For Quick Alerts
ALLOW NOTIFICATIONS  
For Daily Alerts

ನೆನಪಿನ ಶಕ್ತಿ ಹೆಚ್ಚಿಸುವ ಶಕ್ತಿಶಾಲಿ ಆಹಾರಗಳು

By Hemanth
|

ವೈದ್ಯಕೀಯ ಲೋಕದ ಪ್ರಕಾರ ಒಂದುವರೆ ಕೆಜಿ ತೂಗುವ ಮಾನವನ ಮೆದುಳಿನ ಕೆಲಸವು ಅದ್ಭುತವಾಗಿರುವಂತಾಗಿದೆ. ದೇವರು ಸೃಷ್ಟಿ ಮಾಡಿರುವಾಗ ಪ್ರತಿಯೊಬ್ಬರಿಗೂ ಒಂದೇ ರೀತಿಯ ಮೆದುಳನ್ನು ನೀಡಿರುತ್ತಾನೆ. ಆದರೆ ಅದನ್ನು ಉಪಯೋಗಿಸಿಕೊಳ್ಳುವ ರೀತಿಯಿಂದ ಚುರುಕುತನ ಹೆಚ್ಚಾಗುವುದು.

ಆದರೆ ಇಂದಿನ ದಿನಗಳಲ್ಲಿ ಅತಿಯಾದ ಒತ್ತಡದ ಕೆಲಸದಿಂದ ಮೆದುಳಿನ ಮೇಲೆ ಒತ್ತಡವೂ ಜಾಸ್ತಿಯಾಗುತ್ತಿದೆ. ಇದೇ ಕಾರಣದಿಂದಾಗಿ ಕೆಲವರಲ್ಲಿ ನೆನಪಿನ ಶಕ್ತಿಯ ಕೊರತೆ, ಏಕಾಗ್ರತೆ ಕಡಿಮೆಯಾಗಿರುವಂತಹ ಸಮಸ್ಯೆಗಳು ಕಾಣಿಸುತ್ತಾ ಇರುತ್ತದೆ. ಮೆದುಳು ಸರಿಯಾಗಿ ಕಾರ್ಯನಿರ್ವಹಿಸದೆ ಇದ್ದರೆ ಅದರಿಂದ ಹಲವಾರು ರೀತಿಯ ಸಮಸ್ಯೆಗಳು ಉಂಟಾಗಬಹುದು. ಮೆದುಳು ಸದಾ ಚುರುಕಾಗಿರಲು, ಇಲ್ಲಿದೆ ಸರಳ ಟ್ರಿಕ್ಸ್

ನಾವು ದೇಹಕ್ಕೆ ವ್ಯಾಯಾಮವನ್ನು ನೀಡಿದಂತೆ ಮೆದುಳಿಗೆ ಕೂಡ ವ್ಯಾಯಾಮ ಮಾಡಿಸುತ್ತಾ ಇರಬೇಕಾಗುತ್ತದೆ. ಇದಕ್ಕಾಗಿ ಹೊಸ ಹೊಸ ಪುಸ್ತಕಗಳನ್ನು ಓದುತ್ತಾ ಇರಬೇಕು ಮತ್ತು ಸುಡೋಕು, ಪದಬಂಧದಂತಹ ಮೆದುಳಿಗೆ ಕೆಲಸ ನೀಡುವಂತಹ ಕಾರ್ಯವನ್ನು ಮಾಡುತ್ತಿರಬೇಕು.

Try These Amazing Foods To Improve Your Focus And Memory

ಇಷ್ಟು ಮಾತ್ರವಲ್ಲದೆ ನಾವು ತಿನ್ನುವಂತಹ ಆಹಾರವು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದಕ್ಕಾಗಿ ನಾವು ತಿನ್ನುವ ಆಹಾರದ ಬಗ್ಗೆ ಪ್ರಾಮುಖ್ಯತೆ ನೀಡಬೇಕು. ನಾವು ತಿನ್ನುವ ಆಹಾರದಲ್ಲಿರುವ ಪೋಷಕಾಂಶಗಳು ಮೆದುಳಿನ ಕೋಶಗಳಿಗೆ ಹಾನಿಯಾಗದಂತೆ ತಡೆಯುತ್ತದೆ ಮತ್ತು ಕಾರ್ಯಚಟುವಟಿಕೆಯನ್ನು ಸುಧಾರಿಸುತ್ತದೆ.

