For Quick Alerts
ALLOW NOTIFICATIONS  
For Daily Alerts

ಅಡುಗೆ ಮನೆಯ ಲವಂಗ-ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು!

By Arshad
|

ಲವಂಗದ ಪ್ರಯೋಜನವೇನು ಎಂದು ಕೇಳಿದರೆ ಹಲವಾರು ಉತ್ತರಗಳು ದೊರಕಬಹುದು. ಈ ಪುಟ್ಟ ಸಾಂಬಾರ ಪದಾರ್ಥದಲ್ಲಿ ಅದೆಷ್ಟೋ ಪೋಷಕಾಂಶಗಳು ಅಡಕವಾಗಿದ್ದು ರುಚಿ ಹೆಚ್ಚಿಸುವುದಕ್ಕಿಂತಲೂ ಹೆಚ್ಚಿನ ಪೋಷಣೆಯನ್ನು ನೀ?ಡುತ್ತದೆ. ವಾಸ್ತವವಾಗಿ ಲವಂಗ ಎಂದರೆ ದಾಲ್ಚಿನ್ನಿ ಗಿಡದ ಹೂವುಗಳ ಮೊಗ್ಗುಗಳನ್ನು ಎಳೆಯದಿದ್ದಾಗಲೇ ಕೊಯ್ದು ಒಣಗಿಸಿದ ಭಾಗ. ಲವಂಗದ ಇತಿಹಾಸವನ್ನು ಕೆದಕಿದರೆ ಇದನ್ನು ತುಂಬಾ ಹಿಂದಿನಿಂದಲೂ ಮಾನವರು ಉಪಯೋಗಿಸುತ್ತಾ ಬಂದಿದ್ದರು ಎಂಬುದು ತಿಳಿದು ಬರುತ್ತದೆ.

ಲವಂಗದಲ್ಲಿದೆ ನಾನಾ ಔಷಧೀಯ ಗುಣಗಳು!

ಸಿರಿಯಾ ದೇಶದಲ್ಲಿ ಸಿಕ್ಕ 1700ಕ್ರಿಸ್ತಪೂರ್ವದ ಸಮಯಕ್ಕೆ ಸೇರಿದ ಪಿಂಗಾಣಿ ಪಾತ್ರೆಗಳಲ್ಲಿನ ಚಿತ್ರಗಳಲ್ಲಿ ಲವಂಗವನ್ನು ಸ್ಪಷ್ಟವಾಗಿ ಗುರುತಿಸಬಹುದು. ಅಂದರೆ ಅಷ್ಟು ಹಿಂದಿನ ಕಾಲದಿಂದಲೂ ಲವಂಗ ಬಳಕೆಯಲ್ಲಿತ್ತು ಎಂದು ತಿಳಿದುಬರುತ್ತದೆ. ಲವಂಗದ ಪ್ರಯೋಜನಗಳ ಬಗ್ಗೆ ಕೆಲವು ತಪ್ಪು ಮಾಹಿತಿಗಳೂ ಇದ್ದು ಇಂದಿನ ಲೇಖನದಲ್ಲಿ ಸರಿಯಾದ ಮಾಹಿತಿ ನೀಡಿ ತಪ್ಪುಗ್ರಹಿಕೆಗಳನ್ನು ಅಳಿಸಿ ಹಾಕುವ ಪ್ರಯತ್ನ ನಡೆಸಲಾಗಿದೆ. ಇದರ ಎಷ್ಟೋ ಪ್ರಯೋಜನಗಳ ಬಗ್ಗೆ ಇದುವರೆಗೆ ನಿಮಗೆ ತಿಳಿದೇ ಇರದ ಮಾಹಿತಿಗಳಿದ್ದು ಇದು ನಿಮ್ಮನ್ನು ಬೆಕ್ಕಸ ಬೆರಗಾಗಿಸಬಹುದು.....

