For Quick Alerts
ALLOW NOTIFICATIONS  
For Daily Alerts

'ಲಘು ಪಾನೀಯ' ಎಂಬ ಸೈಲೆಂಟ್ ಕಿಲ್ಲರ್‌ನ ಬಗ್ಗೆ ಕಟ್ಟೆಚ್ಚರ!

By Super
|

ಮೊದಲೆಲ್ಲಾ ಸೋಡಾ ಎಂಬ ಬುರುಗುಬರುವ ಬಾಟ್ಲಿಯಲ್ಲಿ ಗೋಲಿಯಿದ್ದ ಲಘುಪಾನೀಯವೇ ಭಾರತದಾದ್ಯಂತ ಜನಪ್ರಿಯ ಪಾನೀಯವಾಗಿತ್ತು. ಗೋಲಿಸೋಡಾ ಎಂದು ಕರೆಯುತ್ತಿದ್ದ ಇವನ್ನು ಮೂಲೆಗುಂಪಾಗಿಸಿದವು ಲಘುಪಾನೀಯಗಳು. ವಾಸ್ತವವಾಗಿ ಇದರ ಜನಪ್ರಿಯತೆ ಇದ್ದುದು ಇದರಲ್ಲಿ ಕರಗಿರುವ ಇಂಗಾಲದ ಡೈ ಆಕ್ಸೈಡ್ ಅನಿಲ. ಗೋಲಿ ಒಳಗೊತ್ತುತ್ತಿದ್ದಂತೆ ಅಥವಾ ಬಾಟಲಿಯ ಮುಚ್ಚಳ ತೆರೆಯುತ್ತಿದ್ದಂತೆಯೇ ಹೊರಬರುವ ನೊರೆ, ಕುಡಿಯುವಾಗ ಗಂಟಲಿನಲ್ಲಿ ನೊರೆ ಹೊರಬರುವ ಅನುಭವವೇ ಇದರ ಜನಪ್ರಿಯತೆಯ ಗುಟ್ಟಾಗಿತ್ತು. ಆದರೆ ಈ ಸರಳ ತಂತ್ರವನ್ನು ಸಿಹಿಯಾದ ಪಾನೀಯದಲ್ಲಿಟ್ಟು ಮಾರುವ ಬಹುರಾಷ್ಟ್ರೀಯ ಸಂಸ್ಥೆಗಳು ಬಂದ ಬಳಿಕ ಗೋಲಿಸೋಡಾ ಮೂಲೆಗುಂಪಾಯಿತು.

ಈಗ ಸರಿಸುಮಾರು ಭಾರತದ ಪ್ರತಿ ಗ್ರಾಮವನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಈ ಲಘು ಪಾನೀಯ ಒಂದು ರೀತಿಯ ನಿಧಾನ ವಿಷ. ಒಂದು ಬದಲಾವಣೆಗಾಗಿ ನೀವು ನಿತ್ಯವೂ ಕುಡಿಯುತ್ತಿರುವ ಲಘುಪಾನೀಯದ ಬದಲು ಉಗುರುಬೆಚ್ಚಗಿನ ನೀರು ಕುಡಿದು ನೋಡಿ. ಕೆಲವೇ ದಿನಗಳಲ್ಲಿ ಬದಲಾವಣೆಯನ್ನು ಸ್ವತಃ ಗಮನಿಸುತ್ತೀರಿ. ಮಾನವನ ಶರೀರಕ್ಕೆ ನೀರು ಅತಿ ಅಗತ್ಯವಾಗಿ ಬೇಕು. ಈ ಅಗತ್ಯವನ್ನು ನೀರಿನಿಂದಲೇ ಪೂರೈಸುವುದು ಉತ್ತಮ. ಅದರ ಬದಲಿಗೆ ಲಘು ಪಾನೀಯದ ಬಳಕೆ ಆರೋಗ್ಯಕ್ಕೆ ಮಾರಕ. ತಂಪು ಪಾನೀಯ ಸೇವನೆ: ಅಪಾಯ ಕಟ್ಟಿಟ್ಟ ಬುತ್ತಿ!

