For Quick Alerts
ALLOW NOTIFICATIONS  
For Daily Alerts

ಮಾವಿನ ಹಣ್ಣಿನಲ್ಲಿದೆ, ಸರ್ವ ರೋಗ ನಿಯಂತ್ರಿಸುವ ಶಕ್ತಿ

By Manu
|

ಬೇಸಿಗೆಯ ತಾಪ ಏರುತ್ತಿದ್ದಂತೆಯೇ ಮಾವಿನ ಕಾಲವೂ ಹತ್ತಿರಾಗುತ್ತಾ ಬರುತ್ತದೆ. ಹಣ್ಣುಗಳ ರಾಜ ಎಂದೇ ಕರೆಸಿಕೊಳ್ಳುವ ಮಾವಿನ ಹತ್ತು ಹಲವು ವಿಧಗಳು ಮಾರುಕಟ್ಟೆಯಲ್ಲಿ ಲಗ್ಗೆಯಿಡುತ್ತವೆ. ಮಾವನ್ನು ಮಿಡಿಯಾಗಿಯೂ, ಕಾಯಿಯಾಗಿಯೂ, ಹಣ್ಣಾಗಿಯೂ ಸೇವಿಸುವ ಮೂಲಕ ವಿವಿಧ ಬಗೆಯ ಪೋಷಕಾಂಶಗಳನ್ನು ಪಡೆಯಬಹುದು. ಮಾವಿನ ಹಣ್ಣನ್ನು ಕತ್ತರಿಸಿ ತಿರುಳನ್ನು ನೇರವಾಗಿಯೇ ತಿನ್ನುವುದು ಹೆಚ್ಚು ಜನರು ಇಷ್ಟಪಡುವ ವಿಧಾನ. ಉಳಿದಂತೆ ಇದರ ತಿರುಳಿನ ಜ್ಯೂಸ್, ರಸವನ್ನು ಸಾಂದ್ರೀಕರಿಸಿ ಮಾಡಿದ ಖಾದ್ಯ, ಇತರ ಹಣ್ಣಿನ ರಸಗಳೊಂದಿಗೆ ಮಾಡಿದ ರಾಸಾಯನ, ಐಸ್ ಕ್ರೀಂ, ತಂಬುಳಿ ಹೀಗೇ ನಾನಾ ವಿಧದಲ್ಲಿ ಮಾವಿನ ರುಚಿ ಎಲ್ಲರ ಮನಗೆಲ್ಲುತ್ತದೆ. ಮಾವಿನ ಹಣ್ಣಿನಲ್ಲಿ ಕಮ್ಮಿಯೆಂದರೂ 14 ಗುಣಗಳಿವೆ!

ಅದರಲ್ಲೂ ಮಾವಿನ ಹಣ್ಣಿನ ಜ್ಯೂಸ್ ಒಂದು ಲೋಟ ಮುಂಜಾನೆದ್ದು ಕುಡಿಯುವ ಮೂಲಕ ಇಡಿಯ ದಿನ ಚಟುವಟಿಕೆಯಿಂದಿರಲು ನೆರವಾಗುತ್ತದೆ. ಮಾವಿನ ಹಣ್ಣಿನ ಕಾಲದಲ್ಲಿ ಪುಷ್ಕಳವಾಗಿ ಸಿಗುವ ಮಾವಿನ ಹಣ್ಣನ್ನು ಸಾಕಷ್ಟು ಖರೀದಿಸಿ ತಿನ್ನುವ ಮೂಲಕ ಆರೋಗ್ಯ ಮತ್ತು ಸೌಂದರ್ಯವನ್ನು ವೃದ್ಧಿಸಿಕೊಳ್ಳಿ. ಇದರಲ್ಲಿ ವಿಫುಲವಾಗಿರುವ ಆಂಟಿ ಆಕ್ಸಿಡೆಂಟುಗಳು ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುವ ಜೊತೆಗೇ ಇದರಲ್ಲಿರುವ ವಿಟಮಿನ್ ಕೆ ರಕ್ತಸ್ರಾವ ತಡೆಗಟ್ಟುವ ಶಕ್ತಿಯನ್ನು ಹೆಚ್ಚಿಸುತ್ತದೆ. ಮನೆಯಲ್ಲೇ ತಯಾರಿಸಿ ರುಚಿಕರವಾದ ಮಾವಿನ ಹಣ್ಣಿನ ಜ್ಯೂಸ್!

