For Quick Alerts
ALLOW NOTIFICATIONS  
For Daily Alerts

ಒಂದು ಲೋಟ 'ಪುದೀನಾ ಜ್ಯೂಸ್‌'ನಲ್ಲಿದೆ ಔಷಧೀಯ ಶಕ್ತಿ!

By Super Admin
|

ಭಾರತದ ಆಯುರ್ವೇದದಲ್ಲಿ ಅನಾದಿ ಕಾಲದಿಂದಲೂ ಗಿಡಮೂಲಿಕೆಗಳನ್ನು ಬಳಸಿ ಹಲವಾರು ಅನಾರೋಗ್ಯಗಳನ್ನು ಹೋಗಲಾಡಿಸುವ ನಿದರ್ಶನಗಳನ್ನು ನಾವು ನೋಡಿದ್ದೇವೆ. ತರಕಾರಿ ಸಸ್ಯಗಳಿಂದ ಹಿಡಿದು ಕಾಡಿನಲ್ಲಿ ಸಿಗುವಂತಹ ಔಷಧಿಯ ಸಸ್ಯಗಳನ್ನು ಇದಕ್ಕಾಗಿ ಬಳಸುತ್ತಾರೆ. ಈಗಲೂ ಔಷಧಿ ಹಾಗೂ ಇನ್ನಿತರ ಕಡೆಗಳಲ್ಲಿ ಹೇರಳವಾಗಿ ಬಳಕೆಯಾಗುವ ಸಸ್ಯವೆಂದರೆ ಅದು ಪುದೀನಾ. ಪುದೀನಾ ಎಲೆಗಳಿಂದ ಕೂದಲಿನ ಸೌಂದರ್ಯ ಹೆಚ್ಚಿಸಿಕೊಳ್ಳಿ

ಇದು ತುಂಬಾ ವೇಗವಾಗಿ ಬೆಳೆಯುವ ಸಸ್ಯವಾಗಿದ್ದು, ಇದನ್ನು ಜಜ್ಜಿಕೊಂಡು ಗಾಯವಿರುವ ಜಾಗಕ್ಕೆ ಹಚ್ಚಿಕೊಂಡರೆ ಗಾಯ ಮಾಯವಾಗುತ್ತದೆ. ಇದು ಎದೆಯುರಿಗೂ ಒಳ್ಳೆಯ ಮದ್ದು. ಆಧುನಿಕ ವೈದ್ಯಕೀಯ ಲೋಕದಲ್ಲಿ ಪುದೀನಾದ ಹಲವಾರು ಆರೋಗ್ಯ ಲಾಭಗಳನ್ನು ಕಂಡುಹಿಡಿದಿದ್ದಾರೆ. ಇದರ ಬಗ್ಗೆ ತಿಳಿದುಕೊಳ್ಳುವ.

ಹೊಟ್ಟೆನೋವು ಮತ್ತು ಕರುಳಿನ ರೋಗಕ್ಕೆ

ಹೊಟ್ಟೆನೋವು ಮತ್ತು ಕರುಳಿನ ರೋಗಕ್ಕೆ

ಪುದೀನಾದ ಜ್ಯೂಸ್ ಹೊಟ್ಟೆನೋವು ಮತ್ತು ಕರುಳಿನ ರೋಗಕ್ಕೆ ಒಳ್ಳೆಯದು. ಪುದೀನಾದಲ್ಲಿ ಫೈಟೋನ್ಯೂಟ್ರಿಯಂಟ್ಸ್, ಆ್ಯಂಟಿಆಕ್ಸಿಡೆಂಟ್ ಮತ್ತು ಮೆಂಥಾಲ್ ಇದೆ. ಇದು ಅಜೀರ್ಣ ಮತ್ತು ಸೆಳೆತವನ್ನು ತಡೆಗಟ್ಟೆ ಜೀರ್ಣ ಕ್ರಿಯೆ ಸರಾಗವಾಗಿ ಸಾಗಲು ನೆರವಾಗುವುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹೊಟ್ಟೆನೋವು ಮತ್ತು ಕರುಳಿನ ರೋಗಕ್ಕೆ

ಹೊಟ್ಟೆನೋವು ಮತ್ತು ಕರುಳಿನ ರೋಗಕ್ಕೆ

ಪುದೀನಾದಲ್ಲಿ ಇರುವಂತಹ ಫೈಟೋಕೆಮಿಕಲ್ ಆಗಿರುವ ಪೆರ್ಯಲ್ಯಲ್ ಆಲ್ಕೋಹಾಲ್ ಎನ್ನುವುದು ಕ್ಯಾನ್ಸರ್‌ನ್ನು ತಡೆಗಟ್ಟುತ್ತದೆ. ಇದನ್ನು ಕರುಳಿನ ಕ್ಯಾನ್ಸರ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ನ ಚಿಕಿತ್ಸೆಗೆ ಬಳಸಲಾಗುತ್ತದೆ.

