For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: ಗ್ರೀನ್ ಟೀ ಕುಡಿಯುವ ಮುನ್ನ....

By Manu
|

ಆರೋಗ್ಯದ ಬಗ್ಗೆ ಜಾಗೃತಿ ಮೂಡುತ್ತಿರುವ ಇಂದಿನ ದಿನಗಳಲ್ಲಿ ಆಹಾರ ಕ್ರಮಗಳನ್ನು ಸರಿಯಾಗಿ ಅನುಸರಿಸಿಕೊಂಡು ಹೋಗಲು ಒಂದಿಷ್ಟು ಮಂದಿಯಾದರೂ ನಿರ್ಧರಿಸಿದ್ದಾರೆ. ಇದರಿಂದಾಗಿಯೇ ಸಾವಯವ, ಪೌಷ್ಠಿಕ ಮತ್ತು ಆರೋಗ್ಯದಾಯಕ ಆಹಾರಗಳು ಹೆಚ್ಚು ಬೇಡಿಕೆಯಲ್ಲಿದೆ. ಆರೋಗ್ಯಕ್ಕೆ ಸಹಕಾರಿಯಾಗಬಲ್ಲ ಪಾನೀಯವೊಂದು ಈಗ ಸಾಕಷ್ಟು ಜನರನ್ನು ಸೆಳೆಯುತ್ತಿದೆ. ತುಳಸಿ-ಗ್ರೀನ್ ಟೀಯ ಜೋಡಿ-ಮಾಡಲಿದೆ ಕಮಾಲಿನ ಮೋಡಿ

ಈ ಲೇಖನದಲ್ಲಿ ಹೇಳಲು ಹೊರಟಿರುವುದು ಗ್ರೀನ್ ಟೀ (ಹಸಿರು ಚಹಾ)ಬಗ್ಗೆ. ಬೊಜ್ಜು ಕರಗಿಸಲು, ತೂಕ ಕಡಿಮೆ ಮಾಡಲು, ಜೀರ್ಣ ಶಕ್ತಿ ಹೆಚ್ಚಿಸಲು, ಚುರುಕು ಹಾಗೂ ಯೌವನಭರಿತವಾಗಿ ಮತ್ತು ಆರೋಗ್ಯವಾಗಿರಲು ಗ್ರೀನ್ ಟೀ ತುಂಬಾ ಸಹಕಾರಿ. ಆದರೆ ಹೆಚ್ಚಾದರೆ ಅಮೃತವು ವಿಷ ಎನ್ನುವ ಗಾದೆಯಿದೆ. ರಾತ್ರಿ ಮಲಗುವ ಮುನ್ನ 'ಗ್ರೀನ್ ಟೀ' ಕುಡಿದರೆ ದುಪ್ಪಟ್ಟು ಲಾಭ!

ಇದರಿಂದಾಗಿ ಗ್ರೀನ್ ಟೀಯನ್ನು ಪದೇ ಪದೇ ಕುಡಿಯಬಾರದು ಮತ್ತು ಯಾವುದೋ ಸಮಯದಲ್ಲಿ ಇದನ್ನು ಕುಡಿದರೆ ಅದರಿಂದ ಅಡ್ಡಪರಿಣಾಮಗಳು ಉಂಟಾಗಲಿದೆ. ಗ್ರೀನ್ ಟೀಯಲ್ಲಿ ಕೆಫೀನ್ ಮತ್ತು ಟಾನ್ನಿನ್ಸ್ ಇದೆ. ಇದು ಗ್ಯಾಸ್ಟ್ರಿಕ್‌ನ ರಸವನ್ನು ಹೆಚ್ಚಿಸಿ ಹೊಟ್ಟೆಗೆ ತೊಂದರೆ ಉಂಟು ಮಾಡಬಹುದು. ಇದರಿಂದ ವಾಕರಿಕೆ, ಗ್ಯಾಸ್ಟ್ರಿಕ್ ನೋವು ಮತ್ತು ಹೊಟ್ಟೆಯ ಆ್ಯಸಿಡಿಟಿ ಉಂಟಾಗಬಹುದು. ಗ್ರೀನ್ ಟೀಯನ್ನು ಯಾವ್ಯಾವ ಸಮಯದಲ್ಲಿ ಕುಡಿಯಬೇಕು ಮತ್ತು ಯಾವ್ಯಾವ ಸಮಯದಲ್ಲಿ ಕುಡಿಯಬಾರದು ಎನ್ನುವ ಬಗ್ಗೆ ತಿಳಿದುಕೊಳ್ಳಿ. ತ್ವಚೆಯ ಕಾಂತಿ ಹೆಚ್ಚಿಸಲು ಬಳಸಿ ಗ್ರೀನ್ ಟೀ ಫೇಸ್ ಪ್ಯಾಕ್!

ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿಯಬೇಡಿ

ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿಯಬೇಡಿ

ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿಯುವುದರಿಂದ ಅದು ಜೀರ್ಣಾಂಗ ವ್ಯವಸ್ಥೆಯನ್ನು ಸ್ವಚ್ಛಗೊಳಿಸುತ್ತದೆ ಎನ್ನುವ ನಂಬಿಕೆಯಿದೆ. ಇದನ್ನು ಕಡೆಗಣಿಸಬೇಕು. ಗ್ರೀನ್ ಟೀಯಲ್ಲಿ ಕೆಫೀನ್ ಇದೆ. ಇದು ಗ್ಯಾಸ್ಟ್ರಿಕ್ ಜ್ಯೂಸ್‌ ಅನ್ನು ಹೆಚ್ಚಿಸುವ ಕಾರಣದಿಂದ ಪ್ಲೀಹ ಮತ್ತು ಹೊಟ್ಟೆಯಲ್ಲಿ ತೊಂದರೆ ಉಂಟು ಮಾಡಬಹುದು.

