For Quick Alerts
ALLOW NOTIFICATIONS  
For Daily Alerts

ರಕ್ತ ಹೀನತೆಯ ಲಕ್ಷಣಗಳು- ನಿರ್ಲಕ್ಷಿಸಿದರೆ ಅಪಾಯ ತಪ್ಪದು!

By Manu
|

ಕ್ಯಾನ್ಸರ್‌‌ನಂತಹ ಮಾರಕ ರೋಗಗಳ ಬಗ್ಗೆ ನಾವು ಕೇಳಿದ್ದೇವೆ. ಇದು ಒಂದು ರೀತಿಯಲ್ಲಿ ನಿಧಾನವಾಗಿ ಕೊಲ್ಲುವ ರೋಗ. ಯಾಕೆಂದರೆ ಕೆಲವು ವಿಧದ ಕ್ಯಾನ್ಸರ್ ಅಂತಿಮ ಘಟ್ಟ ತಲುಪುವ ತನಕ ಅದರ ಲಕ್ಷಣಗಳು ಕಾಣಿಸುವುದೇ ಇಲ್ಲ. ಇನ್ನು ಕೆಲವನ್ನು ಬೇಗನೆ ಪತ್ತೆ ಹಚ್ಚ ಬಹುದಾಗಿದೆ.

ಕ್ಯಾನ್ಸರ್‌ನಂತೆ ಇತರ ಕೆಲವು ರೋಗಗಳು ತಮ್ಮ ಲಕ್ಷಣಗಳನ್ನು ಆರಂಭದಲ್ಲೇ ತೋರಿಸುವುದಿಲ್ಲ ಮತ್ತು ಅದು ನಮಗೆ ಗೊತ್ತಾಗುವುದೂ ಇಲ್ಲ. ಇಂತಹ ರೋಗಗಳ ಬಗ್ಗೆ ನಾವು ಅತಿಯಾದ ಎಚ್ಚರಿಕೆ ವಹಿಸಿಕೊಂಡರೆ ಒಳ್ಳೆಯದು. ಯಾವುದೇ ಲಕ್ಷಣ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಭೇಟಿಯಾಗುವುದು ಉತ್ತಮ. ಅನಿಮೀಯಾ(ರಕ್ತಹೀನತೆ) ಕೂಡ ಇಂತಹ ಕಾಯಿಲೆ ಗುಂಪಿಗೆ ಸೇರಿಕೊಳ್ಳುತ್ತದೆ. ಈ ಲಕ್ಷಣಗಳು ಕಂಡು ಬಂದರೆ ರಕ್ತಹೀನತೆ ಇರಬಹುದು

ಯಾಕೆಂದರೆ ರಕ್ತಹೀನತೆಯೆಂದರೆ ರಕ್ತದಲ್ಲಿ ಆರೋಗ್ಯಕರ ಕೆಂಪುರಕ್ತದ ಕಣಗಳು ಕಡಿಮೆಯಾಗುವುದು. ಇದರಿಂದಾಗಿ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ರಕ್ತಹೀನತೆಗೆ ಪ್ರಮುಖ ಕಾರಣವೆಂದರೆ ಕಬ್ಬಿನಾಂಶ ಕಡಿಮೆಯಾಗುವುದು, ಗಾಯಾಳುವಾದಾಗ ಅತಿಯಾದ ರಕ್ತ ಸೋರುವಿಕೆ, ಮುಟ್ಟಿನ ವೇಳೆ ಅತಿಯಾದ ರಕ್ತ ಸ್ರಾವ, ಕಳಪೆ ಪೋಷಕಾಂಶ, ಅನುವಂಶೀಯತೆ ಇತ್ಯಾದಿ. ರಕ್ತಹೀನತೆ ಸಮಸ್ಯೆ ಬೀಟ್ರೂಟ್ ನಿಂದ ದೂರ

ರಕ್ತಹೀನತೆ ವೇಳೆ ಕಾಣಿಸಿಕೊಳ್ಳುವಂತಹ ಪ್ರಮುಖ ಲಕ್ಷಣಗಳೆಂದರೆ ಆಯಾಸ, ನಿಶ್ಯಕ್ತಿ ಮತ್ತು ಉಸಿರಾಡಲು ಕಷ್ಟವಾಗುವುದು ಇತ್ಯಾದಿ. ರಕ್ತಹೀನತೆಯ ಕೆಲವೊಂದು ಲಕ್ಷಣಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಇದನ್ನು ಗಮನಿಸಿ ಯಾವುದೇ ಲಕ್ಷಣ ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ....

ಚರ್ಮ ಕಳೆಗುಂದುವುದು

ಚರ್ಮ ಕಳೆಗುಂದುವುದು

ರಕ್ತಹೀನತೆಯ ಪ್ರಮುಖ ಲಕ್ಷಣಗಳಲ್ಲಿ ಚರ್ಮ ಕಳೆಗುಂದುವುದು ಮತ್ತು ಮೇಣದಂತೆ ಆಗುವುದು ಮೊದಲನೇಯದಾಗಿದೆ. ಹೀಗೆ ಆದರೆ ನಿಮ್ಮ ದೇಹದಲ್ಲಿ ರಕ್ತದ ಕೊರತೆಯಿದ್ದು, ರಕ್ತಹೀನತೆಯಾಗಿದೆ ಎಂದು ತಿಳಿದುಕೊಳ್ಳಬೇಕು.

