For Quick Alerts
ALLOW NOTIFICATIONS  
For Daily Alerts

ವಯಸ್ಸಾದ ಮೇಲೆ ನಶೆ ಏಕೆ ಮಿತಿ ಮೀರುತ್ತದೆ?

By Deeu
|

ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಎಂಬ ಹಾಡು ನೀವು ಕೇಳಿರುತ್ತೀರಿ. ನಶೆ ಏರಿದರೆ ಹುಡುಗಿಯರು ಸಹ ಗಂಡುಗಳಾಗುತ್ತಾರೆ ಎಂದ ಮೇಲೆ ವಯಸ್ಸಾದವರಿಗೆ ನಶೆ ಏರಿದರೆ ಹೇಗಿರುತ್ತದೆ. ಅವರ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ ಎಂದು ಇತ್ತೀಚಿನ ಅಧ್ಯಯನಗಳು ಖಚಿತಪಡಿಸಿವೆ. ಹೌದು, ಯಾರಿಗೆ ಆಗಲಿ ಕುಡಿದ ಮೇಲೆ ಅದರ ಹ್ಯಾಂಗೋವರ್ ಹತ್ತುವುದು ಸಹಜ.

ಅದರಲ್ಲಿಯೂ ವಯಸ್ಸಾದವರಿಗೆ ತಮ್ಮ ದೇಹದ ಅಂಗಾಂಗಗಳ ಮೇಲೆ ನಿಯಂತ್ರಣವು ಕಡಿಮೆಯಾಗಿರುತ್ತದೆ. ಆ ಸಮಯದಲ್ಲಿ ಅವರ ಕರುಳು ಸಹ ನಿಮ್ಮ ಹಿಂದಿನ ಸಾಮರ್ಥ್ಯದಷ್ಟು ಆಲ್ಕೋಹಾಲ್ ಅನ್ನು ತಾಳಿಕೊಳ್ಳುವುದಿಲ್ಲ. ಅದರ ಜೊತೆಗೆ ನಿಮ್ಮ ಸ್ನಾಯುಗಳ ಸಾಮರ್ಥ್ಯ, ದೇಹದಲ್ಲಿನ ಅಧಿಕ ಕೊಬ್ಬು ಮತ್ತು ಆಲ್ಕೋಹಾಲನ್ನು ಕರಗಿಸುವ ಕಿಣ್ವಗಳ ಸಾಮರ್ಥ್ಯ ಕಡಿಮೆಯಾಗಿರುವುದು ಎಲ್ಲವೂ ಸೇರಿ ನಿಮ್ಮ ಹ್ಯಾಂಗೋವರನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡುತ್ತವೆ.

Why Hangovers Get Worse With Age?

ಮತ್ತೊಂದು ಅಂಶವು ಸಹ ನಿಮ್ಮ ಪರಿಸ್ಥಿತಿಯ ಮೇಲೆ ಪರಿಣಾಮವನ್ನು ಬೀರುತ್ತದೆ, ಅದೇ ಔಷಧಿಗಳು. ಹೌದು, ವಯಸ್ಸಾದವರು ವಯೋಸಹಜ ಕಾಯಿಲೆಗಳಿಗಾಗಿ ಕೆಲವೊಂದು ಔಷಧಿಗಳನ್ನು ಸೇವಿಸುವುದು ಸಹಜ. ಅವುಗಳಲ್ಲಿ ಕೆಲವು ಆಲ್ಕೋಹಾಲಿನ ಜೊತೆಗೆ ಸೇರಿದಾಗ ವಿಭಿನ್ನವಾಗಿ ವರ್ತಿಸುತ್ತವೆ. ಈ ವರ್ತನೆಯ ಪರಿಣಾಮವನ್ನು ನೀವು ಹ್ಯಾಂಗೋವರಿನಲ್ಲಿ ಕಾಣಬಹುದು. ಇದರ ಜೊತೆಗೆ ತೂಕ ಕಡಿಮೆಯಾಗುವಿಕೆಯು ಸಹ ವಯಸ್ಸಾದಂತೆ ಕಾಣಿಸಿಕೊಳ್ಳುತ್ತಾ ಇರುತ್ತದೆ.

