For Quick Alerts
ALLOW NOTIFICATIONS  
For Daily Alerts

ಮನಸ್ಸಿನ ಒತ್ತಡ ನಿಯಂತ್ರಣಕ್ಕೆ-ಜಪಾನೀಯರ ಸಿಂಪಲ್ ಟ್ರಿಕ್ಸ್!

By Arshad
|

ಒತ್ತಡವಿಲ್ಲದ ಉದ್ಯೋಗವಿಲ್ಲ ಎಂಬುದೊಂದು ಹೊಸ ಗಾದೆ. ಈ ಜಗತ್ತಿನಲ್ಲಿರುವ ಪ್ರತಿಯೊಬ್ಬರಿಗೂ ಕೆಲವಾರು ಒತ್ತಡಗಳು ಇದ್ದೇ ಇರುತ್ತವೆ. ಆದರೆ ಉದ್ಯೋಗದಲ್ಲಿರುವವರು ಮೇಲಧಿಕಾರಿಗಳ ಒತ್ತಡವನ್ನು ಇತರರಿಗಿಂತ ಹೆಚ್ಚೇ ಎದುರಿಸಬೇಕಾಗುತ್ತದೆ.

ಒಂದು ವೇಳೆ ನಿಮಗೂ ಇಂತಹ ಒತ್ತಡವೇನಾದರೂ ಇದ್ದು ದಿನ ಕಳೆಯುವುದೇ ದುಸ್ತರವಾಗಿದ್ದರೆ, ಅಲ್ಲದೇ ಈ ಒತ್ತಡ ನಿಮ್ಮ ಆರೋಗ್ಯವನ್ನೇ ಬಾಧಿಸಿ ಮಾನಸಿಕವಾಗಿಯೂ ದೈಹಿಕವಾಗಿಯೂ ಜರ್ಝರಿತವಾಗಿಸುತ್ತಿದ್ದರೆ ಜೀವನವೇ ಬೇಸರ ಎನಿಸಬಹುದು. ಒತ್ತಡವನ್ನು ಚಿಟಿಕೆ ಹೊಡೆದಷ್ಟು ಸುಲಭವಾಗಿ ನಿಯಂತ್ರಿಸಿ!

Stress

ಮಾನಸಿಕ ಒತ್ತಡ ಹಲವು ದೈಹಿಕ ಕಾಯಿಲೆಗಳಿಗೂ ಕಾರಣವಾಗಿದೆ. ಕೆಲವು ಮಾರಕ ಕ್ಯಾನ್ಸರ್ ಗಳ ಹುಟ್ಟಿಗೂ ಈ ಒತ್ತಡವೇ ಮೂಲ ಕಾರಣವಾಗಬಹುದು. ಈ ಒತ್ತಡವನ್ನು ಎದುರಿಸದ ಹೊರತು ಬೇರೆ ಮಾರ್ಗವಿಲ್ಲ. ಆದರೆ ಒತ್ತಡವನ್ನು ಎದುರಿಸಿ ನಿಭಾಯಿಸುವುದರಲ್ಲಿಯೇ ನಿಮ್ಮ ಚಾಕಚಕ್ಯತೆ ಅಡಗಿದೆ.

ಈ ಚಾಕಚಕ್ಯತೆಯನ್ನು ಜಪಾನೀಯರು ನೂರಾರು ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿದ್ದಾರೆ. ಈ ವಿಧಾನದಿಂದ ಎಂತಹ ಒತ್ತಡವಿದ್ದರೂ ಇದನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯ. ಈ ವಿಧಾನದ ಪರಿಣಾಮವನ್ನು ಕಂಡುಕೊಂಡ ತಜ್ಞರು ಮಾನಸಿಕ ಒತ್ತಡದಿಂದ ಬಳಲಿ ಕಾರ್ಯಕ್ಷಮತೆಯನ್ನೇ ಉಡುಗಿಸಿಕೊಂಡ ವ್ಯಕ್ತಿಗಳು ಅನುಸರಿಸುವಂತೆ ಮಾಡಿ ನಿಜಕ್ಕೂ ಇದು ಪರಿಣಾಮಕಾರಿ ಎಂದು ಕಂಡುಕೊಂಡಿದ್ದಾರೆ. ಯೋಗ ಟಿಪ್ಸ್: ಒತ್ತಡವನ್ನು ಹದ್ದು ಬಸ್ತಿನಲ್ಲಿಡುವ 'ನೌಕಾಸನ'

Stress

ಈ ವಿಧಾನದಲ್ಲಿ ವ್ಯಕ್ತಿ ತನ್ನ ಹಸ್ತದ ಕೆಲವು ನಿರ್ದಿಷ್ಟ ಭಾಗಗಳಲ್ಲಿ ಕೊಂಚ ಒತ್ತಡ ನೀಡುವ ಮೂಲಕ ಒತ್ತಡವನ್ನು ಕಡಿಮೆಗೊಳಿಸಬಹುದು. ಆಧುನಿಕ ವಿಜ್ಞಾನದ ಹುಚ್ಚುಹೊಳೆಯಲ್ಲಿ ಪುರಾತನ ವಿಧಾನಗಳು ಕೊಚ್ಚಿ ಹೋಗುತ್ತಿರುವ ಈ ಸಮಯದಲ್ಲಿಯೂ ವಿಶ್ವದ ಕೆಲವು ದೇಶಗಳಲ್ಲಿ ಪುರಾತನ ವಿಧಾನಗಳನ್ನು ಇಂದಿಗೂ ಜೀವಂತವಿರಿಸಲಾಗಿದೆ. ಜಪಾನೀಯರ ಶಿಸ್ತು, ಪ್ರಾಮಾಣಿಕತೆಗೆ ತಲೆಬಾಗಲೇಬೇಕು!

