For Quick Alerts
ALLOW NOTIFICATIONS  
For Daily Alerts

ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ಆಹಾರಗಳು

By Arshad
|

ಮೂತ್ರದ ಬಣ್ಣ ಬದಲಾದರೆ ಕಾಳಜಿಯ ವಿಷಯವೇ ಹೌದು. ಆದರೆ ಈ ಬಣ್ಣ ಕೆಂಪಗಾಗಿದ್ದರೆ ಅಥವಾ ಹೆಪ್ಪುಗಟ್ಟಿರುವ ರಕ್ತದ ತುಣುಕುಗಳು ಮೂತ್ರದಲ್ಲಿ ಕಂಡುಬಂದರೆ ಹಾಗೂ ಮೂತ್ರದ ವಾಸನೆ ಇತರ ಸಮದಂತಿಲ್ಲದೇ ಬೇರೆಯೇ ಆಗಿದ್ದರೆ ಇದು ನಿಮ್ಮ ಆರೋಗ್ಯದ ಬಗ್ಗೆ ಕೆಲವು ಮಾಹಿತಿಗಳನ್ನು ನೀಡುತ್ತಿರುವ ಸಂಕೇತವಾಗಿದೆ. ಈ ಬಗ್ಗೆ ಅಲಕ್ಷ್ಯ ಸಲ್ಲದು. ತಕ್ಷಣ ವೈದ್ಯರಲ್ಲಿ ಭೇಟಿ ನೀಡಿ ಸೂಕ್ತ ಪರೀಕ್ಷೆಗಳಿಗೆ ಒಳಗಾಗಿ ಕಾರಣವನ್ನು ಪತ್ತೆ ಹಚ್ಚಿಕೊಳ್ಳಬೇಕು. ಇತ್ತೀಚಿನ ಸಂಶೋಧನೆಯಲ್ಲಿ ಕಂಡುಕೊಂಡಂತೆ ಮೂತ್ರದಲ್ಲಿ ರಕ್ತ ಕಂಡುಬರುವುದು ಪ್ರಾಸ್ಟ್ರೇಟ್ ಗ್ರಂಥಿಯ ಕ್ಯಾನ್ಸರ್‌ನ ಮುಖ್ಯ ಲಕ್ಷಣವಾಗಿದೆ.

ಒಂದು ವೇಳೆ ರಕ್ತದ ಪ್ರಮಾಣ ಹೆಚ್ಚಾಗಿದ್ದು ಮೂತ್ರದ ಬಣ್ಣ ಹೆಚ್ಚೂ ಕಡಿಮೆ ರಕ್ತಗೆಂಪು, ಗುಲಾಬಿ ಅಥವಾ ಕೋಕಾಕೋಲಾದಷ್ಟು ಕಂದು ಬಣ್ಣದ್ದಾಗಿದ್ದರೆ ಇದನ್ನು gross hematuria ಎಂದು ಕರೆಯುತ್ತಾರೆ. ಮೂತ್ರದಲ್ಲಿ ರಕ್ತ ಕಂಡುಬಂದ ಮಾತ್ರಕ್ಕೇ ಪ್ರಸ್ಟ್ರೇಟ್ ಕ್ಯಾನ್ಸರ್ ಇದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಇದಕ್ಕೆ ಬೇರೆ ಕಾರಣಗಳೂ ಇರಬಹುದು. ಆದ್ದರಿಂದ ಬಣ್ಣ ಬದಲಾದರೆ ಇದಕ್ಕೆ ಕಾರಣವನ್ನು ವೈದ್ಯಕೀಯ ಪರೀಕ್ಷೆಯಿಂದ ಮಾತ್ರವೇ ಖಚಿತಪಡಿಸಬಲ್ಲುದು.

