For Quick Alerts
ALLOW NOTIFICATIONS  
For Daily Alerts

ಸರ್ವಗುಣ ಸಂಪನ್ನ 'ಬಾದಾಮಿ ಎಣ್ಣೆಯ' ಅದ್ಭುತ ಪ್ರಯೋಜನಗಳು

By Manjula Balaraj
|

ಯಾವುದೇ ಸಿಹಿ ಪದಾರ್ಥ, ಕೂಟು ಅಥವಾ ಇನ್ನಿತರ ಸಾಂಬಾರು ತಯಾರಿಸಲು ಬಾದಾಮಿ ಇದ್ದರೆ ಅದರ ರುಚಿ ಮತ್ತು ತೂಕವೇ ಬೇರೆ. ಬಾದಾಮಿ ಎಣ್ಣೆಯಿಂದಾಗುವ ಉಪಯೋಗಗಳನ್ನು ಬಹಳಷ್ಟು ಜನರು ಅರಿತಿಲ್ಲ. ಬೋಲ್ಡ್ ಸ್ಕೈ ಈ ಲೇಖನದಲ್ಲಿ ಬಾದಾಮಿ ಮತ್ತು ಬಾದಾಮಿ ಎಣ್ಣೆಯ ಉಪಯೋಗದ ಬಗ್ಗೆ ತಿಳಿಸುತ್ತಿದೆ. ಬಾದಾಮಿಯನ್ನು ವಿವಿಧ ರೀತಿಯಲ್ಲಿ ಬಳಸುವುದರಿಂದ ಈ ಪದಾರ್ಥ ಬಹಳ ಜನಪ್ರಿಯ. ಆದರೆ, ಬಹಳಷ್ಟು ಜನರಿಗೆ ಮನುಷ್ಯನ ಆರೋಗ್ಯಕ್ಕೆ ಇದರಿಂದಾಗುವ ಲಾಭವೇನು ಎನ್ನುವುದರ ಬಗ್ಗೆ ಅಷ್ಟು ಅರಿವಿಲ್ಲ. ಸ್ನಾನ ಮಾಡಿದ ಮೇಲೆ ಬಾದಾಮಿ ಎಣ್ಣೆ ಹಚ್ಚಬಹುದು

ಇದು ಆರೋಗ್ಯಕ್ಕೆ ಬಹಳಷ್ಟು ಉಪಯೋಗವನ್ನು ನೀಡುವುದರ ಜೊತೆಗೆ ಗರ್ಭಿಣಿಯರು ಇದನ್ನು ಬಳಸುವುದು ಅತ್ಯಂತ ಸೂಕ್ತ. ಬಾದಾಮಿ ಮತ್ತು ಬಾದಾಮಿ ಎಣ್ಣೆ ನಡುವೆ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ, ಎರಡರಲ್ಲೂ ಹೆಚ್ಚಿನ ಪೌಷ್ಠಿಕಾಂಶ ಇರುತ್ತದೆ. ಇವೆರಡೂ ಅತಿ ಉತ್ತಮ ಎನ್ನಬಹುದಾದ ಪೌಷ್ಠಿಕಾಂಶವನ್ನು ಹೊಂದಿರುವುದಕ್ಕೆ ಹೆಸರುವಾಸಿ. ಅಲ್ಲದೆ ಬಾದಾಮಿ ಎಣ್ಣೆ ಪೌಷ್ಠಿಕಾಂಶದ ಜೊತೆಗೆ ಖನಿಜಾಂಶವನ್ನೂ ಹೊಂದಿದೆ. ಬಾದಾಮಿ ಎಣ್ಣೆಯಲ್ಲಿದೆ 6 ಸೌಂದರ್ಯವರ್ಧಕ ಗುಣಗಳು

