For Quick Alerts
ALLOW NOTIFICATIONS  
For Daily Alerts

ಶ್ವಾಸಕೋಶದ ಕ್ಯಾನ್ಸರ್ ತಡೆಗಟ್ಟುವ ಪವರ್ ಫುಲ್ ಆಹಾರಗಳು

By Jaya
|

ಕ್ಯಾನ್ಸರ್ ಒಂದು ಭೀಕರ ಕಾಯಿಲೆಯಾಗಿದ್ದು, ರೋಗದ ತೀವ್ರತೆ ಕೈಮೀರಿ ಹೋಯಿತು ಎಂದಾದಲ್ಲಿ ರೋಗಿಯು ಬದುಕುಳಿಯವುದೇ ಕಷ್ಟ. ಕ್ಯಾನ್ಸರ್ ಮಹಾಮಾರಿ ದೇಹದ ಬೇರೆ ಬೇರೆ ಭಾಗಗಳನ್ನು ಆವರಿಸಬಹುದು. ಕರುಳು, ಸ್ತನ, ರಕ್ತದ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಹೀಗೆ ಕ್ಯಾನ್ಸರ್ ದೇಹದ ಯಾವ ಭಾಗದಲ್ಲಿ ಬೇಕಾದರೂ ಉಂಟಾಗಬಹುದಾಗಿದೆ.

ಇದುವೇ ಕ್ಯಾನ್ಸರ್ ನಿಯಂತ್ರಿಸುವ ಪವರ್ ಫುಲ್ ಜ್ಯೂಸ್

ಅದರಲ್ಲೂ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚು ಅಪಾಯಕಾರಿಯಾದುದು. ಗೆಡ್ಡೆಗಳು ಈ ಸಮಯದಲ್ಲಿ ರೂಪುಗೊಳ್ಳುತ್ತವೆ ಮತ್ತು ಇವುಗಳು ಗಾತ್ರದಲ್ಲಿ ಹಿರಿದಾಗುತ್ತಾ ಶ್ವಾಸಕೋಶದ ಅಂಗಾಂಶಗಳನ್ನು ನಾಶಗೊಳಿಸುತ್ತವೆ. ಇನ್ನು ತೀವ್ರ ಪ್ರಕರಣಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್‌ನಿಂದ ಅಂಗಗಳ ವೈಫಲ್ಯವುಂಟಾಗಿ ಸಾವು ಉಂಟಾಗುತ್ತದೆ. ಧೂಮಪಾನಿಗಳ ಮೇಲೆ ಇದರ ಪರಿಣಾಮ ಹೆಚ್ಚು. ಅಂತೆಯೇ ಧೂಮಪಾನಿಗಳಲ್ಲದವರನ್ನು ಇದು ಕಾಡಬಹುದು.

ಕಾಯಿಲೆ ಬರುವುದಕ್ಕೂ ಮುನ್ನವೇ ಅದನ್ನು ತಡೆಗಟ್ಟಿ ಸಂರಕ್ಷಣೆಯನ್ನು ಪಡೆದುಕೊಳ್ಳುವುದು ಉತ್ತಮ ಉಪಾಯವಲ್ಲವೇ? ಹಾಗಿದ್ದರೆ ಶ್ವಾಸಕೋಶದ ಕ್ಯಾನ್ಸರ್ ಬರದಂತೆ ನಾವು ಸೇವಿಸಬೇಕಾದ ಆಹಾರಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ...

