For Quick Alerts
ALLOW NOTIFICATIONS  
For Daily Alerts

ಕಿರಿಕಿರಿ ನೀಡುವ ಶೀತದ ಸಮಸ್ಯೆಗೆ 'ಆಹಾರ ಪಥ್ಯ' ಹೀಗಿರಲಿ...

ಬಿಟ್ಟು, ಬಿಡದೆ ಕಾಡುವ ಶೀತಕ್ಕೆ ಮನೆ ಮದ್ದು ಮಾಡುವುದೇ ಒಳ್ಳೆಯದು. ಶೀತವನ್ನು ತಕ್ಷಣ ಶಮನ ಮಾಡುವ ಪರಿಣಾಮಕಾರಿಯಾದ ಮನೆ ಮದ್ದು ಏನು ಎಂದು ಮೊದಲಿಗೆ ನೋಡೋಣ ಬನ್ನಿ....

By Manu
|

ದೇಹಕ್ಕೆ ಸಣ್ಣ ಸಮಸ್ಯೆಯಾದರೂ ಅದರಿಂದ ಕಿರಿಕಿರಿ ಉಂಟಾಗುವುದು ಸಹಜ. ಅದರಲ್ಲೂ ಶೀತ ಹಾಗೂ ಕೆಮ್ಮು ಇದ್ದರೆ ಆಗ ಹೆಚ್ಚಿನ ಸಮಸ್ಯೆಯಾಗುತ್ತದೆ. ಯಾಕೆಂದರೆ ಶೀತವಿದ್ದರೆ ಗಂಟಲು ನೋವು ಇದ್ದೇ ಇರುತ್ತದೆ. ಗಂಟಲು ನೋವು ಇರುವುದರಿಂದ ದ್ರವ ಹಾಗೂ ಘನ ಆಹಾರ ಸೇವನೆ ಕಷ್ಟವಾಗುತ್ತದೆ. ಶೀತ, ಕೆಮ್ಮು ಉಪಟಳ ತಡೆಯುವ ಮನೆಮದ್ದು

ಶೀತವಿದ್ದರೆ ಮೂಗು ಕಟ್ಟಿದ್ದರೆ ಆಥವಾ ಮೂಗಿನಿಂದ ಸಿಂಬಳ ಸುರಿಯುತ್ತಾ ಇದ್ದರೆ ಅದು ದೊಡ್ಡ ಕಿರಕಿರಿಯುಂಟು ಮಾಡುವುದು. ಶೀತವಿದ್ದಾಗ ಹಸಿವು ಕೂಡ ಕಡಿಮೆಯಿರುತ್ತದೆ. ಶೀತ ಭಾದಿಸುವಾಗ ಹಸಿವನ್ನು ಹೆಚ್ಚಿಸಿಕೊಂಡು ಯಾವ ರೀತಿಯ ಆಹಾರವನ್ನು ಸೇವಿಸಬಹುದು ಎಂದು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು. ಸುವಾಸನೆಯಿರುವಂತಹ ಆಹಾರವನ್ನು ಸೇವಿಸಿ. ಶೀತ ಆದಾಗ ಏನು ಮಾಡಬೇಕು, ಏನು ಮಾಡಬಾರದು?

ಯಾಕೆಂದರೆ ಸುವಾಸನೆಯಿಂದ ನಿಮಗೆ ಹಸಿವು ಹೆಚ್ಚಾಗುವುದು. ಸುವಾಸನೆಯಿಂದ ಆಹಾರ ಹಾಗೂ ಪಾನೀಯವನ್ನು ಸೇವಿಸಬಹುದು. ಇದರಿಂದ ಹಸಿವು ಹೆಚ್ಚಾಗುವ ಸಾಧ್ಯತೆಯಿದೆ... ಮುಂದೆ ಓದಿ...


ಸೂಪ್ ಸೇವಿಸಿ

ಸೂಪ್ ಸೇವಿಸಿ

ಟೊಮೆಟೋದಂತಹ ತರಕಾರಿ ಸೂಪ್ ಅಥವಾ ಕೋಳಿಯ ಸೂಪ್ ಶೀತದಿಂದ ಪರಿಹಾರ ಪಡೆಯಲು ತುಂಬಾ ಒಳ್ಳೆಯದು. ಉಸಿರಾಟದ ನಾಳಗಳಲ್ಲಿ ಅಂಟಿಕೊಂಡಿರುವ ಕಫವನ್ನು ತೆಗೆಯಲು ಇದು ತುಂಬಾ ಸಹಕಾರಿ. ಬಿಸಿಯಾಗಿರುವ ಸೂಪ್ ಕಫವನ್ನು ತೆಳುವಾಗಿಸಿ ಮೂಗಿನಿಂದ ಹೊರಹೋಗಲು ನೆರವಾಗುವುದು. ಶೀತ, ಕೆಮ್ಮು, ಜ್ವರಕ್ಕೆಲ್ಲಾ ರಾಮಬಾಣ- ಬಿಸಿ ಬಿಸಿಯಾದ ಸೂಪ್!

