For Quick Alerts
ALLOW NOTIFICATIONS  
For Daily Alerts

ಕಡಲಾಳದ ಮೀನುಗಳ ಹಿಂದಿರುವ ಕರಾಳ ಸತ್ಯ

By Super
|

ಮಾಂಸಾಹಾರದಲ್ಲಿ ಸುರಕ್ಷಿತವಾದುದೆಂದರೆ ಬಿಳಿಬಣ್ಣದ ಮಾಂಸ. ಅದರಲ್ಲೂ ಸಾಗರ ಉತ್ಪನ್ನಗಳು ಆರೋಗ್ಯಕ್ಕೆ ಉತ್ತಮ. ಸಾಗರೋತ್ಪನ್ನಗಳಲ್ಲಿಯೇ ಮೀನು ಅತಿ ಸುಲಭವಾಗಿ, ಯಥೇಚ್ಛವಾಗಿ, ಸರಿಸುಮಾರು ಇಡಿಯ ವರ್ಷ ಎಲ್ಲೆಡೆ ದೊರಕುವ ಆಹಾರವಾಗಿದ್ದು ವಿಶ್ವದ ಅತಿ ಹೆಚ್ಚಿನ ಜೀವಿಗಳು ಸೇವಿಸುವ ಆಹಾರವೂ ಆಗಿದೆ. ಮನುಷ್ಯರಿಗೂ ಇದು ಅತ್ಯಂತ ಆರೋಗ್ಯಕರವಾಗಿದ್ದು ಹಲವಾರು ರೀತಿಯಲ್ಲಿ ಅಂಗಾಂಗಗಳ ಪೋಷಣೆ ಮಾಡುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಪ್ರೋಟೀನುಗಳು ಮತ್ತು ಒಮೆಗಾ ಕೊಬ್ಬಿನ ತೈಲಗಳು (ಸುಲಭವಾಗಿ ಮೀನಿನಿಣ್ಣೆ ಎಂದು ಕರೆಯಬಹುದು) ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತವೆ. ಇದರಲ್ಲಿ ಕಡಿಮೆ ಕ್ಯಾಲೋರಿಗಳಿರುವುದರಿಂದ ತೂಕ ಹೆಚ್ಚಾಗುತ್ತದೆ ಎಂಬ ಭಯವಿಲ್ಲ.

ಆದರೆ ಅತ್ಯಂತ ವೈವಿಧ್ಯ ಜಾತಿಗಳ ನೋಡಲು ಸುಂದರವಾದ ಮೀನುಗಳೆಲ್ಲಾ ಆರೋಗ್ಯಕರ ಎಂದು ಹೇಳುವಂತಿಲ್ಲ. ನೋಡಲು ಸುಂದರವಾಗಿರುವ ಬಿಳಿ ಅಣಬೆ ಹೇಗೆ ವಿಷಕಾರಿಯೋ ಅಂತೆಯೇ ಕೆಲವು ಮೀನುಗಳು ಸಹಾ ಆರೋಗ್ಯಕ್ಕೆ ಮಾರಕವಾಗಿವೆ. ಏಕೆಂದರೆ ಇಂದು ಮೀನುಗಾರಿಕೆಯೂ ಒಂದು ಲಾಭದ ಉದ್ಯಮವಾಗಿದೆ. ಯಾವಾಗ ಕಡಲಾಳದ ಮೀನುಗಳನ್ನು ಬೊಗಸೆಬಾಚಿ ಒಂದೂ ಬಿಡದಂತೆ ಹಿಡಿದು ಶೈತೀಕರಿಸಿ ಸಂಸ್ಕರಿಸಿ ಡಬ್ಬಿಗಳಲ್ಲಿ ಮಾರಾಟ ಮಾಡುವ ಪದ್ಧತಿ ಪ್ರಾರಂಭವಾಯಿತೋ ಆಗಲೇ ಇನ್ನೂ ಹೆಚ್ಚು ಲಾಭಮಾಡುವ ಹುನ್ನಾರವೂ ಪ್ರಾರಂಭವಾಯಿತು.

