For Quick Alerts
ALLOW NOTIFICATIONS  
For Daily Alerts

ಸ್ತನ ಕ್ಯಾನ್ಸರ್: ನಂಬಲೇ ಬಾರದ ಇಂತಹ ತಪ್ಪು ಕಲ್ಪನೆಗಳು

By Anuradha Yogesh
|

ನಮಗೆಲ್ಲ ತಿಳಿದಿರುವ ಪ್ರಕಾರ ಪ್ರತಿಯೊಬ್ಬ ಮನುಷ್ಯನಿಗೆ ಒಂದಲ್ಲ ಒಂದು ಆರೋಗ್ಯ ಸಮಸ್ಯೆ ತಪ್ಪಿದ್ದಲ್ಲ. ಹಿರಿಯರಾಗಲಿ ಅಥವಾ ಕಿರಿಯರಾಗಲಿ ಇದಕ್ಕೆ ಹೊರತಾಗಿಲ್ಲ. ರೋಗಗಳನ್ನು ನಾವು ಸ್ವಾಗತಿಸುವ ಅಗತ್ಯವಿಲ್ಲ, ತಾವಾಗಿಯೇ ನಮ್ಮ ದೇಹವನ್ನು ಸೇರಿಕೊಳ್ಳುತ್ತವೆ. ಮೆದುಳಿನಿಂದ, ಪಾದಗಳವರೆಗೆ ದೇಹದ ಯಾವದೇ ಭಾಗವಾಗಿರಲಿ ರೋಗ ಸೇರಿಕೊಳ್ಳಬಹುದು. ಈಗಿನ ಆಹಾರ ಮತ್ತು ಜೀವನ ಶೈಲಿಗಳು ಅನೇಕ ರೋಗಗಳಿಗೆ ಆಹ್ವಾನ ನೀಡುವದರಲ್ಲಿ ಸಂಶಯವಿಲ್ಲ.

ರೋಗಗಳ ಬಗ್ಗೆ ಒಂದು ಆಂಗ್ಲ ಹೇಳಿಕೆ ಹೀಗಿದೆ, 'ಐ ಕುಡ್ ನಾಟ್ ಸ್ಟಾಪ್ ಇಟ್, ಐ ಕುಡ್ ನಾಟ್ ಕ್ಯುರ್ ಇಟ್ ಆಂಡ್ ಐ ಡಿಡ್ ನಾಟ್ ಕಾಸ್ ಇಟ್ '. ಇದರಿಂದ ರೋಗಗಳ ಮೂಲ ಪತ್ತೆ ಹಚ್ಚುವದು, ಅವುಗಳನ್ನು ಗುಣ ಪಡಿಸುವದು ಎಷ್ಟು ಕಷ್ಟ ಎಂದು ತಿಳಿಯುತ್ತದೆ. ಏಡ್ಸ್ ನಂತಹ ಮಾರಕ ರೋಗದ ನಂತರದ ಸ್ಥಾನದಲ್ಲಿರುವದು 'ಕ್ಯಾನ್ಸರ್'. ಕ್ಯಾನ್ಸರ್ ಎಂದರೆ ಸಾಕು ಎಲ್ಲರ ಮನದಲ್ಲಿ ದಿಗಿಲು ಮೂಡುತ್ತದೆ. ಕೆಲವೊಮ್ಮೆ ದೇಹದಲ್ಲಿ ಜೀವಕೋಶಗಳು ಅನಿಯಂತ್ರಿತವಾಗಿ ವಿಭಜನೆಗೊಂಡು ಗಡ್ಡೆ ಕಟ್ಟುತ್ತವೆ. ಈ ಗಡ್ಡೆಯೇ ಕ್ಯಾನ್ಸರ್‌ನ ಗಡ್ಡೆಯಾಗಿ ಪರಿವರ್ತಿತಗೊಂಡು ಜೀವಕ್ಕೆ ಹಾನಿ ಉಂಟು ಮಾಡುತ್ತದೆ.

