ಲಿಂಬೆನೀರು - ಇದು ಶರಬತ್ತೇ, ಔಷಧಿಯೇ?

Posted By: Staff
Subscribe to Boldsky

ಕೆಲವರು ತಮ್ಮ ಪ್ರಥಮ ಆಹಾರವಾಗಿ ಬೆಳಿಗ್ಗೆ ಒಂದು ಲೋಟ ಲಿಂಬೆರಸ ಬೆರೆಸಿದ ನೀರನ್ನು ಕುಡಿಯುತ್ತಾರೆ. ಇದರ ಮಹತ್ವದಿಂದಲೋ ಏನೋ ಇವರು ಸದಾ ನಿರೋಗಿಗಳಾಗಿರುತ್ತಾರೆ. ಆಯುರ್ವೇದವೂ ಇದನ್ನೊಂದು ಅತ್ಯುತ್ತಮ ವಿಧಾನವೆಂದೇ ಪರಿಗಣಿಸಿದೆ. ಎಲ್ಲಿಯವರೆಗೆ ನಿಮ್ಮ ವೈದ್ಯರು ಲಿಂಬೆರಸ ಕುಡಿಯಬೇಡಿ ಎಂದು ಹೇಳುತ್ತಾರೋ, ಅಲ್ಲಿಯವರೆಗೆ ಈ ಅಭ್ಯಾಸ ಅತ್ಯಂತ ಆರೋಗ್ಯಕರ ಮತ್ತು ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ.  ಲಿಂಬೆಯುಕ್ತ ನೀರಿನ ಅದ್ಭುತ ಆರೋಗ್ಯಕಾರಿ ಪ್ರಯೋಜನಗಳು

ಲಿಂಬೆರಸದಲ್ಲಿ ವಿಟಮಿನ್ ಸಿ ಮತ್ತು ಬಿ ಉತ್ತಮ ಪ್ರಮಾಣದಲ್ಲಿದೆ. ಅಲ್ಲದೇ ಇದರಲ್ಲಿ ಇನ್ನೂ ಹತ್ತು ಹಲವು ಔಷಧೀಯ ಗುಣಗಳಿವೆ. ಇದನ್ನು ಕಂಡುಕೊಂಡೇ ನಮ್ಮ ಹಿರಿಯರು 'ಬೀಜವಿಲ್ಲದಿದ್ದರೆ ಲಿಂಬೆ ಸಂಜೀವಿನಿಯಾಗುತ್ತಿತ್ತು, ತೊಟ್ಟಿಲ್ಲದಿದ್ದರೆ ಬದನೆ ವಿಷವಾಗುತ್ತಿತ್ತು' ಎಂದು ಕೊಂಡಾಡಿದ್ದಾರೆ.   ಎಲೆಮರೆ ಕಾಯಿ ಲಿಂಬೆ: ಅದೇನು ಮಾಯೆ, ಅದೇನು ಜಾದೂ!

ಈ ಗುಣಗಳಲ್ಲಿ ಪ್ರಮುಖವಾದವು ಎಂದರೆ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು, ಜೀರ್ಣಕ್ರಿಯೆ ಉತ್ತಮಗೊಳಿಸುವುದು, ಹಸಿವೆಯನ್ನು ಹತ್ತಿಕ್ಕುವುದು, ದೇಹದಲ್ಲಿ ಆಮ್ಲ-ಕ್ಷಾರದ ಸಮತೋಲನವನ್ನು ಕಾಪಾಡುವುದು ಮೊದಲಾದವು. ಬಾಯಾರಿಕೆ ತಣಿಸುವಲ್ಲಿ ಲಿಂಬೆಯ ನೀರು ಅತ್ಯುತ್ತಮವಾಗಿದ್ದು ಇದನ್ನೊಂದು ಶರಬತ್ತಿಗಿಂತ ಔಷಧಿಯ ರೂಪದಲ್ಲಿಯೇ ಹೆಚ್ಚು ಪ್ರಯೋಜನಕಾರಿಯಾಗಿದೆ. ಬನ್ನಿ, ಲಿಂಬೆನೀರಿನ ಸೇವನೆಯಿಂದ ಲಭಿಸುವ ಪ್ರಯೋಜನಗಳನ್ನು ನೋಡೋಣ...   ಬೆಳಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸಲು ಮರೆಯದಿರಿ!