ಇದರಿಂದ ಪ್ರಕೃತಿಯ ಸಮತೋಲನವೇ ಏರುಪೇರಾಗಿದೆ. ಅಲ್ಲದೇ ಸಮುದ್ರಕ್ಕೆ ಎಸೆಯುವ ತಾಜ್ಯಗಳನ್ನು ತಿಂದ ಮೀನುಗಳು ತಮ್ಮ ಮಾಂಸಗಳಲ್ಲಿಯೂ ಆ ವಿಷಗಳನ್ನು ತುಂಬಿಕೊಂಡಿವೆ. ಅದರಲ್ಲೂ ವಿಶೇಷವಾಗಿ ಪಾದರಸ ಮತ್ತು ಕೆಲವು ವಿಕಿರಣ ಸೂಸುವ ತ್ಯಾಜ್ಯಗಳನ್ನು ಸಾಗರಕ್ಕೆ ಸುರಿದ ಪರಿಣಾಮವಾಗಿ ಆ ವಿಷಕಾರಿ ವಸ್ತುಗಳು ಮೀನುಗಳ ಮಾಂಸದಲ್ಲಿ ಕಂಡುಬಂದಿವೆ. ಇದುವರೆಗೆ ಹಾನಿಕರವಾದ ವಿಕಿರಣ ಸೂಸುವ iodine-131, caesium 137 ಮೊದಲಾದ ರೇಡಿಯೋ ನ್ಯೂಕ್ಲಿಯೈ ಮತ್ತು ಅವುಗಳ ಸಮಸ್ಥಾನಿ (isotope) ಗಳು ಗಾಳಿ ಮತ್ತು ಸಾಗರದ ನೀರಿನಲ್ಲಿ ಕರಗಿ ಜೀವಜಾಲಕ್ಕೆ ಕುತ್ತಾಗಿವೆ. ಇವುಗಳನ್ನು ಸೇವಿಸಿದ ಇತರ ಜೀವಿಗಳಿಗೂ ಇವು ಮಾರಕವಾಗಿವೆ.

ನೋಡಲು ಆರೋಗ್ಯಕರವಾಗಿ ಕಾಣುವ ಈ ಮೀನುಗಳು ದುಬಾರಿ ಬೆಲೆಗೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತವೆ. ಬೇಯಿಸಿದ ಬಳಿಕವೂ ಈ ವಿಷ ಹೊರಸೂಸದೇ ಹೊಟ್ಟೆಯಲ್ಲಿ ಜೀರ್ಣಗೊಂಡ ಬಳಿಕ ಬಿಡುಗಡೆಯಾಗಿ ಜೀರ್ಣಾಂಗಗಳ ಸಹಿತ ಇತರ ಅಂಗಗಳಿಗೆ ನಿಧಾನವಾಗಿ ಅಪಾಯ ಒಡ್ಡುತ್ತಾ ಹೋಗುತ್ತವೆ.

ಹಾಗಾದರೆ ಯಾವ ಮೀನನ್ನು ಸೇವಿಸಬೇಕು, ಯಾವ ಮೀನನ್ನು ಸೇವಿಸಬಾರದು ಎಂದು ಕಂಡುಕೊಳ್ಳುವುದು ಹೇಗೆ? ಇದನ್ನು ಉತ್ತರಿಸುವುದು ಸಾಗರ ವಿಜ್ಞಾನಿಗಳಿಗೂ ಕಷ್ಟವಾದ ಮಾತು. ಆದರೆ ಸಾಮಾನ್ಯವಾಗಿ ಒಂದು ಬಗೆಯ ಮೀನುಗಳು ಸಾಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದು ಆ ಪ್ರದೇಶದಲ್ಲಿನ ನೀರು ಹೆಚ್ಚು ಕಲುಷಿತಗೊಂಡಿದ್ದರೆ ಆ ಮೀನುಗಳನ್ನು ಸೇವಿಸದಿರಲು ಅವರು ಸಲಹೆ ಮಾಡುತ್ತಾರೆ. ಈ ಪಟ್ಟಿಗೆ ಸೇರಿದ ಕೆಲವು ಮೀನುಗಳನ್ನು ಕೆಳಗಿನ ಸ್ಲೈಡ್ ಷೋ ಮೂಲಕ ನೀಡಲಾಗಿದೆ. ಈ ಮೀನುಗಳು ಎಷ್ಟೇ ಅಗ್ಗ ಅಥವಾ ಆಕರ್ಷಕವಾಗಿದ್ದರೂ ಇದನ್ನು ಕೊಳ್ಳಲು ಹೋಗಬೇಡಿ, ಏಕೆಂದರೆ ವಿಕಿರಣಗಳ ಅಪಾಯ ಇಡಿಯ ಜೀವಮಾನ ಬಾಧಿಸಿ ಜೀವಕ್ಕೇ ಕುತ್ತಾಗಬಹುದು.

