For Quick Alerts
ALLOW NOTIFICATIONS  
For Daily Alerts

ಎರಡೇ ದಿನದಲ್ಲಿ ಕೆಮ್ಮನ್ನು ನಿಯಂತ್ರಿಸುವ ಪವರ್ ಫುಲ್ ಮನೆಮದ್ದು

By Manu
|

ಕೆಮ್ಮು ಮತ್ತು ಸಾವು ಯಾರನ್ನೂ ಕೇಳಿ ಬರುವುದಿಲ್ಲವಂತೆ. ಯಾವುದೋ ಮುಖ್ಯ ಕಾರ್ಯದಲ್ಲಿದ್ದಾಗ ಕೆಮ್ಮು ಕಾಡಿದರೆ ಆಗ ಎದುರಾಗುವ ತಾಪತ್ರಯ ಒಂದೆರಡಲ್ಲ. ಅದರಲ್ಲೂ ಕೆಮ್ಮು ಸತತವಾದರೆ ಮುಖ್ಯ ಕಾರ್ಯದ ನಡುವೆ ಎದ್ದು ಹೊರಹೋಗಲೇ ಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಇದು ತೀವ್ರ ಮುಜುಗರ ತರಿಸುವ ವಿಷಯವೂ ಹೌದು. ನೋವುಕಾರಕವೂ ಹೌದು. ಈ ಕೆಮ್ಮು ಹಲವಾರು ದಿನಗಳವರೆಗೆ ಕಾಡಿದರೆ ಕಾಯಿಲೆ ಅಂಟಿದೆ ಎಂದೇ ಅರ್ಥ. ಕೆಮ್ಮು ಎಂದು ಸುಮ್ಮನೇ ಇರುವ ಹಾಗಿಲ್ಲ, ಇದು ದೇಹದ ಶಕ್ತಿಯನ್ನೆಲ್ಲಾ ಹೀರಿ ನಿತ್ರಾಣವಾಗಿಸುತ್ತದೆ.

This Powerful Homemade Drink Will Cure Cough In 2 Days!

ಕೆಮ್ಮು ವಾಸ್ತವವಾಗಿ ಒಂದು ಕಾಯಿಲೆಯಲ್ಲ, ಒಂದು ರೋಗ ನಿರೋಧಕ ವ್ಯವಸ್ಥೆ. ಗಂಟಲಿನ ತೇವದಲ್ಲಿ ವೈರಸ್ಸುಗಳು ಮನೆಮಾಡಿದಾಗ ಇದನ್ನು ಕೆರೆದು ಹೊರಹಾಕುವ ಕ್ರಿಯೆಯೇ ಕೆಮ್ಮು. ಇದಕ್ಕೆ ವೈರಸ್ಸಿನ ಸೋಂಕು, ಅಲರ್ಜಿ, ಅಸ್ಥಮಾ ಮತ್ತು ಕೆಲವು ವಿಪರೀತ ಸಂದರ್ಭಗಳಲ್ಲಿ ಕ್ಷಯ ಹಾಗೂ ಶ್ವಾಸಸಂಬಂಧಿ ತೊಂದರೆಗಳು ಕಾರಣವಾಗುತ್ತವೆ. ಕೆಲವೊಮ್ಮೆ ತಣ್ಣೀರು ಕುಡಿದಾಗಲೂ ಕೆಮ್ಮು ಆವರಿಸಿ ನಮ್ಮ ಚಟುವಟಿಕೆಗಳಿಗೆ ಬಾಧೆ ತರುವುದುಂಟು. ಮಧ್ಯರಾತ್ರಿ ಕಾಡುವ ಕೆಮ್ಮು, ಏನು ಮಾಡಬೇಕು?

