ಮಧ್ಯಾಹ್ನ ಊಟದ ಜೊತೆ, ಒಂದು ಮೊಟ್ಟೆಯೂ ಇರಲಿ!

By: Hemanth
Subscribe to Boldsky

ದಿನಾಲೂ ನಾವು ಕಚೇರಿಗೆ ಊಟದ ಡಬ್ಬಿ ತೆಗೆದುಕೊಂಡು ಹೋಗುತ್ತೇವೆ. ಪ್ರತೀ ದಿನ ಅನ್ನ, ಚಪಾತಿ ಮತ್ತು ಏನಾದರೂ ತರಕಾರಿ ಪಲ್ಯ, ಸಾರು ಇದ್ದೇ ಇರುತ್ತದೆ. ದಿನಾಲೂ ಇದನ್ನೇ ತಿಂದು ತಿಂದು ನಿಮಗೂ ಬೇಜಾರು ಆಗಬಹುದು. ಏನಾದರೂ ಹೊಸತು ಬೇಕೆಂದು ನಾವು ಬಯಸುತ್ತೇವೆ ತಾನೇ? ಅದಕ್ಕೆ ಸುಲಭವಾದ ವಿಧಾನವೆಂದರೆ ಬೇಯಿಸಿದ ಮೊಟ್ಟೆಗಳು.

ಹೌದು, ದಿನಕ್ಕೊಂದು ಸೇಬು ತಿನ್ನಿ ವೈದ್ಯರಿಂದ ದೂರವಿರಿ ಎನ್ನುವ ಮಾತಿದೆ. ಅಂತೆಯೇ ದಿನಕ್ಕೊಂದು ಮೊಟ್ಟೆ ತಿಂದು ನಿಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿ ಎಂದು ಅಧ್ಯಯನಗಳು ಹೇಳುತ್ತಿವೆ. ಮೊಟ್ಟೆಯಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ದೊಡ್ಡ ಮಟ್ಟದಲ್ಲಿ ನೆರವಾಗುವುದು ಮಾತ್ರವಲ್ಲದೆ, ದೇಹವನ್ನು ಆಕ್ರಮಿಸುವ ಹಲವಾರು ರೀತಿಯ ರೋಗಗಳನ್ನು ಇದು ತಡೆಯುತ್ತದೆ. ಕೈಗೆಟಕುವ ಬೆಲೆಯಲ್ಲಿ ಸಿಗುವ ಮೊಟ್ಟೆ ಇತರ ದುಬಾರಿ ಆಹಾರಗಳಿಗಿಂತ ಚೆನ್ನಾಗಿ ನಿಮ್ಮ ದೇಹವನ್ನು ರಕ್ಷಿಸುತ್ತದೆ.  ಅತ್ಯಂತ ಆರೋಗ್ಯಕರವಾದ 8 ಬಗೆಯ ಮೊಟ್ಟೆಗಳು

ಅಲ್ಲದೆ ಇದರಲ್ಲಿ ಪ್ರೋಟೀನ್, ವಿಟಮಿನ್ ಹಾಗೂ ಖನಿಜಾಂಶಗಳಿವೆ ಆಗಾಧ ಪ್ರಮಾಣದಲ್ಲಿದ್ದು, ಪೊಸ್ಪೊರಸ್, ವಿಟಮಿನ್ ಬಿ12, ರಿಬೊಫ್ಲಾವಿನ್, ಚಾಲಿನ್ ಮತ್ತು ಆ್ಯಮಿನೊ ಆ್ಯಸಿಡ್‌ನ ಪ್ರಮಾಣ ಆರೋಗ್ಯವನ್ನು ವರ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇನ್ನು ಮೊಟ್ಟೆಯಲ್ಲಿರುವ ಪ್ರೋಟೀನ್ ಸ್ನಾಯುಗಳನ್ನು ಬಲಪಡಿಸಿ ನಿಮ್ಮನ್ನು ಚುರುಕಾಗಿಸುವುದರ ಜೊತೆಗೆ, ಇದರಲ್ಲಿರುವ ಸೆಲೆನಿಯಂ ಮತ್ತು ಅಯೋಡಿನ್ ಅಂಶಗಳು ನಿಮ್ಮನ್ನು ಇನ್ನಷ್ಟು ಲವಲವಿಕೆಯಿಂದ ಕೂಡಿರುವಂತೆ ಮಾಡುತ್ತದೆ.   ಮೊಟ್ಟೆಯ ಬಗ್ಗೆ ನೀವು ತಿಳಿಯಲೇಬೇಕಾದ ಅಂಶಗಳಿವು!

ಇನ್ನು ಮೊಟ್ಟೆಯನ್ನು ನಿಮ್ಮ ಆಹಾರ ಕ್ರಮಕ್ಕೆ ಸೇರಿಸಿಕೊಳ್ಳಲು ಹೆಚ್ಚು ಕಷ್ಟಪಡಬೇಕಿಲ್ಲ. ಇದಕ್ಕಾಗಿ ಹೆಚ್ಚಿನ ಸಮಯದ ವ್ಯಯವೂ ಆಗುವುದಿಲ್ಲ ಮತ್ತು ದೊಡ್ಡ ತಯಾರಿಯೂ ಬೇಕಿಲ್ಲ. ಮಧ್ಯಾಹ್ನದ ಊಟದ ವೇಳೆ ಮೊಟ್ಟೆ ತಿಂದರೆ ನಿಮಗೆ ಯಾವ ರೀತಿಯ ಲಾಭಗಳು ಆಗುತ್ತದೆ ಎನ್ನುವ ಬಗ್ಗೆ ನಾವು ತಿಳಿದುಕೊಳ್ಳುವ....