ಮೂತ್ರದಲ್ಲಿ ರಕ್ತ: ಅಪ್ಪಿ ತಪ್ಪಿಯೂ ನಿರ್ಲಕ್ಷ್ಯ ಮಾಡಬೇಡಿ

ಪ್ರಾಸ್ಟ್ರೇಟ್ ಕ್ಯಾನ್ಸರ್ ನ ಇತರ ಲಕ್ಷಣಗಳೆಂದರೆ ಮೂತ್ರ ವಿಸರ್ಜನೆಯಾಗಲು ಅತಿ ಹೆಚ್ಚು ಸಮಯ ತೆಗೆದುಕೊಳ್ಳುವುದು ಅಥವಾ ರಭಸ ಅತಿ ಕ್ಷೀಣವಾಗಿರುವುದು, ಹೆಚ್ಚು ಹೊತ್ತು ಮೂತ್ರ ತಡೆದುಕೊಳ್ಳಲು ಸಾಧ್ಯವಾಗದೇ ಕೊಂಚಹೊತ್ತಿಗೇ ಮೂತ್ರಕ್ಕೆ ಅವಸರವಾಗುವುದು, ಮೂತ್ರ ವಿಸರ್ಜನೆ ಮುಗಿದ ಬಳಿಕವೂ ಮೂತ್ರಕೋಶ ಖಾಲಿಯಾಗಿಲ್ಲ, ಇನ್ನೂ ಇದೆ ಎಂದು ಅನ್ನಿಸುವುದು ಮೊದಲಾದವು ಸಾಮಾನ್ಯ ಲಕ್ಷಣಗಳಾಗಿವೆ. ಇದರೊಂದಿಗೆ ನಿಮಿರು ದೌರ್ಬಲ್ಯತನ ಅಥವಾ ನಿಮಿರುತನವನ್ನು ಹೆಚ್ಚು ಹೊತ್ತು ಉಳಿಸಿಕೊಳ್ಳಲು ಸಾಧ್ಯವಾಗದೇ ಇರುವುದೂ ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ನ ಇನ್ನೊಂದು ಲಕ್ಷಣವಾಗಿದೆ. ಈ ಕ್ಯಾನ್ಸರ್‌ಗೆ ಏನು ಕಾರಣ ಎಂಬ ಪ್ರಶ್ನೆಗೆ ಸೂಕ್ತ ಉತ್ತರವಿಲ್ಲ. ಆದರೆ ವಯಸ್ಸು ಏರುತ್ತಿದ್ದಂತೆಯೇ ಈ ಕ್ಯಾನ್ಸರ್ ಆವರಿಸುವ ಸಾಧ್ಯತೆಯೂ ಏರುತ್ತಾ ಹೋಗುತ್ತದೆ.

ಈ ಕ್ಯಾನ್ಸರ್ ಆವರಿಸಿದ ಪ್ರಾರಂಭದಲ್ಲಿ ಇದರ ಇರುವಿಕೆಯೇ ಗೊತ್ತಾಗುವುದಿಲ್ಲ. ಇದರ ಬೆಳವಣಿಗೆಯೂ ತೀರಾ ನಿಧಾನ. ಪ್ರಾರಂಭಿಕ ಹಂತದಲ್ಲಿದ್ದು ಮುಂದಿನ ಹಂತಕ್ಕೆ ಬರುವವರೆಗೂ ಈ ಒಂದು ಕಾಯಿಲೆ ಇರುವುದೇ ಗೊತ್ತಿಲ್ಲದ ವ್ಯಕ್ತಿ ದಶಕಗಳನ್ನೇ ಕಳೆದಿರುತ್ತಾನೆ. ಈ ಕ್ಯಾನ್ಸರ್ ನ ಚಿಕಿತ್ಸೆಗೆ ಶಸ್ತ್ರಚಿಕಿತ್ಸೆ ಹಾಗೂ ರೇಡಿಯೋಪಥಿ ವಿಧಾನಗಳು ಲಭ್ಯವಿವೆ. ಇಂದಿನ ದಿನಗಳಲ್ಲಿ ರಸದೂತಗಳನ್ನು ಪ್ರಚೋದಿಸುವ ಹಾರ್ಮೋನ್ ಥೆರಪಿ ಕೂಡಾ ಪ್ರಚಲಿತದಲ್ಲಿದೆ. ಒಂದು ವೇಳೆ ಈ ಕ್ಯಾನ್ಸರ್ ಇನ್ನೂ ಪ್ರಾರಂಭಿಕ ಹಂತದಲ್ಲಿದ್ದರೆ ಕೆಳಗೆ ವಿವರಿಸಿರುವ ಆಹಾರಗಳು ಇದರ ಚಿಕಿತ್ಸೆಗೆ ನೆರವಾಗಬಲ್ಲವು. ಬನ್ನಿ, ಇವು ಯಾವುವು ನೋಡೋಣ...