ಅಡುಗೆಗೆ ಬಾದಾಮಿ ಎಣ್ಣೆ ಬಳಸುವುದು ಇನ್ನೊಂದು ಸೂಕ್ತವಾದ ವಿಧಾನ. ಬಾದಾಮಿ ಎಣ್ಣೆ ವಿವಿಧ ಸಂದರ್ಭಗಳಲ್ಲಿ, ವಿವಿಧ ಪರಿಸ್ಥಿತಿಯಲ್ಲಿ ದೈನಿಂದಿನ ಪದ್ಧತಿಯಲ್ಲಿ ಬಳಸುವುದರಿಂದ ಇದರ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ. ನಮ್ಮ ದಿನನಿತ್ಯದ ಡಯಟ್‌ಗೆ ಇದರ ಉಪಯೋಗವನ್ನು ಹೆಚ್ಚಾಗಿ ಪಡೆದುಕೊಳ್ಳಬಹುದು. ಪ್ರಮುಖವಾಗಿ ಹೃದಯಕ್ಕೆ ಸಂಬಂಧಿಸಿದಂತೆ, ಮೆದುಳಿಗೆ, ದೇಹದ ಪ್ರಕ್ರಿಯೆ ಉತ್ತಮವಾಗಿರಲು ಮತ್ತು ಕೊಬ್ಬು ಕಮ್ಮಿಮಾಡಲು ಕೂಡ ಇದು ಬಹಳ ಉಪಯೋಗವಾಗುತ್ತದೆ. ಅದೇ ರೀತಿ, ಬಾದಾಮಿ ಎಣ್ಣೆ ಬಳಕೆಯಿಂದ ಅತ್ಯುತ್ತಮವಾದ ಡಯಟ್‌ ಕೂಡ ಕಾಯ್ದುಕೊಳ್ಳಬಹುದಾಗಿದೆ. ಹಾಗಾಗಿ, ಈ ಲೇಖನದಲ್ಲಿ ಇದರಿಂದಾಗುವ ಉಪಯೋಗ ಮತ್ತು ಡಯಟ್ ಬಗ್ಗೆ ಬೋಲ್ಡ್ ಸ್ಕೈ ತಿಳಿಸುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...

ಆರೋಗ್ಯವರ್ಧನೆಗೆ ಸಹಕಾರಿ

ಆರೋಗ್ಯವರ್ಧನೆಗೆ ಸಹಕಾರಿ

ಬಾದಾಮಿ, ಯಕೃತ್ ನಿಂದಾಗಬಹುದಾದ ತೊಂದರೆಯನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿರುತ್ತದೆ, ಜೊತೆಗೆ ಗ್ಲುಕೋಸ್ ಅಂಶವನ್ನು ನಿಯಂತ್ರಿಸುತ್ತದೆ, ಹಾಗಾಗಿ ಸಕ್ಕರೆ ಕಾಯಿಲೆಯಿಂದ ದೂರವಿರಲು ಇದು ಬಹಳ ಪ್ರಮುಖವಾದ ಪದಾರ್ಥ. ಬಾದಾಮಿ ಎಣ್ಣೆಯನ್ನು ಹೆಚ್ಚು ಹೆಚ್ಚು ಬಳಸುವುದರಿಂದ ನಮ್ಮ ದೇಹದ ಸಿಸ್ಟಂ ಉತ್ತಮವಾಗಿ ಸ್ಪಂದಿಸುವುದರ ಜೊತೆಗೆ, ದೇಹದ ಇನ್ಸುಲಿನ್ ಅಂಶವನ್ನೂ ಹತೋಟಿಗೆ ತರುತ್ತದೆ.

ಮೆದುಳಿಗೆ ರಾಮಬಾಣ

ಮೆದುಳಿಗೆ ರಾಮಬಾಣ

ಬದಾಮಿಯಲ್ಲಿ ಓಮೆಗಾ - 6 ಆಸಿಡ್ ಮಿಶ್ರಿತ ಕೊಬ್ಬಿನಾಂಶ ಇರುವುದರಿಂದ ಇದು ಮೆದುಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಹೆಚ್ಚಿನ ಪೌಷ್ಠಿಕಾಂಶದಿಂದ ಮೆದುಳು ಇನ್ನೂ ಹೆಚ್ಚಿನ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಸಹಾಯವಾಗುತ್ತದೆ.