ಹಳೆಯ ದಾಲ್ಚಿನ್ನಿ ಮರ ನಾನೂರು ವರ್ಷದಷ್ಟು ಹಳೆಯದು

ಹಳೆಯ ದಾಲ್ಚಿನ್ನಿ ಮರ ನಾನೂರು ವರ್ಷದಷ್ಟು ಹಳೆಯದು

ಪೂರ್ವ ಇಂಡೋನೇಶಿಯಾದಲ್ಲಿರುವ ದ್ವೀಪಗಳಲ್ಲಿ ನೂರಾರು ದೈತ್ಯಗಾತ್ರದ ಹಾಗೂ ಪುರಾತನ ವೃಕ್ಷಗಳಿವೆ. ಈ ದ್ವೀಪಗಳನ್ನು ಮೋಲುಕ್ಕಾಸ್ ಎಂದು ಕರೆಯುತ್ತಾರೆ. ಈ ದ್ವೀಪಗಳಿಗೆ ಸಾಂಬಾರ ದ್ವೀಪಗಳು ಎಂಬ ಅನ್ವರ್ಥನಾಮವೂ ಇದೆ. ಇದಕ್ಕೆ ಕಾರಣ ಇಲ್ಲಿ ಬೆಳೆಯುವ ವಿವಿಧ ಸಾಂಬಾರ ಪದಾರ್ಥಗಳ ಮರಗಳು. ಇವುಗಳಲ್ಲಿ ಕೆಲವು ಮರಗಳು ಈ ದ್ವೀಪಗಳಲ್ಲಿ ಮಾತ್ರವೇ ಬೆಳೆಯುವಂತಹದ್ದಾಗಿದ್ದು ಇದಲ್ಲಿ ಟಾರ್ನೇಟ್ ಎಂಬ ದ್ವೀಪದಲ್ಲಿ ಆಫೋ (Afo) ಎಂಬ ಹೆಸರಿನ ದಾಲ್ಚಿನ್ನಿಯ ಮರ ನಾನ್ನೂರು ವರ್ಷಗಳಷ್ಟು ಹಳೆಯದಾಗಿದ್ದು ವಿಶ್ವದ ಅತಿ ಹಳೆಯ ಮರವಾಗಿದೆ.

ಇದರ ಪರಿಮಳಕ್ಕೆ ಯೂಜಿನಲಾಲ್ ಕಾರಣ

ಇದರ ಪರಿಮಳಕ್ಕೆ ಯೂಜಿನಲಾಲ್ ಕಾರಣ

ದಾಲ್ಚಿನ್ನಿಯಲ್ಲಿರುವ ಪೋಷಕಾಂಶಗಳಲ್ಲಿ ಪ್ರಮುಖವಾಗಿರುವ ಯೂಜಿನಾಲ್ (eugenol) ಎಂಬ ಪೋಷಕಾಂಶವೇ ಇದರ ವಿಶಿಷ್ಟ ರುಚಿ ಹಾಗೂ ಪರಿಮಳಕ್ಕೆ ಕಾರಣವಾಗಿದೆ. ಈ ಯೂಜಿನಾಲ್ ದ್ರವರೂಪದಲ್ಲಿದ್ದು ಲವಂಗವನ್ನು ಹಿಂಡಿದಾಗ ಎಣ್ಣೆಯ ರೂಪದಲ್ಲಿರುತ್ತದೆ. ಈ ಎಣ್ಣೆಯಲ್ಲಿ ಯೂಜಿನಾಲ್ ಸುಮಾರು ೮೦%ದಷ್ಟಿರುತ್ತದೆ.

