For Quick Alerts
ALLOW NOTIFICATIONS  
For Daily Alerts

ಡೆಂಗ್ಯೂ ಜ್ವರದ ಹತೋಟಿಗೆ ಪಪ್ಪಾಯಿ ಗಿಡದ ಎಲೆಗಳೇ ಸಾಕು

|

ಮಾನ್ಸೂನ್ ಆವರಿಸುತ್ತಿದ್ದಂತೆಯೇ ಹಲವು ವೈರಸ್ಸುಗಳು ಮೈಕೊಡವಿಕೊಂಡು ಎದ್ದು ಗಾಳಿಯಲ್ಲೆಲ್ಲಾ ಹರಡಿ ಹಲವು ರೋಗಗಳಿಗೆ ಕಾರಣವಾಗುತ್ತವೆ. ಇದರಲ್ಲಿ ಒಂದು ಡೆಂಗ್ಯೂ ಜ್ವರ (ಸಾಮಾನ್ಯವಾಗಿ ನಾವೆಲ್ಲರೂ ಇದನ್ನು ಡೆಂಗ್ಯೂ ಎಂದು ಉಚ್ಛರಿಸುತ್ತೇವೆ, ಆದರೆ ವೈದ್ಯರ ಪ್ರಕಾರ ಇದರ ಸರಿಯಾದ ಉಚ್ಛಾರಣೆ ಡೆಂಘಿ ಅಥವ ಡೆಂಗಿ). ಈ ಜ್ವರ ಹರಡಲು ಪ್ರಮುಖ ಮೂಲವೆಂದರೆ ಮಳೆನಿಂತ ನೀರು. ಚಿಕ್ಕ ಗುಂಡಿ, ಟೈರಿನ ಒಳಭಾಗ, ಗೆರಟೆಚಿಪ್ಪು ಮೊದಲಾದವುಗಳಲ್ಲಿ ಮಳೆನೀರು ನಿಂತು ಸೊಳ್ಳೆಗಳಿಗೆ ಸಂತಾನೋತ್ಪತ್ತಿ ಮಾಡಲು ಸೂಕ್ತ ಸ್ಥಳವಾಗಿದೆ. ಮಳೆಗಾಲದ ಮಹಾಮಾರಿ ಡೆಂಗ್ಯೂ ಜ್ವರ: ಇರಲಿ ಕಟ್ಟೆಚ್ಚರ!

ಮಳೆ ಬಂದು ನಿಂತು ಹೋದ ಬಳಿಕ ಇಂತಹ ಸಾವಿರಾರು ಚಿಕ್ಕ ಚಿಕ್ಕ ನೀರಿನ ಸೆಲೆಗಳು ಸೊಳ್ಳೆಗಳು ಲಕ್ಷಾನುಗಟ್ಟಲೆ ಸಂಖ್ಯೆಯಲ್ಲಿ ಹುಟ್ಟಲು ಕಾರಣವಾಗುತ್ತವೆ. ಇದೇ ಕಾರಣಕ್ಕೆ ಡೆಂಗ್ಯೂ ಜ್ವರವೂ ವ್ಯಾಪಕವಾಗತೊಡಗುತ್ತದೆ. ನಿಮ್ಮ ಸುತ್ತ ಮುತ್ತ ಹಾರಾಡುತ್ತಿರುವ ಸೊಳ್ಳೆಗಳನ್ನು ಕೊಂಚ ಗಮನಿಸಿ.

ಒಂದು ವೇಳೆ ಬಿಳಿ ಬಿಳಿ ಚುಕ್ಕೆಗಳುಳ್ಳ ಕಪ್ಪು ಸೊಳ್ಳೆ ಕಂಡುಬಂದರೆ ಇದೇ Aedes aegypti ಎಂಬ ಸೊಳ್ಳೆ. ಗಂಡು ಸೊಳ್ಳೆ ಕೇವಲ ಸಸ್ಯಗಳ ರಸ ಹೀರುತ್ತದೆ. ಆದರೆ ಹೆಣ್ಣು ಸೊಳ್ಳೆ ಮಾತ್ರ ರಕ್ತ ಹೀರುವುದರಿಂದ ಈ ಮೂಲಕ ಡೆಂಗ್ಯೂ ಜ್ವರದ ವೈರಸ್ಸುಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ದಾಟಿಸುತ್ತಾ ಹೋಗುತ್ತದೆ. ಸೊಳ್ಳೆ ಕಚ್ಚಿದ ಒಂದೆರಡೇ ದಿನದಲ್ಲಿ ಅತಿ ಜ್ವರ, ತಲೆನೋವು, ರಕ್ತದಲ್ಲಿ ಪ್ಲೇಟ್ಲೆಟ್ ಕಣಗಳಲ್ಲಿ ಭಾರೀ ಇಳಿಕೆ, ಮೂಳೆಸಂಧುಗಳಲ್ಲಿ ನೋವು, ಸ್ನಾಯು ಸೆಳೆತ, ಉಬ್ಬಿದ ದುಗ್ಧ ಗ್ರಂಥಿಗಳು, ವಾಕರಿಕೆ, ವಾಂತಿ, ತಲೆಸುತ್ತುವುದು ಮೊದಲಾದವು ಇದರ ಲಕ್ಷಣಗಳಾಗಿವೆ.