ಮೊಡವೆಗಳ ನಿವಾರಣೆಗೆ

ಮೊಡವೆಗಳ ನಿವಾರಣೆಗೆ

ಪುದೀನಾದಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಇದನ್ನು ತ್ವಚೆಯಲ್ಲಿನ ಮೊಡವೆಗಳನ್ನು ಹೋಗಲಾಡಿಸಲು ಬಳಸಲಾಗುತ್ತದೆ. ಇದು ತ್ವಚೆಗೆ ಕಾಂತಿಯನ್ನು ನೀಡುವುದು ಮಾತ್ರವಲ್ಲದೆ ಒರಟು, ನವೆ ಇರುವ ತ್ವಚೆಗೆ ತೇವಾಂಶ ನೀಡುವುದು. ಇದು ಕಲೆ, ಮೊಡವೆ ಮತ್ತು ಗುಳ್ಳೆಗಳ ನಿವಾರಿಸುತ್ತದೆ. ಮೆಟ್ರೊನಿಡಜೋಲ್ ಜತೆ ಸೇರಿಸಿ ಹಚ್ಚಿದಾಗ ಇದು ಕ್ಯಾಂಡಿಡಾಗೆ ಒಳ್ಳೆಯ ಔಷಧಿ.

ಅಲರ್ಜಿಗೆ ರಾಮಬಾಣ

ಅಲರ್ಜಿಗೆ ರಾಮಬಾಣ

ಪುದೀನಾ ಜ್ಯೂಸ್‌ನಲ್ಲಿ ಉನ್ನತ ಮಟ್ಟದ ರೊಸ್ಮರೆನಿಕ್ ಆ್ಯಸಿಡ್ ಇದೆ. ಇದು ಸಿಒಎಕ್ಸ್-1 ಮತ್ತು ಸಿಒಎಕ್ಸ್-2 ಕ್ವಿಣಗಳನ್ನು ತಗ್ಗಿಸುವ ಮೂಲಕ ಅಲರ್ಜಿ ಉಂಟಾಗುವುದನ್ನು ತಡೆಯುತ್ತದೆ. ಅಲರ್ಜಿಯಿಂದ ರಕ್ತದ ಕೋಶಗಳಿಗೆ ಉಂಟಾಗುವಂತಹ ಇಯೊಸಿನೊಫಿಲ್ ಮತ್ತು ಉರಿಯೂತವನ್ನು ನಿವಾರಿಸುವಲ್ಲಿ ಪ್ರಯೋಜನಕಾರಿಯಾಗಿದೆ.

ವಿಟಮಿನ್‌ಗಳ ಆಗರ

ವಿಟಮಿನ್‌ಗಳ ಆಗರ

ಪುದೀನಾ ಜ್ಯೂಸ್‌ನಲ್ಲಿ ವಿಟಮಿನ್ ಬಿ, ಸಿ, ಡಿ ಮತ್ತು ಎಫ್ ಇದ್ದು, ಇದು ಸೋಂಕನ್ನು ನಿವಾರಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ಖಿನ್ನತೆಗೆ ಒಳ್ಳೆಯ ಔಷಧಿ. ಇದು ಮುಟ್ಟಿನ ಸಮಯದಲ್ಲಿ ಉಂಟಾಗುವಂತಹ ನೋವನ್ನು ಕಡಿಮೆ ಮಾಡುತ್ತದೆ. ಪುದೀನಾ ಜ್ಯೂಸ್ ರಕ್ತವನ್ನು ಶುದ್ಧೀಕರಿಸಿ ಗರ್ಭಿಣಿ ಮಹಿಳೆಯರಲ್ಲಿ ಉಂಟಾಗುವಂತಹ ಬೆಳಗ್ಗಿನ ಅವಧಿಯ ಸಂಕಟವನ್ನು ನಿವಾರಿಸುತ್ತದೆ.

ಶೀತ ಮತ್ತು ಕಫಕ್ಕೆ ಇದು ಒಳ್ಳೆಯ ಮದ್ದು

ಶೀತ ಮತ್ತು ಕಫಕ್ಕೆ ಇದು ಒಳ್ಳೆಯ ಮದ್ದು

ಪುದೀನಾ ಜ್ಯೂಸ್ ನಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ ಮತ್ತು ಉರಿಯೂತ ಶಮನಕಾರಿ ಗುಣಗಳಿರುವುದರಿಂದ ಬಾಯಿಯ ಸೋಂಕಿಗೆ ಪ್ರಯೋಜನಕಾರಿಯಾಗಿದೆ. ಶೀತ ಮತ್ತು ಕಫಕ್ಕೆ ಇದು ಒಳ್ಳೆಯ ಮದ್ದು. ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೂ ಇದು ರಾಮಬಾಣವಾಗಿದೆ.