ಯಾವ ಯಾವ ರೀತಿಯಲ್ಲಿ ಇದು ಮಾರಕ? ನಾವು ಇಷ್ಟು ದಿನದಿಂದ ಕುಡಿಯುತ್ತಿದ್ದೇವೆ, ಏನೂ ಆಗಿಲ್ಲವಲ್ಲ, ಎಂದು ಇದರ ಅಭಿಮಾನಿಗಳು ಕಾಲು ಕೆದರಿ ಕೋಳಿ ಜಗಳಕ್ಕೆ ಬರಬಹುದು. ಇದಕ್ಕೆ ಅವರಿಗೆ ಕೆಲವು ವಾಸ್ತವಗಳನ್ನು ತಿಳಿಸುವ ಮೂಲಕ ಇದರ ಅಪಾಯಗಳನ್ನು ಮನದಟ್ಟು ಮಾಡುವುದು ಒಳಿತು. ಪ್ರಮುಖ ವಾಸ್ತವವೆಂದರೆ ಇದೊಂದು ಕಹಿಯಾದ ಪಾನೀಯವಾಗಿದ್ದು ಇದರ ಕಹಿ ಗೊತ್ತಾಗದೇ ಇರಲು ಇದಕ್ಕೆ ಸಕ್ಕರೆ ಸೇರಿಸಲಾಗಿರುತ್ತದೆ. ಎಷ್ಟು ಎಂದರೆ ಸಾಮಾನ್ಯ ಕಾಫಿ ಟೀಗೆ ಬಳಸುವ ಪ್ರಮಾಣದ ಏಳುಪಟ್ಟು ಹೆಚ್ಚು. ತಂಪು ಪಾನೀಯ ಕುಡಿದರೆ ಕಿಡ್ನಿ ಹಾಳಾಗುವುದೇ?

ಈ ಹೆಚ್ಚುವರಿ ಸಕ್ಕರೆ ಯಾವ ತರಹದಲ್ಲಿ ದೇಹಕ್ಕೆ ಕೆಟ್ಟದು ಮಾಡುತ್ತದೆ ಎಂದು ಪಟ್ಟಿ ಮಾಡಿದರೆ ಬಹಳ ಉದ್ದವಾಗುತ್ತದೆ. ದೇಹದ ತೂಕ ಹೆಚ್ಚುತ್ತದೆ, ಅಥವಾ ನಿಮ್ಮ ತೂಕವಿಳಿಸುವ ಪ್ರಯತ್ನಗಳಿಗೆ ಹಿನ್ನಡೆಯುಂಟಾಗುತ್ತದೆ. ಒಮ್ಮೆ ಕುಡಿದರೆ ವ್ಯಸನವಾಗಿ ಮಾರ್ಪಾಡಲು ಹೆಚ್ಚು ಸಮಯ ಬೇಕಾಗಿಲ್ಲ. ಪ್ರತಿಬಾರಿ ಕುಡಿದ ಬಳಿಕವೂ ಅಪಾರ ಪ್ರಮಾಣದಲ್ಲಿ ಸಕ್ಕರೆ ದೇಹ ಸೇರುವುದರಿಂದ ಆರೋಗ್ಯ ಕೆಡುತ್ತಾ ಹೋಗುತ್ತದೆ. ಇದರ ಬದಲಿಗೆ ನೀರು ಕುಡಿಯುವುದೇ ಉತ್ತಮ. ಅದರಲ್ಲೂ ಉಗುರುಬೆಚ್ಚನೆಯ ನೀರು ಆರೋಗ್ಯಕ್ಕೆ ಪೂರಕವಾಗಿದೆ. ಬನ್ನಿ, ಇದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ..

