For Quick Alerts
ALLOW NOTIFICATIONS  
For Daily Alerts

ದಿನನಿತ್ಯ ಬ್ರಾ ಧರಿಸಿದರೆ, ಅಪಾಯ ಬೆನ್ನೇರಿ ಕಾಡಲಿದೆ ಎಚ್ಚರ!

By Jaya subramanya
|

ನಿಮ್ಮ ದಿರಿಸು ಯಾವುದೇ ಆಗಿರಲಿ ಸರಿಯಾದ ಒಳ ಉಡುಪು ನಿಮ್ಮ ದಿರಿಸಿನ ಅಂದವನ್ನು ಎತ್ತಿಹಿಡಿಯುತ್ತದೆ. ಆದ್ದರಿಂದ ಸೂಕ್ತವಾದ ಒಳ ಉಡುಪಿನ ಆಯ್ಕೆಯನ್ನು ನೀವು ಮಾಡಲೇಬೇಕು. ಒಳ ಉಡುಪಿನ ಆಯ್ಕೆಯ ಬಗೆಗೆ ಹೆಚ್ಚಿನವರಿಗೆ ತಪ್ಪು ತಿಳುವಳಿಕೆ ಇದ್ದು ಸಣ್ಣ ಗಾತ್ರದ ಬ್ರಾ ನಿಮ್ಮ ಸ್ತನವನ್ನು ದೀರ್ಘಕಾಲದವರೆಗೆ ಬಿಗಿಯಾಗಿ ಹಿಡಿದಿಡುತ್ತದೆ ಎಂಬ ಅನಿಸಿಕೆ ಇದೆ. ಅಂತೆಯೇ ದಿನವೂ ಬ್ರಾ ಧರಿಸುವುದರಿಂದ ಪ್ರಯೋಜನ ಬಹಳಷ್ಟಿದೆ ಎಂಬುದೇ ಹಲವರ ಅನಿಸಿಕೆಯಾಗಿದೆ. ಆದರೆ ಈ ಎರಡೂ ಅಭಿಪ್ರಾಯಗಳೇ ತಪ್ಪು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ. ಸಿಲಿಕಾನ್ ಬ್ರಾ ಸ್ತನಗಳ ಆರೋಗ್ಯಕ್ಕೆ ಎಷ್ಟು ಸೂಕ್ತ?

ಬ್ರಾವನ್ನು 24/7 ಸಮಯ ಧರಿಸುವುದರಿಂದ ಉಂಟಾಗುವ ದುಷ್ಪರಿಣಾಮಗಳನ್ನು ಇಂದು ನಾವು ತಿಳಿಸಲಿದ್ದು ಈ ರೀತಿ ಬ್ರಾ ಬಳಸುವವರು ನೀವಾಗಿದ್ದಲ್ಲಿ ಈ ಲೇಖನವನ್ನು ನೀವು ಓದಲೇಬೇಕು. ಬಿಗಿಯಾದ ಬ್ರಾ ಧರಿಸುವುದರಿಂದ ಸ್ತನಗಳು ಜೋತು ಬೀಳುವುದಿಲ್ಲ ಎಂಬ ಅನಿಸಿಕೆಯೂ ಇದ್ದು ಇದು ತಪ್ಪು ವಿಧಾನವಾಗಿದೆ. ಬಿಗಿಯಾದ ಬ್ರಾವನ್ನು ಹೆಚ್ಚು ಹೊತ್ತು ಧರಿಸುವುದರಿಂದ ಹುಕ್ ಮಾರ್ಕ್‌ಗಳು ಮತ್ತು ಇಲಾಸ್ಟಿಕ್ ಗುರುತುಗಳನ್ನು ನಿಮ್ಮ ತ್ವಚೆಯಲ್ಲಿ ಕಾಣಬಹುದಾಗಿದೆ. ದೇಹದ ಈ ಭಾಗ ಸರಿಯಾಗಿ ಉಸಿರಾಡುವುದಿಲ್ಲ ಮತ್ತು ಹಲವಾರು ತ್ವಚೆಯ ಸಮಸ್ಯೆಗಳನ್ನು ನೀವು ಎದುರಿಸುವ ಸಂಭವ ಇರುತ್ತದೆ. "32,34,36" ನಿಮ್ಮ ಬ್ರಾ ಸೈಜ್ ಯಾವುದು?