ಈ ಜ್ವರ ಉಲ್ಬಣಿಸಿದರೆ dengue haemorrhagic fever ಮತ್ತು dengue shock syndrome ಎಂಬ ಸ್ಥಿತಿಯನ್ನು ತಲುಪಬಹುದು. ಈ ಸ್ಥಿತಿಯಲ್ಲಿ ರಕ್ತದಲ್ಲಿ ಕಿರುಬಿಲ್ಲ ಅಥವಾ ಪ್ಲೇಟ್ಲೆಟ್ ಕಣಗಳಲ್ಲಿ ಭಾರೀ ಇಳಿಕೆಯಾಗಿ ಆತಂತಕಾರಿ ಮಟ್ಟಕ್ಕಿಳಿಯುತ್ತದೆ. ಗಾಯವಾದಾಗ ರಕ್ತ ಹೆಪ್ಪುಗಟ್ಟಲು ಈ ಕಣಗಳು ಅತಿ ಅವಶ್ಯವಾಗಿವೆ. ನಿರಾಶೆಯ ಸಂಗತಿ ಎಂದರೆ ಈ ಜ್ವರಕ್ಕೆ ಸಮರ್ಥವಾದ ವ್ಯಾಕ್ಸೀನ್ ಅನ್ನು ಇದುವರೆಗೆ ಕಂಡು ಹಿಡಿಯಲಾಗಿಲ್ಲ. ಆದ್ದರಿಂದ ಈ ಜ್ವರ ಬಂದ ಮೇಲೆ ಪರಿತಾಪ ಪಡುವುದಕ್ಕಿಂತ ಈ ಜ್ವರ ಬರದಂತೆ ನೋಡಿಕೊಳ್ಳುವುದೇ ಜಾಣತನದ ಕ್ರಮವಾಗಿದೆ. ಇದಕ್ಕೆ ಮುಖ್ಯವಾಗಿ ಅನುಸರಿಸಬೇಕಾದ ಕ್ರಮ ಎಂದರೆ ಸೊಳ್ಳೆಗಳನ್ನು ನಿಯಂತ್ರಿಸುವುದು. ಡೆಂಗ್ಯೂ ಜ್ವರವನ್ನು ಹತೋಟಿಯಲ್ಲಿಡುವ ಟಾಪ್ ಫುಡ್

ಭಾರತದಲ್ಲಿ ಮಲೇರಿಯಾದಂತೆಯೇ ಡೆಂಗ್ಯೂ ಜ್ವರವೂ ನೂರಾರು ವರ್ಷಗಳಿಂದ ಪಿಡುಗಾಗಿ ಕಾಡುತ್ತಿದೆ. ಆದರೆ ಈ ಬಗ್ಗೆ ಅರಿತವರು ಪಪ್ಪಾಯಿ ಮರದ ಎಲೆ ಉತ್ತಮವಾದ ಫಲ ನೀಡುತ್ತದೆ ಎಂದು ಕಂಡುಕೊಂಡಿದ್ದಾರೆ. ಇತ್ತೀಚಿನ ಸಂಶೋಧನೆಯಲ್ಲಿ ಈ ವಿಷಯವನ್ನು ಅವಲೋಕಿಸಿ ಹಲವು ಪರೀಕ್ಷೆಗಳನ್ನು ನಡೆಸಿ ಹಿರಿಯರು ಅನುಸರಿಸುತ್ತಾ ಬಂದಿರುವ ಈ ಕ್ರಮ ಸರಿಯಾದುದು ಎಂದು ತೀರ್ಮಾನಿಸಲಾಗಿದೆ. ಡೆಂಗ್ಯೂ ಜ್ವರ ಆವರಿಸಿದರೆ ಪಪ್ಪಾಯಿ ಎಲೆಗಳನ್ನು ಹೇಗೆ ಬಳಸಬಹುದು ಎಂಬ ಬಗ್ಗೆ ಅಮೂಲ್ಯ ಮಾಹಿತಿಯನ್ನು ಈ ಲೇಖನದಲ್ಲಿ ವಿವಿರಸಲಾಗಿದೆ ಮುಂದೆ ಓದಿ...

