For Quick Alerts
ALLOW NOTIFICATIONS  
For Daily Alerts

ಕರಿಮೆಣಸಿನ ಪುಡಿ ಬೆರೆಸಿದ ಬಿಸಿನೀರು- ಆಯಸ್ಸು ನೂರು!

By manu
|

ವಾತಾವರಣದಲ್ಲಿ ಕೊಂಚ ಏರುಪೇರಾದರೂ ನಿಮ್ಮ ಆರೋಗ್ಯವೂ ಏರುಪೇರಗುತ್ತದೆಯೇ? ಚಿಕ್ಕ ಪುಟ್ಟ ಕಾಯಿಲೆಗಳು ಸುಲಭವಾಗಿ ಬಾಧಿಸುತ್ತವೆಯೇ? ಇವು ನಿಮ್ಮ ನಿತ್ಯದ ಚಟುವಟಿಕೆಗಳಿಗೆ ಅಡ್ಡಿಯುಂಟುಮಾಡಬಹುದು. ಯಾವಾಗಲೂ ಇಂತಹ ನೆಪಗಳನ್ನೇ ಹೇಳುತ್ತಿದ್ದರೆ ಇದು ಔದ್ಯೋಗಿಕವಾಗಿಯೂ ತೊಂದರೆ ನೀಡಬಹುದು. ಇದಕ್ಕಾಗಿ ವೈದ್ಯರಿಗೆ ಮತ್ತು ಔಷಧಿಗಳಿ ಸುರಿಯುವ ಹಣ ಮತ್ತು ಸಮಯವೂ ಸಾಕಷ್ಟು ಶ್ರಮವಾಗುತ್ತದೆ. ಇದಕ್ಕೆ ಪ್ರಮುಖ ಕಾರಣವೆಂದರೆ ನಿಮ್ಮ ರೋಗ ನಿರೋಧಕ ವ್ಯವಸ್ಥೆ ಕುಂಠಿತವಾಗಿರುವುದೇ ಆಗಿದೆ.

ಉತ್ತಮ ಆರೋಗ್ಯಕ್ಕಾಗಿ ರೋಗ ನಿರೋಧಕ ವ್ಯವಸ್ಥೆ ಅತ್ಯುತ್ತಮವಾಗಿರಬೇಕು. ನಮ್ಮ ಶೀತ, ಜ್ವರ ಕೆಮ್ಮುಗಳೂ ನಮ್ಮ ರೋಗ ನಿರೋಧಕ ಶಕ್ತಿಯ ವ್ಯವಸ್ಥೆಗಳೇ ಆಗಿವೆ. ಎಷ್ಟು ಹೆಚ್ಚಿನ ತರಹದ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳು ನಮ್ಮನ್ನು ಪ್ರಥಮ ಬಾರಿಗೆ ಬಾಧಿಸುತ್ತವೆಯೋ ಆಗೆಲ್ಲಾ ನಮ್ಮ ದೇಹ ನಿರೋಧಕ ಶಕ್ತಿ ಈ ವೈರಸ್ಸಿಗೆ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ. ಎಷ್ಟು ಹೆಚ್ಚು ತರಹದ ವೈರಸ್ಸುಗಳಿಗೆ ಇಂತಹ ನಿರೋಧಕ ಶಕ್ತಿ ಬೆಳೆಸುಕೊಳ್ಳುತ್ತವೆಯೋ ಅಷ್ಟೂ ಮಟ್ಟಿಗೆ ನಾವು ರೋಗರಹಿತರಾಗುತ್ತೇವೆ. ಆದ್ದರಿಂದ ನಾವು ಹೊಸ ಸ್ಥಳಕ್ಕೆ ಹೋದಾಗ ಅಲ್ಲಿನ ನೀರು ಕುಡಿದರೆ ನೆಗಡಿಯಾಗುತ್ತದೆಯೇ ವಿನಃ ಅಲ್ಲಿನವರಿಗೆ ಆ ನೀರು ನೆಗಡಿಯುಂಟು ಮಾಡದೇ ಇರುವುದಕ್ಕೆ ಇದೇ ಕಾರಣ. 9 ಭಯಂಕರ ಕಾಯಿಲೆಗೆ ಮನೆಮದ್ದು ಈ ಕರಿಮೆಣಸು!