ಬ್ರೋಕೋಲಿ

ಬ್ರೋಕೋಲಿ

ಪ್ರಾಸ್ಟೇಟ್ ಕ್ಯಾನ್ಸರ್ ಸಾಧ್ಯತೆಯನ್ನು ಕಡಿಮೆಗೊಳಿಸಲು ಬ್ರೋಕೋಲಿ ಎಂಬ ಹಸಿರು ಹೂಕೋಸಿನಂತಹ ತರಕಾರಿ ಅತ್ಯುತ್ತಮ ಆಯ್ಕೆಯಾಗಿದೆ. ಇದರಲ್ಲಿ ಕಾರ್ಬೋಹೈಡ್ರೇಟುಗಳು ಕಡಿಮೆ ಪ್ರಮಾಣದಲಿದ್ದು ಆಂಟಿ ಆಕ್ಸಿಡೆಂಟ್ ಹಾಗೂ ಫೈಟೋಕೆಮಿಕಲ್ಸ್ ಎಂಬ ಪೋಷಕಾಂಶಗಳು ಹೆಚ್ಚಿನ ಪರಿಮಾಣದಲ್ಲಿರುವ ಕಾರಣ ಇದು ಜೀವಕೋಶಗಳ ಮೇಲೆ ಆಗುವ ಹಾನಿಯನ್ನು ತಡೆದು ತನ್ಮೂಲಕ ಕ್ಯಾನ್ಸರ್ ನ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

 ದಾಳಿಂಬೆ ರಸ

ದಾಳಿಂಬೆ ರಸ

ದಾಳಿಂಬೆಯಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿವೆ. ನಿಯಮಿತವಾಗಿ ದಾಳಿಂಬೆ ರಸವನ್ನು ಸೇವಿಸುತ್ತಾ ಬರುವ ಮೂಲಕ ಕ್ಯಾನ್ಸರ್ ಪೀಡಿತ ಜೀವಕೋಶಗಳ ಚಲನೆ ನಿಯಂತ್ರಿಸಬಹುದು ಹಾಗೂ ಈ ಜೀವಕೋಶಗಳನ್ನು ಆಕರ್ಷಿಸುವ ಒಂದು ಬಗೆಯ ರಾಸಾಯನಿಕ ಸಂಕೇತವನ್ನು ಇಲ್ಲವಾಗಿಸುವ ಮೂಲಕ ಪ್ರಾಸ್ಟ್ರೇಟ್ ನ ಸ್ಥಾನಾಂತರ (metastasis of prostate) ದ ಮೂಲಕ ಮೂಳೆಗಳಿಗೆ ಕ್ಯಾನ್ಸರ್ ಹರಡದಂತೆ ತಡೆಯುತ್ತದೆ.

ಸೋಯಾ ಅವರೆ

ಸೋಯಾ ಅವರೆ

ಕೆಲವು ಸಂಶೋಧನೆಗಳಲ್ಲಿ ಕಂಡುಕೊಂಡಂತೆ ಸೋಯಾ ಅವರೆ ಸಹಾ ಪ್ರಾಸ್ಟೇಟ್ ಕ್ಯಾನ್ಸರ್ ಆವರಿಸುವುದರಿಂದ ತಡೆಯುತ್ತದೆ. ಇದರಲ್ಲಿರುವ ಐಸೋಫ್ಲೇವೋನ್ ಗಳು ಪ್ರಾಸ್ಟೇಟ್ ಗ್ರಂಥಿಯ ಜೀವಕೋಶಗಳು ಉರಿಯೂತಕ್ಕೆ ಒಳಗಾಗುವುದನ್ನು ತಡೆಯುತ್ತದೆ ಹಾಗೂ ತನ್ಮೂಲಕ ಈ ಜೀವಕೋಶಗಳ ಬೆಳವಣಿಗೆ ಹಾಗೂ ಕ್ಯಾನ್ಸರ್ ಹರಡುವುದನ್ನು ತಡೆಯುತ್ತದೆ. ಇದೇ ಕಾರಣದಿಂದ ಸೋಯಾ ಅವರೆಯನ್ನು ನಿತ್ಯವೂ ಆಹಾರದಲ್ಲಿ ಅಳವಡಿಸಿಕೊಳ್ಳುವುದು ಉತ್ತಮ.

