For Quick Alerts
ALLOW NOTIFICATIONS  
For Daily Alerts

ಕುಟುಂಬದ ಆರೋಗ್ಯಕ್ಕಾಗಿ ಮನೆಯಲ್ಲಿರಲಿ ಏಲಕ್ಕಿ ಮಾಲೆ

By Su.Ra
|

ಸನ್ಮಾನ ಸಮಾರಂಭಗಳಲ್ಲಿ ಯಾರನ್ನಾದ್ರೂ ಶಾಲು ಹೊದಿಸಿ, ಒಂದು ಪದಕ ಕೊಟ್ಟು, ಗೌರವಿಸುವ ಸಂದರ್ಭದಲ್ಲಿ ಅವ್ರಿಗೆ ಘಮಘಮಿಸುವ ಏಲಕ್ಕಿಗಳನ್ನು ಪೋಣಿಸಿ ಅಲಂಕೃತವಾಗಿರುವ ಮಾಲೆ ಹಾಕೋದನ್ನು ಹೆಚ್ಚಿನವ್ರು ಗಮನಿಸಿರ್ತೀರಿ. ಅಂತ ಒಂದು ಮಾಲೆ ಸನ್ಮಾನಕಷ್ಟೇ ಸೀಮಿತವಾಗಿರದೇ ಪ್ರತಿಯೊಬ್ಬರ ಮನೆಯಲ್ಲೂ ಇದ್ರೆ ನಿಮ್ಮ ಕುಟುಂಬದ ಆರೋಗ್ಯ ವೃದ್ಧಿಯಾಗುತ್ತೆ ಅಂದ್ರೆ ನೀವು ನಂಬಲೇಬೇಕು. ಹೌದು ಎಲ್ಲರಿಗೂ ಗೊತ್ತಿರೋ ಹಾಗೆ ಏಲಕ್ಕಿ ಹಲವು ರೋಗಗಳಿಗೆ ಪರಿಹಾರ ನೀಡುವ ಸಾಮರ್ಥ್ಯ ಹೊಂದಿದೆ. ಒಂದು ಉತ್ತಮ ಸಾಂಬಾರ ಪದಾರ್ಥ ಎಂದು ಪ್ರಪಂಚದ ಮೂಲೆಮೂಲೆಯ ಜನರೂ ಅದನ್ನು ಪರಿಗಣಿಸಿದ್ದಾರೆ. ಸಹ್ಯಾದ್ರಿ ಬೆಟ್ಟದ ಒಡೆಯ 'ಏಲಕ್ಕಿಯ' ಅದ್ಭುತ ಪವರ್‌!

ಆಯುರ್ವೇದದಲ್ಲಂತೂ ಏಲಕ್ಕಿಗೆ ವಿಶೇಷ ಮಹತ್ವ ಇದೆ. ಏಲಕ್ಕಿಯನ್ನು ಹೆಚ್ಚಿನ ಮೆಡಿಸಿನ್ ಗಳಲ್ಲಿ ಬಳಕೆ ಮಾಡಲಾಗುತ್ತೆ. ಏಲಕ್ಕಿ ಹಾಕಿ ಮಾಡಿದ ಟೀ ಅಂತೂ ಹೆಚ್ಚಿನವ್ರ ಬಾಯಲ್ಲಿ ನೀರೂರಿಸುತ್ತೆ. ಇಂತಹ ಏಲಕ್ಕಿಯನ್ನು ಕೇವಲ ಸೇವಿಸಿದಾಗ ಮಾತ್ರ ಲಾಭ ಸಿಗೋದಿಲ್ಲ. ಏಲಕ್ಕಿಯ ಕಣಕಣದಲ್ಲೂ ಶಕ್ತಿಯ ಸತ್ವ ಅಡಗಿದೆ.ದೇವರ ಫೋಟೋಗೆ ಇಲ್ಲವೇ ಅಲಂಕಾರಿಕ ವಸ್ತುವಾಗಿ ಯಾವುದೋ ಪ್ಲಾಸ್ಟಿಕ್ ಮಾಲೆಯನ್ನು ಹಾಕುವ ಬದಲಾಗಿ ಒಂದು ಏಲಕ್ಕಿ ಮಾಲೆಯನ್ನು ಮನೆಯಲ್ಲಿ ಇಟ್ಟಿರಿ. ಇದು ನಿಮ್ಮ ಮನೆಮಂದಿಯನ್ನು ಹೆಲ್ತಿಯಾಗಿ ಇಡುವಲ್ಲಿ ನೆರವಾಗುತ್ತೆ. ಮನೆಯ ಪ್ರತಿ ಸದಸ್ಯರೂ ಆಕ್ಟೀವ್ ಆಗಿರಲು ಇದು ಸಹಕಾರಿ. ಹಾಗಾದ್ರೆ ಏಲಕ್ಕಿ ಮಾಲೆಯನ್ನು ಮನೆಯಲ್ಲಿ ಇಟ್ಟುಕೊಳ್ಳೋದ್ರಿಂದ ಆಗುವ ಲಾಭಗಳೇನು ಅನ್ನೋದಕ್ಕೆ ಈ ಸ್ಟೋರಿಯ ಮುಂದಿನ ಭಾಗ ಓದಿ..

