ಧೂಮಪಾನ ಬಿಡಬೇಕೇ? ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್...

By: manu
Subscribe to Boldsky

ಧೂಮಪಾನ ಬಿಡುವುದು ಬಹಳ ಸುಲಭ ರಾಯ್ರೇ, ನಾನೇ ಎಷ್ಟೋ ಸಲ ಬಿಟ್ಟಿದ್ದೀನಿ, ಎಂಬುದು ಬೀಚಿಯವರ ಒಂದು ನಗೆಹನಿ. ಧೂಮಪಾನಕ್ಕೆ ದಾಸರಾಗಿದ್ದ ಬೀಚಿಯವರೇ ಹೀಗೆ ಹೇಳಿದಾಗ ಉಳಿದವರ ಪಾಡು ಸಹಾ ಹೆಚ್ಚೇ ಇರಬಹುದು. ಧೂಮಪಾನ ಮೊತ್ತ ಮೊದಲು ಪ್ರಾರಂಭವಾಗುವುದು ಸ್ನೇಹಿತರ ಒಂದು ಒತ್ತಾಯದಿಂದ. "ಒಂದು ದಮ್ಮು ಎಳೆದು ನೋಡು, ಇಷ್ಟವಾಗಲಿಲ್ಲ ಎಂದರೆ ಬಿಟ್ಟು ಬಿಡು" ಎಂಬ ಮಾತಿಗೆ ಮರುಳಾಗಿ ಪ್ರಾರಂಭಿಸಿದವರೇ ಅತಿ ಹೆಚ್ಚು.  ಧೂಮಪಾನಿಗಳ ಶ್ವಾಸಕೋಶದ ಆರೋಗ್ಯಕ್ಕೆ ಪವರ್‌ಫುಲ್ ರೆಸಿಪಿ

ಆದರೆ ಸ್ನೇಹಿತರು ಹೇಳಿದಷ್ಟು ಸುಲಭವಾಗಿ ಇದನ್ನು ಬಿಡುವುದು ಸಾಧ್ಯವಿಲ್ಲ ಎಂಬುವುದು ಜಗತ್ತಿನ ಎಲ್ಲಾ ಧೂಮಪಾನಿಗಳ ಸಹಮತವಾಗಿದೆ. ಇಂದು ಧೂಮಪಾನವನ್ನು ಬಿಡಲು ಆಧುನಿಕ ಕ್ರಮಗಳಿದ್ದರೂ ಯಾವುವೂ ಶತಪ್ರತಿಶತ ಸಫಲ ವಿಧಾನ ಎನ್ನುವಂತಿಲ್ಲ. ನಿಕೋಟಿನ್ ಪ್ಯಾಚ್, ಚ್ಯೂಯಿಂಗ್ ಗಮ್ ಅಗಿಯುವುದು ಮೊದಲಾದವುಗಳೆಲ್ಲಾ ಹಳಸಿವೆ. ಸಿಗರೇಟ್ ಬದಲಿಗೆ ಗುಟ್ಕಾ ಪ್ರಾರಂಭಿಸಿದವರು ಈಗ ಗುಟ್ಕಾ ದಾಸರಾಗಿದ್ದಾರೆ. ಆದರೆ ಇದಕ್ಕೂ ಉತ್ತಮವಾದ ವಿಧಾನ ನಮ್ಮ ಅಡುಗೆ ಮನೆಯಲ್ಲಿಯೇ ಇತ್ತು ಎಂದು ಹೆಚ್ಚಿನವರಿಗೆ ಗೊತ್ತೇ ಇಲ್ಲ.

