For Quick Alerts
ALLOW NOTIFICATIONS  
For Daily Alerts

ಸದಾ ನಗುನಗುತ್ತಿದ್ದರೇ ಆರೋಗ್ಯವೂ ನಲಿನಲಿಯುತ್ತದೆ

By Arshad
|

ಜುಲೈ 1 ವಿಶ್ವ ಜೋಕ್‌ ದಿನ. ನೀನು ನಕ್ಕರೆ ಜಗತ್ತೇ ನಿನ್ನೊಂದಿಗೆ ನಗುತ್ತದೆ, ನೀನು ಅತ್ತರೆ ನೀನೇ ಒಂಟಿಯಾಗಿ ಅಳಬೇಕು ಎಂಬ ಸುಭಾಷಿತ ನಗುವಿನ ಮಹತ್ವವನ್ನು ತಿಳಿಸುತ್ತದೆ. ಸದಾ ಗಂಟಿಕ್ಕಿಕೊಂಡಿರುವವರು ಸ್ನೇಹಿತರನ್ನು ಸುಲಭವಾಗಿ ಸಂಪಾದಿಸಲಾರರು. ಸ್ನೇಹಿತರನ್ನು ಸಂಪಾದಿಸಲೂ ನಗು ಅಗತ್ಯವಾಗಿದೆ. ನಗುತ್ತಾ ಇದ್ದರೆ ಸಮಾಜದಲ್ಲಿ ಉತ್ತಮ ಭಾವನೆ ಪಡೆಯುವುದು ಮಾತ್ರವಲ್ಲ, ಆರೋಗ್ಯವೂ ಉತ್ತಮಗೊಳ್ಳುತ್ತದೆ. ಬನ್ನಿ, ನಗುವಿನ ಮಹತ್ವವನ್ನು ತಿಳಿಯೋಣ.....

smiling

ನಿಮ್ಮನ್ನು ಸದಾ ತಾರುಣ್ಯದಲ್ಲಿರಿಸುತ್ತದೆ
ವೃದ್ದಾಪ್ಯವನ್ನು ದೂರವಿರಿಸಲು ಮಾರುಕಟ್ಟೆಯಲ್ಲಿ ಹಲವು ಪ್ರಸಾಧನಗಳು, ಆಂಟಿ ಏಜಿಂಗ್ ಕ್ರೀಮು ಮೊದಲಾದವು ಲಭ್ಯವಿವೆ. ಆದರೆ ಮುಖದ ಸ್ನಾಯುಗಳಿಗೆ ಕೊಂಚವೇ ಕೆಲಸ ನೀಡಿ ನಗುವ ಮೂಲಕ ಮುಖದ ಚರ್ಮಕ್ಕೆ ಸಿಗುವ ಸೆಳೆತ ಈ ಯಾವ ಪ್ರಸಾದದಿಂದ ಸಾಧ್ಯವಿಲ್ಲ. ಈ ವಿಷಯವನ್ನು ಜರ್ಮನಿಯಲ್ಲಿ ನಡೆದ ಹಲವು ಸಂಶೋಧನೆಗಳು ಈಗ ದೃಢಪಡಿಸಿವೆ. ಮೈ ಮನಸ್ಸನ್ನು ನಿರಾಳಗೊಳಿಸುವ ನಗುವಿನ ಮಹತ್ವವೇನು?

ಒತ್ತಡದಿಂದ ಹೊರಬರಲು ನೆರವಾಗುತ್ತದೆ
ಒಂದು ವೇಳೆ ನೀವು ಯಾವುದೋ ಒತ್ತಡದಿಂದ ಬಳಲುತ್ತಿದ್ದರೆ ಅಥವಾ ವ್ಯಾಕುಲರಾಗಿದ್ದರೆ ಇದರಿಂದ ಹೊರಬರಲು ನಗು ನೆರವಾಗುತ್ತದೆ. ನಗುವ ಮೂಲಕ ದೇಹದಲ್ಲಿ ಎಂಡಾರ್ಫಿನ್ ಎಂಬ ಸಂತೋಷಕ್ಕೆ ಕಾರಣವಾಗುವ ಹಾರ್ಮೋನು ಬಿಡುಗಡೆಯಾಗುತ್ತದೆ. ಇದರಿಂದ ಮನಸ್ಸು ನಿರಾಳವಾಗುತ್ತದೆ ಹಾಗೂ ಉದ್ವೇಗ, ವ್ಯಾಕುಲಗಳು ನಿವಾರಣೆಯಾಗುತ್ತವೆ. ಆದ್ದರಿಂದ ನಗುನಗುತ್ತ ಇರುವ ಮೂಲಕ ಮಾನಸಿಕ ಒತ್ತಡದಿಂದ ದೂರವಾಗಬಹುದು.