ಆದರೆ ರೋಗ ನಿರೋಧಕ ವ್ಯವಸ್ಥೆಯನ್ನು ಉತ್ತಮಪಡಿಸಲಿಕ್ಕೆ ವಿವಿಧ ಸ್ಥಳಗಳ ನೀರು ಕುಡಿಯುವ ಬದಲು ಇನ್ನೊಂದು ವಿಧಾನವಿದೆ. ಅದೆಂದರೆ ಕಾಳುಮೆಣಸಿನ (ಕರಿಮೆಣಸಿನ) ಪುಡಿಯನ್ನು ಬೆರೆಸಿದ ಬಿಸಿನೀರನ್ನು (ಎರಡು ಲೋಟ ಕುದಿನೀರಿಗೆ ಎರಡು ಚಿಕ್ಕ ಚಮಚ ಕಾಳುಮೆಣಸಿನ ಪುಡಿ ಸೇರಿಸಿ) ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸತತವಾಗಿ ಒಂದು ತಿಂಗಳ ಕಾಲ ಕುಡಿದರೆ ಸಾಕು. ರೈತರ ಕಪ್ಪು ಬಂಗಾರ, ಕರಿಮೆಣಸು ಕಾಳಿನ ಪವರ್...

ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಕಾಳುಮೆಣಸಿನ ಕಣಗಳನ್ನೂ ಒಂದು ವೈರಸ್ಸಿನಂತೆಯೇ ಪರಿಗಣಿಸಿ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ. ಇದು ವಿವಿಧ ರೋಗಗಳನ್ನು ಉಂಟುಮಾಡುವ ವೈರಸ್ಸುಗಳನ್ನು ಎದುರಿಸಲು ಸಮರ್ಥವಾಗಿದೆ. ಬನ್ನಿ, ಈ ವಿಧಾನದ ಪ್ರಯೋಜನಗಳೇನು ಎಂಬುದನ್ನು ನೋಡೋಣ...

ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ಸಾಮಾನ್ಯವಾಗಿ ಚ್ಯವನಪ್ರಾಶ್ ತಿನ್ನುವ ಮೂಲಕವೂ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದೇ ಪರಿಣಾಮವನ್ನು ಈ ಪೇಯವನ್ನು ಒಂದು ತಿಂಗಳ ಕಾಲ ಕುಡಿಯುವ ಮೂಲಕವೂ ಪಡೆಯಬಹುದು. ಇದರಿಂದ ನಮ್ಮ ದೇಹದ ಪ್ರತಿ ಜೀವಕೋಶವೂ ಕಳೆಯಿಂದ ತುಂಬಿಕೊಂಡು ಆರೋಗ್ಯ ವೃದ್ದಿಸುತ್ತದೆ.

ನೀರಿನ ಕೊರತೆಯನ್ನು ತಪ್ಪಿಸುತ್ತದೆ

ನೀರಿನ ಕೊರತೆಯನ್ನು ತಪ್ಪಿಸುತ್ತದೆ

ಪ್ರತಿದಿನದ ಈ ಪೇಯದ ಸೇವನೆಯಿಂದ ನಮ್ಮ ದೇಹದ ಎಲ್ಲಾ ಅಂಗಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಲಭ್ಯವಾಗುವ ಮೂಲಕ ದಿನದ ಚಟುವಟಿಕೆಗಳಿಗೆ ಸದಾ ಸಿದ್ದವಾಗಿದ್ದು ಚೈತನ್ಯ ನೀಡುತ್ತದೆ. ಇದರಿಂದ ಸುಸ್ತು, ಒಣ ಚರ್ಮ, ಬಾಯಾರಿಕೆ ಮೊದಲಾದ ತೊಂದರೆಗಳೂ ಇಲ್ಲವಾಗುತ್ತವೆ.

ದೇಹದ ತ್ರಾಣ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ

ದೇಹದ ತ್ರಾಣ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ

ದೇಹದ ಗಾತ್ರ ಬಲಾಢ್ಯವಾಗಿರುವಂತೆ ಕಂಡುಬಂದರೂ ಕೆಲವರಲ್ಲಿ ಕೊಂಚ ದೂರ ಹೋಗುವಷ್ಟೂ ತ್ರಾಣ ಇರುವುದಿಲ್ಲ. ಏಕೆಂದರೆ ಇವರ ದೇಹದಲ್ಲಿ ತ್ರಾಣದ ಸಂಗ್ರಹ ಹೆಚ್ಚಿರುವುದಿಲ್ಲ. ಈ ಪೇಯದ ಸೇವನೆಯಿಂದ ತ್ರಾಣ ಮತ್ತು ಶಕ್ತಿ ಹೆಚ್ಚುವ ಮೂಲಕ ನಿತ್ಯದ ಚಟುವಟಿಕೆಗಳ ಜೊತೆಗೇ ವಾರಾಂತ್ಯದಲ್ಲಿನ ಅಥವಾ ನೀವು ಯಾವಾಗಲೂ ಹೋಗಬೇಕೆಂದು ಬಯಸುವ ದೂರದ ಸ್ಥಳದ ಚಾರಣಕ್ಕೆ ಅಗತ್ಯವಾದ ದೈಹಿಕ ಮತ್ತು ಮನೋಬಲ ದೊರಕುತ್ತದೆ.

