For Quick Alerts
ALLOW NOTIFICATIONS  
For Daily Alerts

ಹೊಟ್ಟೆ ಕೆಟ್ಟಿದೆಯೇ? ಹಸಿಶುಂಠಿಯೇ ಇದಕ್ಕೆ ಸರಿಯಾದ ಮನೆಮದ್ದು!

By Arshad
|

ಹೊಟ್ಟೆಯಲ್ಲಿ ಏನಾದರೂ ತೊಂದರೆಯಾದರೆ ಹೊಟ್ಟೆನೋವು ಮತ್ತು ಕೆಳಹೊಟ್ಟೆ ಕಿವುಚಿದಂತಹ ಅನುಭವಾಗುತ್ತದೆ. ಸಾಮಾನ್ಯವಾಗಿ ಅಜೀರ್ಣತೆ ಹಾಗೂ ಒಗ್ಗದ ಆಹಾರ ಸೇವನೆಯಿಂದ ಹೊಟ್ಟೆ ಕೆಡುವುದು ಸಾಮಾನ್ಯವಾದ ತೊಂದರೆಯಾಗಿದೆ. ಇದರ ಪರಿಣಾಮವಾಗಿ ಹೊಟ್ಟೆಯಲ್ಲಿ ಉರಿ, ಐಬಿಎಸ್ (irritable bowel syndrome), ಮಲಬದ್ಧತೆ ಹಾಗೂ ಹೊಟ್ಟೆಯೊಳಗಣ ಉರಿಯೂತ ಮೊದಲಾದವು ಎದುರಾಗುತ್ತವೆ. ಈ ಎಲ್ಲಾ ತೊಂದರೆಗಳಿಗೆ ಹಸಿಶುಂಠಿ ಸೂಕ್ತ ಉತ್ತರವಾಗಿದೆ.

ಫುಡ್ ಪಾಯಿಸನ್‌ ಆಗಿ ಹೊಟ್ಟೆ ಕೆಟ್ಟಿದೆಯೇ? ಇನ್ನು ಚಿಂತೆ ಬಿಡಿ

ಹೊಟ್ಟೆಯ ತೊಂದರೆಗೆ ಮಾರುಕಟ್ಟೆಯಲ್ಲಿ ಹಲವಾರು ಔಷಧಿಗಳಿವೆ. ಈ ಔಷಧಿಗಳ ಸೇವನೆ ಆ ಕ್ಷಣಕ್ಕೆ ಉರಿಯನ್ನು ಕಡಿಮೆ ಮಾಡಿದರೂ ದೀರ್ಘಾವಧಿಯಲ್ಲಿ ಇದರ ಸೇವನೆ ಹಾನಿಕರವಾಗಿದೆ. ಹಸಿಶುಂಠಿಯ ಉಪಯೋಗ ಇದಕ್ಕೆ ಸರಿಯಾದ ಮದ್ದು ಆಗಿದೆ. ಹಸಿಶುಂಠಿಯೊಂದಿಗೆ ಇನ್ನೂ ಕೆಲವು ನೈಸರ್ಗಿಕ ಸಾಮಾಗ್ರಿಗಳನ್ನು ಬೆರೆಸಿ ಸೇವಿಸುವ ಮೂಲಕ ಹೊಟ್ಟೆಯ ತೊಂದರೆಗಳನ್ನು ಶೀಘ್ರವೇ ಕೊನೆಗಾಣಿಸಬಹುದು. ಇಂದಿನ ಲೇಖನದಲ್ಲಿ ಹೊಟ್ಟೆಯ ತೊಂದರೆಗಳಿಗೆ ಶುಂಠಿಯ ಕೆಲವು ಉಪಯುಕ್ತ ಬಳಕೆಯ ವಿಧಾನಗಳನ್ನು ವಿವರಿಸಲಾಗಿದೆ....