ಗ್ರೀನ್ ಟೀ ಕುಡಿಯಲು ಸರಿಯಾದ ಸಮಯ

ಗ್ರೀನ್ ಟೀ ಕುಡಿಯಲು ಸರಿಯಾದ ಸಮಯ

ಗ್ರೀನ್ ಟೀ ಪರಿಣಾಮಕಾರಿಯಾಬೇಕೆಂದರೆ ಊಟಕ್ಕೆ ಅರ್ಧ ಗಂಟೆಗೆ ಮೊದಲು ಅಥವಾ ಊಟವಾದ 1-2 ಗಂಟೆ ಬಳಿಕ ಕುಡಿಯಬೇಕು.

ಹಾಲು ಮತ್ತು ಸಕ್ಕರೆ ಸೇರಿಸಬೇಡಿ

ಹಾಲು ಮತ್ತು ಸಕ್ಕರೆ ಸೇರಿಸಬೇಡಿ

ಗ್ರೀನ್ ಟೀಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಮತ್ತು ಥೇನೈನ್ ಆರೋಗ್ಯಕ್ಕೆ ಒಳ್ಳೆಯದು. ಆದರೆ ಹಾಲಿನ ಪ್ರೋಟೀನ್ ಮತ್ತು ಸಕ್ಕರೆಯಲ್ಲಿನ ಕ್ಯಾಲರಿ ಗ್ರೀನ್ ಟೀಯಲ್ಲಿ ಸೇರಿದಾಗ ಅದು ದೇಹದ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ. ಇದರಿಂದ ದೇಹಕ್ಕೆ ಆರೋಗ್ಯ ಲಾಭಗಳು ಸಿಗುವುದಿಲ್ಲ.

ಜೇನುತುಪ್ಪ ಹಾಕಿ ಗ್ರೀನ್ ಟೀ ಕುಡಿಯಿರಿ

ಜೇನುತುಪ್ಪ ಹಾಕಿ ಗ್ರೀನ್ ಟೀ ಕುಡಿಯಿರಿ

ಗ್ರೀನ್ ಟೀಯಲ್ಲಿರುವ ಕೆಫಿನ್ ಮತ್ತು ಜೇನಿನಲ್ಲಿರುವ ವಿಟಮಿನ್ ನರಗಳನ್ನು ಪುರ್ನಯೌವನಗೊಳಿಸಿ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ. ಜೇನು ಕ್ಯಾಲರಿ ಕಡಿಮೆ ಮಾಡಲು ಮತ್ತು ಗ್ರೀನ್ ಟೀ ಚಯಾಪಚಾಯ ಕ್ರಿಯೆ ಸುಧಾರಿಸಲು ನೆರವಾಗುವುದು.

ಊಟವಾದ ಕೂಡಲೇ ಗ್ರೀನ್ ಟೀ ಸೇವನೆ ಮಾಡಬೇಡಿ

ಊಟವಾದ ಕೂಡಲೇ ಗ್ರೀನ್ ಟೀ ಸೇವನೆ ಮಾಡಬೇಡಿ

ಊಟವಾದ ತಕ್ಷಣ ಗ್ರೀನ್ ಟೀ ಸೇವನೆ ಮಾಡಬಾರದು. ಗ್ರೀನ್ ಟೀಯಲ್ಲಿನ ಕೆಫೀನ್ ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡುವುದು ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳಲು ದೇಹಕ್ಕೆ ಕಷ್ಟವಾಗುವುದು.

ದಿನದಲ್ಲಿ 2-3 ಕಪ್

ದಿನದಲ್ಲಿ 2-3 ಕಪ್

ಆರೋಗ್ಯಕದ ಲಾಭವನ್ನು ಪಡೆಯಬೇಕೆಂದರೆ ದಿನದಲ್ಲಿ 2-3 ಕಪ್ ಗ್ರೀನ್ ಟೀ ಕುಡಿಯಲೇಬೇಕು. ಗ್ರೀನ್ ಟೀ ಆ್ಯಂಟಿಆಕ್ಸಿಡೆಂಟ್ ಮತ್ತು ಫ್ಲಾವೋನಾಯಿಡ್ ನಿಂದ ಸಮೃದ್ಧವಾಗಿದೆ. ಇದನ್ನು ಅತಿಯಾಗಿ ಸೇವನೆ ಮಾಡುವುದು ಒಳ್ಳೆಯದಲ್ಲ. ಇದರಿಂದ ವಿಷತ್ವ ಸಂಗ್ರಹವಾಗಿ ಯಕೃತ್ ಮೇಲೆ ದುಷ್ಪರಿಣಾಮ ಬೀರಬಹುದು.

English summary

What Is The Right Time & Right Way To Drink Green Tea?

We should keep in mind that drinking green tea at the wrong time can also have certain side-effects. Green tea contains caffeine and tannins which can dilute the gastric juice and affect the stomach. It can lead to nausea, gastric pain and stomach acidity. So if you are looking out for the right way to drink green tea, here it is. Have a look at these 8 best ways to drink green tea.
X
Desktop Bottom Promotion