ಮಲಬದ್ಧತೆಯನ್ನು ತಡೆಯುತ್ತದೆ

ಮಲಬದ್ಧತೆಯನ್ನು ತಡೆಯುತ್ತದೆ

ಬಿಸಿನೀರು ಮತ್ತು ಕಾಳುಮೆಣಸು ಜೀರ್ಣಕ್ರಿಯೆಯನ್ನು ಪ್ರಚೋದಿಸುತ್ತದೆ ಮತ್ತು ಚುರುಕುಗೊಳಿಸುತ್ತದೆ. ಪರಿಣಾಮವಾಗಿ ಜೀರ್ಣಾಂಗಗಳಲ್ಲಿದ್ದ ಕಲ್ಮಶಗಳು ಹೊರಹೋಗಲು ನೆರವಾಗುತ್ತದೆ. ಇದರಿಂದ ಮಲಬದ್ದತೆ ಮತ್ತು ಮೂಲವ್ಯಾಧಿಯಾಗುವ ಸಾಧ್ಯತೆಗಳು ಅಪಾರವಾಗಿ ಕಡಿಮೆಯಾಗುತ್ತದೆ.

ತೂಕ ಇಳಿಸುವ ಕ್ರಿಯೆಗೆ ಸಹಕರಿಸುತ್ತದೆ

ತೂಕ ಇಳಿಸುವ ಕ್ರಿಯೆಗೆ ಸಹಕರಿಸುತ್ತದೆ

ಈ ಪೇಯವನ್ನು ಜೀರ್ಣಿಸಿಕೊಳ್ಳಲು ದೇಹಕ್ಕೆ ಹೆಚ್ಚಿನ ಕೊಬ್ಬಿನ ಅಗತ್ಯವಿದೆ. ಅಲ್ಲದೇ ಹೆಚ್ಚಿನ ಕ್ಯಾಲೋರಿಗಳೂ ಖರ್ಚಾಗುತ್ತವೆ. ಪರಿಣಾಮವಾಗಿ ಕೊಬ್ಬಿನ ಸಂಗ್ರಹ ಕಡಿಮೆಯಾಗಿ ತೂಕ ಕಳೆದುಕೊಳ್ಳಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ನಿಮ್ಮ ತೂಕ ಕಳೆದುಕೊಳ್ಳುವ ಪ್ರಯತ್ನಗಳಿಗೆ ಹೆಚ್ಚಿನ ಫಲ ಸಿಗುತ್ತದೆ.

ಚರ್ಮದ ಕಾಂತಿ ಹೆಚ್ಚಿಸುತ್ತದೆ

ಚರ್ಮದ ಕಾಂತಿ ಹೆಚ್ಚಿಸುತ್ತದೆ

ಈ ಪೇಯದ ಇನ್ನೊಂದು ಉತ್ತಮ ಗುಣವೆಂದರೆ ಕಾಳುಮೆಣಸಿನ ಕೆಲವು ಪೋಷಕಾಂಶಗಳು ರಕ್ತದ ಮೂಲಕ ಚರ್ಮಕ್ಕೆ ತಲುಪಿದ ಬಳಿಕ ಚರ್ಮದ ಅಡಿಯಲ್ಲಿ ಹೆಚ್ಚಿನ ಪ್ರಚೋದನೆ ನೀಡಿ ಚರ್ಮದ ಅಡಿಯಲ್ಲಿ ಹೆಚ್ಚಿನ ರಕ್ತಸಂಚಾರವಾಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ಚರ್ಮದ ಬುಡದಲ್ಲಿ ಕೀವು ತುಂಬಿಕೊಳ್ಳದೇ ಮೊಡವೆಗಳಾಗದಿರಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಚರ್ಮದ ಹೊರಭಾಗ ಅತ್ಯುತ್ತಮ ಆರೋಗ್ಯ ಮತ್ತು ಕಾಂತಿ ಹೊಂದುತ್ತದೆ. ಕೂದಲು ಉದುರುವುದು ಕಡಿಮೆಯಾಗುತ್ತದೆ.