ಹಾಗಿದ್ದರೆ ಇಂದಿನ ಲೇಖನದಲ್ಲಿ ಬಿಗಿಯಾದ ಬ್ರಾ ಧರಿಸುವುದು ಮತ್ತು ನಿತ್ಯವೂ ಅದನ್ನು ತೊಟ್ಟುಕೊಂಡಿರುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳೇನು ಎಂಬುದನ್ನು ಅರಿತುಕೊಳ್ಳೋಣ. ಈ ವಿಷಯಗಳು ನೀವು ದೈನಂದಿನ ಜೀವನದಲ್ಲಿ ಮಾಡುತ್ತಿರುವ ತಪ್ಪುಗಳನ್ನು ಎತ್ತಿ ತೋರಿಸುತ್ತಿದ್ದು ಇದರಿಂದ ನೀವು ಈ ರೀತಿ ಮಾಡುತ್ತಿದ್ದರೆ ಅದನ್ನು ಮಾರ್ಪಾಡು ಮಾಡಿಕೊಳ್ಳಬಹುದಾಗಿದೆ. ಮಹಿಳೆಯರು ಬ್ರಾ ಧರಿಸದಿದ್ದರೆ ಸಿಗುವ 7 ಪ್ರಯೋಜನಗಳು

ಸ್ತನದ ನೋವು

ಸ್ತನದ ನೋವು

ಎಲ್ಲಾ ಸಮಯವೂ ಬ್ರಾ ಧರಿಸುವುದರಿಂದ ಉಂಟಾಗುವ ಸಾಮಾನ್ಯ ಸಮಸ್ಯೆಯಾಗಿದೆ. ತಪ್ಪು ಗಾತ್ರದ ಬ್ರಾವನ್ನು ಧರಿಸುವುದರಿಂದ ಈ ಸಮಸ್ಯೆ ಉಲ್ಬಣಗೊಳ್ಳಬಹುದು. ನಿಮ್ಮ ಒಳ ಉಡುಪನ್ನು ಖರೀದಿಸುವ ವೇಳೆಯಲ್ಲಿ, ಇದನ್ನು ಟ್ರಯಲ್‌ನಂತೆ ಬಳಸಿ ನಂತರ ಅದಕ್ಕೆ ಪಾವತಿಸಿ. ಎಲ್ಲಾ ಸಮಯವೂ ಇದನ್ನು ಧರಿಸಬೇಡಿ ಇದರಿಂದ ನೋವು ಉಂಟಾಗುತ್ತದೆ.

ರಕ್ತ ಸಾಂಚಾರದಲ್ಲಿ ವ್ಯತ್ಯಾಯವಾಗಬಹುದು..!

ರಕ್ತ ಸಾಂಚಾರದಲ್ಲಿ ವ್ಯತ್ಯಾಯವಾಗಬಹುದು..!

ನಿಮ್ಮ ಎದೆಯ ಸ್ನಾಯುವನ್ನು ಮೊಟಕುಗೊಳಿಸುವ ನಿಮ್ಮ ಸ್ತನಗಳನ್ನು, ನಿಮ್ಮ ಹಿಂಭಾಗ ಮತ್ತು ನಿಮ್ಮ ಎದೆಯ ಕೆಳಭಾಗವನ್ನು ತಂತಿಯಂತಹ ವಸ್ತು ಹಿಡಿದಿಟ್ಟಲ್ಲಿ ಇದು ನಿಮ್ಮ ಎದೆ ಮತ್ತು ತೋಳುಗಳಿಗೆ ರಕ್ತ ಸಂಚಾರವನ್ನು ಅಡ್ಡಿಪಡಿಸುತ್ತದೆ. ಅಂತೆಯೇ, ಬಿಗಿಯಾದ ಸ್ಫೋರ್ಟ್ಸ್ ಬ್ರಾವನ್ನು ನೀವು ನಿಯಮಿತವಾಗಿ ಧರಿಸಿದಲ್ಲಿ ನಿಮ್ಮ ಸ್ತನದ ಅಂಗಾಂಶಗಳನ್ನು ಇದು ಹಾನಿಮಾಡುತ್ತದೆ.