ಪಾಲಕ್ ಹಾಗೂ ಬಸಲೆ

ಪಾಲಕ್ ಹಾಗೂ ಬಸಲೆ

ಧೂಮಪಾನದ ಪರಿಣಾಮವನ್ನು ಹಿಮ್ಮೆಟ್ಟಿಸಲು ಫೋಲೇಟ್ ನ ಅಗತ್ಯವಿದೆ. ಇವು ಕೇಲ್ ಎಲೆಗಳು, ಪಾಲಕ್, ಬಸಲೆ ಸೊಪ್ಪು ಮತ್ತು ಬೀನ್ಸ್ ಬಳಲ್ಲಿ ಹೇರಳವಾಗಿವೆ. ಸಂಶೋಧನೆಗಳ ಪ್ರಕಾರ ಶ್ವಾಸಕೋಶದ ಕ್ಯಾನ್ಸರ್ ತಡೆಗಟ್ಟಲು ಈ ಫೋಲೇಟ್ ಉತ್ತಮವಾಗಿದ್ದು ಧೂಮಪಾನ ಮತ್ತು ಮದ್ಯಪಾನದಿಂದ ಈ ಅಂಶಗಳು ದೇಹದಿಂದ ವಿಸರ್ಜಿಸಲ್ಪಡುತ್ತವೆ.

ಮೀನು

ಮೀನು

ಸಾಲ್ಮನ್ ಮೀನು ಸಾಲ್ಮನ್ ಬಂಗಡೆ, ಬೂತಾಯಿ ಮೀನುಗಳಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳಿವೆ. ವಿಶೇಷವಾಗಿ ಇವು ಮಾಂಸಾಹಾರಿಗಳು, ಧೂಮಪಾನಿಗಳೂ ಆಗಿರುವ ವ್ಯಕ್ತಿಗಳಿಗೆ ಹೆಚ್ಚು ಅಗತ್ಯವಾಗಿದೆ. ಆದ್ದರಿಂದ ಧೂಮಪಾನ ತ್ಯಜಿಸಿ ಮಾಂಸಾಹಾರದ ಬದಲಿಗೆ ಈ ಮೀನುಗಳನ್ನು ಸೇವಿಸುವುದು ಉತ್ತಮ.

ದಳಗಳುಳ್ಳ ತರಕಾರಿಗಳನ್ನು ಸರಿಯಾಗಿ ಸೇವಿಸಿ

ದಳಗಳುಳ್ಳ ತರಕಾರಿಗಳನ್ನು ಸರಿಯಾಗಿ ಸೇವಿಸಿ

ಹೂಕೋಸು, ಎಲೆಕೋಸು, ಬ್ರೋಕೋಲಿ ಮೊದಲಾದವುಗಳಲ್ಲಿ sulforaphane ಎಂಬ ಪೋಷಕಾಂಶವಿದ್ದು ಕ್ಯಾನ್ಸರ್ ತಡೆಗಟ್ಟಲು ಉತ್ತಮವಾಗಿರುವ ಕಾರಣ ಈ ತರಕಾಗಿಗಳನ್ನೂ ಸಾಕಷ್ಟು ಸೇವಿಸಬೇಕು.