ದೇಹದ ಕಲ್ಮಶಗಳನ್ನು ನಿವಾರಿಸುತ್ತದೆ

ದೇಹದ ಕಲ್ಮಶಗಳನ್ನು ನಿವಾರಿಸುತ್ತದೆ

ಕಾಳುಮೆಣಸು ಒಂದು ಉತ್ತಮ ಕಲ್ಮಶ ನಿವಾರಕವಾಗಿದ್ದು ದೇಹದಿಂದ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ. ಜೀರ್ಣಾಂಗಗಳಿಂದ ಮತ್ತು ಚರ್ಮದಿಂದ ಕಲ್ಮಶ, ಉಪ್ಪನ್ನು ಹೊರಹಾಕಲು ನೆರವಾಗುವ ಮೂಲಕ ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ.

ಅನಾರೋಗ್ಯದಿಂದ ಮುಕ್ತಿ

ಅನಾರೋಗ್ಯದಿಂದ ಮುಕ್ತಿ

ದಿನದಲ್ಲಿ ಎರಡು ಸಲ ಈ ನೀರನ್ನು ಕುಡಿದರೆ ಕ್ಯಾನ್ಸರ್ ಹಾಗೂ ಮಧುಮೇಹದಂತಹ ರೋಗಗಳಿಂದ ನಿಮ್ಮನ್ನು ಇದು ದೂರವಿಡುವುದು. ಇದು ಚಯಾಪಚಾಯ ಕ್ರಿಯೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವುದು. ದಿನಾಲೂ ಕರಿಮೆಣಸಿನ ನೀರನ್ನು ಕುಡಿದು ಇದರ ಲಾಭ ಪಡೆದುಕೊಳ್ಳಿ.

ತೂಕ ಕಳೆದುಕೊಳ್ಳಲು ಸಹಕಾರಿ

ತೂಕ ಕಳೆದುಕೊಳ್ಳಲು ಸಹಕಾರಿ

ತೂಕ ಕಳೆದುಕೊಳ್ಳಬೇಕೆಂದರೆ ಕರಿಮೆಣಸಿನ ನೀರನ್ನು ಬಳಸುವುದು ತುಂಬಾ ಮುಖ್ಯ. ಇದು ತುಂಬಾ ಖಾರವಾಗಿರುವ ನೀರಾಗಿರುವ ಕಾರಣ ದೇಹವು ಕಡಿಮೆ ಸಮಯದಲ್ಲಿ ಹೆಚ್ಚಿನ ಕ್ಯಾಲರಿ ದಹಿಸುತ್ತದೆ.

ಮೂಳೆಗಳಿಗೆ ಒಳ್ಳೆಯದು

ಮೂಳೆಗಳಿಗೆ ಒಳ್ಳೆಯದು

ಮೂಳೆಗಳ ನೋವಿನಿಂದ ನೀವು ಬಳಲುತ್ತಿದ್ದೀರಾ? ಹಾಗಾದರೆ ಕರಿಮೆಣಸಿನ ನೀರನ್ನು ಕುಡಿಯಿರಿ. ನಿಮಗೆ ವಯಸ್ಸಾಗುತ್ತಿರುವಂತೆ ಇದು ನಿಮ್ಮ ಮೂಳೆಗಳನ್ನು ರಕ್ಷಿಸುವುದು.

ತಿನ್ನುವ ಬಯಕೆ ತಡೆಯುವುದು

ತಿನ್ನುವ ಬಯಕೆ ತಡೆಯುವುದು

ತಿನ್ನುವ ಬಯಕೆಯಿಂದಾಗಿ ನೀವು ಹೆಚ್ಚಿನ ತೂಕವನ್ನು ಪಡೆಯುತ್ತೀರಿ. ಕರಿಮೆಣಸಿನ ನೀರಿನಿಂದ ಇದನ್ನು ತಡೆಯಬಹುದಾಗಿದೆ. ಇದು ಹೆಚ್ಚಿನ ಖಾರವನ್ನು ಹೊಂದಿರುವ ಕಾರಣ ತಿನ್ನುವ ಬಯಕೆಯನ್ನು ಕ್ಷಣ ಮಾತ್ರದಲ್ಲಿ ತಡೆಯುವುದು.

English summary

What Happens When You Drink Hot Water With Pepper For A Month?

If you have been falling sick quite often, you will know how inconvenient it is; not to mention how uncomfortable your life can get! Suffering from ailments can prove to be a hassle and can take over your life. Spending time and money on doctors, having to consume strong medication regularly - these things can never stop growing on you. One of the main causes for constant illness can be due to a weakened immune system.
X
Desktop Bottom Promotion