For Quick Alerts
ALLOW NOTIFICATIONS  
For Daily Alerts

ಟೀ ಕಾಫಿ ಸೇವನೆ ಅತಿಯಾದರೆ, ಅಪಾಯ ಬೆನ್ನೇರಿ ಕಾಡಲಿದೆ!

By Arshad
|

ಇಂದು ಕಾಫಿ ಮತ್ತು ಟೀ ನಮ್ಮೆಲ್ಲರ ನಿತ್ಯದ ಒಂದು ಅಗತ್ಯವೇ ಆಗಿಬಿಟ್ಟಿವೆ. ಪ್ರತಿಯೊಬ್ಬರೂ ದಿನಕ್ಕೆ ಎರಡು ಮೂರು ಕಪ್ ಟೀ ಅಥವಾ ಕಾಫಿ ಕುಡಿಯುತ್ತೇವೆ. ಇದರಿಂದ ಆರೋಗ್ಯಕ್ಕೇನೂ ತೊಂದರೆ ಇಲ್ಲ, ಬದಲಿಗೆ ಒಳ್ಳೆಯದೇ ಎಂದು ನಾವೆಲ್ಲಾ ಭಾವಿಸಿದ್ದೇವೆ. ವಾಸ್ತವವಾಗಿ ನಿಯಮಿತ ಪ್ರಮಾಣದಲ್ಲಿ ಕುಡಿಯುವ ಟೀ ಆರೋಗ್ಯಕ್ಕೂ ಒಳ್ಳೆಯದು, ಇದನ್ನು ವಿಜ್ಞಾನ ಸಹಾ ಪುರಸ್ಕರಿಸುತ್ತದೆ. ಆದರೆ ಒಂದು ವೇಳೆ ಇದರ ಅಭ್ಯಾಸ ವ್ಯಸನದ ರೂಪ ಪಡೆದುಕೊಂಡು ಬಿಟ್ಟರೆ ಮಾತ್ರ ಆರೋಗ್ಯಕ್ಕೆ ಮಾರಕವಾಗಿದೆ.

Tea And Coffee Addiction: How Your Body Reacts To It

ಹಾಗಾದರೆ ಎಷ್ಟು ಕಪ್ ವ್ಯಸನಕಾರಿಯಾಗಿದೆ ಎಂಬ ಪ್ರಶ್ನೆಗೆ ತಜ್ಞರು ಒಂದು ದಿನಕ್ಕೆ ಐದ್ ಕಪ್ ಟೀ ಅಥವಾ ಕಾಫಿ ಕುಡಿದರೆ ವ್ಯಸನಕಾರಿಯಾಗಿದೆ, ಹಾಗಾಗಿ ದಿನಕ್ಕೆ ಮೂರು ಕಪ್ ಮೀರದಂತಿದ್ದರೆ, ಮತ್ತು ಅಪರೂಪಕ್ಕೆ ಐದ್ ಕಪ್ ವರೆಗೂ ಸೇವನೆಯ ಮಿತಿ ಇದ್ದರೆ ಆರೋಗ್ಯಕರ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಖಾಲಿ ಹೊಟ್ಟೆಯಲ್ಲಿ ಚಹಾ ಸೇವನೆ-ಅಪಾಯ ಬೆನ್ನೇರಿ ಕಾಡಲಿದೆ!

ಕಾಫಿಯಲ್ಲಿರುವ ಕೆಫೀನ್ ಒಂದು ಔಷಧೀಯ ಸಾಮಾಗ್ರಿಯಾಗಿದ್ದು ಇದರ ಸೇವನೆಯಿಂದ ಕೆಲವು ಪ್ರಚೋದನೆಗಳು ದೊರಕುತ್ತವೆ. ವಿಶೇಷವಾಗಿ ನರವ್ಯವಸ್ಥೆಗೆ ದೊರಕುವ ಪ್ರಚೋದನೆಯ ಕಾರಣ ರಕ್ತಸಂಚಾರ ಹೆಚ್ಚಲು ಮತ್ತು ತನ್ಮೂಲಕ ನಿತ್ಯದ ಕೆಲಸಗಳಲ್ಲಿ ತಾಜಾತನ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಗುಣವನ್ನು ಪಡೆಯಲೆಂದೇ ಹಲವು ಔಷಧಿಗಳಲ್ಲಿ ಕೆಫೀನ್ ಅನ್ನು ಸೇರಿಸಿರಲಾಗುತ್ತದೆ.