ಪಪ್ಪಾಯಿ ತಿನ್ನಿ

ಪಪ್ಪಾಯಿ ತಿನ್ನಿ

ಧೂಮಪಾನದ ಕಾರಣ ಕೊಂಚ ಶಿಥಿಲವಾಗಿರುವ ಶ್ವಾಸಕೋಶ ಮತ್ತು ಇತರ ಶ್ವಾಸಸಂಬಂಧಿ ಅಂಗಗಳ ಮರುಪೂರಣೆಗಾಗಿ ಕ್ಯಾರೋಟೀನುಗಳ ಅವಶ್ಯಕತೆ ಇದೆ. ಇವು ಪಪ್ಪಾಯಿ, ಕಿತ್ತಳೆ, ಪೀಚ್ ಹಣ್ಣುಗಳು, ಕ್ಯಾರೆಟ್ ಹಾಗೂ bell peppers ಎಂಬ ಹಣ್ಣುಗಳಲ್ಲಿವೆ. ಇವುಗಳನ್ನು ಹೆಚ್ಚಾಗಿ ಸೇವಿಸಬೇಕು.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಕೆಲವೊಮ್ಮೆ ರೋಗಿ ಧೂಮಪಾನ ಮಾಡದವನಾಗಿದ್ದರೂ ಕ್ಯಾನ್ಸರ್ ಬೇರೆ ಕಾರಣದಿಂದ ಆವರಿಸಿದ್ದು ಪ್ರಾರಂಭಿಕ ಹಂತದಲ್ಲಿದ್ದರೆ ಇದನ್ನು ಗುಣಪಡಿಸಬಹುದು. ಇದಕ್ಕೆ ದೀರ್ಘಕಾಲದ ಚಿಕಿತ್ಸೆ ಮತ್ತು ಔಷಧಿ ಸೇವನೆ ಅಗತ್ಯ. ಆದರೆ ಬೆಳ್ಳುಳ್ಳಿಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದಿದ್ದರೆ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಅಪಾರವಾಗಿ ಕಡಿಮೆ ಮಾಡಬಹುದು. ಬೆಳ್ಳುಳ್ಳಿಯ ಕ್ಯಾನ್ಸರ್ ನಿವಾರಕ ಗುಣಗಳು ಕ್ಯಾನ್ಸರ್‌ಗೆ ಕಾರಣವಾದ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ಹಿಮ್ಮೆಟ್ಟಿಸುತ್ತದೆ. ಅಲ್ಲದೇ ಜೀರ್ಣಶಕ್ತಿಯನ್ನು ಉತ್ತಮಗೊಳಿಸುವ ಮೂಲಕ ಆರೋಗ್ಯವನ್ನೂ ಹೆಚ್ಚಿಸುತ್ತದೆ. ಆದರೆ ಶ್ವಾಸಕೋಶದ ಕ್ಯಾನ್ಸರ್‌ಗೆ ಬೆಳ್ಳುಳ್ಳಿ ಹೇಗೆ ನೆರವಾಗುತ್ತದೆ? ಇದಕ್ಕೆ ಬೆಳ್ಳುಳ್ಳಿಯನ್ನು ಹಸಿಯಾಗಿ ಸೇವಿಸುವುದು ಅಗತ್ಯ. ಇದರ ರಸದಿಂದ ಹೊಮ್ಮುವ ಆವಿ ಶ್ವಾಸಕೋಶದೊಳಕ್ಕೆ ಹಾದು ಅಲ್ಲಿನ ಕ್ಯಾನ್ಸರ್ ಕಾರಕ ಕಣಗಳನ್ನು ಕೊಲ್ಲುತ್ತದೆ.

ಈರುಳ್ಳಿ ಮತ್ತು ಬೆಳ್ಳುಳ್ಳಿ ಜಾಸ್ತಿ ಸೇವಿಸಿ

ಈರುಳ್ಳಿ ಮತ್ತು ಬೆಳ್ಳುಳ್ಳಿ ಜಾಸ್ತಿ ಸೇವಿಸಿ

ಕೆಲವೊಂದು ಕಿಣ್ವಗಳಿಗೆ ಶಕ್ತಿಯನ್ನು ನೀಡುವಂತಹ ಅಂಶಗಳು ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಇದೆ. ಇದು ಕ್ಯಾನ್ಸರ್ ಅಂಶಗಳನ್ನು ದುರ್ಬಲಗೊಳಿಸುತ್ತದೆ, ಅಲ್ಲದೆ ಕ್ಯಾನ್ಸರ್ ಅಂಶಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಇವು ನೆರವಾಗುವುದು. ಕ್ಯಾನ್ಸರ್ ಕೋಶಗಳು ಬೆಳೆಯುವ ಪ್ರಕ್ರಿಯೆಯನ್ನು ಇವು ನಿಧಾನಗೊಳಿಸುವುದು.

ಕೆಂಪು ಮಾಂಸಕ್ಕೆ ಗುಡ್ ಬೈ ಹೇಳಿ

ಕೆಂಪು ಮಾಂಸಕ್ಕೆ ಗುಡ್ ಬೈ ಹೇಳಿ

ಧೂಮಪಾನಕ್ಕೆ ಹೇಗೆ ಗುಡ್ ಬೈ ಹೇಳುತ್ತೀರೋ ಹಾಗೇ ಕೆಂಪು ಮಾಸಕ್ಕೂ ಗುಡ್ ಬೈ ಹೇಳುವ ಮೂಲಕ ಶ್ವಾಸಕೋಶದ ಕ್ಯಾನ್ಸರ್ ತಗಲುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು.

