For Quick Alerts
ALLOW NOTIFICATIONS  
For Daily Alerts

ಎಡೆಬಿಡದೆ ಕಾಡುವ ಕೆಮ್ಮಿನ ನಿಯಂತ್ರಣಕ್ಕೆ-ಅನಾನಸ್ ಸಿರಪ್

By Deepak M
|

ಕೆಮ್ಮು ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಒಂದು ಸಮಸ್ಯೆಯಾಗಿರುತ್ತದೆ. ಶೀತ, ವೈರಲ್ ಇನ್‌ಫೆಕ್ಷ, ಧೂಳು ಮತ್ತು ಹೊಗೆ ಹೀಗೆ ನಾನಾ ಕಾರಣಗಳಿಂದಾಗಿ ಕೆಮ್ಮು ಕಾಣಿಸಿಕೊಳ್ಳುತ್ತದೆ. ನಾಯಿ ಕೆಮ್ಮಿನಂತಹ ಕೆಲವೊಂದು ಕೆಮ್ಮುಗಳು ಒಮ್ಮೆ ಬಂದರೆ ತುಂಬಾ ದಿನಗಳ ಕಾಲ ಕಾಡುತ್ತವೆ. ಹಾಗೆಂದು ಸುಮ್ಮನೆ ಇರಲು ಆಗುತ್ತವೆಯೇ? ಅಂಗಡಿಯಲ್ಲಿ ದೊರೆಯುವ ಆಲೋಪತಿ ಕೆಮ್ಮಿನ ಔಷಧಿಗಳು ತಮ್ಮೊಳಗೆ ಹಲವಾರು ಅಡ್ಡಪರಿಣಾಮಗಳನ್ನು ಇರಿಸಿಕೊಂಡಿರುತ್ತವೆ.

ಹೀಗಾಗಿ ಅದಕ್ಕೆ ಸ್ವಾಭಾವಿಕವಾದ ಮಾರ್ಗದಲ್ಲಿ ಪರಿಹಾರವನ್ನು ಕಂಡುಕೊಳ್ಳುವುದು ಸೂಕ್ತ. ಇದಕ್ಕಾಗಿ ಅನಾನಸ್, ಜೇನು ತುಪ್ಪ, ಉಪ್ಪು ಮತ್ತು ಮೆಣಸಿನ ಮಿಶ್ರಣವನ್ನು ಸೇರಿಸಿ ಮಾಡಿದ ಕೆಮ್ಮಿನ ಔಷಧಿಯು ನಿಮಗೆ ಈ ನಿಟ್ಟಿನಲ್ಲಿ ಸಹಾಯ ಮಾಡುತ್ತವೆ. ಜೊತೆಗೆ ಇದು ಗಂಟಲು ನೋವನ್ನು ಸಹ ನಿವಾರಿಸುತ್ತದೆ ಎಂಬುದು ವಿಶೇಷ. ಮಧ್ಯರಾತ್ರಿ ಕಾಡುವ ಕೆಮ್ಮು, ಏನು ಮಾಡಬೇಕು?

ಈ ಮಿಶ್ರಣವನ್ನು ತಯಾರಿಸುವಾಗ ಸಕ್ಕರೆಯನ್ನು ಬೆರೆಸಲು ಹೋಗಬೇಡಿ. ಏಕೆಂದರೆ ಸಕ್ಕರೆಯು ಇದರ ಉಪಶಮನಕಾರಿ ಗುಣಗಳನ್ನು ಹಾಳು ಮಾಡುತ್ತದೆ. ಯಾವಾಗಲು ಅಪ್ಪಟ ಹಣ್ಣಿನ ರಸದಿಂದಲೇ ಈ ಕೆಮ್ಮಿನ ಔಷಧಿಯನ್ನು ತಯಾರಿಸಿಕೊಳ್ಳುವುದು ಅಗತ್ಯ. ಕೆಮ್ಮು ಅಧಿಕವಾಗಿದ್ದಾಗ ಪ್ರತಿದಿನ 10 ಟೀಸ್ಪೂನ್‍ಗಳನ್ನು ಸೇವಿಸಿ. ಬನ್ನಿ ಇದನ್ನು ತಯಾರಿಸುವ ವಿಧಾನವನ್ನು ತಿಳಿಯೋಣ. ಶೀತ, ಕೆಮ್ಮು ಉಪಟಳ ತಡೆಯುವ ಮನೆಮದ್ದು

ತಯಾರಿಸುವ ವಿಧಾನ: ಒಂದು ಅನಾನಸನ್ನು ಕತ್ತರಿಸಿಕೊಂಡು ಜ್ಯೂಸರ್‌ಗೆ ಹಾಕಿಕೊಳ್ಳಿ. ಇದಕ್ಕೆ ಒಂದು ಸಣ್ಣ ತುಂಡು ಶುಂಠಿ, ನಿಂಬೆಯನ್ನು ಸಹ ಸೇರಿಸಿ. ಆಮೇಲೆ ಅದರ ಮೇಲೆ ಸ್ವಲ್ಪ ಮೆಣಸನ್ನು ಚಿಮುಕಿಸಿ, ಇದಕ್ಕೆ ಸ್ವಲ್ಪ ಜೇನು ತುಪ್ಪ ಬೆರೆಸಿದರೆ ಕೆಮ್ಮಿನ ಮನೆ ಮದ್ದು ಸಿದ್ಧ. ಬನ್ನಿ ಇದರ ಸೇವನೆಯಿಂದ ಆಗುವ ಪರಿಣಾಮವನ್ನು ತಿಳಿಯೋಣ...

