For Quick Alerts
ALLOW NOTIFICATIONS  
For Daily Alerts

ಮಹಿಳೆಯರೇ ಬ್ರಾ ಕೊಳ್ಳುವಾಗ ಮತ್ತು ಧರಿಸುವಾಗ ಇರಲಿ ಎಚ್ಚರ!

By Divya
|

ಮಹಿಳೆಯರು ಬಹಳ ಜಾಣೆಯರು ಎಂದು ಹೇಳಿಸಿಕೊಂಡರು ಕೆಲವು ವಿಚಾರಗಳಲ್ಲಿ ಎಡವುತ್ತಾರೆ. ಅದರಲ್ಲೂ ವೈಯಕ್ತಿಕ ವಿಚಾರವೆಂದರೆ ಬಾಯೇ ಬಿಡುವುದಿಲ್ಲ. ಕಾಲ ಸಾಕಷ್ಟು ಬದಲಾವಣೆಯನ್ನು ತಂದುಕೊಟ್ಟಿದೆಯಾದರೂ, ಹಲವು ವಿಚಾರದಲ್ಲಿ ಇನ್ನೂ ನಾಚಿಕೆ ಎಂಬ ಕಾರಣಕ್ಕೆ ತಪ್ಪು ಆಯ್ಕೆಯನ್ನು ಮಾಡಿಕೊಳ್ಳುತ್ತಾರೆ. ಅರೇ! ಅದೆಂತಹ ವಿಚಾರ ಎನ್ನುತ್ತೀರಾ? ಅದೇ ಬ್ರಾಗಳ ಆಯ್ಕೆಗಳ ವಿಚಾರದಲ್ಲಿ

ಹೌದು, ಅದು ಬ್ರಾ ಖರೀದಿಸುವುದು ಹಾಗೂ ಧರಿಸುವ ವಿಚಾರ. ಆನ್‌ಲೈನ್ ಮಾರುಕಟ್ಟೆ, ಇಂಟರ್‌ನೆಟ್ ಪ್ರಪಂಚದಲ್ಲಿದ್ದರೂ, ಹಲವು ಮಹಿಳೆಯರಿಗೆ ತಮಗೆ ಸರಿ ಹೊಂದುವ ಬ್ರಾ ಯಾವುದೆಂದು ಆಯ್ಕೆ ಮಾಡಲು ಆಗುವುದಿಲ್ಲ. ಕೆಲವು ಅಧ್ಯಯನ ಹಾಗೂ ಸಂಶೋಧನೆಯ ಪ್ರಕಾರ ಶೇ. 70-80ರಷ್ಟು ಮಹಿಳೆಯರು ತಮ್ಮ ಅಳತೆಯ ಬ್ರಾ ಗಿಂತ ಚಿಕ್ಕ ಅಳತೆಯ ಬ್ರಾ ಆಯ್ಕೆ ಮಾಡಿಕೊಳ್ಳುತ್ತಾರೆ.

ದಿನನಿತ್ಯ ಬ್ರಾ ಧರಿಸಿದರೆ, ಅಪಾಯ ಬೆನ್ನೇರಿ ಕಾಡಲಿದೆ ಎಚ್ಚರ!

ಲೇಸ್ ವಿನ್ಯಾಸ, ಬಣ್ಣದ ಆಕರ್ಷಣೆಯ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆಯೇ ಹೊರತು, ಯಾವ ಅಳತೆಯ ಬ್ರಾ ನಮಗೆ ಒಗ್ಗುತ್ತದೆ ಎನ್ನುವುದನ್ನು ತಿಳಿದಿಲ್ಲ. ಈ ರೀತಿಯ ಚಿಕ್ಕ ಅಳತೆಯ ಬ್ರಾ ಧರಿಸುವುದರಿಂದ ಮಹಿಳೆಯರಲ್ಲಿ ವಿವಿಧ ಬಗೆಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎನ್ನುವುದನ್ನು ಮರೆಯಬಾರದು. ಈ ವಿಚಾರದ ಬಗ್ಗೆ ಕುತೂಹಲ ನೀಡುವಂತಹ ವಿಚಾರಗಳು ಈ ಕೆಳಗಿನಂತಿವೆ. ಜೊತೆಗೆ ಯಾವ ರೀತಿಯ ಆಯ್ಕೆ ಸೂಕ್ತವಾದದ್ದು ಎನ್ನುವುದನ್ನು ತಿಳಿದುಕೊಳ್ಳಬಹುದು....