ಬಂಗಡೆ ಮೀನು (Mackerel)

ಬಂಗಡೆ ಮೀನು (Mackerel)

ಈ ಮೀನಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮೆಗ್ನೀಶಿಯಂ ಇರುವ ಕಾರಣ ಇದನ್ನೊಂದು ಅತ್ಯುತ್ತಮ ಆಹಾರವೆಂದು ಇದುವರೆಗೆ ಪರಿಗಣಿಸಲಾಗುತ್ತಿತ್ತು. ನಮ್ಮ ಮಂಗಳೂರು, ಮಲ್ಪೆ ಬಂದರುಗಳಲ್ಲಿ ಈ ಮೀನುಗಳು ಯಥೇಚ್ಛವಾಗಿವೆ. ಆದರೆ ಇವುಗಳ ಮಾಂಸದಲ್ಲಿ ಹೆಚ್ಚಿನ ಪ್ರಮಾಣದ ಪಾದರಸ ಕಂಡುಬಂದಿದ್ದು ಸದ್ಯಕ್ಕೆ ಈ ಮೀನುಗಳನ್ನು ತಿನ್ನುವುದು ಅಪಾಯಕ್ಕೆ ಅಹ್ವಾನ ನೀಡುವುದಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬಂಗಡೆ ಮೀನು (Mackerel)

ಬಂಗಡೆ ಮೀನು (Mackerel)

ಸಾಮಾನ್ಯವಾಗಿ ಸಿಎಫ್ ಎಲ್ ಬಲ್ಬುಗಳು ಕೆಟ್ಟ ಬಳಿಕ ಹಾಗೇ ಎಸೆದರೆ ಇದರ ಗಾಜು ಒಡೆದು ಒಳಗಿದ್ದ ಪಾದರಸ ಮಣ್ಣಿನ ಮೂಲಕ ಅಂತರ್ಜಲಕ್ಕೆ ಇಳಿದು ಬಳಿಕ ನದಿನೀರಿನ ಮೂಲಕ ಸಾಗರ ಸೇರಿದ್ದು ಈಗ ಈ ಬಂಗಡೆಗಳ ಹೊಟ್ಟೆ ಸೇರಿರಬಹುದು ಎಂದು ಜೀವವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ. ಆದ್ದರಿಂದ ಕೆಟ್ಟ ಸಿ ಎಫ್ ಎಲ್ ಅಥವಾ ಟ್ಯೂಬ್ ಲೈಟುಗಳನ್ನು ಎಲ್ಲೆಡೆ ಎಸೆಯದೇ ಸೂಕ್ತ ರೀತಿಯಲ್ಲಿಯೇ ವಿಸರ್ಜಿಸಬೇಕು.

ಮೀನುಮೊಟ್ಟೆ (Caviar)

ಮೀನುಮೊಟ್ಟೆ (Caviar)