ಅದರಲ್ಲೂ ಮಾವಿನ ಕಾಯಿಯಲ್ಲಿ ವಿಟಮಿನ್ ಕೆ ಪ್ರಮಾಣ ಒಂದು ಸಾಮಾನ್ಯ ಗಾತ್ರದ ಕಾಯಿಯಲ್ಲಿ ದಿನದ ಅಗತ್ಯದ ಹನ್ನೊಂದು ಶೇಖಡಾದಷ್ಟಿರುತ್ತದೆ. ಮಾವಿನ ಹಣ್ಣಿನಲ್ಲಿ ಉತ್ತಮ ಪ್ರಮಾಣದ ಪೊಟ್ಯಾಶಿಯಂ ಮತ್ತು ಮ್ಯಾಂಗಿಫೆರಿನ್ ಎಂಬ ಆಂಟಿ ಆಕ್ಸಿಡೆಂಟು ಇದೆ. ಇದು ರಕ್ತದ ಒತ್ತಡವನ್ನು ಸಮಸ್ಥಿತಿಯಲ್ಲಿಡಲು ಮತ್ತು ನಿಯಂತ್ರಿಸಲು ನೆರವಾಗುತ್ತದೆ. ಬನ್ನಿ ಮಾವಿನ ಹಣ್ಣಿನ ಸೇವನೆಯಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ....

ಮೊಡವೆಗಳಿಂದ ಮುಕ್ತರಾಗಲು ನೆರವಾಗುತ್ತದೆ

ಮೊಡವೆಗಳಿಂದ ಮುಕ್ತರಾಗಲು ನೆರವಾಗುತ್ತದೆ

ಮೊಡವೆಗಳಿದ್ದರೆ ಮಾವಿನ ಕಾಯಿಯನ್ನು ತಿನ್ನುವುದು ಉತ್ತಮ. ಇದಕ್ಕೆ ವಿರುದ್ಧವಾಗಿ ಮಾವಿನ ಹಣ್ಣಿನ ಸೇವನೆ ಮೊಡವೆಗಳನ್ನು ಹೆಚ್ಚು ಮಾಡುತ್ತದೆ. ಆದ್ದರಿಂದ ಮೊಡವೆಗಳ ತೊಂದರೆ ಇರುವವರು ಹಣ್ಣಿನ ಬದಲು ಕಾಯಿಯನ್ನೇ ತಿನ್ನುವುದು ಮೇಲು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೊಡವೆಗಳಿಂದ ಮುಕ್ತರಾಗಲು ನೆರವಾಗುತ್ತದೆ

ಮೊಡವೆಗಳಿಂದ ಮುಕ್ತರಾಗಲು ನೆರವಾಗುತ್ತದೆ

ಇನ್ನೂ ಉತ್ತಮ ವಿಧಾನವೆಂದರೆ ಒಂದು ಮಾವಿಯ ಕಾಯಿಯ ತುಂಡನ್ನು ಚೆನ್ನಾಗಿ ಬೇಯಿಸಿ ಚೆನ್ನಾಗಿ ನೀರನ್ನು ಕಲಕಿ. ಈ ನೀರು ತಣಿದು ಉಗುರುಬೆಚ್ಚಗಾದ ಬಳಿಕ ಮುಖವನ್ನು ಪ್ರತಿರಾತ್ರಿ ಮಲಗುವ ಮುನ್ನ ತೊಳೆದುಕೊಂಡು ಒರೆಸದೇ ಒಣಗಲು ಬಿಟ್ಟು ಮರುದಿನ ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳುವ ಮೂಲಕ ಮೊಡವೆಗಳು ನಿಧಾನವಾಗಿ ಇಲ್ಲವಾಗುತ್ತವೆ.

ಮಧುಮೇಹ ನಿಯಂತ್ರಿಸಲು ನೆರವಾಗುತ್ತದೆ

ಮಧುಮೇಹ ನಿಯಂತ್ರಿಸಲು ನೆರವಾಗುತ್ತದೆ

ಮಧುಮೇಹಿಗಳಿಗೆ ಎಳೆಯ ಮಾವಿನ ಚಿಗುರೆಲೆ ಉತ್ತಮವಾಗಿದೆ. ಒಂದು ವೇಳೆ ಮಧುಮೇಹದ ಪರಿಣಾಮವಾಗಿ ಕಣ್ಣಿನ ದೃಷ್ಟಿ ಕುಂದುತ್ತಿದ್ದರೆ ಮಾವಿನ ಎಳೆಯ ಎಲೆಗಳು ನೆರವಿಗೆ ಬರುತ್ತವೆ. ಇದರಲ್ಲಿ ಉತ್ತಮ ಪ್ರಮಾಣದಲ್ಲಿರುವ ವಿಟಮಿನ್ ಎ ಕಣ್ಣಿನ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಧುಮೇಹ ನಿಯಂತ್ರಿಸಲು ನೆರವಾಗುತ್ತದೆ