ಬಿಗಿಯಾದ ಬ್ರಾ ಎದೆನೋವು ತರುವುದಾ?

ಬಿಗಿಯಾದ ಬ್ರಾ ಎದೆನೋವು ತರುವುದಾ?

ಹೌದು, ದಿನವಿಡೀ ಚಿಕ್ಕ ಬ್ರಾ ಧರಿಸುವುದರಿಂದ ಸ್ತನದಲ್ಲಿ ನೋವು ಉಂಟಾಗುವುದು. ಇದನ್ನು ರಾತ್ರಿ ನಿದ್ರಿಸುವಾಗಲೂ ಮುಂದುವರಿಸಿದರೆ ಟ್ರಾಪಜಿಯಸ್ ಎನ್ನುವ ಸ್ನಾಯುವಿನ ಮೇಲೆ ಒತ್ತಡ ಉಂಟಾಗುವುದು. ಇದು ಸ್ತನದ ಹಿಂಭಾಗ, ಭುಜ ಮತ್ತು ಕುತ್ತಿಗೆಗೆ ಸಂಪರ್ಕವನ್ನು ಪಡೆದುಕೊಂಡಿರುತ್ತದೆ. ಇದರ ಮೇಲೆ ಒತ್ತಡ ಹೆಚ್ಚಾದಷ್ಟು, ರಕ್ತ ಸಂಚಾರ ಕಡಿಮೆಯಾಗಿ, ನೋವು ಕಾಣಿಸಿಕೊಳ್ಳುವುದು. ಅಲ್ಲದೆ ಪೆಕ್ಟೋರಲ್ ಸ್ನಾಯುವಿನಲ್ಲಿ ರಕ್ತಸಂಚಾರ ಸರಿಯಾಗದಿದ್ದರೆ ಅಥವಾ ಸಂಕುಚಿತ ಕ್ರಿಯೆಗೆ ಅಡ್ಡಿ ಉಂಟಾದರೆ ಎದೆನೋವು ಕಾಣಿಸಿಕೊಳ್ಳುತ್ತದೆ.

ವ್ಯಾಯಾಮ ಮಾಡುವಾಗಲೂ ಇದು ಒಳ್ಳೆಯದಲ್ಲ

ವ್ಯಾಯಾಮ ಮಾಡುವಾಗಲೂ ಇದು ಒಳ್ಳೆಯದಲ್ಲ

ದೈಹಿಕ ವ್ಯಾಯಾಮ ಮಾಡುವಾಗ ಅಥವಾ ಕ್ರೀಡೆಯಲ್ಲಿ ಪಾಲ್ಗೊಳ್ಳುವಾಗ ಮಹಿಳೆಯರು ಸಾಮಾನ್ಯ ಬ್ರಾಗಳ ಆಯ್ಕೆ ಮಾಡಬಾರದು. ವ್ಯಾಯಾಮ ಸಮಯದಲ್ಲಿ ಸ್ನಾಯುಗಳು ಮತ್ತು ಎದೆಯ ಭಾಗ ಸುಮಾರು 8 ಸೆಂ.ಮೀ.ನಷ್ಟು ಹಿಗ್ಗುವ ಸಾಧ್ಯತೆ ಇರುತ್ತದೆ. ಆಗ ಸಾಮಾನ್ಯ ಬ್ರಾ ಧರಿಸಿದರೆ ಅದು ನೋವನ್ನು ಪ್ರಚೋದಿಸುತ್ತದೆ. ಈ ಸಮಯದಲ್ಲಿ ಸ್ಫೋರ್ಟ್ಸ್ ಬ್ರಾ(ಕ್ರೀಡಾ ಸ್ತನಬಂಧ) ಧರಿಸಬೇಕು. ಇದನ್ನು ಸೂಕ್ತ ವಿನ್ಯಾಸದಲ್ಲಿ ತಯಾರಿಸಿರುವುದರಿಂದ ಶೇ. 80ರಷ್ಟು ಮೃದುತ್ವವನ್ನು ಕಾಯ್ದುಕೊಂಡು, ನೋವುಂಟಾಗದಂತೆ ಕಾಪಾಡುತ್ತದೆ.

