ಒಂದೇ ತಿಂಗಳಿನಲ್ಲಿ ಅಸ್ತಮಾವನ್ನು ನಿವಾರಿಸುವ ಮನೆಮದ್ದುಗಳು

By: Hemanth
Subscribe to Boldsky

ಪ್ರತಿಯೊಂದು ರೋಗಗಳು ನಾವು ತಿನ್ನುವ ಆಹಾರ ಮತ್ತು ವಾಸಿಸುವ ಪ್ರದೇಶಕ್ಕೆ ಅನುಗುಣವಾಗಿ ಬರುತ್ತದೆ. ಕೆಲವೊಂದು ಕಾಯಿಲೆಗಳು ಋತುಮಾನಕ್ಕೆ ತಕ್ಕಂತೆ ಬಂದರೆ ಬೇರೆ ಋತು ಕಾಲಿಡುತ್ತಿದ್ದಂತೆ ಕಾಯಿಲೆಯು ದೂರ ಹೋಗುತ್ತದೆ. ಅದರಲ್ಲಿ ಪ್ರಮುಖವಾಗಿ ಅಸ್ತಮಾ ರೋಗಿಗಳಿಗೆ ಪ್ರತಿಯೊಂದು ಋತುವಿನಲ್ಲೂ ಈ ರೋಗವು ಕಾಡಿದರೂ ಚಳಿಗಾಲದಲ್ಲಿ ಇದು ಅತಿಯಾಗಿ ಕಾಡುತ್ತದೆ.

ಇದರಿಂದಾಗಿಯೇ ಚಳಿಗಾಲದಲ್ಲಿ ಅಸ್ತಮಾ ಇರುವವರು ಎಚ್ಚರಿಕೆ ವಹಿಸಬೇಕು ಎಂದು ಹೇಳಲಾಗುತ್ತದೆ. ಉಸಿರಾಟದ ವ್ಯವಸ್ಥೆಯಲ್ಲಿ ಆಗುವಂತಹ ತೊಂದರೆಯನ್ನು ಅಸ್ತಮಾ ಎನ್ನಬಹುದು. ಉಸಿರಾಟದ ವ್ಯವಸ್ಥೆಯಲ್ಲಿ ಉರಿಯೂತ ಮತ್ತು ಅತಿಯಾದ ಕಫ ಶೇಖರಣೆಯಿಂದಾಗಿ ಹೀಗೆ ಆಗುತ್ತದೆ.    ಅಸ್ತಮಾ ನಿವಾರಿಸುವ ಮನೆಮದ್ದನ್ನು ನೀವೂ ಟ್ರೈ ಮಾಡಿ

12 ಮಂದಿಯಲ್ಲಿ ಒಬ್ಬರಿಗೆ ಅಸ್ತಮಾದ ಸಮಸ್ಯೆಯಿದೆ ಎಂದು ಅಧ್ಯಯನಗಳು ಹೇಳುತ್ತವೆ. ಅದರಲ್ಲೂ ಅಸ್ತಮಾಘಾತಕ್ಕೆ ಒಳಗಾದರೆ ಆ ರೋಗಿಗೆ ಉಸಿರಾಡಲು ತುಂಬಾ ಸಮಸ್ಯೆಯಾಗುತ್ತದೆ. ಅಸ್ತಮಾ ರೋಗಿಗಳಿಗೆ ದೈನಂದಿನ ಚಟುವಟಿಕೆಗಳನ್ನು ಮಾಡಿಕೊಳ್ಳಲು ಕಷ್ಟವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು.   ಯೋಗ ಟಿಪ್ಸ್: ಅಸ್ತಮಾ ವಿರುದ್ಧ ಹೋರಾಡಲು 'ಪಾಶಾಸನ'

ಇಂತಹ ಸಮಯದಲ್ಲಿ ಮೆಟ್ಟಿಲು ಹತ್ತುವುದು, ವ್ಯಾಯಮ ಮಾಡುವುದು ಮತ್ತು ಯಾವುದೇ ಆಟವಾಡುವುದು ಕಷ್ಟಸಾಧ್ಯವಾಗಬಹುದು. ಒಣ ಕೆಮ್ಮು, ಉಸಿರಾಟದ ಸೋಂಕು, ಎದೆ ಬಿಗಿಯಾಗುವುದು, ಉಸಿರಾಡಲು ಕಷ್ಟವಾಗುವುದು, ಗಂಟಲು ನೋವು ಮೊದಲಾದವುಗಳು ಅಸ್ತಮಾದ ಲಕ್ಷಣಗಳಾಗಿವೆ. ಅಸ್ತಮಾಗೆ ಇರುವ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡು ಅದನ್ನು ನಿಯಂತ್ರಿಸಲು ಪ್ರಯತ್ನಿಸಿ...