ಹೂಕೋಸು

ಹೂಕೋಸು

ಹೂಕೋಸಿನಲ್ಲಿ ಹಲವಾರು ವಿಧ ಅದರಲ್ಲಿ ಕೆಂಪು ಮತ್ತು ಹಸಿರು ಬಣ್ಣದ ಹೂಕೋಸುಗಳಲ್ಲಿ ಯಾವುದಾದರೊಂದನ್ನು ಆರಿಸಿಕೊಳ್ಳಿ. ಇವುಗಳನ್ನು ಆಹಾರದಲ್ಲಿ ಆಗಲಿ ಅಥವಾ ಹಾಗೆಯೇ ಕಚ್ಛಾ ತರಕಾರಿಯಾಗಿ ಸಹ ಸೇವಿಸಬಹುದು. ಇದರಲ್ಲಿರುವ ಸಮೃದ್ಧ ವಿಟಮಿನ್‍ಗಳು, ಕಬ್ಬಿಣ ಮತ್ತು ಪೊಟಾಷ್ಯಿಯಂ ಹಾಗು ಕಡಿಮೆ ಕ್ಯಾಲೋರಿಯು ಕ್ಯಾನ್ಸರನ್ನು ತಡೆಯುವ ಶಕ್ತಿಯನ್ನು ಒಳಗೊಂಡಿದೆ. ಅಷ್ಟೇ ಅಲ್ಲದೆ ಮುಖ್ಯಾವಾಗಿ ಡಿಂಡೊಲಿಮೀಥೆನ್ ( ಡಿಐಎಮ್), ಸಿನಿಗ್ರಿನ್, ಲುಪಿಯಲ್, ಸಲ್ಫರಫೇನ್ ಮತ್ತು ಇಂಡೋಲ್ -3 ಕಾರ್ಬಿನೊಲ್ (13C) ಹೂಕೋಸಿನಲ್ಲಿ ಹೆಚ್ಚಾಗಿ ಇದೆ. ಅದರಲ್ಲಿಯು ಕ್ಯಾನ್ಸರನ್ನು ಬರದಂತೆ ತಡೆಯುವಲ್ಲಿ ಸಲ್ಫರಫೇನ್ ಮತ್ತು 13C ಅಂಶಗಳು ಕ್ಯಾನ್ಸರ್ ಬರದಂತೆ ತಡೆಯುತ್ತವೆ.

ತರಕಾರಿ ಮತ್ತು ಹಣ್ಣನ್ನು ಸೇವಿಸಿರಿ

ತರಕಾರಿ ಮತ್ತು ಹಣ್ಣನ್ನು ಸೇವಿಸಿರಿ

ತರಕಾರಿ ಮತ್ತು ಹಣ್ಣನ್ನು ಸೇವಿಸಿರಿ ತಾಜಾ ತರಕಾರಿ ಮತ್ತು ಹಣ್ಣುಗಳನ್ನು ನಿಮ್ಮ ದಿನನಿತ್ಯದ ಆಹಾರದ ಕ್ರಮದಲ್ಲಿ ಸೇರಿಸಿಕೊಳ್ಳುವುದರ ಮೂಲಕ ನಿಮ್ಮ ಶರೀರಕ್ಕೆ ಅವಶ್ಯಕವಾಗಿರುವ ಪೋಷಕಾಂಶಗಳು ಮತ್ತು ವಿಟಮಿನ್ ಗಳನ್ನು ಒದಗಿಸಬಹುದು. ಈ ಪೋಷಕಾಂಶಗಳು ಮತ್ತು ವಿಟಮಿನ್‌ಗಳು , ನಿಮ್ಮ ರೋಗನಿರೋಧಕ ಮಟ್ಟವನ್ನು ಹೆಚ್ಚಿಸುವುದು ಮಾತ್ರವಲ್ಲದೇ, ಸೋಂಕುಗಳು ಮತ್ತು ಕ್ಯಾನ್ಸರ್ ನ ವಿರುದ್ಧ ಕಾದಾಡಲೂ ಕೂಡ ಸಹಕಾರಿಯಾಗಿವೆ. ಅಲ್ಲದೇ, ಇವು ಜಂಕ್ ಮತ್ತು ಕೊಬ್ಬುಯುಕ್ತ ಆಹಾರಗಳ ಬಗೆಗಿನ ನಿಮಗಿರುವ ಹಸಿವನ್ನು ತನ್ನಿಂತಾನಾಗಿಯೇ ಕಡಿಮೆ ಮಾಡುತ್ತವೆ. ಕ್ಯಾಬೇಜು, brococoli, ಹೂಕೋಸು (cauiflower), ಪಾಲಾಕ್ ಸೊಪ್ಪು, ಸೇಬುಗಳು ಇತ್ಯಾದಿ ಗಳನ್ನು ದಿನನಿತ್ಯ ಸೇವಿಸುವುದರಿಂದ ಇದು ಸಾಬೀತಾಗುತ್ತದೆ.

