For Quick Alerts
ALLOW NOTIFICATIONS  
For Daily Alerts

ಒಣಕೆಮ್ಮು ಸಮಸ್ಯೆ: ಅಜ್ಜ–ಅಜ್ಜಿಯ ಕಾಲದ ಪವರ್‌ಫುಲ್ ಮನೆಮದ್ದು

By Arshad
|

ಮಳೆಗಾಲ ಬರುತ್ತಿದ್ದಂತೆಯೇ ಆವರಿಸುವ ಶೀತ ಮತ್ತು ಕಫ ಕೆಮ್ಮನ್ನೂ ಜೊತೆಯಲ್ಲಿಯೇ ತರುತ್ತದೆ. ನಮ್ಮ ಗಂಟಲಲ್ಲಿ ಧಾಳಿಯಿಡುವ ವೈರಸ್ಸುಗಳನ್ನು ಕೊಂದು ತಾವೂ ಸಾಯುವ ಬಿಳಿರಕ್ತಕಣಗಳೂ ಕಫದ ರೂಪದಲ್ಲಿ ಗಂಟಲ ಒಳಭಾಗದಲ್ಲಿ ಅಂಟಿಕೊಂಡಿರುತ್ತವೆ. ಇದನ್ನು ಬಲವಂತವಾಗಿ ಹೊರದಬ್ಬುವ ಕ್ರಿಯೆಯೇ ಕೆಮ್ಮು. ಕೆಮ್ಮಿನ ಕೊನೆಯಲ್ಲಿ ಕಫ ಹೊರಬಂದರೆ ಇದರ ಉದ್ದೇಶ ಪೂರ್ಣವಾದಂತೆ. ಒಂದು ವೇಳೆ ಕಫ ಗಟ್ಟಿಯಾಗಿದ್ದು ಎಷ್ಟು ಬಲವಾಗಿ ಕೆಮ್ಮಿದರೂ ಹೊರಬರದೇ ಇದ್ದರೆ? ಇದೇ ಒಣಕೆಮ್ಮು. ಎಡೆಬಿಡದೆ ಕಾಡುವ ಕೆಮ್ಮಿನ ನಿಯಂತ್ರಣಕ್ಕೆ-ಅನಾನಸ್ ಸಿರಪ್

ಸಡಿಲ ಬಿಡದ ಒಣಕಫವನ್ನು ಸೋಲಿಸದೇ ಬಿಡಲಾರೆ ಎಂದು ಕೆಮ್ಮು ಬಾರಿ ಬಾರಿ ಪುನರಾವರ್ತಿಸುತ್ತಾ ದೇಹವನ್ನು ಹೈರಾಣಾಗಿಸುತ್ತದೆ. ಇದನ್ನು ಸಡಿಲಿಸಲು ಆಂಟಿ ಬಯಾಟಿಕ್ ಗುಳಿಗೆಗಳನ್ನು ವೈದ್ಯರು ಸೂಚಿಸುತ್ತಾರಾದರೂ ಇದು ನಿಜವಾದ ಕ್ರಮವಲ್ಲ, ಏಕೆಂದರೆ ಆಂಟಿ ಬಯಾಟಿಕ್ ಗುಳಿಗೆಗಳ ಅಡ್ಡಪರಿಣಾಮವಾಗಿ ಮಧುಮೇಹವೂ ಬೇಗನೇ ಆವರಿಸಬಹುದು.

Tried and tested homemade cough syrup to banish dry cough

ಆದ್ದರಿಂದ ಒಣ ಕೆಮ್ಮು ಬಂದರೆ ಗುಳಿಗೆಗಳ ಮೊರೆ ಹೋಗುವ ಬದಲು ತಲತಲಾಂತರದಿಂದ ಪ್ರಯೋಗಿಸಿ ಪ್ರಮಾಣಿಸಲ್ಪಟ್ಟಿರುವ ಮನೆಮದ್ದಿನ ಮೊರೆ ಹೋಗುವುದೇ ಲೇಸು. ಗಂಟಲ ಸೋಂಕು, ಬೇನೆ ಮತ್ತು ಒಣಕೆಮ್ಮಿಗೆ ಈ ಮದ್ದು ಸಿದ್ಧೌಷಧವಾಗಿದ್ದು ಹೆಚ್ಚಿನ ಶ್ರಮವಿಲ್ಲದೇ ತಯಾರಿಸಬಹುದು. ಬನ್ನಿ ಇದನ್ನು ಹೇಗೆ ತಯಾರಿಸುವುದು ಎಂಬುದನ್ನು ನೋಡೋಣ: ಒಣ ಕೆಮ್ಮಿನ ನಿವಾರಣೆಗೆ ಉತ್ತಮ ಮನೆಮದ್ದು

ಮನೆಯಲ್ಲಿಯೇ ತಯಾರಿಸಬಹುದಾದ ಕೆಮ್ಮಿನ ಸಿರಪ್:
ಅಗತ್ಯವಿರುವ ಸಾಮಾಗ್ರಿಗಳು:
*4 ದೊಡ್ಡಚಮಚ ಜೇನು
*6 ಲವಂಗ
*1 ಇಂಚಿನಷ್ಟು ಚೆಕ್ಕೆ, ಚಿಕ್ಕದಾಗಿ ತುಂಡರಿಸಿದ್ದು. ಪ್ರಾಣ ಹಿಂಡುವ ಕೆಮ್ಮಿಗೆ ರಾಮಬಾಣವಾಗಿರುವ 10 ಸಿದ್ಧೌಷಧಗಳು