ನೆನಪಿರಲಿ-ಬ್ರಾ ಅದು ನೀವು ಧರಿಸಿದಷ್ಟು ಸುಲಭವಲ್ಲ!

ಬ್ರಾ ಬಿಗಿಯಾಗಿದೆ ಎಂದು ತಿಳಿಯುವುದು ಹೇಗೆ?

ಬ್ರಾ ಬಿಗಿಯಾಗಿದೆ ಎಂದು ತಿಳಿಯುವುದು ಹೇಗೆ?

ಸ್ತನ ಹಾಗೂ ಬೆನ್ನಿನ ಸುತ್ತಲೂ ಬಿಗಿತ ಉಂಟಾಗುವುದರಿಂದ ಬ್ರಾ ಬಿಗಿಯಾಗಿದೆ ಎಂದು ಪರಿಗಣಿಸಬಹುದು. ಬ್ರಾದ ಕೊನೆಯ ಹುಕ್ ಹಾಕಿಕೊಂಡರೂ ಬಿಗಿತ ಉಂಟಾದರೆ ಅದು ಚಿಕ್ಕ ಬ್ರಾ ಎನಿಸಿಕೊಳ್ಳುತ್ತದೆ. ಯಾವಾಗಲೂ ಬ್ರಾದ ಮಧ್ಯದ ಹುಕ್ ಆರಾಮದಾಯಕವಾಗಿರುತ್ತದೆ. ಹೀಗಿದ್ದರೆ ಮಾತ್ರ ಬ್ರಾದ ಆಯ್ಕೆ ಸರಿಯಾಗಿದೆ ಎಂದು ತಿಳಿಯಬಹುದು.

ಬ್ರಾ ಬಿಗಿಯಾಗಿದೆ ಎಂದು ಹೇಳುವ ವಿಶೇಷ ಚಿಹ್ನೆಗಳು

ಬ್ರಾ ಬಿಗಿಯಾಗಿದೆ ಎಂದು ಹೇಳುವ ವಿಶೇಷ ಚಿಹ್ನೆಗಳು

ಬ್ರಾ ಬಿಗಿಯಾಗಿದ್ದರೆ, ನಿಮ್ಮ ಸ್ತನ ಬ್ರಾದ ಕಪ್‍ನಿಂದ ಮೇಲೆ ಮತ್ತು ಕೆಳ ಭಾಗದಲ್ಲಿ ಹರಡಿಕೊಂಡು, ಆಕಾರವಿಲ್ಲದಂತೆ ತೋರುತ್ತದೆ. ಬಿಗಿಯಾದ ಬ್ರಾಗಳನ್ನು ಧರಿಸಿದಾಗ ಬೆನ್ನಿನ ಭಾಗದಲ್ಲಿ ಇರುವ ಸ್ನಾಯುಗಳು ಉಬ್ಬಿಕೊಂಡಂತೆ ತೋರುತ್ತದೆ. ಬ್ರಾದ ತೋಳಿನ ಪಟ್ಟಿ ಮತ್ತು ಸೊಂಟದ ಪಟ್ಟಿ ಎರಡು ಸರಿಯಾದ ಅಳತೆಯನ್ನು ಹೊಂದಿದ್ದು ನೋವುಂಟಾಗದಂತಿರಬೇಕು.

ಬ್ರಾದ ಸರಿಯಾದ ಆಯ್ಕೆ ಹೇಗಿರಬೇಕು?

ಬ್ರಾದ ಸರಿಯಾದ ಆಯ್ಕೆ ಹೇಗಿರಬೇಕು?

* ಬ್ರಾ ಅತಿಯಾಗಿ ಬಿಗಿ ಮತ್ತು ತುಂಬಾ ಸಡಿಲವಾಗಿರಬಾರದು. ಅದನ್ನು ಧರಿಸಿದಾಗ ಸರಿಯಾದ ಅನುಭವ ನೀಡಬೇಕು.

* ಬ್ರಾ ಧರಿಸಿದಾಗ ಕಪ್‍ಗಳಲ್ಲಿ ಸರಿಯಾಗಿ ಸ್ತನ ಕೂತಿರುವಂತೆ ಇರಬೇಕು.