ಮಧುಮೇಹ ನಿಯಂತ್ರಿಸಲು ನೆರವಾಗುತ್ತದೆ

ಎಳೆಯ, ಅಂದರೆ ಕಂದು ಬಣ್ಣದ ದೊಡ್ಡ ಗಾತ್ರ ಪಡೆದಿರುವ ಆದರೆ ಎಳೆಯದಾಗಿರುವ ಎಲೆಯನ್ನು ಕೊಂಚ ಹಿಸುಕಿ ಒಂದು ಲೋಟ ತಣ್ಣೀರಿನಲ್ಲಿ ಇಡಿಯ ರಾತ್ರಿ ನೆನೆಸಿಟ್ಟು ಮರುದಿನ ಬೆಳಿಗ್ಗೆ ಸೇವಿಸುವ ಮೂಲಕ ಕಣ್ಣಿನ ಆರೋಗ್ಯವನ್ನು ವೃದ್ಧಿಸಬಹುದು. ಅಲ್ಲದೇ ಮಾವಿನ ಹಣ್ಣನ್ನು ಮಧುಮೇಹಿಗಳು ನಿಯಮಿತ ಪ್ರಮಾಣದಲ್ಲಿ ಖಂಡಿತಾ ಸೇವಿಸಬಹುದು.

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

ಮಾವಿನ ಕಾಯಿಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಇದ್ದು ಮಲಬದ್ಧತೆಯಿಂದ ರಕ್ಷಿಸುತ್ತದೆ. ಅಲ್ಲದೇ ಇದರಲ್ಲಿರುವ ವಿಟಮಿನ್ ಸಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತದೆ.

ಹೃದಯದ ತೊಂದರೆಗಳಿಂದ ರಕ್ಷಿಸುತ್ತದೆ

ಹೃದಯದ ತೊಂದರೆಗಳಿಂದ ರಕ್ಷಿಸುತ್ತದೆ

ಮಾವಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ B6, ವಿಟಮಿನ್ C ಮತ್ತು ವಿಟಮಿನ್ A ಇವೆ. ಇವೆಲ್ಲವೂ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ನೆರವಾಗುವುದರಿಂದ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುವ ಕಾರಣ ಹೃದಯದ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಹಾಗೂ ಪರೋಕ್ಷವಾಗಿ ಹೃದಯದ ಕ್ಷಮತೆ ಹೆಚ್ಚುತ್ತದೆ.

ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಚಿರಯೌವನಕ್ಕೆ ನಮ್ಮ ಜೀವರಕ್ಷಣಾ ವ್ಯವಸ್ಥೆ ಅಗತ್ಯವಾಗಿದೆ. ಮಾವಿನ ಕಾಯಿಯಲ್ಲಿರುವ ಪೋಷಕಾಂಶಗಳು ಈ ಶಕ್ತಿಯನ್ನು ಹೆಚ್ಚಿಸಲು ಸಹಕರಿಸುವುದರಿಂದ ಆರೋಗ್ಯ ಉತ್ತಮಗೊಳ್ಳುತ್ತದೆ

ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ

ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ

ಮಾವು ಅತಿ ಹೆಚ್ಚು ವಿಟಮಿನ್‍ಗಳನ್ನು ಹೊಂದಿದೆ. ಹಾಗಾಗಿ ಇದು ಆರೋಗ್ಯಕ್ಕೆ ಉತ್ತಮವೆಂದು ಬೇರೆ ಹೇಳಬೇಕಿಲ್ಲ. ಅಲ್ಲದೆ ಮಾವಿನಲ್ಲಿ ರಂಜಕ (4% ಪ್ರತಿ 156 ಮಿ.ಗ್ರಾಂ) ಮತ್ತು ಮ್ಯಾಗ್ನಿಷಿಯಂ (2% ಪ್ರತಿ 2 ಮಿ.ಗ್ರಾಂ) ಇರುತ್ತದೆ. ಹೀಗಾಗಿ ಮಾವಿನಹಣ್ಣು ರಕ್ತದೊತ್ತಡವನ್ನು ನಿವಾರಿಸಲು ಇರುವ ಪ್ರಕೃತಿ ದತ್ತ ಪರಿಹಾರವಾಗಿದೆ.

English summary

What Are the Benefits of Eating Mangoes?

It is mango season finally and none of us can resist digging into some nice sweet and juicy mangoes. Mangoes also come with tons of health and beauty benefits. You can either eat it raw or add it to your salads or make a fresh mango juice to feel energetic in the morning. Make sure you make the most of this summer by including mangoes in
X
Desktop Bottom Promotion