For Quick Alerts
ALLOW NOTIFICATIONS  
For Daily Alerts

ರಸಂ ಕುಡಿಯಿರಿ, ರೋಗ ರುಜಿನಗಳಿಗೆ ಗುಡ್ ಬೈ ಹೇಳಿ!

By Hemanth
|

ಊಟವೆಂದರೆ ಅದು ದಕ್ಷಿಣ ಭಾರತೀಯರ ಊಟ. ಊಟ ಮಾಡಿದ ಎಷ್ಟೋ ಗಂಟೆಗಳ ತನಕವೂ ಸಾರಿನ ಪರಿಮಳ ಕೈಯನ್ನು ಬಿಟ್ಟುಹೋಗುವುದಿಲ್ಲ ಎನ್ನುತ್ತಾರೆ. ಅದರಲ್ಲೂ ದಕ್ಷಿಣ ಭಾರತೀಯರು ನೀಡುವಂತಹ ರಸಂ ಎಂದರೆ ಎಲ್ಲರಿಗೂ ಪಂಚಪ್ರಾಣ. ಇದು ರುಚಿಗೆ ಮಾತ್ರ ನೀಡಲಾಗುತ್ತಿದೆ ಎಂದು ನೀವು ಅಂದಕೊಂಡರೂ ಅದರಲ್ಲಿನ ಹಲವಾರು ರೀತಿಯ ಮಸಾಲೆಗಳು ಆರೋಗ್ಯ ಗುಣಗಳನ್ನು ಹೊಂದಿದೆ. ಟೊಮೇಟೊ, ಹುಣಸೆಹುಳಿ, ಅರಿಶಿನ ಹುಡಿ, ಜೀರಿಗೆ ಮುಂತಾದವುಗಳು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಅನ್ನದೊಂದಿಗೆ ಕಲಸಿ ತಿಂದರೆ ಮತ್ತೆ ಸ್ವರ್ಗಕ್ಕೆ ಎರಡೇ ಗೇಣು. ಅಪ್ಪಟ ಉಡುಪಿ ಶೈಲಿಯಲ್ಲಿ ಟೊಮೇಟೊ ರಸಂ

ನಿಮಗೆ ಅನ್ನ ತಿನ್ನಲು ಇಷ್ಟವಿಲ್ಲದೆ ಇದ್ದರೆ ಇದನ್ನು ಸೂಪ್ ರೀತಿ ಬಳಸಿಕೊಳ್ಳಬಹುದು. ರಸಂ ಜೀರ್ಣಕ್ರಿಯೆಗೆ ತುಂಬಾ ಸಹಕಾರಿ. ಜೀರ್ಣಕ್ರಿಯೆಯ ಸಮಸ್ಯೆ ಹೊಂದಿರುವವರು ಪ್ರತೀ ದಿನ ಬೆಳಗ್ಗೆ ರಸಂ ಕುಡಿದರೆ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ. ರಸಂ ಮಾಡಲು ಟೊಮೆಟೋ, ಹುಳಿ, ಅರಶಿನ ಹುಡಿ, ರಸಂ ಪೌಡರ್, ಕರಿಬೇವಿನ ಸೊಪ್ಪು, ಇಂಗು, ಉದ್ದು, ಮೆಂತೆ ಬೇಕಾಗಿದೆ. ಆಹಾ ಹುಳಿ-ಖಾರ ಮಿಶ್ರಿತ, ಘಮಘಮಿಸುವ ತಿಳಿಸಾರು

