For Quick Alerts
ALLOW NOTIFICATIONS  
For Daily Alerts

ಆಯುರ್ವೇದ ಟಿಪ್ಸ್: ಬರೀ ಒಂದೇ ದಿನದಲ್ಲಿ ಅಸಿಡಿಟಿ ನಿಯಂತ್ರಣಕ್ಕೆ...

ಇಲ್ಲ, ನಾನು ಅದನ್ನು ತಿನ್ನಲ್ಲ, ಅದರಿಂದ ನನಗೆ ಅಸಿಡಿಟಿ ಆಗುತ್ತದೆ. ಇದು ಮನೆಗೆ ಬರುವ ನೆಂಟರಿಂದ ಅಥವಾ ಯಾವುದೇ ಕಾರ್ಯಕ್ರಮದಲ್ಲಿ ಕೇಳಿಬರುವಂತಹ ಮಾತು. ಚಿಂತಿಸದಿರಿ ಇಲ್ಲಿದೆ ನೋಡಿ ಆಯುರ್ವೇದ ಟಿಪ್ಸ್

By Manu
|

ಏನೇ ತಿಂದರೂ ಆಗದು. ಬಾಯಿಯಲ್ಲಿ ತೇಗು ಬಂದಂತೆ ಆಗುತ್ತದೆ. ಹುಳಿ, ಖಾರ ತಿಂದರೆ ಇದು ಜಾಸ್ತಿ ಎಂದು ಹೆಚ್ಚಿನವರು ಹೇಳುವುದುಂಟು. ಇನ್ನು ಕೆಲವರು ಇದನ್ನು ನೇರವಾಗಿ ಅಸಿಡಿಟಿ ಎಂದು ಕರೆಯುತ್ತಾರೆ. ಅದರಲ್ಲೂ ಇತ್ತೀಚಿನ ಪ್ರತಿಯೊಬ್ಬರಲ್ಲೂ ಅಸಿಡಿಟಿ (ಆಮ್ಲೀಯತೆ) ಎನ್ನುವುದು ಸಾಮಾನ್ಯವಾಗುತ್ತಾ ಇದೆ.

ಯಾಕೆಂದರೆ ಇಂದಿನ ಜೀವನಶೈಲಿಯೇ ಇದಕ್ಕೆ ಕಾರಣವಾಗಿಬಿಟ್ಟಿದೆ. ಒತ್ತಡದ ಜೀವನದಲ್ಲಿ ಹೊತ್ತಲ್ಲದ ಹೊತ್ತಿನಲ್ಲಿ ಊಟ ಮಾಡುವುದು, ಅದು ಕೂಡ ಫಾಸ್ಟ್ ಫುಡ್ ಸೇವಿಸುವುದರಿಂದ ಅಸಿಡಿಟಿ ಸಾಮಾನ್ಯವಾಗುತ್ತದೆ. ಆದರೆ ಇನ್ನು ಮುಂದೆ ಚಿಂತಿಸದಿರಿ, ಏಕೆಂದರೆ ಈ ತೊಂದರೆಗೆ ಆಯುರ್ವೇದದ ಬಳಿ ಸುಲಭ ಮನೆಮದ್ದಿನ ಸೂಕ್ತ ಪರಿಹಾರವಿದೆ. ಬೆನ್ನೇರಿ ಕಾಡುವ ಅಸಿಡಿಟಿಗೆ ಪವರ್ ಫುಲ್ ಮನೆಮದ್ದು

ಸಾಮಾನ್ಯವಾಗಿ ಹೆಚ್ಚಿನ ಜನರು ಜೀರ್ಣಕ್ರಿಯೆಯಲ್ಲಿ ಎದುರಾಗುವ ಈ ತೊಂದರೆಯನ್ನು ಅನುಭವಿಸುತ್ತಾರೆ. ಒಂದು ವೇಳೆ ಈ ತೊಂದರೆ ಸತತವಾಗಿದ್ದರೆ ಮಾತ್ರ ಇದು ದೊಡ್ಡ ತೊಂದರೆಯಾಗಿ ಉಲ್ಬಣಿಸಬಹುದು. acid reflux ಎಂದೂ ಕರೆಯಲ್ಪಡುವ ಈ ತೊಂದರೆಯಲ್ಲಿ ಜಠರದಲ್ಲಿ ಉತ್ಪತ್ತಿಯಾದ ಜಠರಾಮ್ಲದ ಪ್ರಬಲತೆ ಹೆಚ್ಚಾಗಿ ಇದರ ಪರಿಣಾಮವಾಗಿ ಉತ್ಪತ್ತಿಯಾದ ವಾಯುಗಳು ಅನ್ನನಾಳದ ಮೂಲಕ ಹೊರಬರಲು ಮಾಡುವ ಪ್ರಯತ್ನವೇ ಆಮ್ಲೀಯತೆ ಅಥವಾ ಅಸಿಡಿಟಿ. ಇದೇ ಕಾರಣಕ್ಕೆ 'ಅಸಿಡಿಟಿ' ಕಾಣಿಸಿಕೊಳ್ಳುವುದು, ನೆನಪಿಡಿ....

