For Quick Alerts
ALLOW NOTIFICATIONS  
For Daily Alerts

ಕಣ್ಣಿನ ಪೊರೆಗಳ ಸಮಸ್ಯೆಗೆ-ಪಾರ್ಸ್ಲಿ ಎಲೆಗಳಿಂದ ಆರೈಕೆ....

By Manu
|

ವೃದ್ಧಾಪ್ಯ ನಮಗೆ ಯಾರಿಗೂ ಬೇಡ. ಆದರೆ ವಯೋಸಹಜವಾಗಿ ನಾವೆಲ್ಲರೂ ವೃದ್ಧಾಪ್ಯದತ್ತ ನಿಧಾನವಾಗಿ ಜಾರುತ್ತಾ ಹೋಗುತ್ತಿದ್ದೇವೆ. ಇದು ಅನಿವಾರ್ಯ. ಇದರೊಂದಿಗೇ ನಮ್ಮ ಆರೋಗ್ಯವೂ ನಿಧಾನವಾಗಿ ಶಿಥಿಲವಾಗುತ್ತಾ ಹೋಗುತ್ತದೆ. ಹತ್ತು ಹಲವು ಕಾಯಿಲೆಗಳು ಆವರಿಸಿಕೊಳ್ಳುತ್ತಾ ಹೋಗುತ್ತವೆ. ಸುಮಾರು ಐವತ್ತು ವರ್ಷ ದಾಟಿದ ಬಳಿಕ ನಮ್ಮ ಜೀವಕೋಶಗಳು ತಾರುಣ್ಯದಲ್ಲಿದ್ದ ಕ್ಷಮತೆಯನ್ನು ಕಳೆದುಕೊಳ್ಳುತ್ತವೆ.

ಮರುಹುಟ್ಟುವ ಸಾಮರ್ಥ್ಯವೂ ಕಡಿಮೆಯಾಗುತ್ತದೆ. ಪರಿಣಾಮವಾಗಿ ನಮ್ಮ ದೇಹದ ಒಂದೊಂದೇ ಅಂಗಗಳು ನಿಧಾನವಾಗಿ ಶಿಥಿಲಗೊಳ್ಳುತ್ತಾ ಸಾಗುತ್ತವೆ. ವಯಸ್ಸಿಗೆ ಅನುಗುಣವಾಗಿ ಎದುರಾಗುವ ಕಾಯಿಲೆಗಳಲ್ಲಿ ಪ್ರಮುಖವಾಗಿ ಮಧುಮೇಹ, ಆಲ್ಜೀಮರ್ಸ್ ಕಾಯಿಲೆ, ಸಂಧಿವಾತ, ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿಕೊಳ್ಳುವ ಓಸ್ಟಿಯೋಪೋರೋಸಿಸಿ, ಕಣ್ಣುಗಳಲ್ಲಿ ಪೊರೆಗಳು ಬರುವುದು ಅಥವಾ ಕ್ಯಾಟರಾಕ್ಟ್ ಮೂಲಕ ಕಣ್ಣಿನ ದೃಷ್ಟಿ ಕುಂದುವುದು ಇತ್ಯಾದಿ.

This Common Herb Can Treat Cataracts Effectively!

ಇಂದು ವಯೋಸಹಜವಾಗಿ ಆಗಮಿಸುವ ಕ್ಯಾಟರಾಕ್ಟ್‌ನ ತೊಂದರೆಯನ್ನು ಅಥವಾ ಕಣ್ಣಿನ ಪೊರೆಗಳ ಸಮಸ್ಯೆಯನ್ನು ನಿವಾರಿಸಲು ನೈಸರ್ಗಿಕವಾದ ವಿಧಾನವೊಂದಿದೆ. ಅದೇ ಪಾರ್ಸ್ಲಿ ಎಲೆಗಳ ಸೇವನೆ. Petroselinum Crispum ಎಂಬ ವೈಜ್ಞಾನಿಕ ಹೆಸರಿರುವ, ನೋಡಲು ಕೊತ್ತಂಬರಿ ಸೊಪ್ಪಿನಂತೆಯೇ ಕಾಣುವ ಈ ಎಲೆಗಳಿಗೆ ಕನ್ನಡದಲ್ಲಿ ಕೆಲವೆಡೆ ಕಾಡು ಕೊತ್ತಂಬರಿ ಎಂದೂ ಕೆಲವೆಡೆ ಅಚ್ಚು ಮೂಡ ಸೊಪ್ಪು ಎಂದೂ ಕರೆಯುತ್ತಾರೆ. ಬನ್ನಿ, ಈ ಸೊಪ್ಪಿನ ಸೇವನೆಯಿಂದ ಕ್ಯಾಟರಾಕ್ಟ್ ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ನೋಡೋಣ: ಸಡನ್ ಆಗಿ ಕಣ್ಣಿಗೆ ಗಾಯವಾದರೆ- ಪ್ರಥಮ ಚಿಕಿತ್ಸೆ ಹೀಗಿರಲಿ

