For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: ಆರೋಗ್ಯವಂತ ದೇಹಕ್ಕೆ ನೀರೇ 'ಜೀವ ಜಲ'

ನಮ್ಮ ದೇಹಕ್ಕೆ ಸತತವಾಗಿ ನೀರನ್ನು ಪೂರೈಸುತ್ತಾ ಇರಬೇಕು. ನೀರಿನ ಪ್ರಮಾಣ ಕಡಿಮೆಯಾದರೆ ನಮ್ಮ ಮೆದುಳು ನೀರು ಬೇಕು ಎಂಬ ಸೂಚನೆಯನ್ನು ನೀಡುತ್ತದೆ,ಇದೇ ಬಾಯಾರಿಕೆ....

By Manu
|

ನಮ್ಮ ದೇಹಕ್ಕೆ ಸತತವಾಗಿ ನೀರನ್ನು ಪೂರೈಸುತ್ತಾ ಇರಬೇಕು. ನೀರಿನ ಪ್ರಮಾಣ ಕಡಿಮೆಯಾದರೆ ನಮ್ಮ ಮೆದುಳು ನೀರು ಬೇಕು ಎಂಬ ಸೂಚನೆಯನ್ನು ನೀಡುತ್ತದೆ. ಇದೇ ಬಾಯಾರಿಕೆ. ಆದರೆ ಕೆಲವು ಸಂದರ್ಭಗಳಲ್ಲಿ ಬಾಯಾರಿಕೆಯಾಗದೇ ಇದ್ದರೂ ನಮಗೆ ನೀರು ಕುಡಿಯಬೇಕೆನ್ನಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗುವ 10 ಲಾಭಗಳು

ಅಂದರೆ ದೇಹದಲ್ಲಿ ನೀರು ಕಡಿಮೆಯಾಗಿದ್ದು ವಾತಾವರಣ ತಣ್ಣಗೇ ಇದ್ದಾಗ ಬಾಯಾರಿಕೆಯಾಗದೇ ಇದ್ದರೂ ನೀರು ಕುಡಿಯಬೇಕೆನಿಸುತ್ತದೆ. ಈ ಅಗತ್ಯತೆಯನ್ನು ದೇಹ ಕೆಲವು ಸಂಜ್ಞೆಗಳ ಮೂಲಕ ಸೂಚಿಸುತ್ತದೆ. ಬನ್ನಿ, ಈ ಸೂಚನೆಗಳು ಯಾವುವು ಎಂಬುದನ್ನು ನೋಡೋಣ....

ಹೃದಯದ ಬಡಿತ ಹೆಚ್ಚಾಗುವುದು....

ಹೃದಯದ ಬಡಿತ ಹೆಚ್ಚಾಗುವುದು....

ಕೆಲವೊಮ್ಮೆ ನಮ್ಮ ಹೃದಯದ ಬಡಿತ ಯಾವುದೇ ವ್ಯಾಯಮ ಅಥವಾ ಚಟುವಟಿಕೆಯಿಲ್ಲದಿದ್ದಾಗಲೂ ಹೆಚ್ಚಾಗುತ್ತದೆ. ಅಂದರೆ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವ ಮೂಲಕ ಹೆಚ್ಚು ರಕ್ತವನ್ನು ಒದಗಿಸಬೇಕಾಗುತ್ತದೆ. ಹೀಗನ್ನಿಸಿದಾಗ ತಕ್ಷಣ ನೀರನ್ನು ಕುಡಿಯಿರಿ.

ಸಡನ್ ಆಗಿ ತಲೆನೋವು ಬರುವುದು....

ಸಡನ್ ಆಗಿ ತಲೆನೋವು ಬರುವುದು....

ಕೆಲವೊಮ್ಮೆ, ನೀರಿನ ಕೊರತೆಯಿಂದ ತಲೆನೋವು ಉಂಟಾಗುತ್ತದೆ. ಏಕೆಂದರೆ ನಮ್ಮ ಹೃದಯ ಹೆಚ್ಚಿನ ಪ್ರಮಾಣದ ರಕ್ತವನ್ನು ಮೆದುಳಿಗೆ ಪೂರೈಸುತ್ತದೆ. ದೇಹದಲ್ಲಿ ನೀರು ಕಡಿಮೆಯಾದಾಗ ಮೆದುಳಿಗೆ ಧಾವಿಸುವ ರಕ್ತದ ಪ್ರಮಾಣವೂ ಕಡಿಮೆಯಾಗುತ್ತದೆ. ಇದು ತಲೆನೋವು ಮತ್ತು ತಲೆಸುತ್ತು ತರಿಸುತ್ತದೆ. ತಕ್ಷಣ ನೀರು ಕುಡಿದರೆ ಈ ಸ್ಥಿತಿ ಇಲ್ಲವಾಗುತ್ತದೆ.

ಏಕಾಗ್ರತೆ

ಏಕಾಗ್ರತೆ

ಒಂದು ವೇಳೆ ನಿಮ್ಮ ಕೆಲಸದತ್ತ ಗಮನ ಹರಿಸಲು ನಿಮಗೆ ಸಾಧ್ಯವಾಗದೇ ನಿದ್ದೆ ಬರುತ್ತಿದೆ ಅನ್ನಿಸುತ್ತಿದ್ದರೆ ತಕ್ಷಣ ಒಂದು ಲೋಟ ನೀರನ್ನು ಕುಡಿಯಿರಿ. ಏಕಾಗ್ರತೆ ಕಡಿಮೆಯಾಗುವುದೂ ನೀರಿನ ಅಗತ್ಯತೆಯನ್ನು ಸೂಚಿಸುತ್ತದೆ.