ದುಃಸ್ವಪ್ನವಾಗಿ ಕಾಡುವ ಸ್ತನ ಕ್ಯಾನ್ಸರ್‌ನ ಲಕ್ಷಣಗಳು

ನಾವು ಅನೇಕ ತರಹದ ಕ್ಯಾನ್ಸರ್ ಬಗ್ಗೆ ಕೇಳಿದ್ದೇವೆ. ಸ್ತನ ಕ್ಯಾನ್ಸರ್, ಕರುಳಿನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಇತ್ಯಾದಿ. ಕ್ಯಾನ್ಸರ್ ಗಡ್ಡೆ ಯಾವ ಅಂಗದಲ್ಲಿ ಕಾಣಿಸಿಕೊಳ್ಳುವದೋ, ಅದನ್ನು ಸಂಪೂರ್ಣ ನಾಶಗೊಳಿಸುತ್ತದೆ. ಪ್ರಾರಂಭಿಕ ಹಂತವಾಗಿದ್ದರೆ ಕ್ಯಾನ್ಸರ್‌ನ ಗುಣಪಡಿಸುವದು ಕಷ್ಟವಲ್ಲ. ಆದರೆ ಕೆಲವೊಮ್ಮೆ ಗಡ್ಡೆಗಳು ಅತಿ ಸೂಕ್ಷ್ಮವಾದ ಸ್ಥಳಗಳಲ್ಲಿ ಕಾಣಿಸಿಕೊಂಡರೆ, ಶಸ್ತ್ರಚಿಕಿತ್ಸೆ ಕೂಡ ಕಷ್ಟವಾಗಿ, ವ್ಯಕ್ತಿ ಪ್ರಾಣಕಳೆದುಕೊಳ್ಳಬಹುದು. ಸ್ತನಕ್ಯಾನ್ಸರ್, ಹೆಣ್ಣುಮಕ್ಕಳನ್ನು ಕಾಡುವ ಒಂದು ಮಾರಕರೋಗ. ಇದರೆ ಬಗ್ಗೆ ಹೆಣ್ಣು-ಮಕ್ಕಳಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ. ಈ ಕಲ್ಪನೆಗಳನ್ನೇ ನಂಬಿಕೊಂಡು ಅನೇಕ ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ. ಈ ತಪ್ಪು ಕಲ್ಪನೆಗಳೇನೆಂದು ತಿಳಿಯಬೇಕೆಂದರೆ ಇಲ್ಲಿ ಓದಿ ನೋಡಿ....

 ಕ್ಯಾನ್ಸರ್‌ಗಳಲ್ಲೇ ಅತ್ಯಂತ ಮಾರಕವಾದದ್ದು ಸ್ತನ ಕ್ಯಾನ್ಸರ್

ಕ್ಯಾನ್ಸರ್‌ಗಳಲ್ಲೇ ಅತ್ಯಂತ ಮಾರಕವಾದದ್ದು ಸ್ತನ ಕ್ಯಾನ್ಸರ್

ಅನೇಕ ಅಧ್ಯಯನಗಳು ಈ ಮಾತನ್ನು ಅಲ್ಲಗೆಳೆದಿವೆ. ಮಹಿಳೆಯರು ಸ್ತನ ಕ್ಯಾನ್ಸರ್ ಕಾಣಿಸಿಕೊಂಡರೆ ಎದೆಗುಂದಬೇಕಿಲ್ಲ. ಈಗಿನ ಮುಂದುವರಿದ ತಂತ್ರಜ್ಞಾನದಿಂದ ಸುಲಭವಾಗಿ ಗುಣಪಡಿಸಬಹುದು. ಸುಮಾರು ವರದಿಗಳ ಪ್ರಕಾರ 'ಶ್ವಾಸಕೋಶದ ಕ್ಯಾನ್ಸರ್' ಅತಿ ಹೆಚ್ಚು ಮಹಿಳೆಯರ ಬಲಿತೆಗೆದುಕೊಂಡಿದೆ.

ಸ್ತನಕ್ಕೆ ಬರುವ ಕ್ಯಾನ್ಸರ್ ಸಾಧ್ಯತೆಗಳನ್ನು ಕಡಿಮೆಮಾಡುವ ಉಪಯುಕ್ತ 7 ಸಲಹೆಗಳು

ಸ್ತನ ಕ್ಯಾನ್ಸರ್‌ನ ಸ್ವಯಂಪರೀಕ್ಷೆಯಿಂದ ಯಾವದೇ ಲಾಭಗಳಿಲ್ಲ

ಸ್ತನ ಕ್ಯಾನ್ಸರ್‌ನ ಸ್ವಯಂಪರೀಕ್ಷೆಯಿಂದ ಯಾವದೇ ಲಾಭಗಳಿಲ್ಲ

ಇದು ಬಹಳ ದೊಡ್ಡ ತಪ್ಪುಕಲ್ಪನೆ. ವೈದ್ಯರ ಸಲಹೆಯಂತೆ ಮಹಿಳೆಯರು ನಿಯಮಿತವಾಗಿ ಸ್ತನ ಪರೀಕ್ಷೆ ಮಾಡಿಕೊಂಡರೆ, ಸ್ತನದಲ್ಲಿರುವ ಗಡ್ಡೆಗಳ ಪತ್ತೆ ಮಾಡಬಹುದು. ಇದರಿಂದ ಪ್ರಾರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆಯಾಗಿ ಸಂಪೂರ್ಣ ಗುಣಮುಖರಾಗಬಹುದು.