ಅಡುಗೆ ಮಾಡುವಾಗ ಸ್ವಚ್ಛತೆಯನ್ನು ಕಾಪಾಡಿರಿ

ಅಡುಗೆ ಮಾಡುವಾಗ ಸ್ವಚ್ಛತೆಯನ್ನು ಕಾಪಾಡಿರಿ

ಆರೋಗ್ಯಯುತ ಅಡುಗೆವಿಧಾನಗಳು ಮತ್ತು ಅಡುಗೆಮನೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು, ನಿಮ್ಮ ಶರೀರವನ್ನು ಯಾವುದೇ ರೋಗದಿಂದ ದೂರವಿರಿಸಲು ಅತಿ ಮುಖ್ಯವಾಗಿದೆ. ಉಪಯೋಗಿಸುವ ಮೊದಲು ತರಕಾರಿಗಳು ಮತ್ತು ಹಣ್ಣುಗಳನ್ನು ಚೆನ್ನಾಗಿ ತೊಳೆಯುವುದು, ತರಕಾರಿಗಳನ್ನು ಅತಿಯಾಗಿ ಪ್ಯಾಕ್ ಮಾಡಿ ಇಡದಿರುವುದು, ಮತ್ತು ಸಾಧ್ಯವಾದಷ್ಟು ತಾಜಾ ಆಹಾರವನ್ನೇ ಸೇವಿಸುವುದು ಇವೇ ಮೊದಲಾದವು, ನೀವು ಅನುಸರಿಸಲೇಬೇಕಾಗಿರುವ ಮೂಲಭೂತ ಸೂತ್ರಗಳು.

ಹಸಿರು ಬಟಾಣಿ

ಹಸಿರು ಬಟಾಣಿ

ಹಸಿರು ಬಟಾಣಿಗಳು ಕ್ಯಾನ್ಸರನ್ನು ನಿಯಂತ್ರಿಸಲು ಇರುವ ಅತ್ಯಂತ ಶಕ್ತಿಶಾಲಿ ತರಕಾರಿಗಳಾಗಿವೆ. ಅದರಲ್ಲೂ ಮುಖ್ಯವಾಗಿ ಜಠರದ ಕ್ಯಾನ್ಸರ್ ನಿವಾರಿಸಲು ಇವು ಸಹಾಯ ಮಾಡುತ್ತವೆ. ಇದರಲ್ಲಿ ಪೊಟಾಶಿಯಂ, ಕಬ್ಬಿಣಾಂಶ ಮತ್ತು ವಿಟಮಿನ್‍ಗಳು ಯಥೇಚ್ಛವಾಗಿದ್ದು, ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧಗೊಳಿಸಲು ಇವು ನೆರವು ನೀಡುತ್ತವೆ.