Tea And Coffee Addiction: How Your Body Reacts To It

ಇದರಿಂದ ಕೆಲಸದಲ್ಲಿ ಹೆಚ್ಚುವ ದಕ್ಷತೆ, ಮಾನಸಿಕ ಏಕಾಗ್ರತೆ, ಸಡಿಲಗೊಳ್ಳುವ ಸ್ನಾಯುಗಳು, ಉತ್ತಮಗೊಳ್ಳುವ ಜೀರ್ಣಕ್ರಿಯೆ ಮತ್ತು ಜೀವರಾಸಾಯನಿಕ ಕ್ರಿಯೆ ಹಾಗೂ ಇಲ್ಲವಾಗುವ ಮೆದುಳಿನ ಒತ್ತಡ ಮತ್ತು ತಲೆನೋವು ಕಾಫಿ ಮತ್ತು ಟೀ ಗಳನ್ನು ಹೆಚ್ಚು ಜನಪ್ರಿಯವಾಗಿಸಲು ಕಾರಣವಾಗಿವೆ. ಬಿಸಿಬಿಸಿ ಟೀ ಕಾಫಿ ಕುಡಿಯುವುದರಿಂದ ಶ್ವಾಸಕೋಶದ ನಾಳಗಳೂ ಕೊಂಚ ವಿಸ್ತಾರಗೊಳ್ಳುವ ಮೂಲಕ ಅಸ್ತಮಾ ತೊಂದರೆಗೂ ಸಾಕಷ್ಟು ಉಪಶಮನ ದೊರಕುತ್ತದೆ. ಅದ್ಭುತ ಗುಣದ ಈ 12 ಬಗೆಯ ಟೀ ಟೇಸ್ಟ್ ಮಾಡಿರುವಿರಾ?

ಆದರೆ ಯಾವಾಗ ಟೀ ಕಾಫಿಯ ಪ್ರಮಾಣ ನಿಗದಿತ ಪ್ರಮಾಣ ಮೀರಿತೋ ಆಗ ಈ ಗುಣಗಳೆಲ್ಲಾ ಮಾಯವಾಗಿ ಬೇರೆಯೇ ರೀತಿಯಲ್ಲಿ ದೇಹವನ್ನು ಸುಡಲು ತೊಡಗುತ್ತವೆ. ವಿಶೇಷವಾಗಿ ಹೆಚ್ಚಿನ ಟೀ ಕಾಫಿ ಸೇವನೆಯಿಂದ ಅತಿಹೆಚ್ಚು ಕೆಫೀನ್ ಲಭ್ಯವಾಗುವುದರಿಂದ ಅನಗತ್ಯ ಪ್ರಮಾಣವನ್ನು ಹೊರಹಾಕಲು ದೇಹ ವಿಪರೀತವಾಗಿ ಕಷ್ಟಪಡಬೇಕಾಗುತ್ತದೆ ಇದಕ್ಕಾಗಿ ಹತ್ತಾರು ಬಾರಿ ಮೂತ್ರ ವಿಸರ್ಜನೆಗೆ ಅವಸರಿಸುತ್ತದೆ. ಇದಕ್ಕಾಗಿ ಹೃದಯದ ಬಡಿತ ಮತ್ತು ರಕ್ತದೊತ್ತಡವನ್ನೂ ಹೆಚ್ಚಿಸಬೇಕಾಗುತ್ತದೆ.

Tea And Coffee Addiction: How Your Body Reacts To It

ಒಮ್ಮೆ ದೇಹಕ್ಕೆ ಈ ಪರಿ ಅಭ್ಯಾಸವಾಯಿಯೋ, ಇದನ್ನೇ ಮತ್ತೆ ಮತ್ತೆ ಬಯಸುತ್ತದೆ. ಮಾದಕ ಪದಾರ್ಥಗಳ ವ್ಯಸನಗಳಿಗೆ ಆಗುವುದೇ ಇದು. ಯಾವ ಸಮಯದಲ್ಲಿ ರಕ್ತಕ್ಕೆ ಈ ಅಮಲು ಸಿಗದೇ ಹೋಯಿತೋ, ಆಗ ಇದು ಸಿಗದೇ ಇದ್ದರೆ ಸತ್ತೇ ಹೋಗುವೆ ಎಂಬಂತೆ ಮೆದುಳು ವರ್ತಿಸತೊಡಗುತ್ತದೆ. ಕಾಫಿ ಟೀ ಸಹಾ ಹೀಗೇ, ವ್ಯಸನಕ್ಕೆ ವಾಲಿದ ದೇಹಕ್ಕೆ ಕಾಫಿ ಟೀ ಇಲ್ಲದೇ ಇದ್ದರೆ ಹಲವು ತೊಂದರೆಗಳು ಎದುರಾಗುತ್ತವೆ.

