ಮಾರುಕಟ್ಟೆಯ ತುಪ್ಪದ ಕರಾಳಮುಖ!! ಈ ಸತ್ಯಸಂಗತಿಗಳು ಬೆಚ್ಚಿಬೀಳಿಸುತ್ತವೆ

By: manu
Subscribe to Boldsky

ಸುಲಭವಾಗಿ ಕಲಬೆರಕೆ ಮಾಡಿ ಲಾಭ ಗಳಿಸುವ ಒಂದು ಉತ್ತಮ ಸಾಧನವೆಂದರೆ ತುಪ್ಪ. ಏಕೆಂದರೆ ಇದರಲ್ಲಿ ಡಾಲ್ಡಾ ವನಸ್ಪತಿಯನ್ನು ಬೆರೆಸಿದರೆ ಇದನ್ನು ಕಂಡುಕೊಳ್ಳಲು ಅತ್ಯಂತ ಅನುಭವಿಗಳಿಗೇ ಸಾಧ್ಯವೇ ಹೊರತು ಸಾಮಾನ್ಯರಿಗೆ ಕೊಂಚ ಕಷ್ಟ. ಅದೂ ಅಲ್ಲದೇ ಇಂದು ಹೆಚ್ಚಿನ ತುಪ್ಪಗಳು ಪ್ಯಾಕ್ ಮಾಡಿದ ರೂಪದಲ್ಲಿ ದೊರಕುವ ಕಾರಣ ಇದನ್ನು ಪರೀಕ್ಷಿಸಲು ಸಾಧ್ಯವೂ ಇಲ್ಲ. ಆದ್ದರಿಂದ ತುಪ್ಪವನ್ನು ಮನೆಯಲ್ಲಿಯೇ ಮಾಡಿಕೊಂಡಷ್ಟೂ ಉತ್ತಮ ಮತ್ತು ಅರೋಗ್ಯಕರ. ದೇಸೀ ಹಸುವಿನ ತುಪ್ಪ, ಆರೋಗ್ಯದ ಪಾಲಿನ ಸಂಜೀವಿನಿ 

ವಿಶೇಷವಾಗಿ ರಸ್ತೆಬದಿಯ ತಿನಿಸು ಅಥವಾ ಅಗ್ಗದ ಹೋಟೆಲುಗಳಲ್ಲಿ ತುಪ್ಪ ಎಂದು ಬಡಿಸುವುದನ್ನು ಒಮ್ಮೆಯೇ ತಿನ್ನಲು ಹೋಗಬೇಡಿ. ಏಕೆಂದರೆ ಲಾಭವೇ ಮುಖ್ಯವಾಗಿರುವ ಈ ಸಂಸ್ಥೆಗಳಿಗೆ ತುಪ್ಪದ ಹೆಸರಿನಲ್ಲಿ ಡಾಲ್ಡಾ ಬೆರೆತ ತುಪ್ಪ ಬಡಿಸುವುದೇನೂ ದೊಡ್ಡ ಕಾರ್ಯವಲ್ಲ. ದೇಹದ ತೂಕ ಇಳಿಸಲು ದಿನಕ್ಕೆರಡು ಚಮಚ ತುಪ್ಪ ಸಾಕು!

ತುಪ್ಪದಲ್ಲಿ ಬೆರೆಸಲು ಡಾಲ್ಡಾ ಕೂಡಾ ಕೊಂಚ ದುಬಾರಿಯೇ, ಇನ್ನೂ ಹೆಚ್ಚಿನ ಲಾಭ ಪಡೆಯಲು ದುರುಳರು ಏನೆಲ್ಲಾ ಬೆರೆಸಿತ್ತಾರೆ ಗೊತ್ತೇ? ಉಸಿರಿ ಬಿಗಿ ಹಿಡಿಯಿರಿ, ಪ್ರಾಣಿಗಳ ಮೂಳೆಗಳ ಪುಡಿ, ಪ್ರಾಣಿಗಳ ಚರ್ಬಿ, ಪಾಮ್ ಎಣ್ಣೆ ಮತ್ತು ಇನ್ನೂ ಕೆಲವು ಅಪಾಯಕಾರಿ ರಾಸಾಯನಿಕಗಳನ್ನು ಬೆರೆಸುತ್ತಾರೆ. ಆಘಾತವಾಯಿತೇ? ತಾಳಿ, ಇನ್ನೂ ಕೆಲವು ಆಘಾತಕಾರಿ ಅಂಶಗಳು ಮುಂದಿವೆ.... 