ಇದಕ್ಕಾಗಿ ಬೇಕಾಗಿರುವುದು ಏನೆಂದರೆ ಒಂದು ಕಿತ್ತಳೆ, ಒಂದು ಚಿಕ್ಕ ಚಕೋತ, ಒಂದು ಕಪ್ ಕ್ಯಾಮೋಮೈಲ್ ಟೀ, ಮೂವತ್ತು ಗ್ರಾಂ ಆಲಿವ್ ಎಣ್ಣೆ, ಮೂವತ್ತು ಗ್ರಾಮ್ ಹೋಹೋಬಾ ಎಣ್ಣೆ, ಐದು ಗ್ರಾ ಓರೆಗಾನೋ, ಮೂವತ್ತು ಗ್ರಾಂ ಕೊಬ್ಬರಿ ಎಣ್ಣೆ. ಮೊದಲು ಕಿತ್ತಳೆ ಮತ್ತು ಚಕ್ಕೋತ ಹಣ್ಣುಗಳ ರಸ ಹಿಂಡಿ ತೆಗೆಯಿರಿ. ಈ ರಸದಲ್ಲಿ ಉಳಿದೆಲ್ಲಾ ಸಾಮಾಗ್ರಿಗಳನ್ನು ಹಾಕಿ ಮಿಶ್ರಣ ಮಾಡಿ ಮುಚ್ಚಳ ಗಟ್ಟಿಯಾಗಿ ಹಾಕಿ ಚೆನ್ನಾಗಿ ಅಲುಗಾಡಿಸಿ. ಈ ಬಾಟಲಿಯನ್ನು ಸತತವಾಗಿ ನಿಮ್ಮ ಬಳಿ ಇರಿಸಿ. ಯಾವಾಗ ಧೂಮಪಾನ ಮಾಡಬೇಕೆಂಬ ಬಯಕೆಯಾಯಿತೋ, ಆಗೆಲ್ಲಾ ಈ ಬಾಟಲಿಯ ಮುಚ್ಚಳ ತೆರೆದು ಇದರ ಸುವಾಸನೆಯನ್ನು ಆಘ್ರಾಣಿಸಿ. ಸಿಗರೇಟು ಬಿಟ್ಟ ಬಳಿಕ, ಆರೋಗ್ಯ ಹೇಗಿರುತ್ತೆ ನೋಡಿ

ಇದರ ಪರಿಮಳವನ್ನು ನಮ್ಮ ಶ್ವಾಸಕೋಶಗಳು ಹೀರುತ್ತಿದ್ದಂತೆಯೇ ಧೂಮಪಾನ ಮಾಡಿದಾಗ ಪಡೆಯುವ ಸುಖಕ್ಕಿಂತಲೂ ಉತ್ತಮವಾದ ಮತ್ತು ಇಷ್ಟವಾಗುವ ಅನುಭವವನ್ನು ಪಡೆಯುತ್ತೀರಿ. ಈ ಅನುಭವ ಸಿಗರೇಟು ಬೇಡ ಎನ್ನುತ್ತದೆ. ಹಲವು ಜನರಿರುವಾಗ ಬಾಟಲಿಯನ್ನು ಆಘ್ರಾಣಿಸಲು ಮುಜುಗರವಾದರೆ ಕರವಸ್ತ್ರ ಅಥವಾ ಟಿಶ್ಯೂ ಪೇಪರ್ ಮೇಲೆ ಕೆಲವು ಹನಿಗಳನ್ನು ಚೆಲ್ಲಿ ಈ ಬಟ್ಟೆಯನ್ನು ಮೂಗಿಗೆ ಒತ್ತಿ ಸುವಾಸನೆಯನ್ನು ಆಘ್ರಾಣಿಸಿ. ನಿತ್ಯವೂ ಈ ವಿಧಾನವನ್ನು ಅನುಸರಿಸುತ್ತಾ ಬಂದರೆ ಕ್ರಮೇಣ ಧೂಮಪಾನ ಎಲ್ಲಿ ನಿಲ್ಲಿಸಿದ್ದೆ ಎಂಬುದನ್ನೂ ಮರೆಯುವಿರಿ. ಈ ವಿಧಾನದ ಜೊತೆಗೇ ಇನ್ನೂ ಕೆಲವು ವಿಧಾನಗಳಿದ್ದು ನಿಮಗೆ ಅತಿ ಸೂಕ್ತವಾದ ವಿಧಾನವನ್ನು ಆರಿಸಿಕೊಳ್ಳಿ...