ಕೆಲವು ಮೀನುಗಳು ಸಾಗರದಾಳದ ಕಲ್ಲುಗಳಿಗೆ ಅಂಟಿಕೊಂಡಿರುವಂತೆ ಕಪ್ಪು ಬಣ್ಣದ ಮೊಟ್ಟೆಗಳನ್ನು ಇಡುತ್ತವೆ. ಇದೇ ಮೀನುಮೊಟ್ಟೆ ಅಥವಾ ಕೇವಿಯರ್. ದುಬಾರಿಯಾದ ಈ ಉತ್ಪನ್ನವನ್ನು ತಿನ್ನಲು ಹಲವರು ಹಾತೊರೆಯುತ್ತಾರೆ.ಆದರೆ ಸಾಗರ ತಳದಲ್ಲಿರುವ ಕಾರಣ ಸಾಗರದಲ್ಲಿ ಕರಗಿದ ಭಾರವಾದ ವಿಷಕಾರಿ ವಸ್ತುಗಳನ್ನು ಇದರ ಪದರ ಹೀರಿಕೊಳ್ಳುತ್ತದೆ. ಕೆಲವೇ ದಿನಗಳಲ್ಲಿ ಈ ಪದರ ಅತ್ಯಂತ ವಿಷಕಾರಿಯಾಗುತ್ತದೆ. ಇದನ್ನು ತಿನ್ನುವುದೂ ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ.

ಈಲ್ ಮೀನು

ಈಲ್ ಮೀನು

ಸಾಮಾನ್ಯವಾಗಿ ಸುಷಿ ಖಾದ್ಯಗಳನ್ನು ಬಡಿಸುವ ಹೋಟೆಲುಗಳಲ್ಲಿ ಹಳದಿ ಅಥವಾ ಬೆಳ್ಳಿಯ ಬಣ್ಣದ ಈಲ್ ಮೀನುಗಳ ಖಾದ್ಯ ತಯಾರಿಸಲಾಗುತ್ತದೆ. polychlorinated biphenyl ಅಥವಾ (PCB) ಎಂಬ ವಿಷವಸ್ತುವನ್ನು ಈ ಮೀನು ಸೇವಿಸಿರುವ ಕಾರಣ ಈ ಮೀನು ವಿಷಕಾರಿಯಾಗಿದೆ. ಕಾರಿನ ಇಂಜಿನ್ನನ್ನು ತಣ್ಣಗೆ ಮಾಡುವ ಕೂಲೆಂಟ್, ಬ್ಯಾಟರಿಗಳಲ್ಲಿರುವ ಆಮ್ಲೀಯ ದ್ರವ ಮೊದಲಾದವುಗಳಲ್ಲಿ ಉಪಯೋಗಿಸಲಾಗುತ್ತದೆ. ಬಳಕೆಯ ನಂತರ ಇದು ಸಾಗರಕ್ಕೆ ಸೇರಿ ಈ ಮೀನುಗಳ ಹೊಟ್ಟೆ ಸೇರುತ್ತದೆ. ಅಲ್ಲದೇ ಈ ಮೀನಿನಲ್ಲಿ ಆಘಾತಕಾರಿ ಪ್ರಮಾಣದ ಪಾದರಸವೂ ಕಂಡುಬಂದಿದೆ.

ಕತ್ತಿ ಮೀನು (Swordfish)

ಕತ್ತಿ ಮೀನು (Swordfish)

ಚೂಪಾದ ಕತ್ತಿಯಂತಹ ಮೂಗಿರುವ ಕತ್ತಿಮೀನಿನಲ್ಲಿಯೂ ಆಗಾಧ ಪ್ರಮಾಣದಲ್ಲಿ ಪಾದರಸ ಕಂಡುಬಂದಿರುವ ಕಾರಣ ಈ ಮೀನಿನ ಸೇವನೆ ಅಪಾಯಕ್ಕೆ ಆಹ್ವಾನವಾಗಿದೆ. ಪಾದರಸ ಒಂದು ಅಪಾಯಕಾರಿ ವಿಷವಾಗಿದ್ದು ಇದರ ಪ್ರಮಾಣ 1 ppm (1 mg/L) ಅಂದರೆ ಒಂದು ಲೀಟರಿನಲ್ಲಿ ಒಂದು ಮಿಲಿಗ್ರಾಂ ಗಿಂತ ಹೆಚ್ಚಿದ್ದರೂ ನಮ್ಮ ದೇಹ ಇದನ್ನು ಎದುರಿಸಲಾರದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕತ್ತಿ ಮೀನು (Swordfish)

