For Quick Alerts
ALLOW NOTIFICATIONS  
For Daily Alerts

ಮುಟ್ಟಿನ ದಿನಗಳಲ್ಲಿ ಸೇವಿಸುವ ಆಹಾರ ಕ್ರಮ ಹೀಗಿರಲಿ....

By Arshad
|

ಹೆಚ್ಚಿನ ಮಹಿಳೆಯರಿಗೆ ಮಾಸಿಕ ದಿನಗಳೆಂದರೆ ಕೇವಲ ನೋವಿನ ದಿನಗಳು ಮಾತ್ರವಲ್ಲ, ಮಾನಸಿಕವಾಗಿಯೂ ಹಲವಾರು ಕಿರಿಕಿರಿಗಳ ದಿನಗಳಾಗಿರುತ್ತವೆ. ಈ ದಿನಗಳೇ ಏಕಪ್ಪಾ ಬರುತ್ತವೆ ಎನ್ನುವಂತಾಗುತ್ತವೆ. ಆದರೆ ಇದು ನಿಸರ್ಗನಿಯಮವಾಗಿದ್ದು ನೋವು ಕೊಡುವ ನಿಸರ್ಗವೇ ಇದರ ಪರಿಹಾರವನ್ನೂ ಒದಗಿಸಿದೆ. ಈ ಸಮಯದಲ್ಲಿ ಕೆಲವು ಆಹಾರಗಳನ್ನು ಸೇವಿಸುವ ಮೂಲಕ ನೋವು ಕಡಿಮೆಯಾಗುವ ಜೊತೆಗೇ ಮಾನಸಿಕ ಕಿರಿಕಿರಿಯನ್ನು ಎದುರಿಸಿ ಸ್ಥಿಮಿತ ಕಾಯ್ದುಕೊಳ್ಳಲೂ ಸಾಧ್ಯವಾಗುತ್ತದೆ.

ಹದಿಹರೆಯದಿಂದ ಪ್ರಾರಂಭವಾಗುವ ಈ ದಿನಗಳು ರಜೋನಿವೃತ್ತಿಯವರೆಗೂ ಪ್ರತಿತಿಂಗಳೂ ಸಂಭವಿಸುವುದು ನೈಸರ್ಗಿಕ. ಈ ನಡುವೆ ಗರ್ಭಾಂಕುರವಾದರೆ ಮುಂದಿನ ಒಂಬತ್ತು ಗರ್ಭಾವಸ್ಥೆಯಾಗುತ್ತದೆ. ಆ ಬಳಿಕ ಈ ಕ್ರಿಯೆ ಮುಂದುವರೆಯಬೇಕು. ಪ್ರತಿ ತಿಂಗಳ ಸುಮಾರು ಮೂರರಿಂದ ಐದು ದಿನಗಳ ಕಾಲ ಹೊಟ್ಟೆಯಲ್ಲಿ ನೋವು ಮತ್ತು ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ. ಇಡಿಯ ತಿಂಗಳು ಮಿಲನಕ್ಕಾಗಿ ಕಾದ ಅಂಡಾಣುವನ್ನು ವಿಸರ್ಜಿಸಿ ಹೊಸ ಅಂಡಾಣುವನ್ನು ಬಿಡುಗಡೆಗೊಳಿಸುವ ಕ್ರಿಯೆ ಈ ಅವಧಿಯಲ್ಲಿ ನಡೆಯುತ್ತದೆ. ಅನಿಯಮಿತ ಮುಟ್ಟಿನ ಸಮಸ್ಯೆಗಳನ್ನು ನಿವಾರಿಸುವುದು ಹೇಗೆ?

ಹಿಂದಿನ ದಿನಗಳಲ್ಲಿ ಈ ಅವಧಿಯಲ್ಲಿ ಮನೆಯ ಹೊರಗೆ ಅಥವಾ ಪ್ರತ್ಯೇಕವಾದ ಕೋಣೆಯೊಂದರಲ್ಲಿ ವಿಶ್ರಾಂತಿ ಪಡೆಯಲು ಬಿಡುತ್ತಿದ್ದರು. ಇದೇ ಕಾರಣಕ್ಕೆ ಈ ನೈಸರ್ಗಿಕ ಕ್ರಿಯೆಗೆ 'ಹೊರಗಾಗುವುದು' ಎಂಬ ಹೆಸರೂ ಇದೆ. ಆದರೆ ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಒಂದೊಂದು ಕ್ಷಣವೂ ಅಮೂಲ್ಯವಾಗಿರುವಾಗ ನಾಲ್ಕಾರು ದಿನ ಸುಮ್ಮನೇ ಕುಳಿತಿರುವುದು ಇಂದಿನ ಯುವತಿಯರಿಗೆ ಹೇಳಿಸದ ಮಾತು. ಯಮಯಾತನೆ ನೀಡುವ ಮುಟ್ಟಿನ ನೋವಿಗೆ ಪರಿಹಾರವೇನು?