*ಮೊದಲು ಕೆಲವು ಪಪ್ಪಾಯಿ ಎಲೆಗಳನ್ನು ಸಂಗ್ರಹಿಸಿ ಇದನ್ನು ಚೆನ್ನಾಗಿ ತೊಳೆದು ಧೂಳು, ಕೊಳೆಯನ್ನು ನಿವಾರಿಸಿ
ಈ ಎಲೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಇದ್ದು ರೋಗ ನಿರೋಧಕ ವ್ಯವಸ್ಥೆ ಉತ್ತಮಗೊಳ್ಳಲು ನೆರವಾಗುತ್ತದೆ. ಅಲ್ಲದೇ ಇದರಲ್ಲಿ ಕಾರ್ಪೇಯ್ನ್ (Carpaine) ಎಂಬ ಪೋಷಕಾಂಶವಿದ್ದು ಇದು ರಕ್ತದ ಶುದ್ಧೀಕರಣ ಮತ್ತು ಪ್ಲೇಟ್ಲೆಟ್ ಸಂಖ್ಯೆಯಲ್ಲಿ ವೃದ್ಧಿಯಾಗಲು ನೆರವಾಗುತ್ತದೆ.


*ಬಳಿಕ ಈ ಎಲೆಗಳನ್ನು ಚಿಕ್ಕದಾಗಿ ಹೆಚ್ಚಿ ಮಿಕ್ಸಿಯಲ್ಲಿ ನುಣ್ಣಗೆ ಅರೆಯಿರಿ. ನೀರು ಸೇರಿಸಬೇಡಿ. ಬಳಿಕ ತೆಳುವಾದ ಬಟ್ಟೆಯಲ್ಲಿ ಹಿಂಡಿ ರಸವನ್ನು ಸಂಗ್ರಹಿಸಿ. ಈ ರಸದಲ್ಲಿ ಸುಮಾರು ಎಂಟರಿಂದ ಹತ್ತು ಮಿ.ಲೀ ದ್ರವವನ್ನು ಪ್ರತಿದಿನ ಎರಡು ಬಾರಿ ಸೇವಿಸಿ. ಇದರಿಂದ ವಿಶೇಷವಾಗಿ ರಕ್ತದಲ್ಲಿನ ಪ್ಲೇಟ್ಲೆಟ್ ಸಂಖ್ಯೆ ಹೆಚ್ಚುತ್ತದೆ. ತನ್ಮೂಲಕ ಡೆಂಗ್ಯೂ ಜ್ವರವನ್ನು ನಿಗ್ರಹಿಸಲು ನೆರವಾಗುತ್ತದೆ.
*ಈ ರಸ ಅತಿ ಕಹಿಯಾಗಿದ್ದು ಯಾರಿಗೂ ಇಷ್ಟವಾಗುವುದಿಲ್ಲ. ಆದ್ದರಿಂದ ಇದನ್ನು ಸೇವಿಸುವ ಮುನ್ನ ಕೊಂಚ ಬೆಲ್ಲ ಸೇರಿಸಿ ತಿನ್ನಬಹುದು. ಆದರೆ ಈ ರಸವನ್ನು ಸೇವಿಸಿದ ತಕ್ಷಣವೇ ನೀರು ಕುಡಿಯಬಾರದು. ಇದರಿಂದ ಈ ರಸದ ಪೂರ್ಣವಾದ ಫಲವನ್ನು ಪಡೆಯಲು ಸಾಧ್ಯವಾಗುತ್ತದೆ.
English summary

This One Natural Leaf Helps Cure Dengue

Come monsoon and there is a serial rise in the number of dengue cases. The season has just set in; and now when the rains get collected around the open areas, they form the perfect ground for mosquitoes to breed and hence facilitate the numbers to further multiply. Listed below is one way how you could consume papaya leaves for those who are affected with dengue, have a look:
X