ರಸಂ ತಯಾರಿಸುವುದು ಹೇಗೆ?
ಒಂದು ಚಮಚ ಎಣ್ಣೆಯಲ್ಲಿ ಟೊಮೆಟೋ ಫ್ರೈ ಮಾಡಿ. ಫ್ರೈ ಆದ ನಂತರ ಅದಕ್ಕೆ ನೀರು ಹಾಕಿ. ಸ್ವಲ್ಪ ಅರಿಶಿನ ಹುಡಿ ಮತ್ತು ಹುಣಸೆ ಹುಳಿ ಹಾಕಿ. ಒಂದು ಚಮಚ ರಸಂ ಪೌಂಡರ್ ಮತ್ತು ಸ್ವಲ್ಪ ಉಪ್ಪು ಹಾಕಿ. ಇದನ್ನು 15 ನಿಮಿಷಗಳ ಕಾಲ ಹಾಗೆ ಬೇಯಿಸಿ. ಮೆಂತೆ ಮತ್ತು ಉದ್ದಿನ ಕಾಳನ್ನು ಫ್ರೈ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ಇಂಗು ಹಾಕಿಕೊಳ್ಳಿ ಮತ್ತು ರಸಂನ ನೀರಿಗೆ ಹಾಕಿ. ಇದಕ್ಕೆ ಕರಿಬೇವಿನ ಎಲೆ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ. ಇದನ್ನು ಗ್ಯಾಸ್ ನಿಂದ ತೆಗೆದು ಬಿಸಿಬಿಸಿಯಾಗಿರುವಾಗಲೇ ಸವಿಯಿರಿ. ರಸಂ ಮಾಡುವುದನ್ನು ಕಲಿತುಕೊಂಡ ಬಳಿಕ ಈಗ ಅದರಿಂದ ಆಗುವ ಆರೋಗ್ಯ ಲಾಭಗಳ ಬಗ್ಗೆ ತಿಳಿದುಕೊಳ್ಳುವ...

ಹಸಿವು ಹೆಚ್ಚಿಸುವುದು

ಹಸಿವು ಹೆಚ್ಚಿಸುವುದು

ರಸಂನಲ್ಲಿರುವ ಎಲ್ಲಾ ಮಸಾಲೆಗಳು ನಿಮ್ಮ ಹಸಿವನ್ನು ಹೆಚ್ಚಿಸುತ್ತದೆ. ಊಟಕ್ಕೆ ಮೊದಲು ಒಂದು ಕಪ್ ರಸಂ ಕುಡಿಯಿರಿ ಮತ್ತು ವ್ಯತ್ಯಾಸ ನೋಡಿ.

ವಿಟಮಿನ್ ಗಳು

ವಿಟಮಿನ್ ಗಳು

ವಿಟಮಿನ್ ಸಿ, ಥೈಮಿನ್, ನಿಯಾಸಿನ್, ರಿಬೊಫ್ಲಾವಿನ್ ಮತ್ತು ಫಾಲಿಕ್ ಆ್ಯಸಿಡ್ ರಸಂನಲ್ಲಿದೆ. ಇವುಗಳು ನಿಮ್ಮನ್ನು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ.

ದೇಹ ತೂಕ ಇಳಿಸಲು

ದೇಹ ತೂಕ ಇಳಿಸಲು

ರಸಂನಲ್ಲಿರುವ ಮಸಾಲೆಗಳು ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಗಹಾಕುತ್ತದೆ ಮತ್ತು ಚಯಾಪಚಯಾ ಕ್ರಿಯೆಯನ್ನು ವೃದ್ಧಿಸುತ್ತದೆ. ಇದರಿಂದ ಪರೋಕ್ಷವಾಗಿ ನೀವು ತೂಕವನ್ನು ಕಳೆದುಕೊಳ್ಳಬಹುದಾಗಿದೆ.

ಜ್ವರದಿಂದ ಗುಣವಾದ ಬಳಿಕ

ಜ್ವರದಿಂದ ಗುಣವಾದ ಬಳಿಕ

ಜ್ವರ ಬಂದ ಬಳಿಕ ನಮಗೆ ಯಾವುದೇ ಆಹಾರ ಬಾಯಿಗೆ ರುಚಿಸುವುದಿಲ್ಲ ಮತ್ತು ತಿನ್ನಲು ಮನಸು ಬರುವುದಿಲ್ಲ. ಇದಕ್ಕಾಗಿ ರಸಂನೊಂದಿಗೆ ಅನ್ನವನ್ನು ತಿಂದರೆ ಅದು ದೇಹಕ್ಕೆ ಒಳ್ಳೆಯದು. ಇದರ ಬಗ್ಗೆ ನಿಮ್ಮ ವೈದ್ಯರೊಂದಿಗೆ ಮಾತನಾಡಿ.