’ಮ್ಯಾಮೊಗ್ರಾಮ್‌’ನಿಂದ ಕ್ಯಾನ್ಸರ್ ಬರುತ್ತದೆ

’ಮ್ಯಾಮೊಗ್ರಾಮ್‌’ನಿಂದ ಕ್ಯಾನ್ಸರ್ ಬರುತ್ತದೆ

'ಮ್ಯಾಮೊಗ್ರಾಮ್' ಎಂಬ ಆಧುನಿಕ ತಂತ್ರಜ್ಞಾನದಿಂದ ಸ್ತನದಲ್ಲಿರುವ ಗಡ್ಡೆಗಳ ಪತ್ತೆ ಮಾಡಬಹುದು. 40 ವಯಸ್ಸಿನ ನಂತರ ಮಹಿಳೆಯರು ಆರೋಗ್ಯತಪಾಸಣೆ ಸಮಯದಲ್ಲಿ ಮ್ಯಾಮೊಗ್ರಾಮ್ ಮಾಡಿಸಿಕೊಳ್ಳುವದರಲ್ಲಿ ಯಾವುದೇ ನಷ್ಟವಿಲ್ಲ.

ಕ್ಯಾನ್ಸರ್ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆಯುವದರಿಂದ ಕ್ಯಾನ್ಸರ್ ಬೇರೆ ಅಂಗಗಳಿಗೂ ಹರಡುತ್ತದೆ

ಕ್ಯಾನ್ಸರ್ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆಯುವದರಿಂದ ಕ್ಯಾನ್ಸರ್ ಬೇರೆ ಅಂಗಗಳಿಗೂ ಹರಡುತ್ತದೆ

ಈ ಹೇಳಿಕೆಗೆ ಯಾವುದೇ ತರಹದ ಸಾಕ್ಷ್ಯಾಧಾರಗಳಿಲ್ಲ. ನಿಜ ಹೆಳಬೇಕೆಂದರೆ, ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆಯುವದರಿಂದ ಬೇರೆ ಅಂಗಗಳಿಗೆ ಕ್ಯಾನ್ಸರ್ ಹರಡುವದನ್ನು ತಡೆಯಬಹುದು.

ಸ್ತನ ಕ್ಯಾನ್ಸರ್ ತಾಯಿಗೆ ಬಂದರೆ ಮಗಳಿಗೆ ಅಪಾಯ ತಪ್ಪಿದ್ದಲ್ಲ!

ಸ್ತನ ಕ್ಯಾನ್ಸರ್ ತಾಯಿಗೆ ಬಂದರೆ ಮಗಳಿಗೆ ಅಪಾಯ ತಪ್ಪಿದ್ದಲ್ಲ!

ಇದು ಶುದ್ಧ ಸುಳ್ಳು, ತಾಯಿಗೆ ಸ್ತನ ಕ್ಯಾನ್ಸರ್ ಬಂದರೆ ಮಗಳಿಗೆ ಬಂದೇ ಬರುತ್ತದೆ ಎಂದು ಹೇಳಲಾಗುವದಿಲ್ಲ. ಆದರೂ ಸುರಕ್ಷತೆಗಾಗಿ ಮಗಳು ಮ್ಯಾಮೊಗ್ರಾಮ್ ಮಾಡಿಸಿಕೊಳ್ಳುತ್ತಿರಬೇಕು.

ಸ್ತನದಲ್ಲಿ ಗಡ್ಡೆ ಇರುವುದು ಮಾತ್ರ ಸ್ತನ ಕ್ಯಾನ್ಸರ್‌ನ ಲಕ್ಷಣ

ಸ್ತನದಲ್ಲಿ ಗಡ್ಡೆ ಇರುವುದು ಮಾತ್ರ ಸ್ತನ ಕ್ಯಾನ್ಸರ್‌ನ ಲಕ್ಷಣ

ಇದು ಅಸತ್ಯ. ಅನೇಕ ಮಹಿಳೆಯರು ಪ್ರತಿನಿತ್ಯ ಸ್ತನ ಪರೀಕ್ಷೆ ಮಾಡಿಕೊಂಡರೂ ಸ್ತನ ಕ್ಯಾನ್ಸರ್ ಪತ್ತೆ ಮಾಡಲಾಗಿಲ್ಲ. ಆದ್ದರಿಂದ ವೈದ್ಯರ ತಪಾಸಣೆಯೂ ಮುಖ್ಯವಾಗುತ್ತದೆ. ಮಹಿಳೆಯರು ಬೇರೆಯವರ ಮಾತು ಕೇಳದೆ ಸ್ವಂತ ಅಧ್ಯಯನ ಮಾಡಿ, ವೈದ್ಯರ ಸಲಹೆಯ ಮೇರೆಗೆ ಕಾಲಕಾಲಕ್ಕೆ ಸ್ತನ ಪರೀಕ್ಷೆ ಮಾಡಿಕೊಂಡರೆ ಈ ರೋಗವನ್ನು ತಡೆಯಬಹುದು.

English summary

7 Breast Cancer Myths That You Must Never Believe!

The above mentioned quote makes a lot of sense on so many levels, when it comes to the relationship between living organisms and diseases. Most of us already know that as humans, diseases and ailments are not new to us. Many of us would have been the victims of one or many ailments, right since a very young age, be it major or minor.
X
Desktop Bottom Promotion