For Quick Alerts
ALLOW NOTIFICATIONS  
For Daily Alerts

ಬೆನ್ನೇರಿ ಕಾಡುವ ಖತರ್ನಾಕ್ ತಲೆ ನೋವುಗಳಿವು!

By Jaya subramanya
|

ತಲೆನೋವು ಎಲ್ಲರನ್ನೂ ಕಾಡುವ ವ್ಯಾಧಿಯಾಗಿದೆ. ಇದು ಸಾಮಾನ್ಯವಾಗಿದ್ದರೂ ಬೇರೆ ಬೇರೆ ಕಾರಣಗಳಿಗೆ ಇದು ನಿಮ್ಮನ್ನು ಕಾಡಬಹುದು ಅಂತೆಯೇ ದೀರ್ಘವಾಗಿಸಲೂಬಹುದು. ಇದಕ್ಕೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳದೇ ಇದ್ದರೂ ಇದು ಇನ್ನೊಂದು ರೋಗವನ್ನು ಸೃಷ್ಟಿಸಲು ಕಾರಣವಾಗಲಿದೆ.

ನಿಮ್ಮ ತಲೆನೋವು ಕಡಿಮೆಯಾಗದೇ ದೀರ್ಘ ಸಮಯದಿಂದ ನಿಮ್ಮನ್ನು ಹಿಂಸಿಸುತ್ತಿದ್ದಲ್ಲಿ ಅಂತೆಯೇ ಆಗಾಗ್ಗೆ ಇದು ಕಾಡುತ್ತಿದ್ದಲ್ಲಿ ಇದಕ್ಕೆ ಸೂಕ್ತ ಚಿಕಿತ್ಸೆಯನ್ನು ನೀವು ಪಡೆದುಕೊಳ್ಳಲೇಬೇಕು ಮತ್ತು ವೈದ್ಯರಿಂದ ತಪಾಸಣೆಯನ್ನು ಮಾಡಿಸಿಕೊಳ್ಳಲೇಬೇಕು.

Types of headache that affects your body

ಇಂದಿನ ಲೇಖನದಲ್ಲಿ ಮಾನವರನ್ನು ಕಾಡುವ ಬೇರೆ ಬೇರೆ ತಲೆನೋವುಗಳ ಬಗ್ಗೆ ಮಾಹಿತಿಗಳನ್ನು ಅರಿತುಕೊಳ್ಳೋಣ. ಇಂತಹ ತಲೆಶೂಲೆ ನಿಮ್ಮನ್ನು ಆವರಿಸಿ ಹಿಂಸಿಸುತ್ತಿದೆ ಎಂದಾದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಔಷಧಗಳನ್ನು ತೆಗೆದುಕೊಳ್ಳಿ. ಒಂದೇ ಗಂಟೆಯಲ್ಲಿ ಮಾತ್ರೆಯಿಲ್ಲದೆ ತಲೆನೋವು ಮಾಯ!

ಟೆನ್ಷನ್ ತಲೆನೋವು
ಒತ್ತಡದಿಂದ ಉಂಟಾಗುವ ತಲೆನೋವು ಎಂಬುದಾಗಿ ಕೂಡ ಇದನ್ನು ಕರೆಯುತ್ತಾರೆ. ದೊಡ್ಡವರನ್ನು ಕಾಡುವ ಸರ್ವೇ ಸಾಮಾನ್ಯ ತಲೆನೋವು ಇದಾಗಿದೆ. ಸಣ್ಣ ನೋವನ್ನು ಇದು ಹೊಂದಿದ್ದು ಸಮಯದೊಂದಿಗೆ ಹೋಗುತ್ತದೆ.

ಮೈಗ್ರೇನ್
ಇದು ಎದೆಬಡಿತದಂತಹ ನೋವನ್ನು ತಂದೊಡ್ಡುವಷ್ಟು ಮಾರಕವಾಗಿರುತ್ತದೆ. ಇದು ನಾಲ್ಕು ಗಂಟೆಗಳಿಗಿಂತ ಮೂರು ದಿನಗಳವರೆಗೆ ಕಾಡುವ ಸಾಧ್ಯತೆ ಇರುತ್ತದೆ. ತಿಂಗಳಿಗೆ ನಾಲ್ಕು ಬಾರಿ ಇದು ಕಾಡುತ್ತದೆ. ನೋವಿನೊಂದಿಗೆ, ಇತರ ಲಕ್ಷಣಗಳನ್ನು ಇದು ಪಡೆದುಕೊಂಡಿರುತ್ತದೆ ಅಂದರೆ ಬೆಳಕು, ಶಬ್ಧ, ವಾಸನೆ, ವಾಕರಿಕೆ ಅಥವಾ ವಾಂತಿ, ಹಸಿವು ಕಾಡುವುದು ಹೊಟ್ಟೆ ನೋವಿನ ಸಂವೇದನೆಗಳನ್ನು ಇದು ಒಳಗೊಂಡಿರುತ್ತದೆ. ಮೈಗ್ರೇನ್ ತಲೆನೋವೇ? ಚಿಂತೆ ಬಿಡಿ, ಈ ಜ್ಯೂಸ್ ಕುಡಿಯಿರಿ

ಯುವಕರು ಮೈಗ್ರೇನನ್ನು ಹೊಂದಿದ್ದಲ್ಲಿ ಅವರು ಸಾಮಾನ್ಯವಾಗಿ ಬಿಳಿಚಿಕೊಂಡಂತೆ ಕಾಣುತ್ತಾರೆ ಮತ್ತು ಚಂಚಲತೆಗೆ ಒಳಗಾಗುತ್ತಾರೆ. ಮಂದದೃಷ್ಟಿ, ಜ್ವರ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ಅವರು ಹೊಂದಿರುತ್ತಾರೆ. ಸಣ್ಣ ಪ್ರಮಾಣದ ಮಕ್ಕಳ ಮೈಗ್ರೇನ್‎ನಲ್ಲಿ ಜೀರ್ಣಕ್ರಿಯೆ ರೋಗಲಕ್ಷಣಗಳು, ವಾಂತಿ ಹೀಗೆ ಇದು ತಿಂಗಳಿಗೊಮ್ಮೆ ಸಂಭವಿಸುವ ಸಾಧ್ಯತೆ ಇರುತ್ತದೆ.