ಬೀನ್ಸ್

ಬೀನ್ಸ್

ಬೀನ್ಸ್‌ಗಳಲ್ಲಿ ವಿಟಮಿನ್ ಬಿಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇದು ಕ್ಯಾನ್ಸರ್ ನಿಯಂತ್ರಿಸಲು ಗಣನೀಯವಾದ ಕೊಡುಗೆಯನ್ನು ನೀಡುತ್ತದೆ. ಇವುಗಳು ಕಾರ್ಸಿನೊಜೆನ್‍ಗಳನ್ನು ನಿವಾರಿಸುವ ಲುಲುಟೇನ್ ಮತ್ತು ವೈಯೊಲಕ್ಸಂಥಿನ್ ಮತ್ತು ಬೀಟಾ-ಕೆರೊಟಿನ್‍ಗಳು ಅಧಿಕ ಪ್ರಮಾಣದಲ್ಲಿರುತ್ತವೆ.

ಕಿತ್ತಳೆ

ಕಿತ್ತಳೆ

ವಿಟಮಿನ್ ಸಿ ಮತ್ತು ಬೀಟಾ ಕ್ರಿಪಟೋಕ್ಸಿಂತಿನ್ ಅನ್ನು ಕಿತ್ತಳೆ ಒಳಗೊಂಡಿದ್ದು ಶ್ವಾಸಕೋಶದಿಂದ ವಿಷವನ್ನು ಹೊರಹಾಕಿ ಕ್ಯಾನ್ಸರ್ ತಡೆಗಟ್ಟುತ್ತದೆ. ನೀವು ಧೂಮಪಾನಿಗಳಾಗಿದ್ದಲ್ಲಿ ಇದು ಉತ್ತಮ ಸಲಹೆಯಾಗಿದೆ.

ಬ್ರಕೋಲಿ

ಬ್ರಕೋಲಿ

ಬ್ರೊಕ್ಕೊಲಿಯು ಪ್ರಪಂಚದಲ್ಲಿರುವ ಅತ್ಯಂತ ಆರೋಗ್ಯಕಾರಿ ಹಣ್ಣುಗಳಲ್ಲಿ ಒಂದಾಗಿದೆ. ಇದರ ಆಂಟಿ-ಕ್ಯಾನ್ಸರ್ ಅಂಶಗಳು ಸಹ ಇದಕ್ಕೆ ಒಳ್ಳೆಯ ಹೆಸರನ್ನು ನೀಡಿದೆ. ಇದರಲ್ಲಿ ಮೂಲತಃ ಆಂಟಿ-ಆಕ್ಸಿಡೆಂಟ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವು ದೇಹದಲ್ಲಿ ಕ್ಯಾನ್ಸರ್ ರೂಪುಗೊಳ್ಳುವುದನ್ನು ತಡೆಯುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ.

ಬೀಟ್‍ರೂಟ್‍ಗಳು

ಬೀಟ್‍ರೂಟ್‍ಗಳು

ಬೀಟ್‍ರೂಟ್‍ಗಳು ರಕ್ತ ಪರಿಚಲನೆಯನ್ನು ಮತ್ತು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತವೆ. ಇವುಗಳು ರಕ್ತದೊತ್ತಡವನ್ನು ನಿವಾರಿಸುವ ಅಂಶಗಳನ್ನು ಸಹ ಹೊಂದಿರುತ್ತವೆ. ವಿಶೇಷವಾಗಿ ಸಕ್ಕರೆಯ ಪ್ರಮಾಣವನ್ನು ಹದ್ದು ಬಸ್ತಿನಲ್ಲಿಡಲು ಇದು ಖ್ಯಾತಿಯನ್ನು ಪಡೆದಿದೆ. ಜೊತೆಗೆ ಕ್ಯಾನ್ಸರನ್ನು ಸಹ ನಿಯಂತ್ರಿಸುತ್ತದೆ.

English summary

Common Foods To Prevent Lung Cancer That You Must Try!

Lung cancer is a condition in which cancerous cells develop into tumours in the lungs, gradually increasing in size and destroying the lung tissues.In extreme cases, lung cancer can also lead to organ failure, causing death! This condition is mostly associated with smokers; however, it can affect non-smokers too. So, here is a list of foods that you must consume on a regular basis, in order to prevent lung cancer effectively, have a look!
Story first published: Friday, October 20, 2017, 18:33 [IST]
X
Desktop Bottom Promotion