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಹೆಚ್ಚಿನ ಪ್ರಚಾರವಿಲ್ಲದೇ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ವ್ಯವಸ್ಥೆ ದುಗ್ಧಗ್ರಂಥಿಗಳದ್ದಾಗಿದೆ. ಲಿಂಬೆರಸ ದುಗ್ಧಗ್ರಂಥಿಗಳಿಗೆ ಪ್ರಚೋದನೆ ನೀಡಿ ದುಗ್ಧರಸ ಹೆಚ್ಚಿಸಲು, ತನ್ಮೂಲಕ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ನೆರವಾಗುತ್ತದೆ. ಅಲ್ಲದೇ ದೇಹಕ್ಕೆ ಮಾರಕವಾಗಿರುವ ಪ್ಯಾಥೋಜೆನ್ಸ್ ಎಂಬ ಕಣಗಳನ್ನು ಕಂಡುಹಿಡಿದು ದೇಹದಿಂದ ನಿವಾರಿಸುವ ಮೂಲಕವೂ ದೇಹವನ್ನು ಹಲವು ಅನಾರೋಗ್ಯಗಳಿಂದ ರಕ್ಷಿಸುತ್ತದೆ.

ಉರಿಯೂತದಿಂದ ರಕ್ಷಿಸುತ್ತದೆ

ಉರಿಯೂತದಿಂದ ರಕ್ಷಿಸುತ್ತದೆ

ಲಿಂಬೆಯಲ್ಲಿರುವ ಪೋಷಕಾಂಶಗಳು ದೇಹದಲ್ಲಿ ಆಮ್ಲೀಯತೆಯನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಇದರಿಂದಾಗಿ ಎದುರಾಗಬಹುದಾಗಿದ್ದ ಹಲವು ಉರಿಯೂತಗಳಿಂದಲೂ ರಕ್ಷಣೆ ಪಡೆದಂತಾಗುತ್ತದೆ.

ಮೂತ್ರಪಿಂಡದ ಕಲ್ಲುಗಳಿಂದ ರಕ್ಷಿಸುತ್ತದೆ

ಮೂತ್ರಪಿಂಡದ ಕಲ್ಲುಗಳಿಂದ ರಕ್ಷಿಸುತ್ತದೆ

ಮೂತ್ರಪಿಂಡದಲ್ಲಿ ಕಲ್ಲುಗಳಾಗಲು ತೊಡಗಿದ್ದರೆ ಲಿಂಬೆರಸದ ಸೇವನೆಯಿಂದ ಇವು ಕರಗಲು ಸಾಧ್ಯವಾಗುತ್ತದೆ. ಪ್ರತಿದಿನವೂ ಲಿಂಬೆರಸ ಕುಡಿಯುತ್ತಾ ಬರುವ ಮೂಲಕ ಮೂತ್ರಪಿಂಡಗಳಲ್ಲಿ ಕಲ್ಲುಗಳಾಗದಿರುವಂತೆ ನೋಡಿಕೊಳ್ಳಬಹುದು.

ಸ್ನಾಯುಗಳನ್ನು ಬಲಪಡಿಸುತ್ತದೆ

ಸ್ನಾಯುಗಳನ್ನು ಬಲಪಡಿಸುತ್ತದೆ

ವ್ಯಾಯಾಮದ ಬಳಿಕ ದಣಿದ ದೇಹಕ್ಕೆ ಲಿಂಬೆರಸಕ್ಕಿಂತ ಉತ್ತಮವಾದ ಪೇಯ ಇನ್ನೊಂದಿಲ್ಲ. ಏಕೆಂದರೆ ದಣಿದ ಸ್ನಾಯುಗಳಿಗೆ ಪೋಷಣೆ ನೀಡುವ ಜೊತೆಗೇ ಸ್ನಾಯುಗಳ ನೋವು ಮತ್ತು ಒತ್ತಡ ಬಿದ್ದಿದ್ದ ಮೂಳೆಗಳ ಗಂಟುಗಳು ಮತ್ತೆ ಮೊದಲಿನ ಸ್ಥಿತಿಗೆ ಬರಲು ನೆರವಾಗುತ್ತದೆ. ಇದರಿಂದ ಮೂಳೆಸಂಧುಗಳಲ್ಲಿ ಯೂರಿಕ್ ಆಮ್ಲ ಸಂಗ್ರಹವಾಗದಂತೆ ತಡೆಯುತ್ತದೆ. ತನ್ಮೂಲಕ ಸಂಧಿವಾತ, ಮೂಳೆಸಂದುಗಳಲ್ಲಿ ಉರಿ, ಸ್ನಾಯುಗಳಲ್ಲಿ ನೋವು ಮೊದಲಾದವು ಇಲ್ಲವಾಗುತ್ತವೆ.