ಮಿಶ್ರ ತಲೆನೋವು ಲಕ್ಷಣಗಳು
ಮೈಗ್ರೇನ್ ಮತ್ತು ಒತ್ತಡದ ತಲೆನೋವನ್ನು ನೀವಿಲ್ಲಿ ಅನುಭವಿಸುತ್ತೀರಿ. ಇದು ನಿಮ್ಮನ್ನು ತೀವ್ರವಾಗಿ ಕಾಡುತ್ತದೆ ಇದು ಒಂದು ರೀತಿಯ ವರ್ಗಾವಣೆಯ ಮೈಗ್ರೇನ್‎ಗಳನ್ನು ಪಡೆದುಕೊಂಡಿರುತ್ತದೆ.

ಕ್ಲಸ್ಟರ್ ತಲೆನೋವು
ಕಣ್ಣುಗಳಿಗೆ ಉರಿಯನ್ನು ತರುವ ಮತ್ತು ದೇಹದಲ್ಲಿ ಚುಚ್ಚುವ ನೋವನ್ನು ಇದು ಉಂಟುಮಾಡುತ್ತಿರುತ್ತದೆ. ಕಣ್ಣುಗಳ ಹಿಂಭಾಗದಲ್ಲಿ ಒಂದು ರೀತಿಯ ಉರಿತವನ್ನು ನೀವು ಹೊಂದಬಹುದು. ಮಂದವಾದ ಅಥವಾ ನಿರಂತರ ಎದೆಬಡಿತ ಈ ಸಂದರ್ಭದಲ್ಲಿ ನಿಮಗೆ ಭಾಸವಾಗಬಹುದು. ಇದು ಹೆಚ್ಚು ಸಾಮಾನ್ಯವಾಗಿರುತ್ತದೆ, ಆದರೆ ಹೆಚ್ಚು ಗಂಭೀರವೂ ಹೌದು. ಇದರ ನೋವು ಹೆಚ್ಚು ಕೆಟ್ಟದ್ದಾಗಿರುತ್ತದೆ ಮತ್ತು ಇದು ನಿಮ್ಮನ್ನು ಕೂರಲೂ ನಿಲ್ಲಲೂ ಆಗದಂತಹ ಸ್ಥಿತಿಯನ್ನು ತಂದೊಡ್ಡುತ್ತದೆ. ಇದರಿಂದ ನೀವು ದೊಡ್ಡ ದೊಡ್ಡ ಹೆಜ್ಜೆಯನ್ನಿಟ್ಟು ನಡೆಯಲು ಆರಂಭಿಸುತ್ತೀರಿ.

ಇದು ಗುಂಪಿನಲ್ಲಿ ಸಂಭವಿಸುತ್ತದೆ. ದಿನಕ್ಕೆ ಮೂರು ಬಾರಿ ನೀವಿದನ್ನು ಹೊಂದುತ್ತೀರಿ ಮತ್ತು ಇದು ಎರಡು ವಾರಗಳಿಂದ ಹಿಡಿದು ಮೂರು ತಿಂಗಳಿಗೆ ಕೊನೆಯಾಗುತ್ತದೆ. ನಾಲ್ಕು ತಿಂಗಳು ಅಥವಾ ವರ್ಷಗಳಿಗೊಮ್ಮೆ ತಲೆನೋವು ಕಾಣಿಸಿಕೊಳ್ಳುತ್ತದೆ. ಇದು ನಿಮ್ಮನ್ನು ಹೆಚ್ಚು ಜರ್ಝರಿತಗೊಳಿಸಬಹುದು.

ಸೈನಸ್ ತಲೆನೋವು
ಕೆಮ್ಮು ಮತ್ತು ಶೀತದ ಕಾರಣಕ್ಕೆ ಇದು ಸಂಭವಿಸಬಹುದಾಗಿದ್ದು ನಿಮ್ಮ ಕೆನ್ನೆಯ ಮೂಳೆಗಳು, ಹುಬ್ಬು ಅಥವಾ ನಿಮ್ಮ ಮೂಗಿನ ತುದಿಯಲ್ಲಿ ಆಳವಾದ ಮತ್ತು ನಿರಂತರ ನೋವನ್ನು ಪಡೆದುಕೊಳ್ಳುತ್ತೀರಿ. ಆರೋಗ್ಯ ಟಿಪ್ಸ್: ಸೈನಸ್ ಸಮಸ್ಯೆಯನ್ನು ಸರಳವಾಗಿ ಮೈನಸ್ ಮಾಡಿ!

English summary

Types of headache that affects your body

Headaches can be more difficult than many people realize. Different kinds may have their very own set of symptoms, happen for a number of reasons and need different types of treatment. These headaches can end up affecting you badly
Story first published: Tuesday, September 13, 2016, 17:43 [IST]
X
Desktop Bottom Promotion