ಭಾರತದಲ್ಲಿ ಯೋಗಾಭ್ಯಾಸ, ಚೀನಾದಲ್ಲಿ ಕುಂಗ್ ಫೂ ಇದ್ದಂತೆ ಜಾಪಾನ್ ನಲ್ಲಿ ಈ ವಿಧಾನವನ್ನು ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿದ್ದು ಮಾನಸಿಕ ಒತ್ತಡವನ್ನು ಕೆಲವೇ ನಿಮಿಷಗಳಲ್ಲಿ ಕಡಿಮೆಗೊಳಿಸಲು ನೆರವಾಗುತ್ತದೆ. ಒತ್ತಡ ನಿವಾರಣೆಗೆ ಕೆಲವು ಗುಳಿಗೆಗಳು ಇವೆಯಾದರೂ, ಇವು ಅಡ್ಡಪರಿಣಾಮದಿಂದ ಹೊರತಾಗಿಲ್ಲ.

Stress

ಆದರೆ ಜಪಾನ್ ಈ ವಿಧಾನದಲ್ಲಿ ಕೆಲವು ನಿರ್ದಿಷ್ಟ ಭಾಗಗಳಿಗೆ ಒತ್ತಡ ನೀಡುವ ಮೂಲಕ ಮೆದುಳಿಗೆ ಕೆಲವು ಹಾರ್ಮೋನುಗಳು ಧಾವಿಸುವಂತೆ ಮಾಡಿ ಒತ್ತಡವನ್ನು ನೈಸರ್ಗಿಕವಾಗಿ ಕಡಿಮೆಗೊಳಿಸಲಾಗುತ್ತದೆ. ಅಲ್ಲದೇ ಈ ವಿಧಾನದಿಂದ ಮೆದುಳಿಗೆ ಹರಿಯುವ ರಕ್ತದ ಪ್ರಮಾಣ ಹೆಚ್ಚುವ ಮೂಲಕ ಒತ್ತಡ ಕಡಿಮೆಯಾಗುವ ಜೊತೆಗೇ ಮೆದುಳಿನ ಕ್ಷಮತೆಯೂ ಹೆಚ್ಚುತ್ತದೆ. ಈ ವಿಧಾನವನ್ನು ಹಂತಹಂತವಾಗಿ ಕೆಳಗೆ ವಿವರಿಸಲಾಗಿದೆ: ಕೆಲಸದ ಒತ್ತಡ ಗರ್ಭಧಾರಣೆ ಮೇಲೆ ಪರಿಣಾಮಬೀರುವುದೇ?* ಕುರ್ಚಿಯ ಮೇಲೆ ಕುಳಿತುಕೊಂಡು ಬೆನ್ನು ನೆಟ್ಟಗಾಗಿಸಿ ಕೆಲವು ಆಳವಾದ ಉಸಿರುಗಳನ್ನೆಳೆದುಕೊಳ್ಳಿ.

* ಈಗ ಬಲಗೈಯ ಹೆಬ್ಬೆರಳು ಮತ್ತು ತೋರುಬೆರಳುಗಳಿಂದ ಎಡಗೈಯ ಕಿರುಬೆರಳಿನ ತುದಿಯನ್ನು ಕೊಂಚವೇ ಒತ್ತಡದಲ್ಲಿ ಒತ್ತಿ

* ಕೊಂಚ ಹೊತ್ತಿನ ಬಳಿಕ ಎಡಗೈಯ ಹೆಬ್ಬೆರಳು ಮತ್ತು ತೋರುಬೆರಳುಗಳಿಂದ ಬಲಗೈಯ ಕಿರುಬೆರಳಿನ ತುದಿಯನ್ನು ಕೊಂಚವೇ ಒತ್ತಡದಲ್ಲಿ ಒತ್ತಿ

Stress

* ಪ್ರತಿ ಬೆರಳಿಗೆ ಸುಮಾರು ಐದು ನಿಮಿಷಗಳಂತೆ ಈ ವಿಧಾನವನ್ನು ಎಲ್ಲಾ ಬೆರಳುಗಳಿಗೆ ಅನುಸರಿಸಿ.

* ಈ ಕ್ರಿಯೆಯನ್ನು ದಿನಕ್ಕೆ ಎರಡು ಬಾರಿ, ಅಂದರೆ ಬೆಳಿಗ್ಗೆ ಎದ್ದ ಬಳಿಕ ಮತ್ತು ರಾತ್ರಿ ಮಲಗುವ ಮುನ್ನ ಸುಮಾರು ಮೂರು ತಿಂಗಳ ಕಾಲ ಅನುಸರಿಸಿ.

English summary

Ancient Japanese Remedy To Reduce Stress In Minutes!

Do you feel like your life has been extremely stressful lately? Is your extreme stress coming in the way of your daily activities? If yes, then you must be going through an extremely difficult time, as stress can defiantly make a person feel rather sick, both physically and mentally. Stress can be one of the root causes for many ailments. It is also said that even some of the most deadly disorders like cancer can be triggered by stress.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more