ಹಸಿಶುಂಠಿಯ ತಿರುಳು

ಹಸಿಶುಂಠಿಯ ತಿರುಳು

ಹಸಿಶುಂಠಿಯಲ್ಲಿ ಉರಿಯೂತ ನಿವಾರಕ ಗುಣ ಜಠರದಲ್ಲಿ ಜೀರ್ಣರಸವನ್ನು ಹೆಚ್ಚಿಸಲು ನೆರವಾಗುತ್ತದೆ. ಇದರಿಂದ ಜಠರದಲ್ಲಿ ಆಮ್ಲೀಯತೆ ಕಡಿಮೆಯಾಗುತ್ತದೆ ಹಾಗೂ ಆಹಾರವನ್ನು ಜೀರ್ಣಿಸಲು ನೆರವಾಗುತ್ತದೆ. ಪರಿಣಾಮವಾಗಿ ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳಲು ಹಾಗೂ ಅನಗತ್ಯವಾಗಿ ಹೊಟ್ಟೆ ಮತ್ತು ಕರುಳುಗಳಲ್ಲಿ ವಾಯು ಉತ್ಪನ್ನವಾಗುವುದರಿಂದ ತಡೆದಂತಾಗುತ್ತದೆ. ಹಸಿಶುಂಠಿಯ ಅತ್ಯುತ್ತಮ ಪ್ರಯೋಜನ ಪಡೆಯಲು ಒಂದು ಚಿಕ್ಕ ತುಂಡು ಹಸಿಶುಂಠಿಯ ಸಿಪ್ಪೆ ಸುಲಿದು ನಿತ್ಯವೂ ಒಂದು ಗ್ರಾಂನಷ್ಟು ಸೇವಿಸುತ್ತಾ ಬರಬೇಕು.

ಹಸಿಶುಂಠಿಯ ರಸ

ಹಸಿಶುಂಠಿಯ ರಸ

ಕೆಟ್ಟ ಹೊಟ್ಟೆಯ ಆರೈಕೆಗೆ ಹಸಿಶುಂಠಿಯ ರಸದ ಸೇವನೆ ಉತ್ತಮ ಪರಿಣಾಮ ನೀಡುತ್ತದೆ. ಇದಕ್ಕಾಗಿ ಸಮಪ್ರಮಾಣದಲ್ಲಿ ಹಸಿಶುಂಠಿಯ ರಸ ಹಾಗೂ ಸಕ್ಕರೆಯನ್ನು ಮಿಶ್ರಣ ಮಾಡಿ ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ಕುಡಿಯಬೇಕು. ವಾಯುಪ್ರಕೋಪ ಹೆಚ್ಚಿದ್ದರೆ ಈ ವಿಧಾನ ತುಂಬಾ ಉತ್ತಮವಾಗಿದೆ.

ಹಸಿಶುಂಠಿಯ ಕ್ಯಾಂಡಿ

ಹಸಿಶುಂಠಿಯ ಕ್ಯಾಂಡಿ

ಹೊಟ್ಟೆಯ ಗುಡುಗುಡು ಕಡಿಮೆಮಾಡಲು ಹಸಿಶುಂಠಿಯ ಕ್ಯಾಂಡಿಯೊಂದನ್ನು ಮಾಡಿ ಚೀಪುತ್ತಾ ಸೇವಿಸುವುದೂ ಉತ್ತಮ ಪರಿಹಾರವಾಗಿದೆ. ಕ್ಯಾಂಡಿಯನ್ನು ತಯಾರಿಸಲು ಒಂದು ಚಿಕ್ಕ ಹಸಿಶುಂಠಿಯ ತುಂಡನ್ನು ಚಿಕ್ಕದಾಗಿ ಕತ್ತರಿಸಿ ಕೊಂಚ ಜೇನು ಹಾಗೂ ಕೊಂಚ ಬೆಣ್ಣೆ ಬೆರೆಸಿ ಚಿಕ್ಕ ಉರಿಯಲ್ಲಿ ಐದು ನಿಮಿಷಗಳ ಕಾಲ ಕುದಿಸಬೇಕು. ಬಳಿಕ ಈ ದ್ರವವನ್ನು ತಣಿಸಿ ಐಸ್ ಕ್ಯಾಂಡಿ ಮಾಡುವ ಅಚ್ಚುಗಳಲ್ಲಿ ಹಾಕಿ ಫ್ರಿಜ್ಜಿನಲ್ಲಿ ಕನಿಷ್ಠ ಮೂವತ್ತು ನಿಮಿಷಗಳ ಕಾಲ ಇರಿಸಿ ಗಟ್ಟಿಯಾಗಿಸಬೇಕು.