ಇದು ಕೀಟವಿಕರ್ಷಕವಾಗಿದೆ

ಇದು ಕೀಟವಿಕರ್ಷಕವಾಗಿದೆ

ಲವಂಗದೆಣ್ಣೆಯ ಪರಿಮಳ ತೀಕ್ಷ್ಣವಾಗಿದ್ದು ಇರುಗೆ ಹಾಗೂ ಗೊದ್ದಗಳ ಸಹಿತ ಹಲವು ಕೀಟಗಳನ್ನು ವಿಕರ್ಷಿಸಲು ನೆರವಾಗುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಇರುವೆ ಕಾಟವಿದ್ದರೆ ಕೆಲವು ಲವಂಗಗಳನ್ನು ಚಿಕ್ಕ ಹತ್ತಿಯ ಬಟ್ಟೆಯ ಪಟ್ಟಿಯಲ್ಲಿ ಸುತ್ತಿ ಇರುವೆಗಳು ಬರುವ ಸ್ಥಳದ ಒಳಭಾಗದಲ್ಲಿರಿಸಿ. ಇಲ್ಲಿಂದ ಇರುವೆ ಹಾಗೂ ಇತರ ಕೀಟಗಳನ್ನು ಅಲ್ಲಿಂದ ತಕ್ಷಣ ಓಡಿ ಹೋಗುತ್ತವೆ.

ಲವಂಗ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಲವಂಗ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಲವಂಗದ ಸೇವನೆಯಿಂದ ಜೀರ್ಣರಸಗಳು ಹೆಚ್ಚು ಸ್ರವಿಸಲು ಪ್ರಚೋದನೆ ಪಡೆಯುತ್ತದೆ. ತನ್ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುತದೆ.ಇದರೊಂದಿಗೆ ಲವಂಗ ವಾಯು ಪ್ರಕೋಪವನ್ನು ಶಮನಗೊಳಿಸುತ್ತದೆ ಹಾಗೂ ಹೊಟ್ಟೆಯ ಉರಿ, ವಾಕರಿಕೆ ಹುಳಿತೇಗು ಮೊದಲಾದವುಗಳಿಂದ ರಕ್ಷಿಸುತ್ತದೆ.

ಕಾಲೆರಾ ವಿರುದ್ಧ ಉತ್ತಮ ರಕ್ಷಣೆ ಒದಗಿಸುತ್ತದೆ

ಕಾಲೆರಾ ವಿರುದ್ಧ ಉತ್ತಮ ರಕ್ಷಣೆ ಒದಗಿಸುತ್ತದೆ

ನೀರಿನ ಮೂಲಕ ಹರಡುವ ಸಾಂಕ್ರಾಮಿಕ ರೋಗವಾದ ಕಾಲೆರಾ ರೋಗ ಮುಖ್ಯ ಲಕ್ಷಣಗಳೆಂದರೆ ಅತಿಸಾರ, ವಾಂತಿ. ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕದೇ ಇದ್ದರೆ ಸಾವು ಸಹಾ ಎದುರಾಗಬಹುದು. ಸಂಶೋಧನೆಗಳ ಮೂಲಕ ಲವಂಗದ ಬ್ಯಾಕ್ಟೀರಿಯಾ ನಿವಾರಕ ಗುಣ ಹಲವಾರು ರೋಗಕಾರಕ ಕೀಟಾಣುಗಳ ವಿರುದ್ಧ ಹೋರಾಡುತ್ತದೆ ಹಾಗೂ ವಿಶೇಷವಾಗಿ ಕಾಲೆರಾ ಹರಡುವ ರೋಗಾಣುಗಳನ್ನು ಕೊಲ್ಲುವ ಮೂಲಕ ರೋಗವನ್ನು ಹತೋಟಿಗೆ ತರಲು ನೆರವಾಗುತ್ತದೆ.