* ಮೊದಲು ಬಾಣಲೆಯೊಂದರಲ್ಲಿ ಚಿಕ್ಕ ಉರಿಯಲ್ಲಿ ಲವಂಗ ಮತ್ತು ಚೆಕ್ಕೆಗಳನ್ನು ಸುಮಾರು ಎರಡರಿಂದ ಮೂರು ನಿಮಿಷ ಹುರಿಯಿರಿ. ಅಂದರೆ ಇದರಿಂದ ಕೊಂಚ ವಾಸನೆ ಸೂಸಲು ಪ್ರಾರಂಭವಾಗುವಷ್ಟು ಮಾತ್ರ. ಬಳಿಕ ತಕ್ಷಣವೇ ಗ್ರೈಂಡರಿನ ಚಿಕ್ಕ ಜಾರ್‌ನಲ್ಲಿ ಒಣದಾಗಿಯೇ ನುಣ್ಣನೆಯ ಪುಡಿಮಾಡಿ.
* ಈ ಪುಡಿಯನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಜೇನಿನೊಂದಿಗೆ ಬೆರೆಸಿ ಚಿಕ್ಕ ಬಾಟಲಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳಿ.
* ಒಣ ಕೆಮ್ಮಿದ್ದಾಗ ರಾತ್ರಿ ಮಲಗುವ ಮುನ್ನ ಮೂರು ಚಿಕ್ಕ ಚಮಚದಷ್ಟು ಸೇವಿಸಿ ಮಲಗಿ. ಕೆಮ್ಮು ಹೆಚ್ಚಿದ್ದರೆ ಬೆಳಗ್ಗಿನ ಉಪಾಹಾರದ ಬಳಿಕವೂ ಇಷ್ಟೇ ಪ್ರಮಾಣದಲ್ಲಿ ಸೇವಿಸಿ.


* ಕೆಮ್ಮು ಗುಣವಾಗಲು ಸುಮಾರು ಎರಡರಿಂದ ಮೂರು ದಿನ ಬೇಕಾಗಬಹುದು. ಆದರೂ ಇದರ ಬಳಿಕವೂ ಒಂದೆರಡು ದಿನ ಸೇವಿಸಿ.
* ಈ ಸಿರಪ್ ಒಣಕೆಮ್ಮಿಗೆ ಮಾತ್ರವಲ್ಲ, ಕಫದ ಕೆಮ್ಮಿಗೂ ಸೂಕ್ತವಾಗಿದೆ.
* ಸಾಧ್ಯವಾದರೆ ಕೊಂಚ ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಿ ಬಾಟಲಿಯಲ್ಲಿ ಸಂಗ್ರಹಿಸಿ ಕೆಮ್ಮು ಆಗುವ ಅನುಮಾನ ಬಂದ ತಕ್ಷಣ ಕೊಂಚ ಸೇವಿಸಿದರೆ ಇದು ಉಲ್ಬಣಿಸುವುದರಿಂದ ತಡೆಗಟ್ಟಬಹುದು. ಎರಡೇ ದಿನದಲ್ಲಿ ಕೆಮ್ಮನ್ನು ನಿಯಂತ್ರಿಸುವ ಪವರ್ ಫುಲ್ ಮನೆಮದ್ದು

ಇದು ಕೆಲಸ ಹೇಗೆ ಮಾಡುತ್ತದೆ?
*ಜೇನು ಒಂದು ಅತ್ಯುತ್ತಮ ಬ್ಯಾಕ್ಟೀರಿಯಾ ನಿವಾರಕ ಹಾಗೂ ವೈರಸ್ ನಿವಾರಕವಾಗಿದೆ. ಇದು ವಿಶೇಷವಾಗಿ ಗಂಟಲ ಒಳಭಾಗದಲ್ಲಿ ತೇವವನ್ನು ಹೆಚ್ಚಿಸಿ ಕಫವನ್ನು ಸಡಿಲಿಸುವಂತೆ ಮಾಡುತ್ತದೆ. ಲವಂಗದಲ್ಲಿಯೂ ಬ್ಯಾಕ್ಟೀರಿಯಾ ನಿವಾರಕ ಗುಣವಿದ್ದು ಕೆಮ್ಮಿನಿಂದಾಗಿ ದಣಿದಿದ್ದ ಗಂಟಲ ಒಣಗಣ ಅಂಗಾಂಶಗಳಿಗೆ ಮುದ ನೀಡುತ್ತದೆ. ಅಲ್ಲದೇ ಗಂಟಲಿನ ಒಳಗಿನ ಕೆರೆತವನ್ನೂ ನಿವಾರಿಸುತ್ತವೆ.
*ಚೆಕ್ಕೆ ಗಂಟಲ ಒಳಭಾಗದಲ್ಲಿ ಪ್ರಚೋದನೆಯುಂಟು ಮಾಡಿ ರಕ್ತ ಪರಿಚಲನೆ ಹೆಚ್ಚಿಸಲು ನೆರವಾಗುತ್ತದೆ. ಇವೆಲ್ಲವೂ ಒಟ್ಟುಗೂಡಿ ಕೆಮ್ಮಿಗೆ ಕಾರಣವಾದ ವೈರಸ್ಸುಗಳನ್ನು ಹೊಡೆದೋಡಿಸಲು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.

English summary

Tried and tested homemade cough syrup to banish dry cough

A dry cough can leave you totally frustrated! Lying down seems like a punishment because of the sudden cough attack you experience. Not being able to get a sound night’s sleep due to constant coughing drains the body out and you eventually start feeling unwell and weak. Home remedies for a sore throat usually come handy. Here’s the quick recipe.
X
Desktop Bottom Promotion