ತೀವ್ರ ಬೆನ್ನು ನೋವು

ತೀವ್ರ ಬೆನ್ನು ನೋವು

ದಿನಪೂರ್ತಿ ಬ್ರಾ ಧರಿಸುವುದರಿಂದ ಏನು ಸಂಭವಿಸುತ್ತದೆ? ಎಂಬುದು ನಿಮಗೆ ತಿಳಿದಿದೆಯೇ? ನಿಮಗೆ ಒಮ್ಮಿಂದೊಮ್ಮೆಲೆ ಬೆನ್ನು ನೋವು ಕಾಣಿಸಿಕೊಂಡಿದೆಯೇ? ಇದಕ್ಕೆ ಕಾರಣ ನಿಮ್ಮ ಬ್ರಾ ಆಗಿದೆ. ನೀವು ಸಣ್ಣ ಬ್ರಾವನ್ನು ದಿನವೂ ಧರಿಸಿದಾಗ, ನಿಮ್ಮ ಪಕ್ಕೆಲುಬಿನ ಮೇಲೆ ಇದು ಗರಿಷ್ಟ ಒತ್ತಡವನ್ನು ತಂದೊಡ್ಡುತ್ತದೆ ಇದರಿಂದ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ.

ತ್ವಚೆಗೆ ಹಾನಿ

ತ್ವಚೆಗೆ ಹಾನಿ

ಬ್ರಾ ಧರಿಸುವುದರ ಎಂಟು ದುಷ್ಪರಿಣಾಮಗಳ ಬಗ್ಗೆ ನಾವು ಮಾತನಾಡುವಾಗ ಈ ಅಂಶವನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ನಿತ್ಯವೂ ಬ್ರಾ ಧರಿಸುವುದು, ಅದರಲ್ಲೂ ಮಲಗುವಾಗ ಧರಿಸುವುದರಿಂದ ತ್ವಚೆಯ ತೊಂದರೆಗಳು ಉಂಟಾಗುವುದು ಸಹಜವೇ ಆಗಿದೆ. ತುರಿಕೆ, ಕೆಂಪು ಗುಳ್ಳೆಗಳು ಏಳುವುದು ಉದ್ಭವವಾಗುತ್ತದೆ. ಬ್ರಾದ ಹುಕ್ಸ್ ಮತ್ತು ಇದರ ಪಟ್ಟಿ ತ್ವಚೆಯಲ್ಲಿ ಗಾಯಗಳನ್ನು ಉಂಟುಮಾಡಬಲ್ಲುದು.

ಜೋತಾಡುವ ಸ್ತನಗಳು

ಜೋತಾಡುವ ಸ್ತನಗಳು

ನೀವು ಯಾವಾಗಲೂ ಸಡಿಲ ಬ್ರಾವನ್ನು ಧರಿಸುವುದರಿಂದ, ನಿಮ್ಮ ಸ್ತನ ಜೋತುಬೀಳಬಹುದು ಮತ್ತು ಅಸಹ್ಯಕರವಾಗಿ ಕಾಣಬಹುದು. ಆದ್ದರಿಂದ ಸರಿಯಾದ ಗಾತ್ರವನ್ನು ಕಂಡುಕೊಂಡು ಬ್ರಾ ಧರಿಸಿ. 24/7 ಸಮಯವೂ ಧರಿಸುವುದನ್ನು ಆದಷ್ಟು ಕಡೆಗಣಿಸಿ.