ವಿಧಾನ #1

ವಿಧಾನ #1

ಧೂಮಪಾನ ಮಾಡುವ ಬಯಕೆಯಾದಾಗಲೆಲ್ಲಾ ಒಂದು ಕ್ಯಾರೆಟ್, ಒಂದು ಹಸಿ ಸೌತೆ ಅಥವಾ ಬದನೆಯ ಬಿಲ್ಲೆಯೊಂದನ್ನು ಹಸಿಯಾಗಿ ತಿನ್ನಿ. ಅದರಲ್ಲೂ ಕ್ಯಾರೆಟ್ ಜ್ಯೂಸ್ ಧೂಮಪಾನವನ್ನು ದೂರವಿಡಲು ಅತಿ ಸಮರ್ಥವಾದ ಆಯ್ಕೆಯಾಗಿದೆ.

ವಿಧಾನ #2

ವಿಧಾನ #2

ಇನ್ನೊಂದು ಸುಲಭ ವಿಧಾನವೆಂದರೆ ಬೆರಳಿಗೆ ಕೊಂಚ ಉಪ್ಪು ಅದ್ದಿ ಬೆರಳನ್ನು ನೆಕ್ಕುವುದು. ಕೆಲವು ಅಧ್ಯಯನಗಳ ಪ್ರಕಾರ ನಾಲಿಗೆಗೆ ಉಪ್ಪು ತಾಕುತ್ತಿದ್ದಂತೆಯೇ ಧೂಮಪಾನದ ಬಯಕೆ ಕಡಿಮೆಯಾಗುತ್ತದೆ.

ವಿಧಾನ #3

ವಿಧಾನ #3

ಧೂಮಪಾನದ ಬಯಕೆಯಾಗುತ್ತಿದ್ದಂತೆಯೇ ಒಂದು ಕಪ್ ಬಿಸಿ ಹಾಲನ್ನು ಕುಡಿಯಿರಿ. ಏಕೆಂದರೆ ಹಾಲು ಕುಡಿದ ಬಳಿಕ ಸಿಗರೇಟು ಸೇದಿದರೂ ಇದರ ರುಚಿ ಅತಿ ಕಹಿಯಾಗಿದ್ದು ಇದನ್ನು ದ್ವೇಶಿಸುವಂತೆ ಮಾಡುತ್ತದೆ. ನಿಧಾನವಾಗಿ ಈ ಕ್ರಮದಿಂದ ಸಿಗರೇಟು ತನ್ನಿಂತಾನೇ ಬಿಡಲು ಸಾಧ್ಯವಾಗುತ್ತದೆ.

ವಿಧಾನ #4

ವಿಧಾನ #4

ನಿಮ್ಮ ಕೆಲಸದ ಸ್ಥಳದ ಬಳಿ ಬಿಸಿನೀರಿನ ಬಾಟಲಿಯೊಂದನ್ನು ಸದಾ ಕೈಗೆ ಸಿಗುವಂತಿಡಿ. ನಿಯಮಿತವಾಗಿ, ಅಂದರೆ ಗಂಟೆಗೆ ಒಂದು ಬಾರಿ ಕೊಂಚ ಕೊಂಚವಾಗಿ ಬಿಸಿನೀರು ಕುಡಿಯುತ್ತಾ ಬನ್ನಿ. ನಡುನಡುವೆ ಕುಡಿಯುವ ಟೀ ಕಾಫಿಗಳ ಬದಲಾಗಿಯೂ ನೀರನ್ನೇ ಕುಡಿಯಿರಿ. ಏಕೆಂದರೆ ಟೀ ಕಾಫಿ ಕುಡಿದ ಬಳಿಕ ಸಿಗರೇಟಿನ ಸ್ವಾದ ಹೆಚ್ಚು ಜನರಿಗೆ ಇಷ್ಟವಾಗುತ್ತದೆ. ಆದರೆ ಬಿಸಿನೀರು ಕುಡಿದ ಬಳಿಕ ಸೇದಿದರೆ ಇದು ಸಪ್ಪೆ ಎನಿಸುತ್ತದೆ.