* ಬ್ರಾ ಧರಿಸಿದ ಮೇಲೆ, ಬ್ರಾದ ಸುತ್ತು ಪಟ್ಟಿಯು ಸ್ತನದ ಅರ್ಧ ಭಾಗಕ್ಕೆ ಬರುವಂತಿರಬಾರದು. ಅದು ಸುತ್ತಲೂ ಸರಿಯಾಗಿ ಕುಳಿತಿರಬೇಕು. ತೋಳ್ ಪಟ್ಟಿಯಿಂದ ಬಿಗಿತದ ಅಳತೆ ಮಾಡಿಕೊಂಡಾಗಲೂ, ಸುತ್ತ ಪಟ್ಟಿ ಮೇಲೆ ಬರಬಾರದು.

ಬ್ರಾ ಆಯ್ಕೆಗೆ ಕೆಲವು ಸುಲಭ ಉಪಾಯ

ಬ್ರಾ ಆಯ್ಕೆಗೆ ಕೆಲವು ಸುಲಭ ಉಪಾಯ

* ಬ್ರಾ ಧರಿಸಿದ ಮೇಲೆ ಸೊಂಟ ಪಟ್ಟಿ ಅಥವಾ ಸುತ್ತು ಪಟ್ಟಿಯ ಒಳಗೆ ಎರಡು ಬೆರಳು ಹೋಗುವಷ್ಟು ಸಡಿಲ ಇರಬೇಕು.

* ಬ್ರಾ ಧರಿಸಿ ಎರಡು ಕೈಗಳನ್ನು ಮೇಲೆ ಎತ್ತಿದಾಗ ಸ್ತನವು ಬ್ರಾಗಿಂತ ಕೆಳಗೆ ಹರಡಿಕೊಳ್ಳಬಾರದು.

* ಪ್ಯಾಡ್ ಇರುವ ಬ್ರಾಗಳ ಆಯ್ಕೆ ಮಾಡುವುದಾದರೆ ಸ್ತನಗಳು ಬ್ರಾದ ಕಪ್‍ನಲ್ಲಿ ಸರಿಯಾಗಿ ಕುಳಿತುಕೊಳ್ಳಬೇಕು. ತುಂಬಾ ಸಡಿಲ ಅಥವಾ ಬಿಗಿಯಾಗಿರಬಾರದು.

ಬ್ರಾಗಳ ಆಯ್ಕೆಯಲ್ಲಿ ಕಪ್‍ನ ಅಳತೆ ಮುಖ್ಯ

ಬ್ರಾಗಳ ಆಯ್ಕೆಯಲ್ಲಿ ಕಪ್‍ನ ಅಳತೆ ಮುಖ್ಯ

ಬ್ರಾ ಆಯ್ಕೆ ಮಾಡುವಾಗ ನಿಮ್ಮ ಕಪ್ ಅಳತೆ ಎಷ್ಟೆಂದು ತಿಳಿದುಕೊಳ್ಳಬೇಕು. ಸುತ್ತಳತೆ ಸರಿಯಾಗಿದ್ದು, ಕಪ್ ಅಳತೆ ಸರಿಯಾಗಿರದಿದ್ದರೆ, ಸೂಕ್ತ ಬ್ರಾ ಆಯ್ಕೆ ಕಷ್ಟವಾಗುವುದು. ಕಪ್‍ನಲ್ಲಿ ಕಪ್-ಎ, ಕಪ್-ಬಿ, ಕಪ್-ಸಿ, ಕಪ್-ಡಿ ಎನ್ನುವ ಅಳತೆ ಇರುತ್ತದೆ. ಅದರಲ್ಲಿ ಯಾವುದು ನಿಮಗೆ ಒಗ್ಗುವ ಕಪ್ ಎಂದು ತಿಳಿದು, ನಂತರ ಬ್ರಾ ಸೈಸ್ ಆಯ್ಕೆ ಮಡಿಕೊಳ್ಳಬೇಕು. ಉದಾ: 32ಬ್ರಾ ಸೈಸ್ ಕಪ್-ಬಿ.

"32,34,36" ನಿಮ್ಮ ಬ್ರಾ ಸೈಜ್ ಯಾವುದು?

English summary

Can A Tight Bra Cause Chest Pain?

Can A Tight Bra Cause Chest Pain? The answer is, yes. Tight bras do induce breast pain, which in a long run spreads throughout your chest.
X
Desktop Bottom Promotion