ಪ್ರಯೋಜನ #1

ಪ್ರಯೋಜನ #1

ಮೊಟ್ಟೆಯಲ್ಲಿ ಕೇವಲ 78 ಕ್ಯಾಲರಿ ಇದೆ ಮತ್ತು ಮಧ್ಯಾಹ್ನದ ಊಟದ ವೇಳೆ ಕೇವಲ ಎರಡು ಮೊಟ್ಟೆ ಮಾತ್ರ ತಿನ್ನಬೇಕು. ನಿಮ್ಮ ಸಾಮಾನ್ಯ ಊಟವು ಸುಮಾರು 500 ಕ್ಯಾಲರಿ ಹೊಂದಿರುತ್ತದೆ.

ಪ್ರಯೋಜನ #2

ಪ್ರಯೋಜನ #2

ಕೆಲವೊಂದು ಅಧ್ಯಯನಗಳ ಪ್ರಕಾರ ಬೆಳಗ್ಗಿನ ಉಪಹಾರಕ್ಕೆ ಮೊಟ್ಟೆಯನ್ನು ತಿನ್ನುವ ವ್ಯಕ್ತಿಗಳು 36 ಗಂಟೆಗಳಲ್ಲಿ ಇತರರಿಗಿಂತ ಶೇ. 25ರಷ್ಟು ಕಡಿಮೆ ವ್ಯಯ ಮಾಡುತ್ತಾರೆ.

ಪ್ರಯೋಜನ #3

ಪ್ರಯೋಜನ #3

ಮೊಟ್ಟೆಯು ಚಯಾಪಚಯಾ ಕ್ರಿಯೆಯನ್ನು ಉತ್ತಮಪಡಿಸುತ್ತದೆ ಎಂದು ಹಲವಾರು ಅಧ್ಯಯನಗಳು ಹೇಳಿವೆ. ಮೊಟ್ಟೆಯಲ್ಲಿ ಕೆಲವೊಂದು ಪೋಷಕಾಂಶಗಳನ್ನು ಕರಗಿಸಲು ನಿಮ್ಮ ದೇಹಕ್ಕೆ ಹೆಚ್ಚಿನ ಶಕ್ತಿ ಬೇಕಾಗುತ್ತದೆ. ಇದರಿಂದ ದೇಹದ ಬೊಜ್ಜು ಕರಗುವುದು.

ಪ್ರಯೋಜನ #4

ಪ್ರಯೋಜನ #4

ಮೊಟ್ಟೆಯಲ್ಲಿ ಪ್ರೋಟೀನ್ ಮತ್ತು ಹಲವಾರು ರೀತಿಯ ಪೋಷಕಾಂಶಗಳಿವೆ. ನಿಮಗೆ ಹೊಟ್ಟೆ ತುಂಬಿದ ಭಾವನೆಯಾಗುತ್ತದೆ. ಇದರಿಂದ ಆಗಾಗ ತಿನ್ನುವುದು ಕಡಿಮೆಯಾಗುತ್ತದೆ.

ಪ್ರಯೋಜನ #5

ಪ್ರಯೋಜನ #5

ಮೊಟ್ಟೆಯಲ್ಲಿ ಎರಡು ರೀತಿಯ ಆ್ಯಂಟಿಆಕ್ಸಿಡೆಂಟ್ ಗಳಿವೆ. ಲುಟೈನ್ ಮತ್ತು ಝೆಕ್ಸಾಥಿನ್ ಎನ್ನುವ ಆ್ಯಂಟಿಆಕ್ಸಿಡೆಂಟ್ ಗಳು ಕಣ್ಣುಗಳು ಮತ್ತು ಕಣ್ಣುಗಳನ್ನು ಕಾಡುವ ರೋಗಗಳನ್ನು ತಡೆಯುವುದು.

ಪ್ರಯೋಜನ #6

ಪ್ರಯೋಜನ #6

ದೇಹಕ್ಕೆ ಬೇಕಾದ ಪ್ರತಿಯೊಂದು ಪೋಷಕಾಂಶಗಳು(ಸಣ್ಣ ಪ್ರಮಾಣದಲ್ಲಾದರೂ) ಮೊಟ್ಟೆಯಲ್ಲಿ ಇರುವುದರಿಂದ ಇದನ್ನು ಪೋಷಕಾಂಶಗಳಿಂದ ಕೂಡಿದ ಆಹಾರವೆಂದೇ ಪರಿಗಣಿಸಲಾಗುತ್ತದೆ.

ಪ್ರಯೋಜನ #7

ಪ್ರಯೋಜನ #7

ಇತರ ಯಾವುದೇ ಪ್ರೋಟೀನ್ ಪಾನೀಯ ಅಥವಾ ಮಾತ್ರೆಗಳಿಗಿಂತ ಮೊಟ್ಟೆಯು ತುಂಬಾ ಅಗ್ಗ. ನಿಮಗೆ ಫಿಟ್ನೆಸ್ ಕಾಪಾಡಬೇಕೆಂದರೆ ಮೊಟ್ಟೆ ಬಳಸಿ.

 
English summary

Why Boiled Eggs Are The Best Lunch

Yes, the simplest option for your lunch is eggs. And yes, they are also good if you have weight loss targets. Also, if you are too confused about what to eat every afternoon in your office, eggs will solve your problem. Now, let us discuss about the benefits of choosing eggs as your lunch.
Subscribe Newsletter