ಆದರೆ ಈ ಅವಧಿಯಲ್ಲಿ ಕೆಲವು ಆಹಾರಗಳನ್ನು ಸೇವಿಸುವ ಮೂಲಕ ನೈಸರ್ಗಿಕ ಕ್ರಿಯೆಯ ಪರಿಣಾಮಗಳನ್ನು ಸುಲಭವಾಗಿ ಎದುರಿಸಲು ದೇಹವನ್ನು ಸಜ್ಜುಗೊಳಿಸಬಹುದು. ಬನ್ನಿ, ಈ ಆಹಾರಗಳು ಯಾವುವು ಎಂಬುದನ್ನು ಮುಂದೆ ಓದಿ....

ಹಾಲು

ಹಾಲು

ಹಲವು ಬಗೆಯ ಪೋಷಕಾಂಶಗಳಿಂದ ಕೂಡಿರುವ ಹಾಲು ಮಾಸಿಕ ದಿನಗಳಲ್ಲಿ ಸೇವಿಸಲು ಅತ್ಯುತ್ತಮ ಆಹಾರವಾಗಿದೆ. ಇದರಲ್ಲಿರುವ ಕ್ಯಾಲ್ಸಿಯಂ ಹಾಗೂ ಇತರ ಪೋಶಕಾಂಶಗಳು ಕಳೆದುಕೊಂಡ ರಕ್ತವನ್ನು ಮತ್ತೆ ನವೀಕರಿಸಲು ನೆರವಾಗುತ್ತವೆ.

ಬಾದಾಮಿ

ಬಾದಾಮಿ

ಮಾಸಿಕ ದಿನಗಳಲ್ಲಿ ವಿಟಮಿನ್ ಇ ಅತಿ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶವಾಗಿದೆ. ಬಾದಾಮಿಯಲಿ ಇದು ಹೇರಳವಾಗಿದ್ದು ಕೆಳಹೊಟ್ಟೆಯ ಉಬ್ಬರಿಕೆ ಮತ್ತು ನೋವನ್ನು ಕಡಿಮೆಗೊಳಿಸಲು ಬಹಳ ಹೆಚ್ಚಿನ ನೆರವು ನೀಡುತ್ತದೆ.

ಹಸಿರು ಸೊಪ್ಪುಗಳು

ಹಸಿರು ಸೊಪ್ಪುಗಳು

ಈ ಅವಧಿಯಲ್ಲಿ ಹಸಿರು ಮತ್ತು ದಪ್ಪನೆಯ ಎಲೆಗಳಿರುವ ಸೊಪ್ಪುಗಳನ್ನು ತಿನ್ನುವುದು ಅಗತ್ಯ. ವಿಶೇಷವಾಗಿ ಬಸಲೆ ಸೊಪ್ಪು ಮತ್ತು ಪಾಲಕ್. ಇವುಗಳಲ್ಲಿ ಅತ್ಯಧಿಕ ಪ್ರಮಾಣದ ಕಬ್ಬಿಣದ ಅಂಶವಿದ್ದು ರಕ್ತದ ಉತ್ಪಾದನೆಗೆ ನೆರವು ನೀಡುತ್ತದೆ. ಹೆಚ್ಚಿನ ಕಬ್ಬಿಣ ಸಿಗುವ ಮೂಲಕ ಉರಿಯೂತ ಮತ್ತು ನೋವನ್ನು ಕಡಿಮೆಯಾಗಿಸುತ್ತದೆ.

ಸೇಬುಹಣ್ಣು

ಸೇಬುಹಣ್ಣು

ದಿನಕ್ಕೊಂದು ಸೇಬು ಮಾಸಿಕ ನೋವನ್ನೂ ದೂರವಿರಿಸಬಲ್ಲುದು. ಇದರಲ್ಲಿ ಉತ್ತಮ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ಕರಗುವ ನಾರು ವಿಶೇಷವಾಗಿ ಮಲಬದ್ದತೆಯಾಗದಂತೆ ತಡೆದು ಮಾಸಿಕ ದಿನಗಳಲ್ಲಿ ಕನಿಷ್ಟ ನೋವಾಗುವಲ್ಲಿ ಸಹಕರಿಸುತ್ತದೆ.