ಕತ್ತಿ ಮೀನು (Swordfish)

ಆದರೆ ಕತ್ತಿಮೀನಿನಲ್ಲಿರುವ ಪಾದರಸದ ಪ್ರಮಾಣ 976 ppm! ಅಂದರೆ ಸರಿಸುಮಾರು ಸಾವಿರ ಪಟ್ಟು ಹೆಚ್ಚು! ಈ ಮಟ್ಟದ ವಿಷವನ್ನು ನಮ್ಮ ದೇಹ ತಡೆಯಲು ಸಾಧ್ಯವೇ ಇಲ್ಲ. ಇದು ನೇರವಾಗಿ ಮೆದುಳಿನ ಮೇಲೆ ಪ್ರಭಾವ ಬೀರಿ ಮೆದುಳಿನ ಜೀವಕೋಶಗಳನ್ನು ಶಾಶ್ವತವಾಗಿ ನಾಶಪಡಿಸುತ್ತಾ ಹೋಗುತ್ತದೆ. ಇದರ ಪರಿಣಾಮಗಳು ಊಹೆಗೂ ನಿಲುಕದ್ದಾಗಿವೆ.

ಗೆದರೆ ಮೀನು ಅಥವಾ ಟ್ಯೂನಾ ಮೀನು (Tuna)

ಗೆದರೆ ಮೀನು ಅಥವಾ ಟ್ಯೂನಾ ಮೀನು (Tuna)

ಡಬ್ಬಿಗಳಲ್ಲಿ ಸಿಗುವ ಮೀನುಗಳಲ್ಲಿ ಸಿಂಹಪಾಲು ಟ್ಯೂನಾ ಮೀನುಗಳದ್ದಾಗಿದೆ. ಇದರಲ್ಲಿ ಕೆಲವಾರು ವಿಧಗಳಿದ್ದು ನೀಲಿ ಈಜುರೆಕ್ಕೆಯ ಮತ್ತು ದೊಡ್ಡಕಣ್ಣಿನ ಟ್ಯೂನಾ ಎಂಬ ಎರಡು ವಿಧಗಳ ಮೀನನ್ನು ಮಾತ್ರ ಸರ್ವಥಾ ಸೇವಿಸಕೂಡದು!

ಗೆದರೆ ಮೀನು ಅಥವಾ ಟ್ಯೂನಾ ಮೀನು (Tuna)

ಗೆದರೆ ಮೀನು ಅಥವಾ ಟ್ಯೂನಾ ಮೀನು (Tuna)

ಏಕೆಂದರೆ ಕತ್ತಿಮೀನಿನ ಬಳಿಕ ಅತಿ ಹೆಚ್ಚಿನ ಪ್ರಮಾಣದಲ್ಲಿ ಪಾದರಸ ಕಂಡುಬಂದಿದೆ. ಈ ಮೀನಿನ ಸೇವನೆಯೂ ಮೆದುಳಿನ ಜೀವಕೋಶಗಳನ್ನು ನಾಶಪಡಿಸುವ ಮೂಲಕ ಆರೋಗ್ಯವನ್ನು ಕೆಡಿಸುತ್ತದೆ.

ಸಾಲ್ಮನ್ ಮೀನು

ಸಾಲ್ಮನ್ ಮೀನು

ವಿಶ್ವದ ಅತಿ ನೆಚ್ಚಿನ ಮತ್ತು ದುಬಾರಿ ಮೀನು ಎಂದರೆ ಸಾಲ್ಮನ್. ಇದರಲ್ಲಿ ಹಲವಾರು ಪ್ರಜಾತಿಗಳಿದ್ದು ಸಿಹಿನೀರಿನಲ್ಲಿಯೂ ಉಪ್ಪುನೀರಿನಲ್ಲಿಯೂ ಕಂಡುಬರುತ್ತವೆ. ಸಾಗರದ ಪ್ರದೂಷಣೆಯಿಂದ ಉಪ್ಪುನೀರಿನ ಸಾಲ್ಮನ್ ಮೀನುಗಳು ಸಹಾ ಪ್ರಭಾವಿತಗೊಂಡಿವೆ. ಈ ಮೀನಿನ ಸೇವನೆ ಮಧುಮೇಹದ ಸಾದ್ಯತೆಯನ್ನು ಅಪಾರವಾಗಿ ಹೆಚ್ಚಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸಾಲ್ಮನ್ ಮೀನು