ಕ್ಯಾರೆಟ್

ಕ್ಯಾರೆಟ್

ಕ್ಯಾರೆಟ್ (ಕನ್ನಡದಲ್ಲಿ ಗಜ್ಜರಿ) ಸಹಾ ಇನ್ನೊಂದು ಉತ್ತಮವಾದ ತರಕಾರಿಯಾಗಿದ್ದು ಪ್ರಾಸ್ಟೇಟ್ ಗ್ರಂಥಿಯ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ. ಕ್ಯಾರೆಟ್ಟುಗಳಲ್ಲಿ ಉತ್ತಮ ಪ್ರಮಾಣದ ಬೀಟ್ಯಾ ಕ್ಯಾರೋಟೀನ್ ಎಂಬ ಕ್ಯಾರೋಟಿನಾಯ್ಡು ಇದ್ದು ಇದು ಜೀರ್ಣಕ್ರಿಯೆಯಲ್ಲಿ ವಿಟಮಿನ್ ಎ ಆಗಿ ಪರಿವರ್ತಿತವಾಗುತ್ತದೆ. ಇದರೊಂದಿಗೇ ಕ್ಯಾರೆಟ್ಟುಗಳಲ್ಲಿರುವ ಆಂಟಿ ಆಕ್ಸಿಡೆಂಟುಗಳು ಆರೋಗ್ಯವನ್ನು ವೃದ್ದಿಸಿ ಕಾಪಾಡುವುದಲ್ಲದೇ ಪ್ರಾಸ್ಟೇಟ್ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನೂ ಕಡಿಮೆಗೊಳಿಸುತ್ತದೆ. ನಿಮ್ಮ ನಿತ್ಯದ ಆಹಾರದಲ್ಲಿ ಸಾಲಾಡ್ ನೊಂದಿಗೆ ಹಸಿಯಾಗಿ ಕ್ಯಾರೆಟ್ ಅನ್ನು ತಿನ್ನುವುದು ಎಲ್ಲಾ ರೀತಿಯಿಂದಲೂ ಆರೋಗ್ಯಕರವಾಗಿದೆ.

ಅಕ್ರೋಟು

ಅಕ್ರೋಟು

ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ತಡೆಗಟ್ಟುವ ಗುಣವಿರುವ ಆಹಾರಗಳ ಪಟ್ಟಿಯಲ್ಲಿ ಆಕ್ರೋಟು ಅಗ್ರಸ್ಥಾನ ಪಡೆಯುತ್ತದೆ. ಇದರಲ್ಲಿ ಅತಿ ಕಡಿಮೆ ಕಾರ್ಬೋಹೈಡ್ರೇಟುಗಳಿವೆ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಒಮೆಗಾ-3 ಕೊಬ್ಬಿನ ಆಮ್ಲಗಳಿವೆ. ಈ ಗುಣಗಳಿಂದ ಅಕ್ರೋಟನ್ನು ನಿಯಮಿತವಾಗಿ ಸೇವಿಸುತ್ತ ಬಂದ ವ್ಯಕ್ತಿಗಳ ದೇಹದಲ್ಲಿ IGF-1 ಎಂಬ ಹೆಸರಿನ ರಸದೂತದ ಪ್ರಮಾಣ ಕಡಿಮೆ ಇರುತ್ತದೆ. ಈ ರಸದೂತ ಪ್ರಾಸ್ಟೇಟ್ ಕ್ಯಾನ್ಸರ್ ಆವರಿಸುವ ಸಾಧ್ಯತೆ ಹೆಚ್ಚಿಸುವ ಮುಖ್ಯ ಕೊಂಡಿಯಾಗಿದೆ. ನಿತ್ಯವೂ ನಾಲ್ಕಾರು ಅಕ್ರೋಟುಗಳನ್ನು ತಿನ್ನುತ್ತಾ ಬರುವ ಮೂಲಕ ಈ ಸಾಧ್ಯತೆಯನ್ನು ಕನಿಷ್ಠವಾಗಿಸಬಹುದು.

English summary

Foods That Helps To Decrease The Risk Of Prostate Cancer

It might be an awful thing to notice your urine, but this is something you must do. As the changes in your urine - the colour as well as the flow can tell you a lot about your health. More so if you notice blood in your urine then you should be all the more careful and check it with a doctor immediately. As a recent research has revealed that blood in the urine could be an early sign of prostate cancer.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more