ಜೊಲ್ಲಿನ ಪ್ರಮಾಣ.....

ಜೊಲ್ಲಿನ ಪ್ರಮಾಣ.....

ನಮ್ಮ ಬಾಯಿಯಲ್ಲಿ ಸದಾ ಜೊಲ್ಲಿನ ಪಸೆ ಇರಬೇಕು. ಜೊಲ್ಲು ಸತತವಾಗಿ ಉತ್ಪಾದನೆಯಾಗುತ್ತಲೇ ಇರಲು ನೀರು ಸದಾ ಇರಬೇಕು. ಒಂದು ವೇಳೆ ನೀರಿನ ಪ್ರಮಾಣ ಕಡಿಮೆಯಾದರೆ ಜೊಲ್ಲಿನ ಪ್ರಮಾಣವೂ ಕಡಿಮೆಯಾಗಿ ಬಾಯಿ ಒಣಗುತ್ತದೆ. ಆದ್ದರಿಂದ ಬಾಯಿ ಒಣಗಿದೆ ಅನ್ನಿಸತೊಡಗಿದ ತಕ್ಷಣ ನೀರು ಕುಡಿಯಿರಿ....

ಚರ್ಮದ ಆರೋಗ್ಯಕ್ಕೆ.....

ಚರ್ಮದ ಆರೋಗ್ಯಕ್ಕೆ.....

ನಮ್ಮ ಚರ್ಮಕ್ಕೂ ನೀರಿನ ಅಗತ್ಯವಿದೆ. ಚರ್ಮದ ಒಳಭಾಗದಿಂದ ನೀರನ್ನು ಮತ್ತು ಹೊರಭಾಗದಿಂದ ಆರ್ದ್ರತೆಯನ್ನು ಪಡೆಯುತ್ತಿರುವಾಗ ಮಾತ್ರ ಚರ್ಮ ಆರೋಗ್ಯಕರವಾಗಿರುತ್ತದೆ.

ಚರ್ಮದ ಆರೋಗ್ಯಕ್ಕೆ.....

ಚರ್ಮದ ಆರೋಗ್ಯಕ್ಕೆ.....

ನೀರಿನ ಕೊರತೆಯಿಂದ ಚರ್ಮ ಒಣಗಲು ಪ್ರಾರಂಭವಾಗುತ್ತದೆ. ಯಾವಾಗ ನಿಮ್ಮ ಚರ್ಮ ಒಣಗಿದೆ ಅನ್ನಿಸುತ್ತದೆಯೋ ಅಥವಾ ಚರ್ಮ ಪೇಲವವಾಗಿ ಮತ್ತು ಸೂಕ್ಷ್ಮಗೀರುಗಳು ಕಾಣಲು ಪ್ರಾರಂಭವಾಗುತ್ತದೆಯೋ ಆ ತಕ್ಷಣ ನೀರು ಕುಡಿದರೆ ಉತ್ತಮ.

ಆಹಾರವನ್ನು ಜೀರ್ಣಿಸಿಕೊಳ್ಳಲು.....

ಆಹಾರವನ್ನು ಜೀರ್ಣಿಸಿಕೊಳ್ಳಲು.....

ನಾವು ಸೇವಿಸುವ ಆಹಾರವನ್ನು ಜೀರ್ಣಿಸಿಕೊಳ್ಳಲು ನೀರು ಅಗತ್ಯ. ಅಂತೆಯೇ ವಿಸರ್ಜನೆಗೂ ಸಹಾ. ಒಂದು ವೇಳೆ ಇತರ ಯಾವುದೇ ಕಾರಣವಿಲ್ಲದೇ ಮಲಬದ್ಧತೆಯ ತೊಂದರೆ ಎದುರಾದರೆ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ ಎಂದು ಅರ್ಥೈಸಿಕೊಳ್ಳಬೇಕು. ತಕ್ಷಣವೇ ನೀರು ಕುಡಿಯಿರಿ.

ಮೂತ್ರದ ಬಣ್ಣ ಗಾಢವಾಗಿದ್ದರೆ.....

ಮೂತ್ರದ ಬಣ್ಣ ಗಾಢವಾಗಿದ್ದರೆ.....

ಒಂದು ವೇಳೆ ನಿಮ್ಮ ಮೂತ್ರದ ಬಣ್ಣ ಗಾಢವಾಗಿದ್ದರೆ ನಿಮ್ಮ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದನ್ನು ಸೂಚಿಸುತ್ತದೆ. ನೀರಿನ ಕೊರತೆ ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕುವುದನ್ನು ಕಷ್ಟಕರವಾಗಿಸುತ್ತದೆ.

English summary

Warning Signs You Need Water Urgently!

We all know that we need to drink water when thirsty. Also, we all know about the symptoms of dehydration. But there are some occasions when you may need to drink water even when you don't see any symptoms of dehydration. What are those signs? Well, read on....
X
Desktop Bottom Promotion