ಹೃದಯಾಘಾತವೂ ಸಂಭವಿಸಬಹುದು!!

ಹೃದಯಾಘಾತವೂ ಸಂಭವಿಸಬಹುದು!!

ಅಷ್ಟಕ್ಕೂ ಕಲಬೆರಕೆ ತುಪ್ಪ ತಿಂದರೇನಾಗುತ್ತದೆ? ಅಪ್ಪಟ ತುಪ್ಪದಲ್ಲಿ ರಕ್ತನಾಳಗಳ ಒಳಗೆ ಅಂಟಿಕೊಳ್ಳುವ ಜಿಡ್ಡು ಇರುವುದಿಲ್ಲ. ಆದರೆ ಕಲಬೆರಕೆಗೆ ಉಪಯೋಗಿಸುವ ಎಲ್ಲಾ ವಸ್ತುಗಳು ಅಪ್ಪಟ ಅಂಟಿಕೊಳ್ಳುವ ಜಿಡ್ಡುಗಳು. ಪ್ರಾಣಿಗಳ ಚರ್ಬಿಯಂತೂ ಅಂಟಿಕೊಂಡರೇ ಪ್ರಾಣಹೋದರೂ ಹೋಗದಷ್ಟು ಕೆಟ್ಟ ಜಿಡ್ಡು. ಈ ಜಿಡ್ದುಗಳು ನಿಧಾನವಾಗಿ ನಮ್ಮ ರಕ್ತನಾಳಗಳ ಒಳಗೆ ಅಂಟಿಕೊಂಡು ಒಳವ್ಯಾಸವನ್ನು ಕಿರಿದುಗೊಳಿಸಿ ಹೃದಯಕ್ಕೆ ರಕ್ತ ದೂಡುವ ಕೆಲಸವನ್ನು ಅತಿ ಕಷ್ಟಕರವಾಗಿಸುತ್ತದೆ. ಅಂತಿಮವಾಗಿ ಹೃದಯಾಘಾತವೂ ಸಂಭವಿಸಬಹುದು.

ಗ್ಯಾಂಗ್ರೀನ್ ಆಗುವ ಸಂಭವ

ಗ್ಯಾಂಗ್ರೀನ್ ಆಗುವ ಸಂಭವ

ಮೂಳೆಗಳ ಪುಡಿಯಿಂದೇನಾಗುತ್ತದೆ? ಸಾಮಾನ್ಯವಾಗಿ ಮೂಳೆಗಳನ್ನು ಯಾವುದೋ ರಾಸಾಯನಿಕದಲ್ಲಿ ಹಾಕಿ ಕುದಿಸಿದರೆ ಇದು ಸಕ್ಕರೆ ಕರಗಿದಂತೆ ಕರಗುತ್ತದೆ. ಅಂದರೆ ಇದರಲ್ಲಿರುವ ಕ್ಯಾಲ್ಸಿಯಂ ಲವಣಗಳು ಬಿಡಿಬಿಡಿಯಾಗಿ ಪುಡಿಯ ರೂಪ ಪಡೆಯುತ್ತವೆ. ಈ ಪುಡಿಯ ಸೇವನೆ ವಿಷಕಾರಿಯಾಗಿದ್ದು ಇದು ಹೃದಯಾಘಾತಕ್ಕೆ ನೇರವಾಗಿ ಕಾರಣವಾಗುತ್ತದೆ. ಅಲ್ಲದೇ ಗ್ಯಾಂಗ್ರೀನ್ ಆಗುವ ಸಂಭವ ಹೆಚ್ಚುತ್ತದೆ. ಜೀರ್ಣಕ್ರಿಯೆ ಬಾಧೆಗೊಳಗಾಗುತ್ತದೆ, ಮೂತ್ರಪಿಂಡಗಳು ಮತ್ತು ಯಕೃತ್ ಈ ಪುಡಿಯನ್ನು ಸೋಸಲು ಅಸಮರ್ಥಗೊಂಡು ವಿಫಲವಾಗುವ ಸಾಧ್ಯತೆ ಇದೆ.