ಸ್ಮರಣಾ ಶಕ್ತಿಯನ್ನು ಹೆಚ್ಚಿಸುತ್ತದೆ
ಎಂಡಾರ್ಫಿನ್ ನಂತೆಯೇ ಕಾರ್ಟಿಸಾಲ್ ಎಂಬ ಇನ್ನೊಂದು ಹಾರ್ಮೋನು ನಮ್ಮ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಆದರೆ ಇದರ ಕೆಲಸ ಮಾತ್ರ ಪಕ್ಕ ವಿರುದ್ದ ಅಂದರೆ ಮೆದುಳಿಗೆ ಒತ್ತಡ ನೀಡುತ್ತದೆ. ಸದಾ ನಗುತ್ತಿರುವ ಮೂಲಕ ಈ ಹಾರ್ಮೋನಿನ ಪರಿಣಾಮ ಕನಿಷ್ಟವಾಗಿರಲು ಸಾಧ್ಯವಾಗುತ್ತದೆ. ತನ್ಮೂಲಕ ಮೆದುಳಿನ ಕ್ಷಮತೆ ಹಾಗೂ ಸ್ಮರಣಶಕ್ತಿ ಹೆಚ್ಚುತ್ತದೆ ಎಂದು ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿರುವ ಲೋಮಾ ಲಿಂಡಾ ವಿಶ್ವವಿದ್ಯಾಲಯದಲ್ಲಿ ನಡೆಸಿದ ಸಂಶೋಧನೆಗಳ ಮೂಲಕ ತಿಳಿದುಬಂದಿದೆ. ಸುಂದರ ನಗುವಿನಿಂದ ಕಷ್ಟ- ಸುಖದ ಜಗತ್ತನ್ನೇ ಗೆಲ್ಲಿರಿ!

ಮೆದುಳಿನ ಕ್ಷಮತೆ ಹೆಚ್ಚಿಸುತ್ತದೆ
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ನಡೆಸಿದ ಸಂಶೋಧನೆಯಲ್ಲಿ ಕಂಡುಕೊಂಡಿರುವ ಪ್ರಕಾರ ಸದಾ ನಗುತ್ತಿರುವ ಮೂಲಕ ಮೆದುಳಿನಲ್ಲಿ ಡೋಪಮೈನ್ ಎಂಬ ಹಾರ್ಮೋನು ನಿಯಮಿತವಾಗಿ ಬಿಡುಗಡೆಯಾಗುತ್ತದೆ. ಇದು ಮೆದುಳಿಗೆ ಹಲವು ರೀತಿಯಲ್ಲಿ ಕೆಲಸ ನಿರ್ವಹಿಸಲು ಪ್ರೇರಣೆ ನೀಡುತ್ತದೆ. ಪರಿಣಾಮವಾಗಿ ತಾರ್ಕಿಕವಾಗಿ ಯೋಚಿಸುವ ಶಕ್ತಿ, ಹೊಸ ವಿಷಯಗಳನ್ನು ಕಲಿಯುವ ಶಕ್ತಿ ಮತ್ತು ಮಾಹಿತಿಯನ್ನು ವಿಶ್ಲೇಷಿಸುವ ಶಕ್ತಿ ಹೆಚ್ಚುತ್ತದೆ.

ಗಾಯಗಳನ್ನು ಮಾಗಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ನಗುವಿನಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದೂ ಒಂದು. 2011ರಲ್ಲಿ ನಡೆದ ಸಂಶೋಧನೆಯೊಂದರ ಪ್ರಕಾರ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಗು ಪ್ರೇರಣೆ ನೀಡುತ್ತದೆ ಹಾಗೂ ತನ್ಮೂಲಕ ಗಾಯಗಳನ್ನು ಮಾಗಿಸಲು ನೆರವಾಗುತ್ತದೆ. ಈ ಸಂಶೋಧನೆಯಲ್ಲಿ ಆಸ್ಪತ್ರೆಯೊಂದರ ರೋಗಿಗಳನ್ನು ನಗಿಸುತ್ತಾ ಔಷಧಿಗಳನ್ನು ನೀಡಿದ ಬಳಿಕ ಈ ರೋಗಿಗಳ ದೇಹದಲ್ಲಿ ದುಗ್ಧರಸದ ಪ್ರಮಾಣ ಹೆಚ್ಚಿರುವುದು ಕಂಡುಬಂದಿದೆ.

English summary

Top health benefits of smiling

You don’t need a reason to smile. You don't even need to smile. Did you know that smiling has immense health benefits? Here are a few healthy reasons why you should show your pearlies daily.
X
Desktop Bottom Promotion