ಡಿಫ್ರೆಷನ್ ಕಡಿಮೆ ಮಾಡುತ್ತೆ

ಡಿಫ್ರೆಷನ್ ಕಡಿಮೆ ಮಾಡುತ್ತೆ

ಈಗಿನ ಕಾಲದಲ್ಲಿ ಒತ್ತಡ ಅನ್ನೋದು ಯಾರಿಗೆ ಇರಲ್ಲ ಹೇಳಿ. ಅದ್ರಿಂದ ಪ್ರತಿ ಮನೆಯಲ್ಲೂ ಒಬ್ರಲ್ಲ ಒಬ್ಬ ಸದಸ್ಯ ಸಂಕುಚಿತಗೊಳ್ತಾರೆ. ಆದ್ರೆ ಹಾಗೆ ಆಗಬಾರದು, ಡಿಫ್ರೆಷನ್ ಸಮಸ್ಯೆ ದೂರವಾಗ್ಬೇಕು ಅಂದ್ರೆ ಮನೆಯಲ್ಲಿ ಪರಿಮಳಯುಕ್ತವಾದ ಒಂದು ಏಲಕ್ಕಿ ಮಾಲೆಯನ್ನು ಇಟ್ಟಿರಿ. ಅಡುಗೆ ಮನೆಯ ಸಾಂಬಾರ ಪದಾರ್ಥದ ಡಬ್ಬದಲ್ಲಿ 100 ಗ್ರಾಂನಷ್ಟೋ, 200 ಗ್ರಾಂನಷ್ಟೋ ಏಲಕ್ಕಿಯನ್ನು ಮುಚ್ಚುಳ ಹಾಕಿ ಡಬ್ಬದಲ್ಲಿ ಇಟ್ಟರೆ ಸಾಲದು. ಅದ್ರ ಘಮಘಮಿಸುವ ಸ್ವಾದ ಮನೆಯ ಮೂಲೆಮೂಲೆಯನ್ನು ಪಸರಿಸಿದ್ರೆ ಮನೆಯ ಸದಸ್ಯರಲ್ಲಿ ಡಿಫ್ರೆಷನ್ ಸಮಸ್ಯೆ ಬಾಧಿಸೋದಿಲ್ಲ.

ಹುಳಹುಪ್ಪಟೆಗಳ ನಿಯಂತ್ರಣ

ಹುಳಹುಪ್ಪಟೆಗಳ ನಿಯಂತ್ರಣ

ಸಕ್ಕರೆ ಡಬ್ಬಕ್ಕೆ ಆಗಾಗ ಇರುವೆ ಬರುತ್ತೆ ಅಂದ್ರೆ ಅದ್ರೊಳಗೆ ಒಂದು ಏಲಕ್ಕಿ ಹಾಕಿಡೋದು ಎಲ್ಲರಿಗೂ ಗೊತ್ತು. ಆಗ ಇರುವೆ ಆ ಕಡೆ ತಲೆಯೂ ಹಾಕಲ್ಲ. ಕೇವಲ ಒಂದು ಡಬ್ಬದಲ್ಲಿ ಕೆಲಸ ಮಾಡುವ ಏಲಕ್ಕಿಯನ್ನು ಇಡೀ ಮನೆಯ ವಾತಾವರಣವನ್ನು ಶುಚಿಯಾಗಿಡಲು ಬಳಸಿಕೊಳ್ಳಬಹುದು. ಯಾರ ಮನೆಯಲ್ಲಿ ಸೊಳ್ಳೆ, ನೊಣ, ಇತ್ಯಾದಿ ಕೀಟಗಳ ಕಾಟವಿರುತ್ತೋ ಅಂತವರು ಒಂದು ಏಲಕ್ಕಿ ಮಾಲೆಯನ್ನು ಮನೆಯಲ್ಲಿ ಅಲಂಕಾರಿಕ ವಸ್ತುವಾಗಿ ಇಟ್ಟು ನೋಡಿ. ಖಂಡಿತ ನಿಮ್ಮ ಮನೆಯಲ್ಲಿ ಹುಳಹುಪ್ಪಟೆಗಳ ಕಾಟ ನಿಯಂತ್ರಣಕ್ಕೆ ಬರುತ್ತೆ.