ವಿಶೇಷ ಹರಳುಗಟ್ಟಿಸಿದ ಶುಂಠಿ

ವಿಶೇಷ ಹರಳುಗಟ್ಟಿಸಿದ ಶುಂಠಿ

ಹಸಿಶುಂಠಿಯನ್ನು ಹಾಗೇ ತಿನ್ನಲು ಖಾರವಾಗಿರುವ ಕಾರಣ ಇದನ್ನು ಸಕ್ಕರೆಯ ಹರಳುಗಟ್ಟಿಸಿದರೆ ತಿನ್ನಲು ರುಚಿಯಾಗಿರುತ್ತದೆ. ಇದಕ್ಕಾಗಿ ಕೊಂಚ ಶುಂಠಿಯ ಚಿಕ್ಕ ಚಿಕ್ಕ ತುಂಡುಗಳನ್ನು ಒಂದು ಲೋಟ ನೀರಿನಲ್ಲಿ ಮಧ್ಯಮ ಉದಿಯಲ್ಲಿ ಕುದಿಸಿ. ಬಳಿಕ ಉರಿ ಆರಿಸಿ ಇಪ್ಪತ್ತು ನಿಮಿಷ ತಣಿಸಿ. ಬಳಿಕ ಈ ನೀರಿಗೆ ಶುಂಠಿಯ ಪ್ರಮಾಣದಷ್ಟೇ ಸಕ್ಕರೆಯನ್ನು ಬೆರೆಸಿ ಮತ್ತೊಮ್ಮೆ ಕುದಿಸಿ ಗಟ್ಟಿಯಾದ ಪಾಕವಾಗಿಸಿ. ಬಳಿಕ ಈ ಪಾಕವನ್ನು ತಟ್ಟೆಯಲ್ಲಿ ತೆಳುವಾಗಿ ಹರಡಿ ಒಣಗಲು ಬಿಡಿ. ಒಣಗಿದ ಬಳಿಕ ಪಟ್ಟಿಗಳಂತೆ ಕತ್ತರಿಸಿ ಫ್ರಿಜ್ಜಿನಲ್ಲಿ ಶೇಖರಿಸಿ ಅಗತ್ಯವಿದ್ದಾಗ ಸೇವಿಸಿ.

ಶುಂಠಿಯ ಟೀ

ಶುಂಠಿಯ ಟೀ

ಕೆಟ್ಟಿರುವ ಹೊಟ್ಟೆಗೆ ಈ ಟೀ ಅತ್ಯಂತ ಉಪಯುಕ್ತವಾಗಿದೆ. ಇದಕ್ಕಾಗಿ ಅರ್ಧ ಚಿಕ್ಕಚಮಚ ಹಸಿಶುಂಠಿ ಅರೆದು ಒಂದು ಲೋಟ ನೀರಿನಲ್ಲಿ ಸುಮಾರು ಮೂರರಿಂದ ಐದು ನಿಮಿಷ ಕುದಿಸಿ. ಬಳಿಕ ಇದಕ್ಕೆ ಕೊಂಚವೇ ಸಕ್ಕರೆ ಅಥವಾ ಜೇನನ್ನು ಬೆರೆಸಿ ಸೋಸಿ ದಿನಕ್ಕೆರಡು ಬಾರಿ ಕುಡಿಯಿರಿ.

ಜೇನು ಮತ್ತು ಲಿಂಬೆ ಬೆರೆಸಿದ ಶುಂಠಿಯ ಟೀ

ಜೇನು ಮತ್ತು ಲಿಂಬೆ ಬೆರೆಸಿದ ಶುಂಠಿಯ ಟೀ

ಜೀರ್ಣಕ್ರಿಯೆ ಉತ್ತಮಗೊಳಿಸಲು ಜೇನು ಮತ್ತು ಲಿಂಬೆ ಸಹಾ ನೆರವಾಗುತ್ತವೆ. ಜೇನಿನಲ್ಲಿ ಗ್ಲುಕೋಸ್ ಆಕ್ಸಿಡೇಸ್, ಇನ್ವರ್ಟೇಸ್, ಕ್ಯಾಟಲೇಸ್ ಮತ್ತು ಇನುಲೇಸ್ ಎಂಬ ಪೋಷಕಾಂಶಗಳಿದ್ದು ಇವು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತವೆ. ಈ ಟೀ ತಯಾರಿಸಲು ಎರಡು ಕಪ್ ನೀರನ್ನು ಕುದಿಸಿ ಒಂದು ಇಂಚಿನಷ್ಟು ಹಸಿಶುಂಠಿಯ ತುಂಡನ್ನು ಚಿಕ್ಕದಾಗಿ ಕತ್ತರಿಸಿ ಸೇರಿಸಿ. ಬಳಿಕ ಎರಡು ಲಿಂಬೆಗಳ ಸಿಪ್ಪೆಗಳನ್ನು ಚಿಕ್ಕದಾಗಿ ಕೊಚ್ಚಿ ಸೇರಿಸಿ ಹಾಗೂ ಅರ್ಧ ಲಿಂಬೆಯ ರಸವನ್ನು ಸೇರಿಸಿ ಸುಮಾರು ಒಂದು ನಿಮಿಷ ಕುದಿಸಿದ ಬಳಿಕ ಉರಿ ಆರಿಸಿ ಐದರಿಂದ ಹತ್ತು ನಿಮಿಷ ತಣಿಯಲು ಬಿಡಿ. ಬಳಿಕ ಅರ್ಧ ಚಿಕ್ಕ ಚಮಚ ಜೇನನ್ನು ಸೇರಿಸಿ ಕದಡಿ ಕುಡಿಯಿರಿ.