ಮೆದುಳಿಗೆ ಹಾನಿ!

ಮೆದುಳಿಗೆ ಹಾನಿ!

ಈ ತುಪ್ಪದಲ್ಲಿ ಬೆರೆತಿರುವ ಕೆಲವು ರಾಸಾಯನಿಕಗಳು ರಕ್ತದಲ್ಲಿ ಸೀಸದ ಪ್ರಮಾಣವನ್ನು ಹೆಚ್ಚಿಸಿ ಮೆದುಳಿನ ಕ್ಷಮತೆಯನ್ನೇ ಉಡುಗಿಸಬಹುದು.

ಕ್ಯಾನ್ಸರ್‌ ಬರಬಹುದು!

ಕ್ಯಾನ್ಸರ್‌ ಬರಬಹುದು!

ಒಂದು ವೇಳೆ ಈ ರಾಸಾಯನಿಕಗಳಲ್ಲಿ ಕಾಡ್ಮಿಯಂ ಅಂಶವಿದ್ದರೆ ಇದು ಕೆಲವಾರು ಕ್ಯಾನ್ಸರ್‌ಗಳಿಗೆ ಹಾರ್ದಿಕ ಆಹ್ವಾನ ನೀಡುತ್ತದೆ. ಒಂದು ವೇಳೆ ಅರಿವಿಲ್ಲದೇ ಸತತವಾಗಿ ಸೇವಿಸುತ್ತಾ ಬಂದರೆ ಕ್ರಮೇಣ ಇಡಿಯ ಮೂತ್ರಪಿಂಡ ಮತ್ತು ಮೂತ್ರವ್ಯವಸ್ಥೆಯನ್ನೇ ಹಾಳುಗೆಡವುತ್ತದೆ.

ಯಕೃತ್ ಮತ್ತು ಹೃದಯಗಳ ಕ್ಷಮತೆ ಉಡುಗುತ್ತದೆ...

ಯಕೃತ್ ಮತ್ತು ಹೃದಯಗಳ ಕ್ಷಮತೆ ಉಡುಗುತ್ತದೆ...

ಒಂದು ವೇಳೆ ಇದರಲ್ಲಿ ಕ್ರೋಮಿಯಂ ಅಂಶವಿದ್ದರೆ ಯಕೃತ್ ಮತ್ತು ಹೃದಯಗಳ ಕ್ಷಮತೆ ಉಡುಗುತ್ತದೆ.

ಗರ್ಭಾಪಾತಕ್ಕೂ ಕಾರಣವಾಗಬಹುದು....

ಗರ್ಭಾಪಾತಕ್ಕೂ ಕಾರಣವಾಗಬಹುದು....

ಒಂದು ವೇಳೆ ಇದರಲ್ಲಿ ಸತುವಿನ ಅಂಶವಿದ್ದರೆ ಇದು ಮಹಿಳೆಯರಲ್ಲಿ ಗರ್ಭಕಟ್ಟುವ ಸಾಧ್ಯತೆಯನ್ನು ಕಡಿಮೆಯಾಗಿಸುತ್ತದೆ ಅಥವಾ ಗರ್ಭಾಪಾತಕ್ಕೂ ಕಾರಣವಾಗಬಹುದು.

ಬೊಜ್ಜು ಬರಬಹುದು...