ಸಾಲ್ಮನ್ ಮೀನು

ರುಚಿಯ ಬೆನ್ನು ಹತ್ತಿ ಸಾಲ್ಮನ್ ಮೀನನ್ನು ನಿಯಮಿತವಾಗಿ ಸೇವಿಸುವವರಲ್ಲಿ ಸ್ಥೂಲಕಾಯ ಶೀಘ್ರವೇ ಆವರಿಸುತ್ತದೆ. ವಿಪರ್ಯಾಸವೆಂದರೆ ಮಾರುಕಟ್ಟೆಯಲ್ಲಿ ದೊರಕುತ್ತಿರುವ ಡಬ್ಬಿಯ ಅಥವಾ ಸಂಸ್ಕರಿತ ಸಾಲ್ಮನ್ ಮೀನುಗಳೆಲ್ಲವೂ ಉಪ್ಪುನೀರಿನ ಸಾಲ್ಮನ್ ಮೀನುಗಳೇ ಆಗಿವೆ. ಆದ್ದರಿಂದ ಆರೋಗ್ಯ ಉಳಿಸಿಕೊಳ್ಳಲು ಈ ಮೀನಿನ ರುಚಿಯನ್ನು ಅನಿವಾರ್ಯವಾಗಿ ತ್ಯಜಿಸುವುದೇ ಉತ್ತಮ.

ಶಾರ್ಕ್ ಮೀನು

ಶಾರ್ಕ್ ಮೀನು

ಸಾಗರದ ಅತ್ಯಂತ ಕ್ರೂರ ಮೀನುಗಳಾದ ಶಾರ್ಕುಗಳ ಮಾಂಸವೂ ವಿಶ್ವದ ಒಂದು ರುಚಿಕರ ಖಾದ್ಯವಾಗಿದೆ. ಆದರೆ ಈ ಮೀನಿನಲ್ಲಿಯೂ ನಾವು ತಾಳಬಹುದಾದ ಮಟ್ಟಕ್ಕಿಂತಲೂ ಹೆಚ್ಚು ಪ್ರಮಾಣದ ಪಾದರಸವಿದ್ದು ಶಾರ್ಕ್ ಮೀನಿನ ಯಾವುದೇ ಭಾಗವನ್ನು ಸೇವಿಸುವುದು ಆಪಾಯಕ್ಕೆ ನೀಡುವ ಆಹ್ವಾನವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಶಾರ್ಕ್ ಮೀನು

ಶಾರ್ಕ್ ಮೀನು

ಶಾರ್ಕುಗಳು ನೂರಾರು ವಿಧದ ಮೀನುಗಳನ್ನು ತಿನ್ನುವ ಕಾರಣ ಆ ಮೀನುಗಳಲ್ಲಿರುವ ವಿಷವೆಲ್ಲಾ ಇದರ ಮಾಂಸದಲ್ಲಿ ಸೇರಿಕೊಂಡು ಇದನ್ನು ಸೇವಿಸುವವರಲ್ಲಿ ಹಲವು ರೀತಿಯ ಅಪಾಯಗಳನ್ನು ಒಡ್ಡುತ್ತದೆ.

English summary

Types Of Fish That Are Unhealthy To Eat

Here are 7 types of fish you should not eat. It is said that these 7 fish contain a powerful component which can kill you instantly. ಇಲ್ಲಿ ನೀಡಿರುವ 7 ಬಗೆಯ ಮೀನುಗಳು ಆರೋಗ್ಯಕ್ಕೆ ಮಾರಕ ಎಂಬುದು ಖಚಿತಪಡಿಸಲಾಗಿದೆ, ಬನ್ನಿ ಅವು ಯಾವುದು ಎಂಬುದನ್ನು ನೋಡೋಣ...
X
Desktop Bottom Promotion