮಲೇರಿಯಾದಿಂದ ರಕ್ತದಲ್ಲಿರುವ ಸಕ್ಕರೆ ಮಟ್ಟ ಇಳಿಮುಖವಾಗಲಿದೆ. ಅದಕ್ಕಾಗಿ ಬಳಸುವ ಔಷಧದಿಂದ ಕೂಡ ರಕ್ತದ ಸಕ್ಕರೆ ಮಟ್ಟ ಇಳಿಕೆಯಾಗಲಿದೆ.

ದ್ರವ ಅಸಮತೋಲನ

ದ್ರವ ಅಸಮತೋಲನ

ರೋಗಿಗಳು ತೀವ್ರ ಪ್ರಮಾಣದ ದ್ರವದಿಂದ ಬೆವರು ಇಲ್ಲವೇ ಆಗಾಗ್ಗೆ ವಾಂತಿ ಮಾಡಿಕೊಳ್ಳುವುದರಿಂದ ದೇಹದಲ್ಲಿ ಉಪ್ಪಿನ ಪ್ರಮಾಣವನ್ನು ಕಳೆದುಕೊಳ್ಳಬಹುದು. ಮಲೇರಿಯಾದಿಂದ ಈ ಸಮಸ್ಯೆಯೂ ಉಂಟಾಗುತ್ತದೆ.

ಕಪ್ಪುದ್ರವ ಜ್ವರ

ಕಪ್ಪುದ್ರವ ಜ್ವರ

ಬೃಹತ್ ಪ್ರಮಾಣದ ಹೆಮೊಲಿಸಿಸ್‌ನಿಂದ ಈ ಜ್ವರ ಉಂಟಾಗುತ್ತದೆ. ಮೂತ್ರಪಿಂಡದ ದುರ್ಬಲತೆ ಕೂಡ ಇದರಲ್ಲಿ ಸೇರಿರುತ್ತದೆ.

ಸ್ಪ್ಲೇನಿಕ್ ಛಿದ್ರ

ಸ್ಪ್ಲೇನಿಕ್ ಛಿದ್ರ

ಮಲೇರಿಯಾ ಮರುಕಳಿಸುವ ಸಂದರ್ಭದಲ್ಲಿ ಗುಲ್ಮದ ಹಿಗ್ಗುವಿಕೆ ನಿಶ್ಶಬ್ಧವಾಗಿ ನಡೆಯುತ್ತದೆ.ಕಿಬ್ಬೊಟ್ಟೆಯ ನೋವು ಸಾಮಾನ್ಯವಾಗಿದ್ದು ಆಘಾತ ಉಂಟಾಗುತ್ತದೆ.

ರಕ್ತಹೀನತೆ

ರಕ್ತಹೀನತೆ

ಪರಾವಲಂಬಿ ಆರ್‌ಬಿಸಿ ಗಳ ನಾಶದಿಂದ ತೀವ್ರತರವಾದ ರಕ್ತಹೀನತೆಗೆ ವ್ಯಕ್ತಿ ಒಳಗಾಗುತ್ತಾನೆ.

ಕಿಡ್ನಿಯ ಸಮಸ್ಯೆ

ಕಿಡ್ನಿಯ ಸಮಸ್ಯೆ

ಮಲೇರಿಯಾ ಜ್ವರವು ನೇರವಾಗಿ ಕಿಡ್ನಿ ಹಾಗೂ ದೇಹದ ಲಿವರ್ ಮೇಲೆ ಮೊದಲು ದಾಳಿ ಮಾಡುವುದರಿಂದ, ಕಿಡ್ನಿಯು ಸರಿಯಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲವಾಗಿ ಬಿಡುತ್ತದೆ, ಜೊತೆಗೆ ಮೂತ್ರ ಬಣ್ಣವೂ ಕೂಡ ಗಾಢ ಬಣ್ಣಕ್ಕೆ ತಿರುತ್ತದೆ...ಮನೆ ಔಷಧ: ಕಿಡ್ನಿ ಕಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ

English summary

Complications Caused By Malaria That You Must Be Aware Of

In this article we have listed some of the top complications caused by malaria as part of World Immunization Week. So, read further to all about the complications of malaria.
X
Desktop Bottom Promotion