ಬೆವರು ಹೆಚ್ಚುತ್ತದೆ

ಬೆವರು ಹೆಚ್ಚುತ್ತದೆ

ನಮ್ಮ ದೇಹದ ತಾಪಮಾನವನ್ನು ಯಥಾಸ್ಥಿತಿಯಲ್ಲಿರಿಸಲು ಬೆವರುವುದು ಅತಿ ಅಗತ್ಯವಾಗಿದೆ. ಉಗುರುಬೆಚ್ಚನೆಯ ನೀರನ್ನು ಕುಡಿಯುವ ಮೂಲಕ ದೇಹ ತಾಪಮಾನವನ್ನು ಉಳಿಸಿಕೊಳ್ಳುತ್ತದೆ ಹಾಗೂ ಬೆವರುವ ಕ್ರಿಯೆ ಸುಲಭವಾಗುತ್ತದೆ.

ಬೆವರು ಹೆಚ್ಚುತ್ತದೆ

ಬೆವರು ಹೆಚ್ಚುತ್ತದೆ

ಅಂದರೆ ತಣ್ಣೀರು ಕುಡಿದರೆ ಆ ತಣ್ಣನೆಯ ನೀರನ್ನು ಬಿಸಿಮಾಡಿಕೊಳ್ಳಲು ದೇಹ ಕೊಂಚ ತಾಪಮಾನವನ್ನು ಕಳೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ ಅತಿ ತಣ್ಣನೆಯ ಲಘುಪಾನೀಯ ಕುಡಿದರೆ ಈ ದ್ರವವನ್ನು ಬಿಸಿಮಾಡಲು ನಮ್ಮ ಜೀರ್ಣಾಂಗಗಳು ಕಷ್ಟಪಡಬೇಕಾಗುತ್ತದೆ. ಇದು ಬೆವರುವಿಕೆಯ ಕ್ರಿಯೆಯನ್ನು ಬಾಧಿಸುತ್ತದೆ.

ಮಧುಮೇಹದ ಸಾಧ್ಯತೆ

ಮಧುಮೇಹದ ಸಾಧ್ಯತೆ

ಸಕ್ಕರೆ ತಿನ್ನುವುದರಿಂದ ಮಧುಮೇಹ ಬರುವುದಿಲ್ಲ. ಆದರೆ ದೇಹಕ್ಕೆ ಅಗತ್ಯಕ್ಕಿಂತಲೂ ಹೆಚ್ಚು ಸಕ್ಕರೆ ಲಭ್ಯವಾದರೆ ನಮ್ಮ ಮೇದೋಜೀರಕ ಗ್ರಂಥಿ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದ ಇನ್ಸುಲಿನ್ ಉತ್ಪತ್ತಿಸಬೇಕು. ಈ ಅಗತ್ಯತೆ ಗ್ರಂಥಿಯ ಮೇಲೆ ಒತ್ತಡ ಹೇರುತ್ತದೆ. ಪರಿಣಾಮವಾಗಿ ಇದರ ಕ್ಷಮತೆ ಕುಗ್ಗುತ್ತದೆ ಹಾಗೂ ಒಂದು ವೇಳೆ ಅನುವಂಶಿಕ ಅಥವಾ ಇತರ ಕಾರಣಗಳಿಂದ ಮಧುಮೇಹ ನಿಮಗೆ ಬರುವ ಸಾಧ್ಯತೆ ಇದ್ದಲ್ಲಿ ಮುಂದೆಂದೋ ಬರಬೇಕಾಗಿದ್ದುದು ತುಂಬಾ ಬೇಗನೇ ಬರುತ್ತದೆ.

ಮಧುಮೇಹದ ಸಾಧ್ಯತೆ

ಮಧುಮೇಹದ ಸಾಧ್ಯತೆ

ಅಲ್ಲದೆ ದಿನಕ್ಕೊಂದು ಬಾಟಲಿ ಲಘುಪಾನೀಯ ಕುಡಿದರೆ ನಮ್ಮ ಅಗತ್ಯಕ್ಕೂ ಐದಾರು ಪಟ್ಟು ಹೆಚ್ಚಿನ ಸಕ್ಕರೆ ದೇಹಕ್ಕೆ ಲಭಿಸುವುದರಿಂದ ಮಧುಮೇಹವನ್ನು ನಮ್ಮ ಕೈಯಾರೆ ಆಹ್ವಾನಿಸಿದಂತಾಗುತ್ತದೆ. ಬದಲಿಗೆ ಬಿಸಿನೀರಿನ ಸೇವನೆ ಈ ಸಾಧ್ಯತೆಯನ್ನು ಅತಿ ದೂರಾಗಿಸುತ್ತದೆ.