ಬೊಜ್ಜು ಬರಬಹುದು...

ಕಡೆಯದಾಗಿ, ಇದರಲ್ಲಿ ಪಾಮ್ ಎಣ್ಣೆ, ಡಾಲ್ಡಾ ಮೊದಲಾದವು ಇದ್ದರೆ ಇವು ಸ್ಥೂಲಕಾಯಕ್ಕೆ ನೇರವಾಗಿ ನೆರವು ನೀಡ್ತುತವೆ ಹಾಗೂ ಹೃದಯದ ಕ್ಷಮತೆಯನ್ನು ಉಡುಗಿಸುತ್ತವೆ.

ಮನೆಯಲ್ಲಿಯೇ ತಯಾರಿಸಿ ಅಥವಾ ನಂಬಿಗಸ್ತರಿಂದಲೇ ಕೊಳ್ಳಿ

ಮನೆಯಲ್ಲಿಯೇ ತಯಾರಿಸಿ ಅಥವಾ ನಂಬಿಗಸ್ತರಿಂದಲೇ ಕೊಳ್ಳಿ

ಆದ್ದರಿಂದ ತುಪ್ಪವನ್ನು ಮನೆಯಲ್ಲಿಯೇ ತಯಾರಿಸಿ ಅಥವಾ ನಂಬಿಗಸ್ತರಿಂದಲೇ ಕೊಳ್ಳಿ. ಶುದ್ಧ ತುಪ್ಪ ಹೌದೇ ಎಂಬುದನ್ನು ಪರೀಕ್ಷಿಸಲು ಈ ವಿಧಾನಗಳನ್ನು ಅನುಸರಿಸಬಹುದು:

ಮನೆಯಲ್ಲಿಯೇ ತಯಾರಿಸಿ ಅಥವಾ ನಂಬಿಗಸ್ತರಿಂದಲೇ ಕೊಳ್ಳಿ

ಮನೆಯಲ್ಲಿಯೇ ತಯಾರಿಸಿ ಅಥವಾ ನಂಬಿಗಸ್ತರಿಂದಲೇ ಕೊಳ್ಳಿ

* ಎರಡೂ ಹಸ್ತಗಳನ್ನು ಕೊಂಚ ಉಜ್ಜಿಕೊಂಡು ಕೊಂಚವೇ ಬಿಸಿಯಾಗಿಸಿ. ಹೆಚ್ಚು ಬಿಸಿಯಾಗಬಾರದು. ಈ ಹಸ್ತದ ಮೇಲೆ ಗಟ್ಟಿ ಇರುವ ತುಪ್ಪದ ಚಿಕ್ಕ ಮುದ್ದೆಯನ್ನಿರಿಸಿ ಇದು ತಕ್ಷಣವೇ ಕರಗಲು ಪ್ರಾರಂಭಿಸಿ ಸುಮಾರು ಅರ್ಧ ನಿಮಿಷದಿಂದ ಒಂದು ನಿಮಿಷದ ಒಳಗೆ ಪೂರ್ಣವಾಗಿ ಕರಗಬೇಕು. ಕರಗಲು ಹೆಚ್ಚು ಸಮಯ ತೆಗೆದುಕೊಂಡರೆ ಕಲಬೆರಕೆ ಎಂದರ್ಥ.

*ಕೆಲ ಹನಿ ತುಪ್ಪವನ್ನು ಅಂಗೈ ಹಿಂಭಾಗದಲ್ಲಿ ಉಜ್ಜಿಕೊಂಡು ಇದರ ಪರಿಮಳವನ್ನು ನೋಡಿಕೊಳ್ಳಿ. ಶುದ್ದ ತುಪ್ಪವಾದರೆ ಗಮ್ಮೆನ್ನುವ ಪರಿಮಳ ಬರುತ್ತದೆ. ಬರದೇ ಇದ್ದರೆ ಕಲಬೆರಕೆ ಎಂದರ್ಥ.