ಕ್ಯಾನ್ಸರ್ ತಡೆಗಟ್ಟಲು ನೆರವಾಗುತ್ತೆ

ಕ್ಯಾನ್ಸರ್ ತಡೆಗಟ್ಟಲು ನೆರವಾಗುತ್ತೆ

ಏಲಕ್ಕಿ ಘಮಘಮಿಸುವ ಸ್ವಾದಕ್ಕೆ ಇಂತಹ ಒಂದು ಶಕ್ತಿ ಇದೆ ಅಂದ್ರೆ ನೀವು ನಂಬಲೇ ಬೇಕು. ಈಗಾಗಲೇ ಏಲಕ್ಕಿ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿ ಅನ್ನೋದು ಸಂಶೋಧನೆಗಳಿಂದಲೇ ತಿಳಿದಿರುವ ಸತ್ಯ. ಮನೆಯ ವಾತಾವರಣದ ಗಾಳಿಯಲ್ಲಿ ಆ ಏಲಕ್ಕಿಯ ಸ್ವಾದ ಪಸರಿಸಿದ್ರೆ ಖಂಡಿತ ಕ್ಯಾನ್ಸರ್ ತಡೆಗಟ್ಟಲು ಅದು ನಿಮಗೆ ನೆರವಾಗಲಿದೆ.

ಅಸ್ತಮಾ ನಿಯಂತ್ರಣಕ್ಕೆ ಬರುತ್ತೆ

ಅಸ್ತಮಾ ನಿಯಂತ್ರಣಕ್ಕೆ ಬರುತ್ತೆ

ಯಾರ ಮನೆಯಲ್ಲಿ ಅಸ್ತಮಾ ಕಾಯಿಲೆ ಇರುವವರು ಇದ್ದಾರೋ ಅಂತವರ ಮನೆಯಲ್ಲಿ ಇರಲೇಬೇಕಾದ ವಸ್ತು ಏಲಕ್ಕಿ ಮಾಲೆ..ಏಲಕ್ಕಿ ಮಾಲೆಯಿಂದ ಹೊರಹೊಮ್ಮುವ ಪರಿಮಳ ಗಾಳಿಯಲ್ಲಿ ಬೆರೆಯುತ್ತೆ. ಅದು ಮನೆಯ ಎಲ್ಲಾ ಸದಸ್ಯರ ಉಸಿರಾಟಕ್ಕೆ ನೆರವಾಗುತ್ತೆ. ಅದ್ರಲ್ಲೂ ಪ್ರಮುಖವಾಗಿ ಅಸ್ತಮಾ ಕಾಯಿಲೆ ಇರುವವರಿಗೆ ಉತ್ತಮ ಉಸಿರಾಟಕ್ಕೆ ಇದು ಸಹಾಯ ಮಾಡಲಿದೆ.

ಮನೆಯಲ್ಲಿ ಯಾರಿಗೂ ವಾಂತಿ, ತಲೆಸುತ್ತುವಿಕೆ ಸಮಸ್ಯೆ ಇರೋದಿಲ್ಲ

ಮನೆಯಲ್ಲಿ ಯಾರಿಗೂ ವಾಂತಿ, ತಲೆಸುತ್ತುವಿಕೆ ಸಮಸ್ಯೆ ಇರೋದಿಲ್ಲ

ಗರ್ಭಿಣಿಯರಿಗೆ ವಾಂತಿ, ತಲೆಸುತ್ತುವಿಕೆ ಸಮಸ್ಯೆ ಇದ್ದಲ್ಲಿ ಏಲಕ್ಕಿ ಪರಿಮಳ ಸವಿದ್ರೆ ನಿಯಂತ್ರಣಕ್ಕೆ ಬರುತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಕೇವಲ ಅವರಿಗೆ ಮಾತ್ರವಲ್ಲ. ಆಹಾರದ ಏರುಪೇರಿನಿಂದ ಕೂಡ ಕೆಲವೊಮ್ಮೆ ವಾಂತಿ, ತಲೆಸುತ್ತುವಿಕೆಯಂತ ಸಮಸ್ಯೆ ಬಾಧಿಸಬಹುದು. ಆದ್ರೆ ಮನೆಯಲ್ಲಿ ಏಲಕ್ಕಿ ಮಾಲೆ ಇಟ್ಟಿದ್ರೆ ಇಂತಹ ಸಮಸ್ಯೆಗಳಿಗೆ ಕಡಿವಾಣ ಬೀಳಲಿದೆ.