ದೇಹದ ಸಂತುಲತೆಗೆ ಬಿಸಿ ನೀರು ಸೇವಿಸಿ

ದೇಹದ ಸಂತುಲತೆಗೆ ಬಿಸಿ ನೀರು ಸೇವಿಸಿ

ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದರೆ ಹಲವು ವಿಧದಲ್ಲಿ ಸಂತುಲತೆ ಏರುಪೇರಾಗುತ್ತದೆ. ಬದಲಿಗೆ ಬಿಸಿನೀರಿನ ಸೇವನೆ ಈ ಸಂತುಲತೆಯನ್ನು ಕಾಪಾಡುತ್ತದೆ.

ಶೀತವನ್ನು ಇನ್ನಷ್ಟು ಹೆಚ್ಚಿಸುತ್ತದೆ

ಶೀತವನ್ನು ಇನ್ನಷ್ಟು ಹೆಚ್ಚಿಸುತ್ತದೆ

ಸಾಮಾನ್ಯವಾಗಿ ತಣ್ಣೀರು ಕುಡಿದಾಕ್ಷಣ ಹೆಚ್ಚಿನವರಿಗೆ ಶೀತವಾಗುತ್ತದೆ. ಒಂದು ವೇಳೆ ನಿಮ್ಮನ್ನು ಶೀತ ನೆಗಡಿ ಕಾಡುತ್ತಿದ್ದರೆ ನಿಮಗೆ ಬಿಸಿನೀರೇ ಅತ್ಯುತ್ತಮ. ಇದು ಶೀತದ ವಿರುದ್ದ ಹೋರಾಡಲು ದೇಹಕ್ಕೆ ಹೆಚ್ಚಿನ ಬೆಂಬಲ ನೀಡುತ್ತದೆ. ಬದಲಿಗೆ ಲಘುಪಾನೀಯ ಕುಡಿದರೆ ಇದು ಶೀತ ನೆಗಡಿಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ.

ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಬಿಸಿನೀರಿನ ಸೇವನೆಯಿಂದ ಜೀವರಾಸಾಯನಿಕ ಕ್ರಿಯೆ ಉತಮಗೊಳ್ಳುತ್ತದೆ. ಒಂದು ಸಂಶೋಧನೆಯ ಪ್ರಕಾರ ಬಿಸಿನೀರಿನ ಸೇವನೆಯಿಂದ ಮೆದುಳಿಗೆ ಲಭ್ಯವಾಗುವ ಸೂಚನೆಗಳು ಮುದನೀಡಲು ನೆರವಾಗುತ್ತವೆ. ಬದಲಿಗೆ ತಣ್ಣನೆಯ ಲಘುಪಾನೀಯ ಕುಡಿದರೆ ಇದು ಹಸಿವನ್ನು ಮತ್ತು ಇನ್ನಷ್ಟು ಪಾನೀಯ ಕುಡಿಯಲು ಪ್ರೇರೇಪಿಸುತ್ತದೆ.

ಸೋಂಕುಗಳಿಂದ ರಕ್ಷಿಸುತ್ತದೆ

ಸೋಂಕುಗಳಿಂದ ರಕ್ಷಿಸುತ್ತದೆ

ನಮ್ಮ ದೇಹಕ್ಕೆ ಸದಾ ಕಾಡುವ ವೈರಸ್ಸು, ಬ್ಯಾಕ್ಟೀರಿಯಾಗಳಿಂದ ಕಾಪಾಡಲು ನೀರು ಅವಶ್ಯಕ. ಬಿಸಿಮಾಡುವ ಮೂಲಕ ನೀರಿನಲ್ಲಿದ್ದ ಬ್ಯಾಕ್ಟೀರಿಯಾಗಳು ನಿವಾರಣೆಯಾಗಿ ದೇಹ ಸೋಂಕಿನಿಂದ ರಕ್ಷಿಸಲ್ಪಡುತ್ತದೆ. ಬದಲಿಗೆ ತಣ್ಣೀರು ಅಥವಾ ತಣ್ಣನೆಯ ಲಘುಪಾನೀಯ ಸೋಂಕು ಹೆಚ್ಚಿಸಲು ಕಾರಣವಾಗುತ್ತದೆ.

ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ

ಊಟದ ನಡುವೆ ಮತ್ತು ಊಟದ ಬಳಿಕ ಕೊಂಚ ಬಿಸಿನೀರಿನ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ. ಇದರ ಬದಲಿಗೆ ತಣ್ಣನೆಯ ಲಘುಪಾನೀಯ ಕುಡಿದರೆ ಇದರ ತಂಪು ಹೊಟ್ಟೆಯಲ್ಲಿದ್ದ ಆಹಾರಗಳನ್ನು ಘನೀಕರಿಸುತ್ತದೆ. ವಿಶೇಷವಾಗಿ ಎಣ್ಣೆಜಿಡ್ಡನ್ನು ಇದು ಗಟ್ಟಿಯಾಗಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ಅಪಾರವಾಗಿ ಬಾಧಿಸುತ್ತದೆ.

ಹಲ್ಲುಗಳು ಗಟ್ಟಿಗೊಳ್ಳುತ್ತವೆ

ಹಲ್ಲುಗಳು ಗಟ್ಟಿಗೊಳ್ಳುತ್ತವೆ

ಲಘುಪಾನೀಯದಲ್ಲಿರುವ ಕೆಲವು ರಾಸಾಯನಿಕಗಳು ಮೂಳೆಯನ್ನು ಕರಗಿಸುವ ಕ್ಷಮತೆ ಹೊಂದಿವೆ. ಲಘುಪಾನೀಯದ ಸೇವನೆಯಿಂದ ನಿಧಾನವಾಗಿ ಈ ರಾಸಾಯನಿಕ ದೇಹದಲ್ಲಿ ಸಾಂದ್ರಗೊಳ್ಳುತ್ತಾ ಮೂಳೆ ಮತ್ತು ಹಲ್ಲುಗಳನ್ನು ಶಿಥಿಲಗೊಳಿಸುತ್ತದೆ.

ಹಲ್ಲುಗಳು ಗಟ್ಟಿಗೊಳ್ಳುತ್ತವೆ

ಹಲ್ಲುಗಳು ಗಟ್ಟಿಗೊಳ್ಳುತ್ತವೆ

ವಿಶೇಷವಾಗಿ ಸೂಕ್ಷ್ಮವಾದ ಒಸಡಿನೊಳಗಿನ ಹಲ್ಲುಗಳ ಬೇರುಗಳು ಬಲ ಕಳೆದುಕೊಂಡು ಸುಲಭವಾಗಿ ಬಿದ್ದು ಬಿಡುತ್ತವೆ. ಇದರ ಬದಲಿಗೆ ಬಿಸಿನೀರು ಕುಡಿಯುವುದರಿಂದ ಕ್ಯಾಲ್ಸಿಯಂ ಹೀರಿಕೊಳ್ಳಲು ನೆರವಾಗಿ ಹಲ್ಲು ಮತ್ತು ಮೂಳೆಗಳು ಬಲಗೊಳ್ಳುತ್ತವೆ.

English summary

Why Cold Drinks Are Bad For You?

Try a new habit! Whenever you feel like drinking a cold drink, drink a cup of hot water and see the difference. Yes, there would be lots of health benefits. Firstly, sugary drinks contain calories whereas hot water doesn't. So, your weight loss goals can be achieved. Also, cold drinks are addictive. They make you consume more and more. You may feel like getting that sugar 'high' every time you feel a crash state. This may cause problems to your blood sugar levels in the long run.
Story first published: Wednesday, January 27, 2016, 15:41 [IST]
X
Desktop Bottom Promotion