ಹೈಪರ್ ಪೆಗ್ಮೆಂಟೇಶನ್

ಹೈಪರ್ ಪೆಗ್ಮೆಂಟೇಶನ್

ನೀವು ನಿಯಮಿತವಾಗಿ ಬ್ರಾ ಧರಿಸಿದಲ್ಲಿ, ಹುಕ್ಸ್ ಮತ್ತು ಪಟ್ಟಿಗಳು ಆರಂಭದಲ್ಲಿ ಕೆಂಪು ಗುರುತನ್ನು ಉಂಟುಮಾಡಬಹುದು. ಇದನ್ನು ನೀವು ನಿಲ್ಲಿಸದೇ ಇದ್ದಲ್ಲಿ, ನಿಮ್ಮ ಭುಜ, ನಿಮ್ಮ ಬೆನ್ನು ಮತ್ತು ಸ್ತನಗಳ ಮೇಲೆ ಗಾಢ ತೇಪೆ ಉಂಟಾಗಬಹುದು. ಅಂತೆಯೇ ತೋಳಿಲ್ಲದ ದಿರಿಸು ಧರಿಸಿದ ಸಂದರ್ಭದಲ್ಲಿ ಇದು ಅಸಹ್ಯಕರವಾಗಿ ಕಾಣಬಹುದು .

ನಿಮ್ಮ ಭಂಗಿಯನ್ನೇ ಹಾಳುಮಾಡಬಹುದು

ನಿಮ್ಮ ಭಂಗಿಯನ್ನೇ ಹಾಳುಮಾಡಬಹುದು

ನೀವು ಕುಳಿತುಕೊಳ್ಳುವಾಗ ಮತ್ತು ನಿಲ್ಲುವಾಗ ಸರಿಯಾದ ಭಂಗಿಯನ್ನು ಅನುಸರಿಸುವುದು ಅತ್ಯವಶ್ಯಕ. ಎಲ್ಲಾ ಸಮಯವೂ ತಪ್ಪು ಗಾತ್ರದ ಬ್ರಾವನ್ನು ನೀವು ಧರಿಸಿದಲ್ಲಿ, ನಿಮ್ಮ ಬೆನ್ನು ನೋವು, ಕುತ್ತಿಗೆ ಮತ್ತು ಭುಜಗಳ ನೋವು ಮಾಯವಾಗುವುದಿಲ್ಲ. ಸ್ವಯಂಚಾಲಿತವಾಗಿ ನೀವು ಬಾಗುತ್ತೀರಿ ಮತ್ತು ಇದು ವಿಚಿತ್ರವಾಗಿ ಕಾಣುತ್ತದೆ.

ಶಿಲೀಂಧ್ರಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ

ಶಿಲೀಂಧ್ರಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ

ಎಲ್ಲಾ ಸಮಯವೂ ಬ್ರಾ ಧರಿಸುವುದರಿಂದ ಉಂಟಾಗುವ ಎಂಟು ದುಷ್ಪರಿಣಾಮಗಳಲ್ಲಿ ಒಂದಾಗಿರುವ ಇದಕ್ಕೆ ನೀವು ಹೆಚ್ಚಿನ ಗಮನವನ್ನು ನೀಡಬೇಕು. ಬೆಚ್ಚಗಿನ ಮತ್ತು ತೇವಭರಿತ ಸ್ಥಳಗಳು ಶಿಲೀಂಧ್ರಗಳ ಬೆಳವಣಿಗೆಗೆ ಪೂರಕವಾಗಿದೆ. ಎಲ್ಲಾ ಸಮಯವೂ ಬ್ರಾ ಧರಿಸುವುದರಿಂದ, ಶಿಲಿಂಧ್ರಗಳ ಬೆಳವಣಿಗೆಗೆ ನೀವು ಜಾಗ ಮಾಡಿಕೊಟ್ಟಂತೆ.

Story first published: Monday, April 25, 2016, 19:22 [IST]
X
Desktop Bottom Promotion