For Quick Alerts
ALLOW NOTIFICATIONS  
For Daily Alerts

ದೇಹದ ಕೊಲೆಸ್ಟ್ರಾಲ್ ನಿಯಂತ್ರಿಸಿ, ಆರೋಗ್ಯ ವೃದ್ಧಿಸಿ...

By Manu
|

ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಅಗತ್ಯಕ್ಕಿಂತ ಹೆಚ್ಚಾಗಲು ಕೆಲವಾರು ಕಾರಣಗಳಿವೆ. ಅತಿ ಹೆಚ್ಚು ತಿನ್ನುವುದು, ವ್ಯಾಯಾಮವಿಲ್ಲದಿರುವುದು, ಧೂಮಪಾನ, ಮದ್ಯಪಾನ, ಗುಟ್ಕಾ ಸೇವನೆ ಮೊದಲಾದವು ಕೊಬ್ಬಿನ ಮಟ್ಟಗಳನ್ನು ಏರುಪೇರುಗೊಳಿಸುತ್ತವೆ.

ಇಂದು ಕೊಲೆಸ್ಟ್ರಾಲ್ ಮಟ್ಟವನ್ನು ಅಳೆಯುವ ವಿಧಾನಗಳು ಇವೆ. ಕಡಿಮೆ ಮಾಡಲು ಗುಳಿಗೆಗಳೂ ಇವೆ. ಆದರೆ ಇದಕ್ಕೂ ಉತ್ತಮವಾದ ಮನೆಮದ್ದೊಂದು ಇದೆ ಎಂದು ನಿಮಗೆ ಇದಕ್ಕೂ ಮುನ್ನ ಗೊತ್ತಿತ್ತೇ? ಇಂದಿನ ಯುವಜನರಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಲು ಸಿದ್ಧ ಆಹಾರಗಳು ನೇರವಾಗಿ ಕಾರಣವಾಗಿವೆ. ನೋಡಲು ಸುಂದರವಾಗಿರುವ ಈ ಆಹಾರಗಳಲ್ಲಿ ಅತಿ ಹೆಚ್ಚು ಸಕ್ಕರೆ, ಕೊಬ್ಬು ಮತ್ತು ಇತರ ಕಣಗಳಿದ್ದು ಇದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಥಟ್ಟನೆ ಮೇಲೇರುತ್ತದೆ. ಬರೀ ಎರಡೇ ಎರಡು ವಾರದಲ್ಲಿ ಕೊಲೆಸ್ಟ್ರಾಲ್‌ ನಿಯಂತ್ರಣಕ್ಕೆ!

ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕೆಟ್ಟದೆಂದು ಏಕೆ ಅನ್ನಲಾಗುತ್ತದೆ? ವಾಸ್ತವವಾಗಿ ಇದರ ಪ್ರಮಾಣ ಒಂದು ಮಿತಿಯೊಳಗೆ ಇರಬೇಕು. ಇದಕ್ಕೂ ಹೆಚ್ಚಾದರೆ ಹೆಚ್ಚುವರಿ ಕೊಲೆಸ್ಟ್ರಾಲ್ ರಕ್ತನಾಳಗಳ ಒಳಗೆಲ್ಲಾ ಹರಿದು ಎಲ್ಲೆಲ್ಲಿ ನರ ಕವಲೊಡೆದಿದೆಯೋ, ತಿರುವಾಗಿದೆಯೋ, ಅಲ್ಲೆಲ್ಲಾ ಮೂಲೆಗಳಲ್ಲಿ ಅಂಟಿಕೊಂಡು ಬಿಡುತ್ತದೆ. ಖಳನಾಯಕ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಿಂಪಲ್ ಮನೆಮದ್ದು

ಅಷ್ಟೇ ಅಲ್ಲ, ದಿನಗಳೆದಂತೆ ಈ ದಾರಿಯಾಗಿ ಬರುವ ಇತರ ಕಣಗಳನ್ನೂ ಕೊಂಚಕೊಂಚವಾಗಿ ಅಂಟಿಸಿಕೊಳ್ಳುತ್ತಾ ಹೋಗುತ್ತದೆ. ಎಲ್ಲಿಯವರೆಗೆ ಅಂದರೆ ರಕ್ತನಾಳ ಪೂರ್ಣವಾಗಿ ಮುಚ್ಚುವವರೆಗೆ. ಇದರಿಂದ ರಕ್ತದ ಒತ್ತಡ ಹೆಚ್ಚುವುದು, ಹೃದಯ ಸಂಬಂಧಿ ತೊಂದರೆಗಳು ಹೆಚ್ಚುವುದು ಹಾಗೂ ಹೃದಯಾಘಾತದಂತಹ ಮಾರಕ ಪರಿಣಾಮಗಳೂ ಎದುರಾಗಬಹುದು. ಮೌನ ಕೊಲೆಗಾರ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸರಳ ಸೂತ್ರ

ಆದ್ದರಿಂದ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತಿದ್ದಂತೆಯೇ ವೈದ್ಯರು ಕಟ್ಟುನಿಟ್ಟಿನ ಕ್ರಮ ಅನುಸರಿಸಲು ಸಲಹೆ ನೀಡುತ್ತಾರೆ. ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ವೈದ್ಯರೂ ಒಪ್ಪುವ ಒಂದು ಸುಲಭ ವಿಧಾನವಿದೆ. ಬನ್ನಿ, ಇದು ಯಾವುದೆಂದು ಅರಿಯೋಣ...