ಇದರಲ್ಲಿದೆ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ

ಇದರಲ್ಲಿದೆ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ

ಲವಂಗದ ಹಲವಾರು ಪೋಷಕಾಂಶಗಳಲ್ಲಿ phenylpropanoids ಎಂಬ ಸಂಯುಕ್ತಗಳೂ ಇದ್ದು ಇವುಗಳು ಅನುವಂಶಿಕ ಗುಣವನ್ನು ಬದಲಿಸುವ ಕಣಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿವೆ. ಸಾಮಾನ್ಯವಾಗಿ ಒಂದು ಬಗೆಯ ಜೀವಕೋಶಗಳು ತನ್ನ ಅನುವಂಶಿಕ ಸಂಯೋಜನೆಯಿಂದ ಒಂದು ಹಂತದವರೆಗೆ ಮಾತ್ರವೇ ಬೆಳೆಯಬೇಕು. ಒಂದು ವೇಳೆ ಈ ಜೀವಕೋಶಗಳು ನಿಯಂತ್ರಣ ಮೀರಿ ಬೆಳೆದರೆ ಇದು ಕ್ಯಾನ್ಸರ್ ರೂಪ ಪಡೆಯಬಹುದು. ಸಂಶೋಧನೆಗಳಲ್ಲಿ ಕಂಡುಕೊಂಡಂತೆ ಲವಂಗದಲ್ಲಿರುವ ಪೋಷಕಾಂಶಗಳು ವಿಶೇಷವಾಗಿ ಶ್ವಾಸಕೋಶದ ಕ್ಯಾನ್ಸರ್ ಪ್ರಾರಂಭಿಕ ಹಂತದಲ್ಲಿದ್ದರೆ ಇದನ್ನು ನಿಯಂತ್ರಿಸುವ ಗುಣ ಹೊಂದಿದೆ.

ಯಕೃತ್ ಅನ್ನು ರಕ್ಷಿಸುತ್ತದೆ

ಯಕೃತ್ ಅನ್ನು ರಕ್ಷಿಸುತ್ತದೆ

ಲವಂಗದಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿರುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ಹಾಗೂ ದೇಹದಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳನ್ನು ನಿವಾರಿಸುವ ಮೂಲಕ ಯಕೃತ್ ಅನ್ನು ರಕ್ಷಿಸುತ್ತದೆ.

 ಮಧುಮೇಹವನ್ನು ನಿಯಂತ್ರಿಸುತ್ತದೆ

ಮಧುಮೇಹವನ್ನು ನಿಯಂತ್ರಿಸುತ್ತದೆ

ನಿಮ್ಮ ನಿತ್ಯದ ಆಹಾರದಲ್ಲಿ ನಿಯಮಿತವಾಗಿ ಲವಂಗವನ್ನು ಬೆರೆಸಿ ಸೇವಿಸುವ ಮೂಲಕ ಟೈಪ್ 1 ಮಧುಮೇಹವನ್ನು ಸಾಕಷ್ಟು ಮಟ್ಟಿಗೆ ನಿಯಂತ್ರಿಸಬಹುದು. ಇದರಲ್ಲಿರುವ ಕೆಲವು ಪೋಷಕಾಂಶಗಳು ಇನ್ಸುಲಿನ್ ನಂತೆಯೇ ಕಾರ್ಯನಿರ್ವಹಿಸುತ್ತವೆ ಹಾಗೂ ತನ್ಮೂಲಕ ರಕ್ತದಲ್ಲಿರುವ ಅಧಿಕ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ನೆರವಾಗುತ್ತದೆ.

ಬಿಳಿರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ

ಬಿಳಿರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ

ರಕ್ತದಲ್ಲಿರುವ ಬಿಳಿರಕ್ತಕಣಗಳು ದೇಹವನ್ನು ವಿವಿಧ ರೋಗಗಳಿಂದ ರಕ್ಷಿಸುವ ಯೋಧರಾಗಿವೆ. ದೇಹವನ್ನು ಪ್ರವೇಶಿಸುವ ವೈರಾಣುಗಳನ್ನು ಕೊಂದು ದೇಹದಿಂದ ಹೊರಹಾಕುವ ಮೂಲಕ ಇವು ವಿವಿಧ ರೋಗಗಳಿಂದ ಸತತವಾಗಿ ರಕ್ಷಿಸುತ್ತಾ ಇರುತ್ತದೆ. ಆದ್ದರಿಂದ ನಮ್ಮ ರಕ್ತದಲ್ಲಿ ಉತ್ತಮ ಪ್ರಮಾಣದ ಬಿಳಿರಕ್ತಕಣಗಳಿರುವುದು ಅಗತ್ಯ. (ಒಂದು ಸಂದರ್ಭದಲ್ಲಿ ಬಿಳಿರಕ್ತಕಣಗಳು ವಿಪರೀತವಾಗಿದ್ದರೆ ಇದು ರಕ್ತದ ಕ್ಯಾನ್ಸರ್ ಗೂ ಕಾರಣವಾಗಬಹುದು). ಆದರೂ ಲವಂಗದ ಸೇವನೆಯಿಂದ ರಕ್ತದಲ್ಲಿ ಆರೋಗ್ಯಕರ ಮಟ್ಟದಲ್ಲಿ ಬಿಳಿರಕ್ತಕಣಗಳು ಉತ್ಪತ್ತಿಯಾಗುವಂತೆ ನೋಡಿಕೊಳ್ಳುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ವಿಶೇಷವಾಗಿ ಹಲವಾರು ಅಲರ್ಜಿಕಾರಕ ಪ್ರತಿಕ್ರಿಯೆಗಳಿಂದ ರಕ್ಷಿಸುತ್ತದೆ.

 ಬಾಯಿಯಿಂದ ಸೇವಿಸುವ ಪುರಾತನ ಔಷಧಿಯಾಗಿದೆ

ಬಾಯಿಯಿಂದ ಸೇವಿಸುವ ಪುರಾತನ ಔಷಧಿಯಾಗಿದೆ

ಲವಂಗದಲ್ಲಿರುವ ಯೂಜಿನಾಲ್ ಅಯುತ್ತಮವಾದ ಉರಿಯೂತ ನಿವಾರಕವಾಗಿದ್ದು ಇದರ ಗುಣವನ್ನು ಬಲು ಪುರಾತನ ದಿನಗಳಿಂದ ಹಲ್ಲುನೋವಿನ ಶಮನಕ್ಕೆ ಬಳಸಲಾಗುತ್ತಾ ಬರಲಾಗಿದೆ. ಇದರ ನೋವು ನಿವಾರಕ ಗುಣದಿಂದಾಗಿ ಹಲ್ಲುನೋವಿನ ಯಾವುದೇ ಔಷಧಿಯಲ್ಲಿ ಲವಂಗ ಇರುವುದು ಕಡ್ಡಾಯ ಎನ್ನುವಷ್ಟು ಇದರ ಬಳಕೆಯಾಗುತ್ತದೆ.

ತಲೆನೋವಿಗೂ ಉತ್ತಮವಾಗಿದೆ

ತಲೆನೋವಿಗೂ ಉತ್ತಮವಾಗಿದೆ

ಮುಂದಿನ ಬಾರಿ ನಿಮಗೆ ತಲೆನೋವು ಎದುರಾದರೆ ಅಪಾಯಕಾರಿ ಮಾತ್ರೆಗಳನ್ನು ಸೇವಿಸಲು ಹೋಗಬೇಡಿ. ಬದಲಿಗೆ ಕೆಲವು ಲವಂಗಗಳನ್ನು ನುಣ್ಣಗೆ ಅರೆದು ಇದಕ್ಕೆ ಕೊಂಚವೇ ಕಲ್ಲುಪ್ಪು ಸೇರಿಸಿ ಇದನ್ನು ಒಂದು ಲೋಟ ಬಿಸಿ ಹಾಲಿಗೆ ಬೆರೆಸಿ ಕುಡಿಯಿರಿ. ತಲೆನೋವು ತಕ್ಷಣ ಮಾಯವಾಗುತ್ತದೆ.

English summary

Clove Benefits and Facts That Will Blow Your Mind!

When it comes to cloves, a little bit goes a long way. That's because these little spices might look small, but they pack a solid punch of flavor. But did you know that cloves are actually dried flower buds? Or that the oldest trace of clove use in human history was discovered in a Syrian ceramic vessel dating back to 1700BC? That's exactly what we are going to discuss in today's episode of Fact vs. Fiction - clove benefits and facts that you probably didn't know!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more