ಮೂಗಿನಲ್ಲಿ ರಕ್ತಸ್ರಾವದ ತೊಂದರೆ-ಒಂದಿಷ್ಟು ಟಿಪ್ಸ್ ನೆನಪಿಟ್ಟುಕೊಳ್ಳಿ

By: Hemanth
Subscribe to Boldsky

ಶೀತದಿಂದ ಹೆಚ್ಚು ದಿನ ಬಳಲುತ್ತಾ ಇದ್ದರೆ ನಮಗೆ ಕಿರಿಕಿರಿಯಾಗುತ್ತದೆ. ಮೂಗಿನಿಂದ ಸುರಿಯುವ ಲೋಳೆಯಿಂದ ಸಾಮಾನ್ಯವಾಗಿ ಅಡಚಣೆಗಳು ಆಗುತ್ತಾ ಇರುತ್ತದೆ. ಆದರೆ ಮೂಗಿನಲ್ಲಿ ಒಮ್ಮೆಲೇ ರಕ್ತ ಸುರಿಯಲು ಆರಂಭಿಸಿದರೆ ಆಗ ನಿಜವಾಗಿಯೂ ಬೆಚ್ಚಿ ಬೀಳಬೇಕಾಗುತ್ತದೆ. ಮೂಗಿನಲ್ಲಿ ರಕ್ತ ಸುರಿಯುವುದನ್ನು ನೋಡಿ ಖಂಡಿತವಾಗಿಯೂ ನಾವು ಹೆದರುತ್ತೇವೆ.

ಏನಾಗಿದೆಯೋ ಎಂಬ ಆತಂಕ ನಮ್ಮಲ್ಲಿ ಇರುತ್ತದೆ. ಆದರೆ ಮೂಗಿನಲ್ಲಿ ರಕ್ತ ಸುರಿಯಲು ಹಲವಾರು ರೀತಿಯ ಕಾರಣಗಳು ಇವೆ. ಮೂಗಿನಲ್ಲಿ ಆಗುವಂತಹ ಸೋಂಕು, ರಾಸಾಯನಿಕಗಳ ಅಡ್ಡಪರಿಣಾಮ, ಅತಿಯಾಗಿ ಸೀನುವುದು, ಮಧ್ಯಪಾನ ಹಾಗೂ ಧೂಮಪಾನದಿಂದಲೂ ಹೀಗೆ ಆಗುತ್ತದೆ. ಗರ್ಭಿಣಿಯಾಗಿರುವಾಗ ಮೂಗಿನಲ್ಲಿ ರಕ್ತ ಸೋರುವುದು ಸಹಜವೇ?

ಮೂಗು ಒಣಗಿ ಹೋಗುವುದರಿಂದ ಮೂಗಿನಲ್ಲಿ ರಕ್ತ ಸುರಿಯಲು ಆರಂಭವಾಗುವುದು. ಸೈನಲ್ ಸೋಂಕು, ಹಾರ್ಮೋನು ಬದಲಾವಣೆ, ಅಧಿಕರಕ್ತದೊತ್ತಡ ಮೂಗಿನಲ್ಲಿ ರಕ್ತ ಸುರಿಯಲು ಪ್ರಮುಖ ಕಾರಣವಾಗಿದೆ. ಇದು ಪದೇ ಪದೇ ಆಗುತ್ತಲಿದ್ದರೆ ಇದರ ಬಗ್ಗೆ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು. ಸಾಮಾನ್ಯವಾಗಿ ಮೂಗಿನಿಂದ ರಕ್ತ ಸುರಿದರೆ ಕೆಲವೊಂದು ಮನೆಮದ್ದನ್ನು ಬಳಸಿಕೊಂಡು ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಇದರ ಬಗ್ಗೆ ತಿಳಿದುಕೊಳ್ಳಿ.   

ತಲೆ ಮೇಲಕ್ಕೆತ್ತಿ

ತಲೆ ಮೇಲಕ್ಕೆತ್ತಿ

ಮೂಗಿನಲ್ಲಿ ರಕ್ತ ಸುರಿಯಲು ಆರಂಭವಾದಾಗ ನೀವು ತಲೆಯನ್ನು ಮೇಲಕ್ಕೆತ್ತಿಕೊಂಡು ಕೆಲವು ಸಮಯ ಹೀಗೆ ಕುಳಿತುಕೊಳ್ಳಿ. ಇದರಿಂದ ರಕ್ತ ಸುರಿಯುವುದು ಕಡಿಮೆಯಾಗುವುದು. ರಕ್ತ ಸುರಿಯುವುದು ಕಡಿಮೆಯಾದ ಕೂಡಲೇ ಮತ್ತೆ ಹಿಂದಿನ ಸ್ಥಾನಕ್ಕೆ ಬನ್ನಿ.