ಉತ್ತಮ ಉಸಿರಾಟಕ್ಕೆ ಸಹಕಾರಿ

ಉತ್ತಮ ಉಸಿರಾಟಕ್ಕೆ ಸಹಕಾರಿ

ಕೆಲವರಿಗೆ ಉಸಿರಾಟ ಪ್ರಕ್ರಿಯೆ ಉತ್ತಮವಾಗಿರುವುದಿಲ್ಲ. ಉಸಿರಾಟದಲ್ಲಿ ವಾಸನೆಯಾಗುವ ಸಮಸ್ಯೆ ಇರುತ್ತೆ. ಬಾಯಿ ಬಿಟ್ರೆ ಇನ್ನೊಬ್ಬರಿಗೆ ಕಿರಿಕಿರಿಯನ್ನಿಸುವ ಸಮಸ್ಯೆ ಅದು. ಇಂತಹ ಸಮಸ್ಯೆ ಮನೆಯ ಯಾವ ಸದಸ್ಯರಿಗೂ ಬರಬಾರದು ಅಂದ್ರೆ ಅದಕ್ಕೆ ನೆರವಾಗುವುದು ಏಲಕ್ಕಿ ಮಾಲೆ. ಮನೆಯಲ್ಲಿರುವ ಏಲಕ್ಕಿ ಮಾಲೆಯ ಘಮ ಇಡೀ ಮನೆಯ ವಾತಾವರಣವನ್ನು ಬದಲಿಸುವುದು ಮಾತ್ರವಲ್ಲ ಬದಲಾಗಿ ಮನೆಯ ಎಲ್ಲಾ ಸದಸ್ಯರ ಸರಾಗವಾದ ಮತ್ತು ಸ್ವಚ್ಛ ಉಸಿರಾಟಕ್ಕೆ ಕಾರಣವಾಗುತ್ತೆ.

ಧನಾತ್ಮಕ ಶಕ್ತಿ ಹೆಚ್ಚಿಸುತ್ತೆ

ಧನಾತ್ಮಕ ಶಕ್ತಿ ಹೆಚ್ಚಿಸುತ್ತೆ

ಪ್ರತಿಯೊಬ್ಬರ ಮನೆಯಲ್ಲೂ ಪಾಸಿಟೀವ್ ಎನರ್ಜಿ ಇರಬೇಕು ಅಂತ ಬಯಸ್ತೀವಿ. ಈ ಪಾಸಿಟೀವ್ ಎನರ್ಜಿ ಕೇವಲ ವಾಸ್ತುಪ್ರಕಾರ ಮನೆಕಟ್ಟಿದಾಗ ಮಾತ್ರವಲ್ಲ ಬದಲಾಗಿ ನೀವು ಹೇಗೆ ನಿಮ್ಮ ಮನೆಯನ್ನು ಸ್ವಚ್ಛ ಮತ್ತು ಸುಂದರವಾಗಿ ಇಟ್ಟುಕೊಂಡಿದ್ದೀರಿ ಅನ್ನೋದ್ರ ಮೇಲೂ ಕೂಡ ಆಧಾರಿತವಾಗಿರುತ್ತೆ. ಆ ನಿಟ್ಟಿನಲ್ಲಿ ಸಹಾಯ ಮಾಡುವುದೇ ಏಲಕ್ಕಿ ಮಾಲೆ. ಮನೆಯಲ್ಲಿ ಏಲಕ್ಕಿ ಮಾಲೆ ಇದ್ರೆ ಆ ಮನೆಯಲ್ಲಿ ಧನಾತ್ಮಕ ಶಕ್ತಿಗೆ ಕೊರತೆಯೇ ಇರೋದಿಲ್ಲ.

Read more about: health wellness
English summary

Cardamom maala helps to increase family health

Elaichi or cardamom is one of the most common spices seen in an Indian household. Not only does it add sweet taste and unique flavour to your dishes, it is also widely used as a natural mouth freshener. But the humble green pod has a lot more to offer – health wise. Here are the benefits of cardamom mala benefits, which should surprise you...
X
Desktop Bottom Promotion