ಸಾಮಾನ್ಯವಾಗಿ ಕೆಮ್ಮು ಕಾಡಿದಾಗ ವೈದ್ಯರು ಕೆಲವು ಕೆಮ್ಮಿನ ಸಿರಪ್‌ಗಳನ್ನು ಶಿಫಾರಸ್ಸು ಮಾಡುತ್ತಾರೆ. ಆದರೆ ವಾಸ್ತವವಾಗಿ ಈ ಸಿರಪ್‌ಗಳಲ್ಲಿ ಕೊಂಚ ಪ್ರಮಾಣದ ಆಲ್ಕೋಹಾಲ್ ಇದ್ದು ನಿಜವಾಗಿಯೂ ಕೆಮ್ಮನ್ನು ಕಡಿಮೆ ಮಾಡುವ ಬದಲು ಕೊಂಚ ನಿದ್ದೆ ಬರಿಸಿ ಮನಸ್ಸನ್ನು ಕೆಮ್ಮಿನಿಂದ ಕೊಂಚ ಹೊರಳಿಸುವಂತೆ ಮಾಡಿ ಬಳಿಕ ನಿಧಾನವಾಗಿ ಕೆಮ್ಮಿಗೆ ಕಾರಣವಾದ ವೈರಸ್ಸಿನ ಮೇಲೆ ದೇಹದ ರೋಗ ನಿರೋಧಕ ಶಕ್ತಿ ಆಕ್ರಮಣ ಮಾಡಲು ಅನುವು ಮಾಡಿಕೊಡುತ್ತದೆ.

ಇದನ್ನೇ ನೆಪವಾಗಿಸಿ ಕೆಲವರು ಆಲ್ಕೋಹಾಲ್ ಬದಲಿಗೆ ಇಡಿಯ ಬಾಟಲಿ ಕೆಮ್ಮಿನ ಸಿರಪ್ ಕುಡಿಯುವುದುಂಟು. ಆದರೆ ಇದರ ಸೇವನೆಯಿಂದಲೂ ಕೆಲವು ಅಡ್ಡಪರಿಣಾಮಗಳಿವೆ. ಸುಸ್ತು, ತಲೆ ಭಾರವಾಗುವುದು, ಮಲಬದ್ಧತೆ, ಹಸಿವು ಹೆಚ್ಚುವುದು, ಹೊಟ್ಟೆಯಲ್ಲಿ ಉರಿ, ಹುಳಿತೇಗು ಇತ್ಯಾದಿ. ಆದ್ದರಿಂದ ಕೆಮ್ಮಿನ ಸಿರಪ್‌ಗಳು ತಾತ್ಕಾಲಿಕವಾಗಿ ಕೆಮ್ಮನ್ನು ಕಡಿಮೆ ಮಾಡಿದಂತೆ ಅನ್ನಿಸಿದರೂ ಪೂರ್ಣವಾಗಿ ಕೆಮ್ಮು ನಿವಾರಣೆಯಾಗುವುದಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ಮನೆಯಲ್ಲಿಯೇ ಸಿಗುವ ಸುಲಭ ಸಾಮಾಗ್ರಿಗಳಿಂದ ತಯಾರಾದ ಈ ಪೇಯವೇ ಉತ್ತಮ. ಶೀತ, ಕೆಮ್ಮು ಉಪಟಳ ತಡೆಯುವ ಮನೆಮದ್ದು

ಅಗತ್ಯವಿರುವ ಸಾಮಾಗ್ರಿಗಳು:
*ಬಿಸಿಹಾಲು - ಒಂದು ಲೋಟ
*ಕಾಳುಮೆಣಸಿನ ಪುಡಿ - 1/4 ಚಿಕ್ಕ ಚಮಚ (ತಾಜಾ ಕಾಳುಮೆಣಸನ್ನು ಕುಟ್ಟಿ ಪುಡಿ ಮಾಡಿದರೆ ಉತ್ತಮ)
*ಜೇನು - ಎರಡು ದೊಡ್ಡ ಚಮಚ