ತಂಪು ಚಿಕಿತ್ಸೆ

ತಂಪು ಚಿಕಿತ್ಸೆ

ಮೂಗಿನಿಂದ ರಕ್ತ ಸುರಿಯಲು ಆರಂಭವಾದಾಗ ಸ್ವಲ್ಪ ಮಂಜನ್ನು ಸ್ವಚ್ಛ ಬಟ್ಟೆಯಲ್ಲಿ ಕಟ್ಟಿಕೊಂಡು ಮೂಗಿಗೆ ಇಡಿ. ಬಳಿಕ ಇದನ್ನು ಮೂಗಿನ ಮೇಲುಗಡೆ ಇಟ್ಟುಬಿಡಿ. ಐದು ನಿಮಿಷ ಕಾಲ ಹೀಗೆ ಮಾಡಿ. ಇದರಿಂದ ರಕ್ತನಾಳಗಳನ್ನು ಮೊಟಕುಗೊಳಿಸಿ ರಕ್ತ ಸುರಿಯುವುದನ್ನು ನಿಲ್ಲಿಸುವುದು.

ಈರುಳ್ಳಿ

ಈರುಳ್ಳಿ

ರಕ್ತ ಸುರಿಯುತ್ತಿರುವ ಮೂಗಿಗೆ ಈರುಳ್ಳಿ ಒಳ್ಳೆಯ ಔಷಧಿಯಾಗಿದೆ. ಇದು ರಕ್ತ ಹೆಪ್ಪುಗಟ್ಟುವಂತೆ ಮಾಡುತ್ತದೆ. ತಾಜಾ ಈರುಳ್ಳಿಯನ್ನು ಕತ್ತರಿಸಿಕೊಂಡು ಅದರ ಘಾಟನ್ನು ಉಸಿರಿನ ಮೂಲಕ ಎಳೆದುಕೊಳ್ಳಿ. ಇದು ನೆರವಾಗುವುದು. ಕಣ್ಣಲ್ಲಿ ನೀರು ತರಿಸಿದರೂ ಆರೋಗ್ಯ ಕಾಪಾಡುವ ಈರುಳ್ಳಿ

ಕೊತ್ತಂಬರಿ

ಕೊತ್ತಂಬರಿ

ಕೊತ್ತಂಬರಿಯು ನರಗಳಿಗೆ ಶಮನವನ್ನು ನೀಡಿ ತಕ್ಷಣ ಪರಿಹಾರವನ್ನು ನೀಡುವುದು. ಸ್ವಲ್ಪ ಕೊತ್ತಂಬರಿ ಎಲೆಗಳನ್ನು ತೆಗೆದುಕೊಂಡು ಅದರ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಹಣೆಗೆ ಹಚ್ಚಿಕೊಂಡು 5-7 ನಿಮಿಷ ಕಾಲ ಹಾಗೆ ಇಡಿ. ಇದು ಶಮನವನ್ನು ನೀಡಿ ಮೂಗಿನಿಂದ ರಕ್ತ ಸುರಿಯುವುದನ್ನು ಕಡಿಮೆ ಮಾಡುವುದು. ಕೊತ್ತಂಬರಿ ಸೊಪ್ಪಿನಲ್ಲಿರುವ 10 ಔಷಧೀಯ ಗುಣಗಳು

ತುಳಸಿ

ತುಳಸಿ

ಮೂಗಿನಿಂದ ರಕ್ತ ಸುರಿಯುವಾಗ ತುಳಸಿಯು ನರಗಳಿಗೆ ಶಮನವನ್ನು ನೀಡುವುದು. ಕೆಲವು ತುಳಸಿ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ಅದನ್ನು ಜಗಿಯಿರಿ. ಇದು ರಕ್ತ ಸುರಿಯುವುದನ್ನು ಕಡಿಮೆ ಮಾಡುವುದು. ಬಹುಪಯೋಗಿ ಔಷಧಗಳ ಸಂಜೀವಿನಿ 'ತುಳಸಿ'

ಅಡುಗೆ ಸೋಡಾ

ಅಡುಗೆ ಸೋಡಾ

ಮೂಗಿನಿಂದ ರಕ್ತ ಸುರಿಯುವುದನ್ನು ಅಡುಗೆ ಸೋಡಾವು ಕಡಿಮೆ ಮಾಡುತ್ತದೆ. ಚಿಟಿಕೆಯಷ್ಟು ಅಡುಗೆ ಸೋಡಾವನ್ನು ಅರ್ಧ ಲೋಟ ನೀರಿಗೆ ಹಾಕಿಕೊಂಡು ಕಳಸಿ ಅದನ್ನು ಮೂಗಿಗೆ ಸ್ಪ್ರೇ ಮಾಡಿ. ಅಡುಗೆ ಸೋಡಾದಿಂದ ಬರೋಬ್ಬರಿ ಏಳು ಪ್ರಯೋಜನಗಳಿವೆ!

 

 

English summary

Try These Home Remedies For Nosebleeds

Today at Boldsky we will be explaining a few of the home remedies for nosebleeds and how we need to use natural ingredients to treat nose bleeding. There are several factors that cause nosebleeds. Extreme dryness of the nasal membranes is one of the major factors that leads to nosebleeds. Allergic reaction, chemical reaction, continuous sneezing, excessive smoking and alcohol use cause nasal dryness.
Story first published: Friday, December 23, 2016, 8:01 [IST]
Subscribe Newsletter