ಆವಕಾಡೊ (ಬೆಣ್ಣೆ ಹಣ್ಣು)

ಆವಕಾಡೊ (ಬೆಣ್ಣೆ ಹಣ್ಣು)

ಅಸ್ತಮಾ ರೋಗಿಗಳಿಗೆ ಉಸಿರಾಟ ವ್ಯವಸ್ಥೆಯಲ್ಲಿ ಉರಿಯೂತ ಉಂಟಾಗುತ್ತದೆ. ಇಂತಹ ಸಮಸ್ಯೆ ನಿವಾರಣೆಗೆ ಆವಕಾಡೊ ಒಳ್ಳೆಯ ಹಣ್ಣು. ಆವಕಾಡೊನಲ್ಲಿರುವ ಆ್ಯಂಟಿಆಕ್ಸಿಡೆಂಟ್ ಮತ್ತು ಗ್ಲುಟಾಥಿಯೊನ್ ಎನ್ನುವ ಅಂಶಗಳು ಉಸಿರಾಟವನ್ನು ಸರಾಗಗೊಳಿಸಲು ನೆರವಾಗುವುದು.

ಬಾಳೆಹಣ್ಣು

ಬಾಳೆಹಣ್ಣು

ಹೆಚ್ಚಾಗಿ ಅಸ್ತಮಾ ರೋಗಿಗಳು ಬಾಳೆಹಣ್ಣು ತಿನ್ನಬಾರದು ಎನ್ನುವ ನಂಬಿಕೆಯಿದೆ. ಆದರೆ ದೇಹದಲ್ಲಿ ಪೊಟಾಶಿಯಂ ಕಡಿಮೆ ಆಗಿರುವುದು ಕೂಡ ಅಸ್ತಮಾಗೆ ಕಾರಣವಾಗಬಹುದು. ಬಾಳೆಹಣ್ಣಿನಲ್ಲಿ ಪೊಟಾಶಿಯಂ ಸಮೃದ್ಧವಾಗಿರುವ ಕಾರಣದಿಂದ ಇದು ಅಸ್ತಮಾವನ್ನು ನಿವಾರಣೆ ಮಾಡುವುದು.

ಶುಂಠಿ

ಶುಂಠಿ

ಶುಂಠಿಯಲ್ಲಿ ಹೆಚ್ಚಿನ ಮಟ್ಟದ ಉರಿಯೂತ ಶಮನಕಾರಿ ಗುಣಗಳು ಇವೆ. ಇದು ಉಸಿರಾಟದ ವ್ಯವಸ್ಥೆಯ ಉರಿಯೂತ ನಿವಾರಣೆ ಮಾಡುತ್ತದೆ. ಇದರಿಂದ ಅಸ್ತಮಾದ ಲಕ್ಷಣಗಳು ಕಡಿಮೆಯಾಗುವುದು.

ಅರಿಶಿನ

ಅರಿಶಿನ

ಇದು ಅಡುಗೆ ಕೋಣೆಯಲ್ಲಿರುವ ಮತ್ತೊಂದು ಉರಿಯೂತ ಶಮನಕಾರಿ ಸಾಂಬಾರ ಪದಾರ್ಥ. ಅರಶಿನವು ಉಸಿರಾಟದ ವ್ಯವಸ್ಥೆಯ ಸ್ನಾಯುಗಳನ್ನು ಸರಾಗವಾಗಿಸಿ ಅತಿಯಾಗಿ ಶೇಖರಣೆಯಾಗಿರುವ ಕಫವನ್ನು ಹೊರಹಾಕುತ್ತದೆ.

ಸೇಬು

ಸೇಬು

ಅಸ್ತಮಾ ರೋಗಿಗಳು ಸೇಬು ತಿಂದರೆ ಅದರಲ್ಲಿನ ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ದೇಹದಲ್ಲಿರುವ ವಿಷವನ್ನು ಹೊರಹಾಕುತ್ತದೆ. ಇದರಿಂದ ಅಸ್ತಮಾ ಹೆಚ್ಚಾಗುವುದು ತಪ್ಪುತ್ತದೆ.

ಜೇನು

ಜೇನು

ಜೇನುತುಪ್ಪದಲ್ಲಿ ಉತ್ತಮ ಮಟ್ಟದ ಉರಿಯೂತ ಶಮನಕಾರಿ ಗುಣಗಳು ಇವೆ. ಅಸ್ತಮಾದಿಂದ ಬರುವಂತಹ ಸೋಂಕು ಮತ್ತು ಅಲರ್ಜಿಯನ್ನು ಇದು ನಿವಾರಣೆ ಮಾಡುತ್ತದೆ.

 
English summary

These Natural Ingredients Can Reduce Asthma In A Month!

Did you know that about 1 in 12 people today, suffer from asthma? Asthma is a disorder in which a person's respiratory tract becomes inflamed and is clogged by the excess mucous produced, making breathing extremely difficult. Asthma is a serious respiratory ailment which may seem simple, but can actually be fatal, if the affected person suffers from an 'asthma attack'
Subscribe Newsletter