ಬಿಸಿ ನೀರು ಕುಡಿಯಿರಿ

ಬಿಸಿ ನೀರು ಕುಡಿಯಿರಿ

ಶೀತವಿದ್ದಾಗ ನೀರು ಕುಡಿಯಲು ನೀವು ಹಿಂಜರಿಯಬಹುದು. ಆದರೆ ದಿನವಿಡಿ ಬಿಸಿನೀರನ್ನು ಕುಡಿಯುತ್ತಾ ಇರಿ. ಯಾಕೆಂದರೆ ಶೀತ ಹಾಗೂ ಕೆಮ್ಮು ದೇಹದಲ್ಲಿ ನಿರ್ಜಲೀಕರಣವನ್ನು ಉಂಟು ಮಾಡುತ್ತದೆ. ಜೇನುತುಪ್ಪ ಮತ್ತು ಲಿಂಬೆರಸವನ್ನು ಬಿಸಿನೀರಿಗೆ ಹಾಕಿ ಕುಡಿಯುತ್ತಾ ಇರಿ. ಜೇನುತುಪ್ಪವು ಗಂಟಲಿಗೆ ಒಳ್ಳೆಯದು. ಲಿಂಬೆರಸದಲ್ಲಿರುವ ವಿಟಮಿನ್ ಸಿ ಪ್ರತಿರೋಧಕ ವ್ಯವಸ್ಥೆಯನ್ನು ಉತ್ತಮಪಡಿಸುವುದು. ಆರೋಗ್ಯದ ದೃಷ್ಟಿಯಿಂದ, ದಿನನಿತ್ಯ ಬಿಸಿ ನೀರು ಸೇವಿಸಿ

ಎಳೆ ನೀರು

ಎಳೆ ನೀರು

ಎಳೆ ನೀರನ್ನು ಯಾವಾಗಲೂ ಕುಡಿಯುತ್ತಾ ಇರಿ. ಇದು ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸುವುದು. ನೀವು ಕಾಯಿಲೆಗೆ ಬಿದ್ದಾಗ ಕಳೆದುಕೊಂಡಿರುವ ಪೋಷಕಾಂಶಗಳನ್ನು ಇದು ದೇಹಕ್ಕೆ ಒದಗಿಸುವುದು. ಅಲ್ಲದೇ ಹಸಿರು ಟೀ, ಕಪ್ಪು ಟೀ, ಶುಂಠಿ ಚಹಾ ಕುಡಿಯಿರಿ. ಇದು ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿದೆ ಮತ್ತು ಜ್ವರದ ವಿರುದ್ಧ ಹೋರಾಡುತ್ತದೆ. ಬೆಳ್ಳಂ ಬೆಳಿಗ್ಗೆ ಎದ್ದು ಎಳೆ ನೀರು ಕುಡಿಯಿರಿ, ಆರೋಗ್ಯ ಪಡೆಯಿರಿ

ಮೊಟ್ಟೆ, ಕೋಳಿ

ಮೊಟ್ಟೆ, ಕೋಳಿ

ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಪ್ರೋಟೀನ್‌ನಿಂದ ಸಮೃದ್ಧವಾಗಿರುವ ಮೊಟ್ಟೆ, ಕೋಳಿ ಸೇವಿಸಿ. ಗೆಣಸು, ಹೂಕೋಸು, ಓಟ್ಸ್ ಮತ್ತು ಮೊಸರನ್ನು ಸೇವಿಸಿ. ಇದು ಪ್ರತಿರೋಧಕ ಶಕ್ತಿಯನ್ನು ವೃದ್ಧಿಸಿ ಉರಿಯೂತದ ವಿರುದ್ಧ ಹೋರಾಡುವುದು. ಹೊಸ ರುಚಿಯಲ್ಲಿ 6 ಬಗೆಯ ಮೊಟ್ಟೆಯ ರೆಸಿಪಿ

English summary

This Is What You Should Eat And Drink When You Have A Cold

Here are some foods that will provide relief to you when you have a cold and also help you to increase your appetite. These foods have been found to be appealing to people who have been under the weather.
X
Desktop Bottom Promotion