ಇವುಗಳಲ್ಲಿ ಪ್ರಮುಖವಾದವು ಎಂದರೆ ಅತಿಯಾದ ತಲೆನೋವು, ಸುಸ್ತು, ತಮ್ಮ ನಡವಳಿಕೆಗಳಲ್ಲಿ ಕಿರಿಕಿರಿ, ಅಸಮಾಧಾನ, ಚಡಪಡಿಕೆ ಇತ್ಯಾದಿ ತೋರುವುದು, ವಾಂತಿ ಬಂದಂತಾಗುವುದು, ಟೀ ಕಾಫಿ ಅರಸಿಕೊಂಡು ಹೋಗುವ ಭರದಲ್ಲಿ ತಮ್ಮ ಕರ್ತವ್ಯವನ್ನು ಮರೆಯುವುದು ಇತ್ಯಾದಿ ಎದುರಾಗುತ್ತವೆ. ಬೆಳಗಿನ ಜಾವ ಸೇವಿಸಿ- ಬಿಸಿ ಬಿಸಿಯಾದ ಬೆಣ್ಣೆ ಕಾಫಿ!

Tea And Coffee Addiction: How Your Body Reacts To It

ಕಾಫಿಯಲ್ಲಿ ಕೆಫೀನ್ ಹೊರತಾಗಿ ಕೆಲವು ಆಮ್ಲೀಯ ರಾಸಾಯನಿಕಗಳೂ ಇವೆ. ಹೊಟ್ಟೆಯಲ್ಲಿ ಹುಣ್ಣು ಅಥವಾ ಜೀರ್ಣಕ್ರಿಯೆ ಸೂಕ್ಷ್ಮಸಂವೇದಿಯಾಗಿರುವವರಿಗೆ ಈ ಆಮ್ಲೀಯತೆ ಭಾರಿಯಾಗಿ ಪರಿಣಮಿಸಬಲ್ಲುದು. ಇಂತಹವರು ತಮ್ಮ ಕಾಫಿ ಟೀ ಸೇವನೆಯನ್ನು ಅತಿ ಕಡಿಮೆ ಪ್ರಮಾಣದಲ್ಲಿ ಮತ್ತು ಹೆಚ್ಚಿನ ಅಂತರವಿರುವಂತೆ ನೋಡಿಕೊಳ್ಳಬೇಕು.

ಒಂದು ಎಚ್ಚರಿಕೆಯ ಮಾತು ಏನೆಂದರೆ ಎಂದಿಗೂ ಕಿತ್ತಳೆ ರಸ ಮತ್ತು ಕಾಫಿ ಟೀ ಜೊತೆಯಾಗಿ ಸೇವಿಸಕೂಡದು. ಅದರಲ್ಲೂ ವಿಶೇಷವಾಗಿ ಬೆಳಗ್ಗಿನ ಉಪಾಹಾರದ ಸಮಯದಲ್ಲಿ ಇವೆರಡನ್ನೂ ಒಟ್ಟಿಗೆ ಸೇವಿಸಿದರೆ ಹೊಟ್ಟೆಗೆ ಅಪಾಯ ಕಟ್ಟಿಟ್ಟ ಬುತ್ತಿ. ಮಗುವಿಗೂ ಟೀ ಕುಡಿಸುತ್ತಿದ್ದಿರಾ? ಹಾಗಾದರೆ ಇಂದೇ ನಿಲ್ಲಿಸಿ!

English summary

Tea And Coffee Addiction: How Your Body Reacts To It

If you are a tea or coffee drinker and you drink two to three cups of tea or coffee each day then you must not worry about it being harmful to the body. In fact, tea and coffee have been proved to be beneficial for the body in many ways. It can only harm your body when you become an addict and consume more than five cups of tea and coffee a day.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more