For Quick Alerts
ALLOW NOTIFICATIONS  
For Daily Alerts

ಮೂತ್ರದಲ್ಲಿ ರಕ್ತ: ಅಪ್ಪಿ ತಪ್ಪಿಯೂ ನಿರ್ಲಕ್ಷ್ಯ ಮಾಡಬೇಡಿ

By Deepu
|

ಕಷ್ಟಗಳು ಮನುಷ್ಯನಿಗೆ ಬರದೆ ಮರಕ್ಕೆ ಬರುತ್ತದೆಯೇ? ಎಂದು ಹೇಳುವವರನ್ನು ನಾವು ಕೇಳಿರಬಹುದು. ಆದರೆ ಕಷ್ಟಗಳು ಬಂದರೆ ಪರವಾಗಿಲ್ಲ, ಆದರೆ ಕಾಯಿಲೆಗಳು ಮಾತ್ರ ಬರಬಾರದು. ಹೌದು ಮಾನವನಿಗೆ ಬರುವ ಕಾಯಿಲೆಗಳು ಅವನನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತವೆ. ಕೆಲವೊಂದು ಕಾಯಿಲೆಗಳನ್ನು ನಿರಾಯಾಸವಾಗಿ ಪರಿಹರಿಸಿಕೊಳ್ಳಬಹುದು. ಆದರೆ ಕೆಲವೊಂದು ಪರಿಹರಿಸಲು ಸಿಕ್ಕಾಪಟ್ಟೆ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದಲೇ ಹೇಳುವುದು ಪರಿಹಾರಕ್ಕಿಂತ ನಿಯಂತ್ರಿಸುವುದೇ ಸುಲಭ ಎಂದು. ಕೆಲವೊಮ್ಮೆ ನಮ್ಮ ಉದಾಸೀನತೆಯಿಂದ ನಾವು ಗಂಭೀರವಾದ ರೋಗಗಳಿಗೆ ತುತ್ತಾಗುತ್ತೇವೆ.

ದೇಹದ ಎಲ್ಲಾ ಅಂಗಗಳು ಬಹಳ ಸೂಕ್ಷ್ಮವಾದುದು. ಅದರಲ್ಲಿಯೂ ಕೆಲವು ಅಂಗಗಳು ಸೂಕ್ಷ್ಮಾತೀ ಸೂಕ್ಷ್ಮ. ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಸಹ ಕೆಲವೊಂದು ಸೂಕ್ಷ್ಮ ಕಾಯಿಲೆಯ ಸಂಕೇತವಾಗಿರುತ್ತದೆ. ಏಕೆಂದರೆ ರಕ್ತ ಸ್ರಾವವನ್ನು ತಡೆಯಬಹುದು, ಪಟ್ಟಿ ಕಟ್ಟಿ. ಆದರೆ ಮೂತ್ರದಲ್ಲಿ ರಕ್ತ ಹೋಗುವುದನ್ನು ಹೇಗೆ ತಡೆಯಲು ಸಾಧ್ಯ. ಅದು ಗಂಭೀರ ಸ್ವರೂಪದ ಕಾಯಿಲೆಯಾಗಿರಬಹುದು ಅಥವಾ ಅಲ್ಲದೆ ಇರಬಹುದು. ಕೆಲವೊಮ್ಮೆ ಇದು ಸಣ್ಣ ಇನ್‌ಫೆಕ್ಷನ್‌ನಿಂದ ಸಂಭವಿಸಬಹುದು. ಇನ್ನೂ ಕೆಲವೊಮ್ಮೆ ಇದು ಗಂಭೀರವಾದ ಕಾಯಿಲೆಯಾಗಿರಬಹುದು. ಎಚ್ಚರ: ಮೂತ್ರದ ಬಣ್ಣದಲ್ಲಿ ಏರುಪೇರಾದರೆ ಅಪಾಯ ಕಟ್ಟಿಟ್ಟ ಬುತ್ತಿ..!

Reasons For Blood In Urine

ಆದರೆ ಯಾವುದಕ್ಕೂ ಇದು ಗಂಭೀರವಾಗುವ ಮುನ್ನ ಮೊದಲು ವೈದ್ಯರನ್ನು ಸಂಪರ್ಕಿಸಿ ಅದಕ್ಕೆ ತಕ್ಕಂತೆ ಚಿಕಿತ್ಸೆ ಪಡೆಯುವುದು ಉತ್ತಮ. ಏಕೆಂದರೆ ನಮ್ಮ ದೇಹದ ಒಳಗೆ ಯಾವ ಏರುಪೇರು ಸಂಭವಿಸಿದೆ ಎಂದು ನಮಗೆ ಗೊತ್ತಿರುವುದಿಲ್ಲವಲ್ಲ. ಬನ್ನಿ ಆದರೂ ಇದಕ್ಕೆ ಕಾರಣಗಳು ಏನಿರಬಹುದು ಎಂದು ಒಂದು ಅವಲೋಕನ ಮಾಡಿಕೊಂಡು ಬರೋಣ.