ಮೆದುಳಿನ ಬಗ್ಗೆ ಇಷ್ಟು ಹೇಳಿದ ಮೇಲೆ ಇನ್ನು ಮೆದುಳನ್ನು ಚುರುಕುಗೊಳಿಸಲು ಏನೆಲ್ಲಾ ತಿನ್ನಬೇಕು ಎನ್ನುವ ಬಗ್ಗೆಯೂ ಬೋಲ್ಡ್ ಸ್ಕೈ ನಿಮಗೆ ಹೇಳಲಿದೆ. ಜ್ಞಾಪಕ ಶಕ್ತಿ, ಏಕಾಗ್ರತೆಯನ್ನು ಅಭಿವೃದ್ಧಿ ಪಡಿಸುವಂತಹ ಆಹಾರಗಳ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಮೆದುಳನ್ನು ಚುರುಕಾಗಿಸುವ ಪ್ರಭಾವಶಾಲಿ ತಂತ್ರಗಳು

ಚಾಕಲೇಟ್

ಚಾಕಲೇಟ್ ತಿಂದರೆ ಒಳ್ಳೆಯದಲ್ಲ ಎನ್ನುವ ಮಾತಿದೆ. ಆದರೆ ಗಾಢ ಬಣ್ಣದ ಚಾಕಲೇಟ್ ಅನ್ನು ತಿಂದರೆ ಅದು ಮೆದುಳಿಗೆ ರಕ್ತ ಸಂಚಲನೆಯಾಗುವುದನ್ನು ಹೆಚ್ಚಿಸುತ್ತದೆ. ಇದರಿಂದ ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿಯು ವೃದ್ಧಿಯಾಗುವುದು. ಯಾವಾಗೊಲೊಮ್ಮೆ ಚಾಕಲೇಟ್ ತಿನ್ನುವ ಅಭ್ಯಾಸ ಮಾಡಿಕೊಳ್ಳಿ.

ಅವಕೋಡ್

ಮೆದುಳಿಗೆ ಶಕ್ತಿಯನ್ನು ನೀಡುವ ಮತ್ತೊಂದು ಆಹಾರವೆಂದರೆ ಅವಕೋಡ್. ಇದು ಏಕಾಗ್ರತೆ ಮತ್ತು ನೆನಪಿನ ಶಕ್ತಿ ಹೆಚ್ಚಿಸುತ್ತದೆ. ಅವಕೋಡ್ ನಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗುಣಗಳು ಮೆದುಳಿನ ಕ್ರಿಯೆಯನ್ನು ಉತ್ತಮಪಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

ಗಾಜರು ಗೆಡ್ಡೆ
ವಯಸ್ಸಿಗೆ ಸಂಬಂಧಿಸಿದ ನೆನಪಿನ ಶಕ್ತಿ ಕಳಕೊಳ್ಳುವ ಸಮಸ್ಯೆಗೆ ಗಾಜರು ಗೆಡ್ಡೆ ಪರಿಣಾಮಕಾರಿ ಆಹಾರವಾಗಿದೆ. ಗಾಜರು ಗೆಡ್ಡೆಯನ್ನು ತಿನ್ನುವುದರಿಂದ ಏಕಾಗ್ರತೆ ಮತ್ತು ಮನಸ್ಸನ್ನು ಕೇಂದ್ರೀಕರಿಸಲು ನೆರವಾಗುತ್ತದೆ. ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.

ಮೊಟ್ಟೆಯ ಲೋಳೆ
ಮೊಟ್ಟೆಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಮೊಟ್ಟೆಯ ಲೋಳೆಯು ವ್ಯಕ್ತಿಯ ಮೆದುಳಿನ ಆರೋಗ್ಯವನ್ನು ಉತ್ತಮಪಡಿಸುತ್ತದೆ. ಮೊಟ್ಟೆಯ ಲೋಳೆಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ ಎಂದು ಅಧ್ಯಯನಗಳು ಹೇಳಿವೆ. ನಿಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ 18 ಅದ್ಭುತ ಆಹಾರಗಳು

ಸಾಲ್ಮನ್
ಸಾಲ್ಮನ್ ನಲ್ಲಿರುವ ಒಮೆಗಾ-3 ಕೊಬ್ಬಿನ ಆಮ್ಲವು ನೆನಪು ಮತ್ತು ಏಕಾಗ್ರತೆಯನ್ನು ವೃದ್ಧಿಸುತ್ತದೆ. ಸಾಲ್ಮನ್ ತಿನ್ನುವುದರಿಂದ ವ್ಯಕ್ತಿಯ ಮೆದುಳಿನ ಆರೋಗ್ಯಕ್ಕೆ ಹೆಚ್ಚಿನ ಲಾಭವಿದೆ ಎಂದು ಹಲವಾರು ಅಧ್ಯಯನಗಳು ಹೇಳಿವೆ.

ಬಸಲೆ
ಬಸಲೆಯು ಏಕಾಗ್ರತೆಯನ್ನು ಹೆಚ್ಚಿಸುವುದರೊಂದಿಗೆ ಜ್ಞಾಪಕ ಶಕ್ತಿಯನ್ನು ಸುಧಾರಣೆ ಮಾಡುತ್ತದೆ. ಒಮೆಗಾ-3 ಕೊಬ್ಬಿನ ಆಮ್ಲವನ್ನು ಒಳಗೊಂಡಿರುವ ಬಸಲೆಯು ಮೆದುಳಿನ ಕಾರ್ಯಚಟುವಟಿಕೆಯನ್ನು ಉತ್ತಮಪಡಿಸುವಂತಹ ಹಲವಾರು ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ.

English summary

Try These Amazing Foods To Improve Your Focus And Memory

Today we've curated a list of of the most amazing foods that can help boost your focus and memory. Read on to know more about these amazing foods that can improve your focus, concentration and memory.
X
Desktop Bottom Promotion