ಸಂಗತಿ#1

ಸಂಗತಿ#1

ಅನಾನಸಿನಲ್ಲಿರುವ ಬ್ರೊಮೆಲೈನ್ ಎಂಬ ಕಿಣ್ವವು ಬ್ಯಾಕ್ಟೀರಿಯಾ ಇನ್‌ಫೆಕ್ಷನ್‌ಗಳನ್ನು ನಿವಾರಿಸುವ ಗುಣವನ್ನು ಹೊಂದಿರುತ್ತದೆ. ಅನಾನಸ್‌ನಲ್ಲಿರುವ ಆಂಟಿಬ್ಯಾಕ್ಟೀರಿಯಾ ಮತ್ತು ಉರಿಬಾವು ನಿರೋಧಕ ಗುಣಗಳು ನಿಮಗೆ ಈ ನಿಟ್ಟಿನಲ್ಲಿ ಸಹಾಯ ಮಾಡುತ್ತವೆ.

ಸಂಗತಿ#2

ಸಂಗತಿ#2

ಮಾರುಕಟ್ಟೆಯಲ್ಲಿರುವ ಹಲವಾರು ಸಿರಪ್‌ಗಳಲ್ಲಿ ಟಾಕ್ಸಿನ್‌ಗಳು ಇರುತ್ತವೆ. ಆದರೆ ಸ್ವಾಭಾವಿಕ ಅನಾನಸ್ ರಸದಲ್ಲಿ ಅಂತಹ ಯಾವುದೇ ಅಂಶಗಳು ಇರುವುದಿಲ್ಲ.

ಸಂಗತಿ#3

ಸಂಗತಿ#3

ಅನಾನಸಿನಲ್ಲಿರುವ ಉರಿಬಾವು ನಿರೋಧಕ ಅಂಶಗಳು ಸಾಮಾನ್ಯ ಕೆಮ್ಮಿನ ಔಷಧಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಮ್ಮನ್ನು ನಿವಾರಿಸುತ್ತವೆ ಎಂದು ಅಧ್ಯಯನಗಳು ಸಾಬೀತು ಮಾಡಿವೆ.

ಸಂಗತಿ#4

ಸಂಗತಿ#4

ಅನಾನಸ್ ಶ್ವಾಸಕೋಶದ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ. ದಿನಕ್ಕೆ ಅರ್ಧ ಗ್ಲಾಸ್ ಅನಾನಸ್ ರಸವನ್ನು ಸೇವಿಸಿ ಸಾಕು. ಇದರಿಂದ ನಿಮ್ಮ ದೇಹಕ್ಕೆ ಅಗತ್ಯವಾದ ವಿಟಮಿನ್-ಸಿ ದೊರೆಯುತ್ತದೆ.

ಸಂಗತಿ#5

ಸಂಗತಿ#5

ಅನಾನಸ್ ನಿಮ್ಮ ದೇಹದಲ್ಲಿನ ಚಯಾಪಚಯ ವ್ಯವಸ್ಥೆಯ ವೇಗವನ್ನು ವೃದ್ಧಿಸುತ್ತದೆ. ಇದಕ್ಕೆ ಇದರಲ್ಲಿರುವ ವಿಟಮಿನ್ ಸಿ- ಅಂಶವೇ ಕಾರಣ.

ಸಂಗತಿ#6

ಸಂಗತಿ#6

ಈ ಮಿಶ್ರಣವು ಗಂಟಲು ನೋವಿಗೂ ಸಹ ಉಪಶಮನವನ್ನು ನೀಡುತ್ತದೆ. ಕಫ, ಸೀನುವಿಕೆ ಇದ್ದರೂ ಸಹ ಈ ಮಿಶ್ರಣದ ಸೇವನೆಯಿಂದ ಅವುಗಳನ್ನು ಸಹ ಗುಣಪಡಿಸಿಕೊಳ್ಳಬಹುದು.

ಸಂಗತಿ#7

ಸಂಗತಿ#7

ಈ ರಸವು ನಿಮ್ಮ ಮೂಳೆಗಳಿಗೆ ಮತ್ತು ಕೀಲುಗಳಿಗೆ ಸಹ ಒಳ್ಳೆಯದು. ಇದರಲ್ಲಿರುವ ಮ್ಯಾಂಗನೀಸ್ ನಿಮ್ಮ ದೇಹಕ್ಕೆ ಅಗತ್ಯವಾದ ಅಂಶಗಳಲ್ಲಿ ಒಂದಾಗಿದೆ. ಇದನ್ನು ನಿಮ್ಮ ದೇಹಕ್ಕೆ ಒದಗಿಸಿದಾಗ ಅದರಲ್ಲಿರುವ ಕ್ಯಾಲ್ಸಿಯಂ ಅನ್ನು ನಿಮ್ಮ ದೇಹ ಹೀರಿಕೊಳ್ಳುತ್ತದೆ. ಅರ್ಥರಿಟಿಸ್ ಬರದಂತೆ ತಡೆಯಲು ಈ ರಸವನ್ನು ಸೇವಿಸಿ.

English summary

This Mixture Works Like Cough Syrup!

Do you know that a simple mixture of ingredients like pineapple juice, honey, salt and pepper can deal with persistent cough and sore throat? This drink can help you get rid of the mucus issues in your lungs. In fact, the regular cough syrups available in the market could be addictive and may also cause drowsiness when you consume them in excess quantities
X
Desktop Bottom Promotion