ಈ ವಾಯುಗಳು ಅನ್ನನಾಳದ ಜೊತೆಗೇ ಇತರ ಜೀರ್ಣಾಂಗಗಳಿಗೆ ಉರಿ ತರಿಸುತ್ತವೆ. ಆಮ್ಲೀಯತೆಗೆ ಪ್ರಮುಖ ಕಾರಣವೆಂದರೆ ಅನಾರೋಗ್ಯಕರ ಆಹಾರಕ್ರಮ, ಕೆಲವು ಜೀರ್ಣಕ್ರಿಯೆಯ ತೊಂದರೆಗಳು, ಸ್ಥೂಲಕಾಯ, ಕೆಲವು ಔಷಧಿಗಳ ಅಡ್ಡಪರಿಣಾಮಗಳು ಇತ್ಯಾದಿ. ಆಮ್ಲೀಯತೆಯ ಪರಿಣಾಮವಾಗಿ ಹೊಟ್ಟೆಯಲ್ಲಿ ಉರಿ, ಹೊಟ್ಟೆಯ ಕೆಳಭಾಗದಲ್ಲಿ ನೋವು, ಎದೆಯ ಭಾಗದಲ್ಲಿ ಉರಿಯುವುದು, ವಾಕರಿಕೆ, ವಾಂತಿ, ಬಿಕ್ಕಳಿಕೆ, ಹುಳಿತೇಗು, ಬಾಯಿಯ ರುಚಿ ಕಹಿಯಾಗುವುದು ಮೊದಲಾದವು ಕಂಡುಬರುತ್ತವೆ. ಈ ತೊಂದರೆಗೆ ನೈಸರ್ಗಿಕವಾದ ಶಮನ ನೀಡಲು ಆಯುರ್ವೇದದ ಪರಿಹಾರ ಹೀಗಿದೆ....

ಅಗತ್ಯವಾದ ಸಾಮಾಗ್ರಿಗಳು

ಅಗತ್ಯವಾದ ಸಾಮಾಗ್ರಿಗಳು

ಮಜ್ಜಿಗೆ: ಒಂದು ಲೋಟ

ಅಗತ್ಯವಾದ ಸಾಮಾಗ್ರಿಗಳು

ಅಗತ್ಯವಾದ ಸಾಮಾಗ್ರಿಗಳು

ಹಸಿಶುಂಠಿ: ಒಂದು ಚಿಕ್ಕ ಚಮಚದಷ್ಟು, ಚಿಕ್ಕದಾಗಿ ಹೆಚ್ಚಿದ್ದು.

ಮಜ್ಜಿಗೆಯ ಗುಣ

ಮಜ್ಜಿಗೆಯ ಗುಣ

ಮಜ್ಜಿಗೆಯಲ್ಲಿ ಮೊಸರು ಮುಖ್ಯವಾಗಿರುವ ಕಾರಣ ಮೊಸರಿನ ಗುಣಗಳೆಲ್ಲವೂ ಇದೆ. ಇದರಲ್ಲಿರುವ ಪ್ರೋಬಯೋಟಿಕ್ಸ್ ಅಥವಾ ಜೀರ್ಣಕ್ರಿಯೆಗೆ ಸಹಕರಿಸುವ ಪೋಷಕಾಂಶಗಳು ಜೀರ್ಣಾಂಗಗಳ ಹೊರೆಯನ್ನು ಕಡಿಮೆ ಮಾಡುತ್ತವೆ

ಹಸಿಶುಂಠಿಯ ಪ್ರಯೋಜನಗಳು

ಹಸಿಶುಂಠಿಯ ಪ್ರಯೋಜನಗಳು

ಹಸಿಶುಂಠಿ ಸಹಾ ಆಯುರ್ವೇದ ಗುಣಗಳನ್ನೆಲ್ಲಾ ಮೈಗೂಡಿಸಿಕೊಂಡಿದ್ದು ವಿಶೇಷವಾಗಿ ಎದೆಯುರಿ, ಅಜೀರ್ಣ, ಆಮ್ಲೀಯತೆ ಅಥವಾ ಆಸಿಡಿಟಿ ಮೊದಲಾದ ಕಾರಣಗಳಿಂದ ಹೊಟ್ಟೆಯಲ್ಲಿ ನೋವು ಕಂಡುಬಂದರೆ ಹಸಿಶುಂಠಿಯ ಸೇವನೆಯಿಂದ ಶೀಘ್ರ ಪರಿಹಾರ ಕಂಡುಬರುತ್ತದೆ.

ತಯಾರಿಕಾ ವಿಧಾನ:

ತಯಾರಿಕಾ ವಿಧಾನ:

*ಮಜ್ಜಿಗೆಯಲ್ಲಿ ಶುಂಠಿಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.

*ಪ್ರತಿದಿನ ಬೆಳಿಗ್ಗೆ ಉಪಹಾರದ ಬಳಿಕ ಈ ಮಿಶ್ರಣವನ್ನು ಕುಡಿಯಿರಿ. ಈ ವಿಧಾನವನ್ನು ಒಂದು ತಿಂಗಳ ಕಾಲ ಅನುಸರಿಸಿ.

*ಈ ಪೇಯದ ಸೇವನೆಯಿಂದ ಶೀತವಾಗುವ ಸಾಧ್ಯತೆ ಇರುವ ಕಾರಣ ರಾತ್ರಿ ಕುಡಿಯಬೇಡಿ.

English summary

Ayurvedic Home Remedy That Can Reduce Acidity In A Day!

Acidity is a digestive ailment which is commonly seen in many people; however, when they experience acidity or heartburn on a regular basis, it can become a problem! So, follow this exceptional home remedy to help reduce your acidity, naturally!
X
Desktop Bottom Promotion