ಯೂರಿನ್ ಇನ್‌ಫೆಕ್ಷನ್/ ಯೂರಿನರಿ ಟ್ರ್ಯಾಕ್ಟ್ ಇನ್‌ಫೆಕ್ಷನ್ (ಯುಟಿಐ)
ಇದು ನಮ್ಮ ಮೂತ್ರದಲ್ಲಿ ರಕ್ತವನ್ನು ತರುವ ಸಾಮಾನ್ಯವಾದ ಸಮಸ್ಯೆಯಾಗಿರುತ್ತದೆ. ವಿಶೇಷವಾಗಿ ಮಹಿಳೆಯರಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚಾಗಿ ಕಂಡು ಬರುತ್ತದೆ. ಕೆಲವೊಂದು ಲಕ್ಷಣಗಳ ಜೊತೆಗೆ ಕೆಂಪಗೆ ರಕ್ತವು ಮೂತ್ರದಲ್ಲಿ ಬೆರೆತು ಬರುವುದನ್ನು ನೀವು ಗಮನಿಸಬಹುದು. ಇದು ಸಾಮಾನ್ಯವಾಗಿ ಇನ್‌ಫೆಕ್ಷನ್‌ನಿಂದ ಕಂಡು ಬರುತ್ತದೆ. ಯುಟಿಐ ಎಂದು ಕರೆಯಲ್ಪಡುವ ಈ ಸಮಸ್ಯೆಯು ರಕ್ತದಲ್ಲಿ ಮೂತ್ರ ಬರುವಂತೆ ಮಾಡುವ ಅತಿದೊಡ್ಡ ಮತ್ತು ಗಂಭೀರ ಸಮಸ್ಯೆಯಾಗಿರುತ್ತದೆ.

ಮೂತ್ರ ಪಿಂಡದಲ್ಲಿ ಕಲ್ಲು
ಇದು ಸಹ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳಲು ಕಾರಣವಾಗುತ್ತದೆ. ಸಾಮಾನ್ಯವಾಗಿ ಮೂತ್ರದಲ್ಲಿ ಕಲ್ಲುಗಳು ಇರುವವರು ಈ ಸಮಸ್ಯೆಯನ್ನು ಹೊಂದಿರುತ್ತಾರೆ. ಹಾಗಾಗಿ ಅವರು ಮೂತ್ರ ವಿಸರ್ಜನೆ ಮಾಡಲು ಹಿಂದೇಟು ಹಾಕುತ್ತಾರೆ. ಆರಂಭಿಕ ಹಂತದಲ್ಲಿ ಇದನ್ನು ಔಷಧಿಗಳ ಮೂಲಕ ಪರಿಹರಿಸಿಕೊಳ್ಳಬಹುದು. ಆದರೂ ಇದಕ್ಕೆ ಶಸ್ತ್ರ ಚಿಕಿತ್ಸೆಯೇ ಅಂತಿಮ ಚಿಕಿತ್ಸೆಯಾಗಿರುತ್ತದೆ. ಮೂತ್ರ ಉರಿಯೇ? ಇಲ್ಲಿದೆ ಮನೆಮದ್ದು

ಮೂತ್ರ ಪಿಂಡದಲ್ಲಿ ಅಥವಾ ಪಿತ್ತ ಕೋಶದಲ್ಲಿ ಟ್ಯೂಮರ್‌ಗಳು
ಇದು ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವಂತೆ ಮಾಡುವ ಅತ್ಯಂತ ಗಂಭೀರ ಕಾರಣಗಳಲ್ಲಿ ಒಂದಾಗಿರುತ್ತದೆ. ಸಾಮಾನ್ಯವಾಗಿ ಇದನ್ನು ವೈದ್ಯಕೀಯವಾಗಿ ಸೈಟಾಲಜಿ ಎಂದು ಹೆಸರಿಸಲಾಗುತ್ತದೆ. ಇದನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಪರಿಹರಿಸಿಕೊಳ್ಳಬಹುದು.

ಗ್ಲೊಮೆಯುಲೊನೆಫ್ರಿಟಿಸ್ ಅಥವಾ ಗ್ಲೊಮೆರುಲರ್ ನೆಫ್ರಿಟಿಸ್
ಸಾಮಾನ್ಯವಾಗಿ ಇದು ಮೂತ್ರ ಮತ್ತು ಮಲದಲ್ಲಿ ಕಾಣಿಸಿಕೊಳ್ಳುವ ಮಾರಾಣಾಂತಿಕ ಕಾಯಿಲೆಯ ಚಿಹ್ನೆಯಾಗಿರುತ್ತದೆ. ಇದು ಅಬಾಲ ವೃದ್ಧರಾದಿಯಾಗಿ ಎಲ್ಲರಲ್ಲಿಯೂ ಕಾಣಿಸಿಕೊಳ್ಳುತ್ತದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ವಯಸ್ಕರಲ್ಲಿ ಇದು ಕಾಣಿಸಿಕೊಳ್ಳುತ್ತದೆ. ನೆಫ್ರಿಟಿಸ್ ಎಂಬ ಮೂತ್ರದ ಉರಿಯೂತದ ಕಾಯಿಲೆ ಬಂದಿರುವ ಜನರಲ್ಲಿ ಇದು ಕಾಣಿಸಿಕೊಳ್ಳುತ್ತದೆ.

English summary

Reasons For Blood In Urine

Blood In Urines are very common among both men and women, there can be no better remedy than knowing about the reasons for blood in urine or stool. Following are some of the reasons for blood in urine and stool, which you should be aware about:
Story first published: Tuesday, December 22, 2015, 20:34 [IST]
X
Desktop Bottom Promotion