ಎದೆ ನೋವು

ಎದೆ ನೋವು

ಹೃದಯದ ವ್ಯವಸ್ಥೆಯು ಸರಿಯಾಗಿದ್ದರೂ ನಿಮ್ಮ ಎದೆಯಲ್ಲಿ ಆಗಾಗ ನೋವು ಕಾಣಿಸಿಕೊಳ್ಳುತ್ತಾ ಇದ್ದರೆ ಕೆಂಪುರಕ್ತದ ಕಣಗಳ ಕೊರತೆಯಿಂದಾಗಿ ನಿಮ್ಮ ಹೃದಯವು ಹೆಚ್ಚುವರಿಯಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಯಬೇಕು.

ಗರ್ಭಧಾರಣೆ-ಇದೊಂದು ಕಾರಣ, ಲಕ್ಷಣವಲ್ಲ

ಗರ್ಭಧಾರಣೆ-ಇದೊಂದು ಕಾರಣ, ಲಕ್ಷಣವಲ್ಲ

ಗರ್ಭಧಾರಣೆಯ ಆರಂಭಿಕ ಕೆಲವು ತಿಂಗಳಲ್ಲಿ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಾರೆ. ಗರ್ಭಧಾರಣೆಯು ರಕ್ತಹೀನತೆಗೆ ಕಾರಣವಲ್ಲ, ಇದು ರಕ್ತಹೀನತೆಗೆ ಒಂದು ಕಾರಣ.

ಮೂಲವ್ಯಾಧಿ

ಮೂಲವ್ಯಾಧಿ

ಮೂಲವ್ಯಾಧಿ ಅಥವಾ ಹೊಟ್ಟೆಯ ಅಲ್ಸರ್ ನಿಂದ ಬಳಲುತ್ತಿರುವವರಲ್ಲಿ ರಕ್ತಹೀನತೆ ಕಂಡುಬರುತ್ತದೆ. ಯಾಕೆಂದರೆ ಇಂತಹ ಸಮಸ್ಯೆಯಲ್ಲಿ ಕರುಳಿನಲ್ಲಿ ರಕ್ತಸ್ರಾವಾಗುತ್ತಾ ಇರುತ್ತದೆ.

ಹೃದಯಬಡಿತ ಹೆಚ್ಚಾಗುವಿಕೆ

ಹೃದಯಬಡಿತ ಹೆಚ್ಚಾಗುವಿಕೆ

ಕಾರಣವಿಲ್ಲದೆ ಹೃದಯಬಡಿತ ಅಥವಾ ನಾಡಿಬಡಿತವು ಹೆಚ್ಚಾಗುತ್ತಿದ್ದರೆ ನಿಮಗೆ ರಕ್ತಹೀನತೆ ಇದೆಯೆಂದರ್ಥ. ರಕ್ತಹೀನತೆಯಿಂದಾಗಿ ಹೃದಯವು ಸಾಕಷ್ಟು ರಕ್ತ ಪಡೆಯದೆ ಹೀಗೆ ಆಗಬಹುದು.

ಹಿಮೋಗ್ಲೋಬಿನ್ ಮಟ್ಟ ತಗ್ಗುವುದು

ಹಿಮೋಗ್ಲೋಬಿನ್ ಮಟ್ಟ ತಗ್ಗುವುದು

ಸಾಮಾನ್ಯಕ್ಕಿಂತ ಹಿಮೋಗ್ಲೋಬಿನ್ ಮಟ್ಟವು ಕಡಿಮೆಯಿದೆ ಎಂದಾದರೆ ರಕ್ತಹೀನತೆ ಇದೆ ಎನ್ನಬಹುದು. ಇದಕ್ಕೆ ತಕ್ಷಣ ಚಿಕಿತ್ಸೆ ಪಡೆದುಕೊಳ್ಳಬೇಕು.

ಒಡೆದ ಉಗುರುಗಳು

ಒಡೆದ ಉಗುರುಗಳು

ರಕ್ತಹೀನತೆ ಸಹಿತ ಹಲವಾರು ರೋಗಗಳ ಲಕ್ಷಣಗಳನ್ನು ಒಡೆದ ಉಗುರುಗಳು ತೋರಿಸುತ್ತದೆ. ನಿಮ್ಮ ಉಗುರುಗಳು ಒಡೆದಿದೆ ಎಂದಾದರೆ ರಕ್ತಹೀನತೆಯನ್ನು ಪರೀಕ್ಷಿಸಿಕೊಳ್ಳಿ.

English summary

Unusual Signs Of Anaemia You Should Not Ignore!

Anaemia is a condition in which the number of healthy red blood cells in your blood decreases, leading to various symptoms. The main causes for anaemia are iron deficiency, blood loss due to an injury, heavy flow of blood during menses, poor nutrition, heredity, etc.
Story first published: Tuesday, August 16, 2016, 10:24 [IST]
X
Desktop Bottom Promotion