ಅಗತ್ಯವಿರುವ ಸಾಮಾಗ್ರಿಗಳು:
*ಪಾರ್ಸ್ಲಿ ಎಲೆಗಳು: ಆರರಿಂದ ಏಳು
*ಜೇನು : ಎರಡು ಚಿಕ್ಕ ಚಮಚ

ಈ ಎಲೆಗಳಲ್ಲಿ ಕಣ್ಣುಗಳಿಗೆ ಅತಿ ಅಗತ್ಯವಾದ ವಿಟಮಿನ್ ಎ ಇದೆ. ಅಲ್ಲದೇ ಕಣ್ಣಿತ ತೇವಾಂಶವನ್ನು ಸದಾ ಹಿಡಿದಿಡಲು ಕಣ್ಣೀರ ಗ್ರಂಥಿಗಳು ಸದಾ ತುಂಬಿಕೊಂಡಿರಲೂ ಈ ಎಲೆಗಳ ಪೋಷಕಾಂಶಗಳು ನೆರವಾಗುತ್ತವೆ.

ಈ ಎಲೆಗಳಲ್ಲಿ ಉತ್ತಮ ಪ್ರಮಾಣದ ಕ್ಯಾರೋಟಿನಾಯ್ಡುಗಳಾದ ಲ್ಯೂಟಿನ್ ಮತ್ತು ಜಿಯಾಕ್ಸಾಂಥಿನ್‌ಗಳಿವೆ. ಇವೇ ವಾಸ್ತವವಾಗಿ ಕ್ಯಾಟರಾಕ್ಟ್ ತೊಂದರೆಗೆ ಸೂಕ ಪರಿಹಾರವನ್ನು ನೀಡುತ್ತವೆ. ಸತತವಾದ ಸೇವನೆಯಿಂದ ಈ ತೊಂದರೆಯನ್ನು ನಿಧಾನವಾಗಿ ಹಿಮ್ಮೆಟ್ಟಿಸಬಹುದು.

ಈ ಎಲೆಗಳನ್ನು ಬಳಸುವ ವಿಧಾನ:
*ಎಲೆಗಳನ್ನು ಚೆನ್ನಾಗಿ ತೊಳೆದು ಕೊಂಚ ನೀರಿನೊಂದಿಗೆ ಮಿಕ್ಸಿಯಲ್ಲಿ ನುಣ್ಣಗೆ ಅರೆಯಿರಿ.
*ಈ ನೀರಿಗೆ ಜೇನನ್ನು ಸೇರಿಸಿ ಕಲಕಿ.


*ಪ್ರತಿದಿನ ರಾತ್ರಿಯೂಟಕ್ಕೂ ಮೊದಲು ಖಾಲಿ ಹೊಟ್ಟೆಯಲ್ಲಿ, ಅಂದರೆ ಮಧ್ಯಾಹ್ನದ ಊಟದ ಬಳಿಕ ರಾತ್ರಿಯೂಟದವರೆಗೂ ಉಪವಾಸವಿದ್ದು ಸೇವಿಸಬೇಕು.
*ನಿತ್ಯವೂ ಈ ರಸವನ್ನು ಸೇವಿಸುತ್ತಾ ಬರುವ ಮೂಲಕ ನಿಧಾನವಾಗಿ ಕ್ಯಾಟರಾಕ್ಟ್‌ನ ಪ್ರಭಾವ ಕಡಿಮೆಯಾಗುತ್ತಾ ಹೋಗುತ್ತದೆ.
English summary

This Common Herb Can Treat Cataracts Effectively!

Most of us, whether we would like to admit it or not, are scared of ageing because of the numerous health risks that come with increasing age. If we have people about the age of 50 living with us, we would be well aware of the health problems that occur with age. With age, the cells of our body become weaker and their renewal capacity gradually dies down, hence causing the organs to weaken eventually.
Story first published: Monday, July 11, 2016, 19:52 [IST]
X
Desktop Bottom Promotion