ಶುಂಠಿ ಬೆರೆಸಿದ ಕಪ್ಪು ಟೀ

ಶುಂಠಿ ಬೆರೆಸಿದ ಕಪ್ಪು ಟೀ

ಸಾಮಾನ್ಯವಾದ ಕಪ್ಪು ಟೀ ಸಹಾ ಆಂಟಿ ಆಕ್ಸಿಡೆಂಟುಗಳನ್ನು ಹೊಂದಿದ್ದು ಕೆಲವಾರು ತೊಂದರೆಗಳಿಗೆ ಔಷಧಿಯಂತೆ ಕೆಲಸ ಮಾಡುತ್ತದೆ. ಇದರಲ್ಲಿರುವ ಸಕ್ರಿಯ ಪೋಷಕಾಂಶಗಳು ಜೀರ್ಣಕ್ರಿಯೆಗೆ ಸಹಕಾರಿಯಾಗಿದ್ದು ಹೊಟ್ಟೆಯ ಕೆಲವು ತೊಂದರೆಗಳನ್ನು ನಿವಾರಿಸಲು ನೆರವಾಗುತ್ತವೆ. ಮೂರು ಕಪ್ ನೀರಿನಲ್ಲಿ ಅರ್ಧ ಕಪ್ ನಷ್ಟು ಚಿಕ್ಕದಾಗಿ ಹೆಚ್ಚಿನ ಹಸಿಶುಂಠಿಯನ್ನು ಹಾಕಿ ಕುದಿಸಿ. ಕೊಂಚ ಹೊತ್ತು ಕುದಿಸಿದ ಬಳಿಕ ಈ ನೀರಿಗೆ ಎರಡು ಚಿಕ್ಕ ಚಮಚ ಕಪ್ಪು ಟೀಪುಡಿ ಹಾಕಿ ಕಲಕಿ ಉರಿ ಆರಿಸಿ ಮುಚ್ಚಳ ಮುಚ್ಚಿ ಸುಮಾರು ಮೂರರಿಂದ ಐದು ನಿಮಿಷ ಹಾಗೇ ಬಿಡಿ. ಬಳಿಕ ಅರ್ಧ ಕಪ್ ಸಾಂದ್ರೀಕರಿಸಿದ ಹಾಲು (ಕಂಡೆನ್ಸ್ಡ್ ಮಿಲ್ಕ್) ಹಾಕಿ ಬೆರೆಸಿ ಸೋಸಿ ಬಾಟಲಿಯಲ್ಲಿ ಸಂಗ್ರಹಿಸಿ. ಈ ಟೀಯನ್ನು ದಿನದಲ್ಲಿ ಪ್ರತಿ ಬಾರಿ ಒಂದ್ ಕಪ್ ನಂತೆ ಮೂರು ಬಾರಿ ಬಿಸಿ ಮಾಡಿ ಕುಡಿಯಿರಿ.