ಪುದೀನಾ ಜ್ಯೂಸ್ ಮಾಡುವ ವಿಧಾನ

ಪುದೀನಾ ಜ್ಯೂಸ್ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು:

* ಸ್ವಲ್ಪ ಪುದೀನಾ ಎಲೆ

* 1 ನಿಂಬೆರಸ

* 3 ಚಮಚ ಸಕ್ಕರೆ

* ಚಿಟಿಕೆಯಷ್ಟು ಉಪ್ಪು

* 1/2 ಚಮಚ ಜೀರಿಗೆ ಪುಡಿ

* 1/2 ಚಮಚ ಕರಿಮೆಣಸಿನ ಪುಡಿ

* ನೀರು

ತಯಾರಿಸುವ ವಿಧಾನ:

ತಯಾರಿಸುವ ವಿಧಾನ:

1. ಪುದೀನಾ ಎಲೆಯನ್ನು ನೀರಿನಲ್ಲಿ ಹಾಕಿ ಮಿಕ್ಸಿಯಲ್ಲಿ ಅರೆಯಬೇಕು.

2. ಈಗ ಈ ಪುದೀನಾ ನೀರಿಗೆ ಎಲ್ಲಾ ಸಾಮಾಗ್ರಿಗಳನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ ಫ್ರಿಜ್‌ನಲ್ಲಿಡ ಬೇಕು.

ಈ ಪುದೀನಾ ಜ್ಯೂಸ್ ಬಾಯಾರಿಕೆಯನ್ನು ನೀಗಿಸುವುದಲ್ಲದೆ ಆರೋಗ್ಯಕ್ಕೂ ಒಳ್ಳೆಯದು. ಹೊರಗಡೆ ಹೋಗುವಾಗ ನೀರಿನ ಬದಲು ಈ ಜ್ಯೂಸ್ ಕೊಂಡೊಯ್ಯಬಹುದು. (ನೆನಪಿಡಿ ಜ್ವರ ಹಾಗೂ ಶೀತವಿರುವಾಗ ಫ್ರಿಜ್‌ನಲ್ಲಿರುವ ಪುದೀನಾ ಜ್ಯೂಸ್ ಕುಡಿಯಬೇಡಿ)

ಸಲಹೆ

ಸಲಹೆ

ಮಳೆಗಾಲದಲ್ಲಿ ಕಾಡುವ ಜ್ವರ, ಶೀತ, ಮೂಗು ಕಟ್ಟುವಿಕೆ ಇತ್ಯಾದಿ ಸಮಸ್ಯೆಗಳಿಗೆ ಪುದೀನಾ ಟೀ ತುಂಬಾ ಆರೋಗ್ಯಕಾರಿ. ನೀವು ಮಾಡಬೇಕಾದದು ಇಷ್ಟೇ ಸುಮಾರು ನಾಲ್ಕು ಲೋಟ ಕುದಿಯುವ ನೀರಿಗೆ ಎರಡು ದೊಡ್ಡಚಮಚ ಒಣ ಎಲೆಗಳನ್ನು ಸೇರಿಸಿ ಸುಮಾರು ಇಪ್ಪತ್ತು ನಿಮಿಷಗಳವರೆಗೆ ಹಾಗೇ ಬಿಡಿ (ಮತ್ತೆ ಕುದಿಸಬಾರದು). ಬಳಿಕ ಸೋಸಿ ನೀರನ್ನು ಬಾಟಲಿಯಲ್ಲಿ ಶೇಖರಿಸಿ ಫ್ರಿಜ್ ನಲ್ಲಿಡಬಹುದು. ಕುಡಿಯುವ ಅಗತ್ಯವಿದ್ದಾಗ ಬಾಟಲಿ ಹೊರತೆಗೆದು ಮತ್ತೊಮ್ಮೆ ಬಿಸಿಮಾಡಿ ಸೇವಿಸಿ. ರುಚಿಗಾಗಿ ಕೆಲವು ತೊಟ್ಟು ಲಿಂಬೆರಸ ಮತ್ತು ಸಕ್ಕರೆ ಅಥವಾ ಕಲ್ಲುಸಕ್ಕರೆಯನ್ನೂ ಸೇರಿಸಬಹುದು.

English summary

Why You Need To Drink Pudina Juice

Pudina plants are hardy, quick growing evergreen plants. For a long time pudina leaves were crushed and the juice was used to relieve pain and also as a natural medicine to relieve heartburn. Modern scientific research has uncovered a wide range of potential health advantages of pudina juice.
Story first published: Sunday, July 10, 2016, 7:03 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more