ಕಣ್ಣುಗಳೇ ನಮ್ಮ ಅಮೂಲ್ಯ ಸಂಪತ್ತು- ನಿರ್ಲಕ್ಷ್ಯ ಮಾಡದಿರಿ....

Posted By: Staff
Subscribe to Boldsky

ಪ್ರಕೃತಿಯ ಸೊಬಗನ್ನು ಸವಿಯಬೇಕಾದರೆ ನಮಗೆ ಕಣ್ಣುಗಳು ಬೇಕೇಬೇಕು. ಕಣ್ಣುಗಳು ಇಲ್ಲದೆ ಇದ್ದರೆ ನಮ್ಮ ಸುತ್ತ ಏನೇ ಆದರೂ ನಮಗೆ ತಿಳಿಯಲ್ಲ. ದೃಷ್ಟಿಯೇ ಇಲ್ಲದಿರುವವರು ಎಷ್ಟೋ ಮಂದಿ ಇದ್ದಾರೆ. ಇದರಿಂದಾಗಿಯೇ ನೇತ್ರದಾನ ಮಾಡಿ ಎಂದು ಅಲ್ಲಲ್ಲಿ ಅಭಿಯಾನಗಳು ನಡೆಯುತ್ತಲೇ ಇದೆ.

ಹೆಚ್ಚಿನವರು ಕಣ್ಣುಗಳ ಬಗ್ಗೆ ಕಾಳಜಿಯೇ ವಹಿಸುವುದಿಲ್ಲ. ಕಣ್ಣುಗಳಿಗೆ ನೋವಾದರೆ ಅಥವಾ ಕಸ ಬಿದ್ದರೆ ಮಾತ್ರ ನಮಗೆ ಕಣ್ಣುಗಳ ಬಗ್ಗೆ ಎಚ್ಚರವಾಗುವುದು. ಇಲ್ಲದೆ ಇದ್ದರೆ ಅದರಷ್ಟಕ್ಕೆ ಅದನ್ನು ಬಿಟ್ಟುಬಿಡುತ್ತೇವೆ. ಕಣ್ಣುಗಳ ಬಗ್ಗೆಯೂ ಕಾಳಜಿ ವಹಿಸುವುದು ತುಂಬಾ ಮುಖ್ಯ. ಕಣ್ಣಿನ ದೃಷ್ಟಿಯೇ ಜೀವನದ ಬಹು ದೊಡ್ಡ ಆಸ್ತಿ

ರಾತ್ರಿ ಮಲಗುವ ಮೊದಲು ಮೊಬೈಲ್‌ನಲ್ಲಿ ಆಟವಾಡಬಾರದು ಮತ್ತು ಯಾವಾಗಲೂ ಹಸಿರು ತರಕಾರಿಗಳನ್ನು ತಿನ್ನಬೇಕು ಎನ್ನುವುದು ಕಣ್ಣುಗಳ ಆರೈಕೆ ಬಗ್ಗೆ ಇರುವ ಕೆಲವೊಂದು ಸಲಹೆಗಳು. ಆದರೆ ಕೆಲವೊಂದು ದೈನಂದಿನ ಅಭ್ಯಾಸಗಳು ಕಣ್ಣುಗಳ ಆರೋಗ್ಯವನ್ನು ಕೆಡಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದು ಯಾವುದೆಂದು ನೀವು ತಿಳಿದುಕೊಳ್ಳಿ....

ಧೂಮಪಾನ

ಧೂಮಪಾನ

ಧೂಮಪಾನದಿಂದ ದೃಷ್ಟಿಯನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಧೂಮಪಾನದ ವೇಳೆ ನೀವು ಸೇವಿಸುವಂತಹ ರಾಸಾಯನಿಕಗಳಿಂದ ಕಣ್ಣಿನಲ್ಲಿ ಪೊರೆ ಕಾಣಿಸಿಕೊಳ್ಳಬಹುದು. ಪದೇ ಪದೇ ಕಾಡುವ ಕಣ್ಣಿನ ನೋವಿಗೆ ಕಾರಣ ತಿಳಿದುಕೊಳ್ಳಿ

ಕಳಪೆ ಆಹಾರ

ಕಳಪೆ ಆಹಾರ

ದಿನಾಲೂ ತಿನ್ನುವಂತಹ ಚಿಪ್ಸ್ ನಲ್ಲಿ ಅತಿಯಾದ ಉಪ್ಪು ಮತ್ತು ಒಮೆಗಾ 6 ಎಣ್ಣೆಯು ಇರುತ್ತದೆ. ಇದು ಕಣ್ಣುಗಳನ್ನು ಒಣಗಿಸಿ ಕಿರಿಕಿರಿ ಉಂಟು ಮಾಡಬಹುದು.