ವಿಧಾನ #5

ವಿಧಾನ #5

ಬಹಳ ವರ್ಷಗಳಿಂದ ಧೂಮಪಾನಿಗಳಿಗೆ ನೆರವಾಗುತ್ತ ಬಂದಿರುವ ವಿಧಾನವೆಂದರೆ ಸಕ್ಕರೆರಹಿತ ಚ್ಯೂಯಿಂಗ್ ಗಮ್ ಜಗಿಯುವುದು. ಆದರೆ ಸತತವಾಗಿ ಜಗಿಯುತ್ತಾ ಇರುವುದರಿಂದ ಒಸಡುಗಳು ತಮ್ಮ ಬಲವನ್ನು ಕಳೆದುಕೊಳ್ಳುವುದು ಒಂದು ಅಡ್ಡಪರಿಣಾಮವಾಗಿದೆ.

ವಿಧಾನ #6

ವಿಧಾನ #6

ದಿನಕ್ಕೆ ಹಲವಾರು ಬಾರಿ ಕಿತ್ತಳೆ ಅಥವಾ ಲಿಂಬೆಯ ರಸದ ಶರಬತ್ತು ಕುಡಿಯುತ್ತಾ ಇರಿ. ಇದರಿಂದಲೂ ಸಿಗರೇಟು ಸೇದುವ ಬಯಕೆ ಇಲ್ಲವಾಗುತ್ತದೆ. ಇದು ಹೇಗೆಂದರೆ ಸಿಗರೇಟಿನ ಮೂಲಕ ಲಭ್ಯವಾಗುವ ನಿಕೋಟಿನ್ ವಿಟಮಿನ್ ಸಿ ಯನ್ನೂ ಬಳಸಿಕೊಳ್ಳುತ್ತದೆ. ಕಿತ್ತಳೆ ಲಿಂಬೆಯ ರಸದ ಸೇವನೆಯ ಮೂಲಕ ಲಭ್ಯವಾದ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿ ರಕ್ತದಲ್ಲಿರುವ ಕಾರಣ ಸಿಗರೇಟನ್ನು ಸೇದಬೇಕಾದ ಅನಿವಾರ್ಯತೆ ಇರದ ಕಾರಣ ಬಯಕೆಯೂ ಉಂಟಾಗುವುದಿಲ್ಲ.

ವಿಧಾನ #7

ವಿಧಾನ #7

ಹಸಿಶುಂಠಿಯಂತೆಯೇ ಕಾಣುವ ಜಿನ್ಸೆಂಗ್ ಎಂಬ ಗಡ್ಡೆಯ ರಸವನ್ನು ಸೇವಿಸಿದರೂ ಧೂಮಪಾನ ಬಿಡಲು ನೆರವಾಗುತ್ತದೆ. ಆದರೆ ಆರೋಗ್ಯ ತಜ್ಞರ ಪ್ರಕಾರ ಜಿನ್ಸೆಂಗ್ ಒಂದು ಪ್ರಬಲವಾದ ಔಷಧಿಯಾಗಿದ್ದು ತಿಂಗಳಿಗೆ ಎರಡರಿಂದ ಮೂರು ಬಾರಿ ಮಾತ್ರ ಸೇವಿಸುವುದು ಉತ್ತಮ.

English summary

This Drink Can Kill Your Smoking Urge

Let us admit it, quitting smoking is not easy. You must have tried nicotine patches and gums but they too must have failed to help you quit smoking. Now, how about trying a simple remedy using ingredients from your kitchen? This remedy worked for many in minimising the urge to smoke. Now, here are other such remedies.
Subscribe Newsletter