ಶುಂಠಿಯ ಪುಡಿ

ಶುಂಠಿಯ ಪುಡಿ

ಶುಂಠಿ ಒಣಪುಡಿಯ ರೂಪದಲ್ಲಿಯೂ ಲಭ್ಯವಿದೆ. ಹಸಿಶುಂಠಿಯನ್ನು ಹಸಿಯಾಗಿ ಬಳಸಲು ಸಮಯಾವಕಾಶವಿಲ್ಲದಿದ್ದರೆ ಪುಡಿಯನ್ನೂ ಬಳಸಬಹುದು.ಹೊಟ್ಟೆಯಲ್ಲಿ ತೊಂದರೆ ಇದ್ದಾಗ ಶುಂಠಿಪುಡಿ ಹಾಗೂ ಧನಿಯ, ಪುದಿನಾ ಎಲೆಗಳು ಹಾಗೂ ಕಾಳುಮೆಣಸನ್ನು ಬಳಸಿ ಉತ್ತಮ ಪರಿಹಾರ ಪಡೆಯಬಹುದು. ಇದಕ್ಕಾಗಿ ಸಮಪ್ರಮಾಣದಲ್ಲಿ ಶುಂಠಿಪುಡಿ ಹಾಗೂ ಧನಿಯ ಕಾಳು, ಒಣ ಪುದಿನಾ ಎಲೆಗಳು ಹಾಗೂ ಕಾಳುಮೆಣಸುಗಳನ್ನು ಮಿಕ್ಸಿಯ ಬ್ಲೆಂಡರಿನಲ್ಲಿ ಹಾಕಿ ಒಣದಾಗಿಯೇ ಪುಡಿ ಮಾಡಿ. ಈ ಪುಡಿಯನ್ನು ಚಿಕ್ಕ ಬಾಟಲಿಯಲ್ಲಿ ಸಂಗ್ರಹಿಸಿಟ್ಟು ನಿತ್ಯವೂ ಒಂದು ಚಮಚದಷ್ಟು ಪುಡಿಯನ್ನು ದಿನಕ್ಕೆರಡು ಬಾರಿ ಸೇವಿಸಿ.

ಶುಂಠಿಯನ್ನು ಬಳಸಲು ಇರುವ ಮಿತಿಗಳು

ಶುಂಠಿಯನ್ನು ಬಳಸಲು ಇರುವ ಮಿತಿಗಳು

ಶುಂಠಿ ಎಷ್ಟೇ ಔಷಧೀಯವಾಗಿದ್ದರೂ ಇದರ ಪ್ರಮಾಣ ದಿನಕ್ಕೆ ಒಂದು ಅಥವಾ ಎರಡು ಚಮಚಕ್ಕೆ ಮೀಸಲಾಗಿರಬೇಕು. ಏಕೆಂದರೆ ಇದಕ್ಕೂ ಹೆಚ್ಚು ಸೇವಿಸಿದರೆ ಬಾಯಿ ಹಾಗೂ ಹೊಟ್ಟೆಯಲ್ಲಿ ಉರಿ ಹಾಗೂ ಪರಿಣಾಮವಾಗಿ ಅತಿಸಾರ ಎದುರಾಗಬಹುದು.

ಎಚ್ಚರಿಕೆ

ಎಚ್ಚರಿಕೆ

ಹೃದಯರೋಗಿಗಳು, ಮಧುಮೇಹಿಗಳು, ರಕ್ತಸ್ರಾವ ಹಾಗೂ ಹೊಟ್ಟೆಯಲ್ಲಿ ಹುಣ್ಣು (ಅಲ್ಸರ್) ಮೊದಲಾದ ತೊಂದರೆ ಇರುವ ವ್ಯಕ್ತಿಗಳು ತಮ್ಮ ಕುಟುಂಬ ವೈದ್ಯರ ಸಲಹೆ ಪಡೆದೇ ಶುಂಠಿಯನ್ನು ತಮ್ಮ ಆಹಾರದಲ್ಲಿ ಅಳವಡಿಸಿಕೊಳ್ಳಬೇಕು. ಒಂದು ವೇಳೆ ಶುಂಠಿಯ ಅಥವಾ ಬೇರಾವುದೇ ಸಾಮಾಗ್ರಿಯ ಸೇವನೆಯಿಂದ ಅಲರ್ಜಿ, ಎದೆಯುರಿ, ವಾಕರಿಕೆ, ವಾಂತಿ ಮೊದಲಾದ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಇದರ ಸೇವನೆಯನ್ನು ನಿಲ್ಲಿಸಬೇಕು.

English summary

Best Methods To Use Ginger For An Upset Stomach And Gas Troubles

In this article, we have listed some of the top methods to use ginger for treating an upset stomach and gas troubles...
Story first published: Friday, June 30, 2017, 20:44 [IST]
X
Desktop Bottom Promotion