ಕಣ್ಣುಗಳನ್ನು ಉಜ್ಜುವುದು

ಕಣ್ಣುಗಳನ್ನು ಉಜ್ಜುವುದು

ಬೆಳಿಗ್ಗೆ ಎದ್ದ ಕೂಡಲೇ ಕಣ್ಣುಗಳನ್ನು ಉಜ್ಜಿಕೊಳ್ಳುವುದು ಅಥವಾ ಏನಾದರೂ ಕಸ ಬಿದ್ದಿದೆಯೆಂದು ಕಣ್ಣುಗಳನ್ನು ಉಜ್ಜಿಕೊಳ್ಳುವುದರಿಂದ ಕಣ್ಣಿನಲ್ಲಿ ಗೆರೆಗಳು ಬಿದ್ದು ದೃಷ್ಟಿ ಹಾನಿ ಸಂಭವಿಸಬಹುದು. ಕಣ್ಣಿನ ಸೋಂಕು ಕೂಡ ಬರಬಹುದು.

ಇಡೀ ದಿನ ಕಂಪ್ಯೂಟರ್ ಮುಂದೆ ಕುಳಿತಿರುವುದು

ಇಡೀ ದಿನ ಕಂಪ್ಯೂಟರ್ ಮುಂದೆ ಕುಳಿತಿರುವುದು

ಇಂದಿನ ದಿನಗಳಲ್ಲಿ ಕಂಪ್ಯೂಟರ್ ನಲ್ಲಿ ಕೆಲಸ ಮಾಡುವುದು ಅತೀ ಅಗತ್ಯವಾಗಿದೆ. ಆದರೆ ಇಡೀ ದಿನ ಕಂಪ್ಯೂಟರ್ ನಲ್ಲಿ ಕೆಲಸ ಮಾಡುವುದರಿಂದ ಕಣ್ಣುಗಳಿಗೆ ಆಯಾಸವಾಗಿ ಒಣಗಬಹುದು. ಕಣ್ಣುಗಳಿಂದ 15-20 ಇಂಚು ದೂರದಲ್ಲಿ ಕಂಪ್ಯೂಟರ್ ಇರಲಿ. ಆಗಾಗ ಎದ್ದು ಹೋಗಿ ಹೊರಗಿನ ವಾತಾವರಣ ನೋಡಿಕೊಂಡು ಬನ್ನಿ. ಅದರಲ್ಲೂ ಹಸಿರು ಗಿಡಗಳನ್ನು ನೋಡಿದರೆ ಒಳ್ಳೆಯದು.

ನಿದ್ರಾಹೀನತೆ

ನಿದ್ರಾಹೀನತೆ

ಕಣ್ಣುಗಳಿಗೆ ವಿಶ್ರಾಂತಿ ಸಿಗಬೇಕೆಂದರೆ ನಮಗೆ ಸರಿಯಾಗಿ ನಿದ್ರೆ ಬರಬೇಕು. ನಿದ್ರಾ ಹೀನತೆಯಿಂದ ಕಣ್ಣುಗಳು ಕೆಂಪಗೆ ಆಗಬಹುದು. ಕಿರಿಕಿರಿಯಾಗಬಹುದು ಮತ್ತು ಕಣ್ಣುಗಳು ಒಣಗಿ ದೃಷ್ಟಿ ಕೂಡ ಮಂದವಾಗಬಹುದು. ನಿದ್ರಾಹೀನತೆ ಸಮಸ್ಯೆ ನಿವಾರಿಸುವ ಮನೆಮದ್ದು!

ನೀರು ಕುಡಿಯದೆ ಇರುವುದು

ನೀರು ಕುಡಿಯದೆ ಇರುವುದು

ಸರಿಯಾಗಿ ನೀರು ಕುಡಿಯದೇ ಇದ್ದರೆ ಆಗ ಕಣ್ಣುಗಳಿಗೆ ತೇವಾಂಶ ಸಿಗುವುದಿಲ್ಲ ಮತ್ತು ನೀರು ಲಭ್ಯವಾಗುವುದಿಲ್ಲ. ಇದರಿಂದ ದಿನದಲ್ಲಿ ಎಂಟು ಲೋಟ ನೀರು ಕುಡಿಯುವುದನ್ನು ಮರೆಯಬೇಡಿ.

 
English summary

Things you do every day that ruin your eyes

You take care not to fiddle with your phone before bed and resolve to eat leafy greens every day for healthy eyes. But there are several other things you need to keep in mind to protect your eyes. According to health experts these daily habits can secretly ruin the health of your eyes.
Story first published: Wednesday, September 21, 2016, 7:08 [IST]
Subscribe Newsletter