*ಈ ಮನೆಮದ್ದು ತುಂಬಾ ಸುಲಭವಾಗಿದ್ದು ಕೇವಲ ಹಾಲು, ಕಾಳುಮೆಣಸಿನ ಪುಡಿ ಮತ್ತು ಜೇನನ್ನು ಬಳಸಲಾಗಿದೆ. ಈ ಪೇಯದ ಸೇವನೆಯ ಬಳಿಕ ಒಂದೇ ರಾತ್ರಿಯಲ್ಲಿ ಕೆಮ್ಮು ಹತೋಟಿಗೆ ಬಂದಿರುವುದು ಕಂಡುಬಂದಿದೆ. ಅಲ್ಲದೇ ಕೆಮ್ಮಿಗೆ ಕಾರಣವಾದ ಕಫವೂ ಸುಲಭವಾಗಿ ಮರುದಿನ ನಿವಾರಣೆಯಾಗುತ್ತದೆ.
*ಬಿಸಿಹಾಲು ಗಂಟಲಿನ ಕೆರೆತ, ಉರಿಯನ್ನು ನಿವಾರಿಸಿ ಕೆಮ್ಮನ್ನು ಕಡಿಮೆಗೊಳಿಸಲು ನೆರವಾದರೆ ಜೇನಿನಲ್ಲಿರುವ ಬ್ಯಾಕ್ಟೀರಿಯಾ ನಿರೋಧಕ ಗುಣದಿಂದಾಗಿ ಗಂಟಲಲ್ಲಿ ಆಶ್ರಯ ಪಡೆದಿರುವ ಸೋಂಕು ಹರಡುವ ಕ್ರಿಮಿಗಳನ್ನು ಹೊರಹಾಕಲು ನೆರವಾಗುತ್ತದೆ. ಕಾಳುಮೆಣಸು ಕೊಂಚ ಪ್ರಚೋದನೆ ನೀಡಿ ಕಫ ಸಡಿಲಗೊಳ್ಳಲು ಮತ್ತು ಜೇನಿನ ಪ್ರಭಾವ ಹೆಚ್ಚಿಸಲು ನೆರವಾಗುತ್ತದೆ.
*ಈ ಮೂರೂ ಘಟಕಗಳ ಮಿಶ್ರಣದಿಂದ ಗಂಟಲಿಗೆ ಆರಾಮ ದೊರಕುತ್ತದೆ. ಅಲ್ಲದೇ ಈ ಸೋಂಕಿನಿಂದ ಉಂಟಾಗಿದ್ದ ಗಂಟಲಬೇನೆ, ಊದಿಕೊಂಡಿರುವುದು, ಊದಿಕೊಂಡ ದುಗ್ಧ ಗ್ರಂಥಿಗಳು ಇತ್ಯಾದಿಗಳೂ ಬೇಗನೇ ಗುಣವಾಗುತ್ತದೆ. ಶೀತ, ಕೆಮ್ಮು, ಕಫ ಹೋಗಲಾಡಿಸುವ ಕಷಾಯ

ಈ ಪೇಯವನ್ನು ತಯಾರಿಸುವ ಬಗೆ

1)ಹಾಲನ್ನು ಒಂದು ಚಿಕ್ಕ ಪಾತ್ರೆಯಲ್ಲಿ ಕುದಿಸಿ ಒಂದು ಲೋಟಕ್ಕೆ ಸುರುವಿಕೊಳ್ಳಿ
2)ಕಾಳುಮೆಣಸಿನ ಪುಡಿ ಮತ್ತು ಜೇನು ಸೇರಿಸಿ ಚೆನ್ನಾಗಿ ಕಲಕಿ. ಕೆಮ್ಮಿನ ಸಿದ್ಧೌಷಧ ಈಗ ತಯಾರಾಗಿದೆ. ರಾತ್ರಿ ಮಲಗುವ ಮುನ್ನ ಈ ಪೇಯವನ್ನು ಕುಡಿದು ಮಲಗಿ, ಬೆಳಗಾಗುವಷ್ಟರಲ್ಲಿ ಕೆಮ್ಮು ಬಹುತೇಕ ಇಲ್ಲವಾಗಿರುತ್ತದೆ. ಉತ್ತಮ ಪರಿಣಾಮಕ್ಕಾಗಿ ಸತತವಾಗಿ ಎರಡು ದಿನ ಕುಡಿಯಿರಿ. ಕೆಮ್ಮು ಎಲ್ಲೋ ಒಂದು ಸ್ವಲ್ಪ ಇದೆ ಎಂದು ಅನ್ನಿಸಿದರೂ ಮುಂದಿನ ಒಂದು ವಾರದ ಕಾಲ ಅರ್ಧಲೋಟದಷ್ಟು ಸೇವಿಸುತ್ತಾ ಬನ್ನಿ.
English summary

This Powerful Homemade Drink Will Cure Cough In 2 Days!

Imagine you are in the middle of a meeting and you suddenly experience a fit of non-stop cough, you will have to excuse yourself and run to the restroom! It can be quite embarrassing and painful as well. Constant coughing can make you sick, as it depletes your energy when it stays on without being cured for too long.
X
Desktop Bottom Promotion