ಆ್ಯಂಟಿಆಕ್ಸಿಡೆಂಟ್

ಆ್ಯಂಟಿಆಕ್ಸಿಡೆಂಟ್

ರಸಂನಲ್ಲಿರುವಂತಹ ಆ್ಯಂಟಿಆಕ್ಸಿಡೆಂಟ್ ಗಳು ತ್ವಚೆಯ ಆಹಾರವನ್ನು ಕಾಪಾಡುತ್ತದೆ. ಇದು ಚರ್ಮವು ಒಡೆದುಹೋಗದಂತೆ ತಡೆಯುತ್ತದೆ.

ಮಿನರಲ್ಸ್

ಮಿನರಲ್ಸ್

ಮ್ಯಾಗ್ನಿಶಿಯಂ, ಪೊಟಾಶಿಯಂ, ಸತು, ಕಬ್ಬಿಣ, ತಾಮ್ರ, ಕ್ಯಾಲ್ಸಿಯಂ, ಸೆಲೆನಿಯಂನಂತಹ ಮಿನರಲ್ ಗಳು ರಸಂನಲ್ಲಿದೆ. ಇದು ದೇಹಕ್ಕೆ ತುಂಬಾ ಒಳ್ಳೆಯದು.

ರಕ್ತ ಪರಿಚಲನೆಗೆ

ರಕ್ತ ಪರಿಚಲನೆಗೆ

ರಸಂನಲ್ಲಿರುವ ಕೆಲವೊಂದು ಪೋಷಕಾಂಶಗಳು ರಕ್ತಪರಿಚಲನೆಗೆ ತುಂಬಾ ಒಳ್ಳೆಯದು. ಇದು ದೇಹದ ನರ ವ್ಯವಸ್ಥೆಗೂ ಸಹಕಾರಿ.

ಗ್ಯಾಸ್ ತಡೆಯುವುದು

ಗ್ಯಾಸ್ ತಡೆಯುವುದು

ಹೊಟ್ಟೆಯಲ್ಲಿ ಗ್ಯಾಸ್ ನಿಲ್ಲುವುದನ್ನು ರಸಂ ತಡೆಯುವುದು. ರಸಂನ್ನು ಯಾವಾಗಲೂ ಸೇವಿಸುವುದರಿಂದ ಅದು ನಿಮ್ಮ ಜೀರ್ಣ ಕ್ರಿಯೆಗೆ ತುಂಬಾ ಒಳ್ಳೆಯದು.

ಮಕ್ಕಳಿಗೆ

ಮಕ್ಕಳಿಗೆ

ಮಕ್ಕಳು ಘನ ವಸ್ತುಗಳನ್ನು ತಿನ್ನಲು ಆರಂಭಿಸಿದ ಕೂಡಲೇ ಅವುಗಳಿಗೆ ನೀಡುವಂತಹ ಮೊದಲ ಆಹಾರವೇ ರಸಂ ಮತ್ತು ಅನ್ನ.

ಮಲಬದ್ಧತೆ ತಡೆಯುವುದು

ಮಲಬದ್ಧತೆ ತಡೆಯುವುದು

ಇದು ಜೀರ್ಣ ಕ್ರಿಯೆಗೆ ತುಂಬಾ ಒಳ್ಳೆಯದು. ನಿಯಮಿತ ಸೇವನೆಯಿಂದ ಮಲಬದ್ದತೆ ನಿವಾರಿಸಬಹುದು.

English summary

Unknown Health Benefits Of Rasam

Rasam is a familiar name in South India as it is a part of almost every meal. The actual meaning of rasam is fluid. And yes, it is a fluid with medicinal properties and is consumed as a dish along with rice.As it contains ingredients like tomatoes, tamarind, turmeric powder and coriander, their medicinal properties boost your health. Its spicy taste makes it a pleasure to consume it with rice. If you aren't a rice eater, you have the option to enjoy it like a soup. It is very easy to prepare and is very good for digestion. If you have digestive issues, enjoy a cup of rasam every morning. Now, let us discuss about its health benefits.
Story first published: Thursday, April 21, 2016, 20:15 [IST]
X
Desktop Bottom Promotion