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

ಖರ್ಜೂರ: ಸುಮಾರು ಮೂರರಿಂದ ನಾಲ್ಕು ಬೀಜ ನಿವಾರಿಸಿದ್ದು

ಹಸಿಶುಂಠಿಯ ರಸ: ಎರಡು ಚಿಕ್ಕ ಚಮಚ

ಮಾಹಿತಿ #1

ಮಾಹಿತಿ #1

ಈ ಕೆಳಗೆ ವಿವರಿಸಿರುವ ಪೇಯವನ್ನು ನಿಯಮಿತವಾಗಿ ಕುಡಿಯುತ್ತಾ ನಿಮ್ಮ ಜೀವನಕ್ರಮವನ್ನು ಕೊಂಚ ಬದಲಿಸಿ ಕೊಂಚ ವ್ಯಾಯಾಮ ಮತ್ತು ಅನಾರೋಗ್ಯಕರ ಆಹಾರಗಳನ್ನು ವರ್ಜಿಸಿದರೆ ಇದು ನಿಜಕ್ಕೂ ಪರಿಣಾಮಕಾರಿಯಾಗಿದೆ. ಅಲ್ಲದೇ ಎಣ್ಣೆ, ಕೊಬ್ಬು, ಜಿಡ್ಡು ಹೆಚ್ಚಿರುವ ಯಾವುದೇ ಆಹಾರಗಳನ್ನು ಸರ್ವಥಾ ಸೇವಿಸಬಾರದು.

ಮಾಹಿತಿ #2

ಮಾಹಿತಿ #2

ಖರ್ಜೂರದಲ್ಲಿ ಹಲವಾರು ಪೋಷಕಾಂಶಗಳು ಹಾಗೂ ಉತ್ತಮ ಪ್ರಮಾಣದ ಕರಗದ ನಾರು ಇದೆ. ಈ ಪೋಷಕಾಂಶಗಳು ರಕ್ತದಲ್ಲಿ ಸೇರಿ ಕಟ್ಟಿಕೊಂಡಿದ್ದ ಜಿಡ್ಡನ್ನು ಸಡಿಲಗೊಳಿಸಿ ದೇಹದಿಂದ ವಿಸರ್ಜಿಸಲು ನೆರವಾಗುತ್ತವೆ.

ಮಾಹಿತಿ #3

ಮಾಹಿತಿ #3

ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ಹಸಿಶುಂಠಿ ಅತ್ಯುತ್ತಮವಾಗಿದೆ. ಅಲ್ಲದೇ ಹಸಿಶುಂಠಿಯ

ಖಾರಗುಣಕ್ಕೆ ಕಾರಣವಾದ ಕೆಲವು ಆಮ್ಲಗಳು ದೇಹದ ರಕ್ತನಾಳಗಳಿಗೆ ಪ್ರಚೋದನೆ ನೀಡಿ ಕೊಬ್ಬನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತವೆ.

ಈ ವಿಧಾನನ್ನು ಅನುಸರಿಸುವ ಬಗೆ...

ಈ ವಿಧಾನನ್ನು ಅನುಸರಿಸುವ ಬಗೆ...

ಹಂತ 1

ಮೇಲೆ ತಿಳಿಸಿದ ಎರಡೂ ಸಾಮಾಗ್ರಿಗಳನ್ನು ಮಿಕ್ಸಿಯ ಚಿಕ್ಕ ಜಾರಿನಲ್ಲಿ ಹಾಕಿ ಕೊಂಚ ಉಗುರುಬೆಚ್ಚನೆಯ ನೀರಿನೊಂದಿಗೆ ನಯವಾಗಿ ಕಡೆಯಿರಿ. ಬಳಿಕ ಈ ನೀರನ್ನು ಸ್ವಚ್ಛ ಬಟ್ಟೆಯಲ್ಲಿ ಹಿಂಡಿ ನೀರನ್ನು ಸಂಗ್ರಹಿಸಿ.

ಹಂತ 2

ಹಂತ 2

ಪ್ರತಿ ರಾತ್ರಿಯ ಊಟದ ಬಳಿಕ ಈ ನೀರನ್ನು ದಿನದ ಅಂತಿಮ ಆಹಾರವಾಗಿ ಸೇವಿಸಿ ಮಲಗಿ. ಈ ವಿಧಾನವನ್ನು ಕನಿಷ್ಠ ಎರಡು ತಿಂಗಳಾದರೂ ಅನುಸರಿಸಿ. ಒಂದು ವೇಳೆ ನಿಮಗೆ ಜಠರದಲ್ಲಿ ಆಮ್ಲೀಯತೆಯ ತೊಂದರೆ ಇದ್ದರೆ ಖರ್ಜೂರದ ಪ್ರಮಾಣವನ್ನು ಕೊಂಚ ಕಡಿಮೆಗೊಳಿಸಿ.

English summary

Best home remedy to reduce cholesterol

If you are someone who loves to eat out often, hates exercising and smokes cigarettes regularly, then you could be prone to ailments like high cholesterol. Did you know that there is a home remedy for cholesterol that doctors feel is the best one out there? The high amounts of unhealthy fats and sugars found in junk food, when consumed on a regular basis can definitely cause your cholesterol levels to spike.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more