ಇದು ಸಹ ಕೆಲವರಲ್ಲಿ ಅಧಿಕ ಪ್ರಮಾಣದ ನಿಶೆಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಕೆಲವೊಮ್ಮೆ ನಿಮ್ಮ ಕರುಳಿನಲ್ಲಿ ಅಸಿಟಾಲ್ಡಿಹೈಡ್‌ನಂತಹ ಕೆಲವೊಂದು ಅಂಶಗಳು ಶೇಖರಣೆಗೊಂಡಾಗ, ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗುತ್ತದೆ. ಒಂದು ವೇಳೆ ನೀವು ದಿನ ನಿತ್ಯ ಕುಡಿಯುತ್ತಿದ್ದಲ್ಲಿ, ಕಾಲಾನುಕ್ರಮೇಣ ಈ ಅಂಶಗಳು ನಿಮ್ಮ ಕರುಳಿನಲ್ಲಿ ಶೇಖರಣೆಗೊಳ್ಳುತ್ತಾ ಸಾಗಿ ಮತ್ತಷ್ಟು ಅಪಾಯವನ್ನು ತಂದೊಡ್ಡುತ್ತವೆ.

ಈ ಮೇಲಿನ ದುಷ್ಪರಿಣಾಮಗಳ ಜೊತೆಗೆ ಮೆದುಳು ಸಹ ಇದರಿಂದ ಹಾಳಾಗುತ್ತದೆ. ಆಲ್ಕೋಹಾಲ್‌ನಲ್ಲಿರುವ ವಿಷಕಾರಿ ಅಂಶಗಳು ಮೆದುಳಿನ ಮೇಲೆ ಬೇಗ ಪರಿಣಾಮವನ್ನು ಬೀರುತ್ತವೆ ಮತ್ತು ವಯಸ್ಸಾದ ಮೇಲೆ ಇದು ಮತ್ತಷ್ಟು ಬಿಗಡಾಯಿಸುತ್ತದೆ. ಇದಲ್ಲದೆ ವಯಸ್ಸಾದವರು ಕಡಿಮೆ ಪ್ರಮಾಣದ ನೀರನ್ನು ಸೇವಿಸುತ್ತಾರೆ. ಹಾಗಾಗಿ ಇವರಲ್ಲಿ ನಿರ್ಜಲೀಕರಣ ಸಮಸ್ಯೆಯು ಬೇಗ ಕಾಣಿಸಿಕೊಳ್ಳುತ್ತದೆ, ಇದು ಸಹ ಹ್ಯಾಂಗೋವರ್ ಕಾಣಿಸಿಕೊಳ್ಳಲು ಪ್ರಮುಖ ಅಂಶವಾಗಿದೆ. ಹ್ಯಾಂಗೋವರ್? ಈ ವ್ಯಾಯಾಮ ಮಾಡಿ

ಸಾಮಾನ್ಯವಾಗಿ ಹ್ಯಾಂಗೋವರ್ ಎಂಬುದು ಅಧಿಕ ಪ್ರಮಾಣದ ಆಲ್ಕೋಹಾಲ್ ಸೇವನೆಯಿಂದ ಕಾಣಿಸಿಕೊಳ್ಳುವ ಒಂದು ಸ್ಥಿತಿಯಾಗಿರುತ್ತದೆ. ಇದು ಬಂದಾಗ ನಿಮಗೆ ನಾಸಿಯಾ, ತಲೆನೋವು, ಸುಸ್ತು ಮತ್ತು ವಾಂತಿ ಸಹ ಕಾಣಿಸಿಕೊಳ್ಳಬಹುದು. ಆರೋಗ್ಯ ತಜ್ಞರು ಕುಡಿಯುವ ಮೊದಲು ಮತ್ತು ನಂತರ ಚೆನ್ನಾಗಿ ಊಟ ಮಾಡಲು ಸಲಹೆ ನೀಡುತ್ತಾರೆ. ಇದರ ಜೊತೆಗೆ ಚೆನ್ನಾಗಿ ನೀರು ಕುಡಿಯುವುದು ಸಹ ಮುಖ್ಯ ಎಂದು ನೆನಪಿಸುತ್ತಾರೆ. ಹ್ಯಾಂಗೋವರ್ ಅನ್ನು ಕಡಿಮೆ ಮಾಡಿಕೊಳ್ಳಲು ಲಿಂಬೆರಸವನ್ನು ಸೇವಿಸುವುದು ಒಳ್ಳೆಯ ಪರಿಹಾರ ಎಂಬುದನ್ನು ಮರೆಯಬಾರದು.