ಕಪ್ಪು ಚಾಕಲೇಟು

ಕಪ್ಪು ಚಾಕಲೇಟು

ಕಪ್ಪು ಚಾಕಲೇಟಿನಲ್ಲಿಯೂ ಆಂಟಿ ಆಕ್ಸಿಡೆಂಟುಗಳು ಹೇರಳವಾಗಿದ್ದು ಮಾಸಿಕ ದಿನಗಳ ಉರಿಯೂತ, ನೋವು ಮತ್ತು ಸಂಕಟವನ್ನು ನಿವಾರಿಸಲು ನೆರವಾಗುತ್ತದೆ. ಅಲ್ಲದೇ ಈ ಪೋಷಕಾಂಶಗಳು ಅತಿ ಕಡಿಮೆ ಸಮಯದಲ್ಲಿ ರಕ್ತದಲ್ಲಿ ಹೀರಲ್ಪಡುವ ಕಾರಣ ನೋವನ್ನು ತಕ್ಷಣವೇ ಕಡಿಮೆಗೊಳಿಸಲು ಸಾಧ್ಯವಾಗುತ್ತದೆ. ಆದ್ದರಿಂದ ನೋವು ಕಾಣಿಸಿಕೊಳ್ಳುವಂತೆ ಅನ್ನಿಸುತ್ತಿದ್ದಾಗಲೇ ಕೊಂಚ ಕಪ್ಪು ಚಾಕಲೇಟು ತಿಂದರೆ ನೋವು ವಿಪರೀತವಾಗುವುದಿಲ್ಲ.

ಬಾಳೆಹಣ್ಣು

ಬಾಳೆಹಣ್ಣು

ಮಾಸಿಕ ದಿನಗಳಲ್ಲಿ ತಿನ್ನಲೇಬೇಕಾದ ಇನ್ನೊಂದು ಆಹಾರವೆಂದರೆ ಬಾಳೆಹಣ್ಣು. ಇದರಲ್ಲಿ ಹೆಚ್ಚಿನ ಪ್ರಮಾಣದ ಮೆಗ್ನೀಶಿಯಂ ಇದ್ದು ಕೆಳಹೊಟ್ಟೆಯ ನೋವು ಮತ್ತು ಸೆಡೆತಗಳಿಂದ ರಕ್ಷಿಸುತ್ತದೆ. ಅಲ್ಲದೇ ಇದರಲ್ಲಿರುವ ಕರಗದ ನಾರು ಮಲಬದ್ದತೆಯಾಗದಂತೆ ಸಹಕರಿಸುತ್ತದೆ. ವಿಶೇಷವಾಗಿ ಮಾಸಿಕ ದಿನಗಳಲ್ಲಿ ಮನೋಭಾವನೆ ಏರುಪೇರಾಗದಿರಲು ಬಾಳೆಹಣ್ಣಿನ ಸೇವನೆ ಉತ್ತಮವಾಗಿದೆ.

ಅಗಸೆ ಬೀಜಗಳು

ಅಗಸೆ ಬೀಜಗಳು

ಅಗಸೆ ಬೀಜ (Flax Seeds) ಸಹಾ ಮಾಸಿಕ ದಿನಗಳಲ್ಲಿ ಸೇವಿಸಲು ಯೋಗ್ಯವಾದ ಆಹಾರವಾಗಿದೆ. ಇದರಲ್ಲಿ ಉತ್ತಮ ಪ್ರಮಾಣದ ಒಮೆಗಾ 3 ಕೊಬ್ಬಿನ ಆಮ್ಲವಿದ್ದು ಕೆಳಹೊಟ್ಟೆಯ ನೋವನ್ನು ಕಡಿಮೆ ಮಾಡುವ ಕ್ಷಮತೆ ಹೊಂದಿದೆ.

English summary

These Foods Will Make Your Periods Much Easier To Handle!

Every month, for at least 4-5 days, a woman experiences bleeding from her vagina that is caused by the shedding of the uterine wall, if the woman does not become pregnant. So, it is always best to try natural remedies to ease menstrual pain and also consume certain foods during periods that can help reduce pain and other symptoms. Have a look at the list of foods to eat during periods to help you deal with it much better.
Story first published: Tuesday, October 11, 2016, 12:05 [IST]
X
Desktop Bottom Promotion