ಮನೆಯಲ್ಲಿಯೇ ತಯಾರಿಸಿ ಅಥವಾ ನಂಬಿಗಸ್ತರಿಂದಲೇ ಕೊಳ್ಳಿ

ಮನೆಯಲ್ಲಿಯೇ ತಯಾರಿಸಿ ಅಥವಾ ನಂಬಿಗಸ್ತರಿಂದಲೇ ಕೊಳ್ಳಿ

* ಒಂದು ಚಮಚವನ್ನು ಉರಿ ಅಥವಾ ಮೇಣದ ಬತ್ತಿಯ ಜ್ವಾಲೆಯ ಮೇಲಿರಿಸಿ ಬಿಸಿಯಾದ ತಕ್ಷಣ ಚಿಕ್ಕ ಮುದ್ದೆ ತುಪ್ಪವನ್ನು ಹಾಕಿ. ಕೆಲವೇ ಸೆಕೆಂಡುಗಳಲ್ಲಿ ಇದು ಕರಗಿ ಕಂದುಬಣ್ಣಕ್ಕೆ ತಿರುಗಬೇಕು. ಹಾಗಾಗದೇ ಕರಗಲು ಹೆಚ್ಚು ಸಮಯ ತೆಗೆದುಕೊಂಡು ಹಳದಿ ಬಣ್ಣದಲ್ಲಿಯೇ ಇದ್ದರೆ ಅಥವಾ ಪಾರದರ್ಶಕವಾದರೆ ಇದು ಕಲಬೆರಕೆ ಎಂದರ್ಥ.

ಮನೆಯಲ್ಲಿಯೇ ತಯಾರಿಸಿ ಅಥವಾ ನಂಬಿಗಸ್ತರಿಂದಲೇ ಕೊಳ್ಳಿ

ಮನೆಯಲ್ಲಿಯೇ ತಯಾರಿಸಿ ಅಥವಾ ನಂಬಿಗಸ್ತರಿಂದಲೇ ಕೊಳ್ಳಿ

* ಒಂದು ಚಮಚದಷ್ಟು ತುಪ್ಪವನ್ನು ಕಾಯಿಸಿ ಕರಗಿದ ತಕ್ಷಣ ಉರಿ ಆರಿಸಿ ಕೊಂಚವೇ ತಣಿಯಲು ಬಿಡಿ. ಕೆಲ ನಿಮಿಷಗಳ ಬಳಿಕ ಇದು ಒಂದು ಕಡೆಯಿಂದ ಹರಳುಗಟ್ಟಲು ಪ್ರಾರಂಭಿಸಬೇಕು. ಆಗ ಬಗ್ಗಿಸಿ ದ್ರವಭಾಗವನ್ನು ಇನ್ನೊಂದು ಪಾತ್ರೆಯಲ್ಲಿ ಹಾಕಿ. ಈಗ ಹರಳುಗಟ್ಟಿದ್ದ ತುಪ್ಪವನ್ನು ಬೆರಳುಗಳಿಂದ ನಯವಾಗಿ ಹಿಚುಕಿ. ಡಾಲ್ಡಾ ಇದ್ದರೆ ಇದು ಅಂಟಂಟಾಗಿಯೂ, ಮೂಳೆಚೂರುಗಳಿದ್ದರೆ ಮರಳಿನಂತೆಯೂ ಇರುತ್ತದೆ.ಮಕ್ಕಳ ಊಟದ ತಟ್ಟೆಗೆ, ಒಂದೆರಡು ಚಮಚ ತುಪ್ಪ ಸೇರಿಸಿ

 
English summary

After Reading This, You Won't Buy Ghee- Unreliable Places!

If you have the time, prepare your own ghee (clarified butter) at home. Or if you know about reliable brands that sell pure ghee, buy their products from the store. But be careful while eating roadside food fried in oils or ghee sold by random sellers. Ghee is a derivative of milk. But adulterated ghee isn't a product of milk. You will be shocked to know this.
Subscribe Newsletter