ಯಾವಾಗ ನೀವು ಸರಿಯಾಗಿ ಊಟ ಮಾಡದೆ ಆಲ್ಕೋಹಾಲನ್ನು ಸೇವಿಸುತ್ತೀರೋ, ಆಗ ನಿಮ್ಮ ಕರುಳಿನ ಗೋಡೆಗಳಲ್ಲಿ ಕಿರಿಕಿರಿಯನ್ನುಂಟು ಮಾಡಬಹುದು. ಆದ್ದರಿಂದ ನೀವು ಮದ್ಯಪಾನವನ್ನು ಸೇವಿಸುವ ಮುನ್ನ ಸರಿಯಾಗಿ ಊಟವನ್ನು ಮಾಡಿರಬೇಕಾದುದು ಅನಿವಾರ್ಯ. ವಯಸ್ಸಾದಂತೆ, ಮತ್ತು ನಿಮ್ಮ ದೇಹದ ತೂಕವು ಕಡಿಮೆಯಾದಂತೆ ನಿಮ್ಮ ಜೀರ್ಣ ಶಕ್ತಿಗೆ ಸಹಕರಿಸುವ ಕಿಣ್ವಗಳ ಪೂರೈಕೆಯು ಕಡಿಮೆಯಾಗುತ್ತವೆ. ಇನ್ನೂ ಕುತೂಹಲಕಾರಿ ವಿಚಾರವೇನೆಂದರೆ ಗಂಡಸರಿಗಿಂತ ಹೆಂಗಸರು ಹ್ಯಾಂಗೋವರಿನ ಪರಿಣಾಮಕ್ಕೆ ಹೆಚ್ಚು ತುತ್ತಾಗುತ್ತಾರಂತೆ.

ಇಡೀ ಅಧ್ಯಯನವು ಹ್ಯಾಂಗೋವರ್‌ಗೆ ಯಾವುದೇ ಪರಿಹಾರವನ್ನು ನೀಡಿಲ್ಲ ಎಂಬುದನ್ನು ನೀವು ಗಮನಿಸಬೇಕು. ಇದಕ್ಕೆ ಇರುವುದು ಒಂದೇ ಪರಿಹಾರ ಮದ್ಯಪಾನ ಅಥವಾ ಕುಡಿತಕ್ಕೆ ಗುಡ್‌ಬೈ ಹೇಳುವುದು. ಇಲ್ಲವೇ ಹಿತ-ಮಿತವಾಗಿ, ಯಾವುದಾದರು ಸಂತೋಷಕೂಟದಲ್ಲಿ ಮಾತ್ರ ಮದ್ಯಪಾನ ಮಾಡಿ.

English summary

Why Hangovers Get Worse With Age?

As you age, your hangovers may get worse according to a latest study. Age changes the way alcohol influences your system. That is why moderation is advisable as you age. The reason behind this is the degrading capacity of your liver with age. Other factors like lower muscle mass, higher body fat and lower levels of enzymes that metabolise alcohol do play a role in worsening your hangovers.
Story first published: Friday, January 1, 2016, 19:41 [IST]
X
Desktop Bottom Promotion