ಶೀತವಾಗುವುದರಿಂದ ರಕ್ಷಿಸುತ್ತದೆ

ಶೀತವಾಗುವುದರಿಂದ ರಕ್ಷಿಸುತ್ತದೆ

ಶೀತದಿಂದ ರಕ್ಷಣೆ ಪಡೆಯಲು ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚು ಸಬಲಗೊಳ್ಳಬೇಕು. ಲಿಂಬೆಯಲ್ಲಿರುವ ವಿಟಮಿನ್ ಸಿ ಮತ್ತು ಬ್ಯಾಕ್ಟೀರಿಯಾ ನಿರೋಧಕ ಗುಣ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವ ಜೊತೆಗೇ ಹಲವು ರೀತಿಯ ಸೋಂಕುಗಳಿಂದ ರಕ್ಷಿಸುತ್ತದೆ. ಇದರಿಂದ ಶೀತ ಮತ್ತು ಫ್ಲೂ ಜ್ವರ ಬರುವ ಸಾಧ್ಯತೆ ಕಡಿಮೆಯಾಗುತ್ತದೆ.

ಹಸಿವೆಯನ್ನು ಹತ್ತಿಕ್ಕುತ್ತದೆ

ಹಸಿವೆಯನ್ನು ಹತ್ತಿಕ್ಕುತ್ತದೆ

ಲಿಂಬೆರಸ ಕುಡಿದ ಬಳಿಕ ಬಹಳ ಹೊತ್ತಿನವರೆಗೆ ಹೊಟ್ಟೆ ತುಂಬಿದಂತಿದ್ದು ಹಸಿವೆ ಕಾಡದಿರುವ ಕಾರಣ ಅನಗತ್ಯವಾಗಿ ಸಿದ್ಧ ಆಹಾರಗಳನ್ನು ತಿನ್ನದಿರಲು ಸಾಧ್ಯವಾಗುತ್ತದೆ. ಇದು ನಿಮ್ಮ ತೂಕ ಇಳಿಸುವ ಕ್ರಿಯೆಗೆ ಪೂರಕವಾಗಿದ್ದು ಶೀಘ್ರವಾಗಿ ತೂಕವಿಳಿಸಲು ನೆರವಾಗುತ್ತದೆ.

ಹೊಟ್ಟೆ ಕೆಡುವುದರಿಂದ ರಕ್ಷಣೆ ನೀಡುತ್ತದೆ

ಹೊಟ್ಟೆ ಕೆಡುವುದರಿಂದ ರಕ್ಷಣೆ ನೀಡುತ್ತದೆ

ಸಾಮಾನ್ಯವಾಗಿ ಕೆಲವು ಆಹಾರಗಳು ಸರಿಯಾಗಿ ಬೇಯದೇ ಕೆಲವು ಪರಾವಲಂಬಿ ಜೀವಿಗಳು ಹೊಟ್ಟೆ ಸೇರುತ್ತವೆ. ಇದರಿಂದ ಹೊಟ್ಟೆಯಲ್ಲಿ ಗುಡುಗುಡು, ನೋವು, ಉರಿ ಮೊದಲಾದ ತೊಂದರೆಗಳೂ ಕಾಣಿಸಿಕೊಳ್ಳುತ್ತವೆ. food poisoning ಎಂದು ಕರೆಯಲ್ಪಡುವ ಈ ತೊಂದರೆ ಸದಾ ಪ್ರಯಾಣದಲ್ಲಿರುವವರಿಗೆ ಹೆಚ್ಚು ಕಾಡುವ ತೊಂದರೆ. ಇದರಿಂದ ರಕ್ಷಣೆ ಪಡೆಯಲು ನಿತ್ಯವೂ ಲಿಂಬೆನೀರು ಕುಡಿಯುವುದು ಒಳಿತು.

ಹುಳಿತೇಗು ಬರುವುದರಿಂದ ತಪ್ಪಿಸುತ್ತದೆ

ಹುಳಿತೇಗು ಬರುವುದರಿಂದ ತಪ್ಪಿಸುತ್ತದೆ

ಅಜೀರ್ಣ ಅಥವಾ ಬೇರಾವುದೋ ಕಾರಣದಿಂದ ಹುಳಿತೇಗು ಬರುವಂತಿದ್ದರೆ ಪ್ರತಿದಿನ ಎರಡರಿಂದ ಮೂರು ಬಾರಿಯಂತೆ ಸತತವಾಗಿ ಹದಿನೈದು ದಿನ ಲಿಂಬೆನೀರು ಕುಡಿದರೆ ಸಾಕು. ಹುಳಿತೇಗು ಮಾಯವಾಗುತ್ತದೆ.

 
English summary

Why Lemon Water Is A Medicine?

Many people prefer to start their day with lemon water and that's actually a good habit unless your doctor says no. Lemons contain vitamin C and also vitamin B. They contain lots of other medicinal properties too. Lemons boost your immunity, digestive abilities, they control your appetite and also help in maintaining healthy pH value. Here are some reason why lemon water is as good as a medicine.
Subscribe Newsletter