ಹಿಮೋಗ್ಲೋಬಿನ್ ವೃದ್ಧಿಸಲು ಸಹಕಾರಿ

ಹಿಮೋಗ್ಲೋಬಿನ್ ವೃದ್ಧಿಸಲು ಸಹಕಾರಿ

ಮನುಷ್ಯನ ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಕಮ್ಮಿಯಿದ್ದರೆ ಅನೀಮಿಯಾ ರೋಗ ಕಾಣಿಸುತ್ತದೆ, ಹಾಗಾಗಿ ಬಾದಾಮಿ ಎಣ್ಣೆಯಲಿ ಕಬ್ಬಿಣದ ಅಂಶ ಹೆಚ್ಚು ಇರುವುದರಿಂದ, ಹಿಮೋಗ್ಲೋಬಿನ್ ವೃದ್ಧಿಯಾಗಲು ಸಹಾಯವಾಗುತ್ತದೆ ಮತ್ತು ಆಮ್ಲಜನಕದ ಅಂಶ ಹೆಚ್ಚಾಗುತ್ತದೆ. ಕಬ್ಬಿಣದಾಂಶ, ಕಾಪರ್ ಮತ್ತು ಇತರ ವಿಟಮಿನ್ ಅಂಶಗಳು ಬಾದಾಮಿ ಎಣ್ಣೆಯಲ್ಲಿರುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಹೆಚ್ಚಾಗಲು ಬಾದಾಮಿ ಎಣ್ಣೆ ಬಹಳ ಸಹಾಯಕಾರಿಯಾಗಿದೆ.

ಕೊಬ್ಬಿನಾಂಶ ಕಡಿಮೆ ಮಾಡುತ್ತದೆ

ಕೊಬ್ಬಿನಾಂಶ ಕಡಿಮೆ ಮಾಡುತ್ತದೆ

ಒಮೆಗಾ - 3 ಆಸಿಡ್ ಮಿಶ್ರಿತ ರಕ್ತ ಕೊಬ್ಬಿನಾಂಶ ಮತ್ತು ಕೊಬ್ಬಿನ ಅಂಶ ದೇಹದಲ್ಲಿ ಕಮ್ಮಿಯಿದ್ದರೆ, ಅದು ಹೃದಯಕ್ಕೆ ಸಂಬಂಧಿಸಿದಂತೆ ಸಮಸ್ಯೆ, ಬಿಪಿ ಸಮಸ್ಯೆ ಹೆಚ್ಚಾಗಬಹುದು. ಬಾದಾಮಿ ಇದಕ್ಕೂ ಉತ್ತಮ ಪರಿಹಾರ.

ಅತ್ಯುತ್ತಮ ವಿಟಮಿನ್ ಮತ್ತು ಖನಿಜಾಂಶ

ಅತ್ಯುತ್ತಮ ವಿಟಮಿನ್ ಮತ್ತು ಖನಿಜಾಂಶ

ಬಾದಾಮಿಯಲ್ಲಿ ವಿಟಮಿನ್ ಮತ್ತು ಖನಿಜಾಂಶ ಹೆಚ್ಚಾಗಿರುವುದರಿಂದ ಆರೋಗ್ಯವರ್ಧನೆಗೆ ಇದು ಅತ್ಯುತ್ತಮ ಪದಾರ್ಥ. ಇದರಲ್ಲಿ ವಿಟಮಿನ್ ಇ, ವಿಟಮಿನ್ ಡಿ ಮತ್ತು ಇತರ ಖನಿಜಾಂಶಗಳಾದ ಪೊಟ್ಯಾಷಿಯಂ, ಮ್ಯಾಗ್ನೇಷಿಯಂ, ಕ್ಯಾಲ್ಸಿಯಂನ ಅಂಶ ಬದಾಮಿಯಲ್ಲಿ ಹೆಚ್ಚು ಇರುತ್ತದೆ.

ಗರ್ಭಿಣಿಯರ ಆರೋಗ್ಯಕ್ಕೆ ಇದರ ಬಳಕೆ ಸೂಕ್ತ

ಗರ್ಭಿಣಿಯರ ಆರೋಗ್ಯಕ್ಕೆ ಇದರ ಬಳಕೆ ಸೂಕ್ತ

ಬಾದಾಮಿ ಎಣ್ಣೆಯಲ್ಲಿರುವ ಎಲ್ಲಾ ಪೌಷ್ಠಿಕಾಂಶ ದೇಹಕ್ಕೆ ಉತ್ತಮ. ಇದರಲ್ಲಿನ ಫೋಲಿಕ್ ಆಸಿಡ್, ಕಬ್ಬಿಣಾಂಶ, ಕ್ಯಾಲ್ಸಿಯಂ ಮತ್ತು ವಿಟಮಿನ್ ಗಳು ಆರೋಗ್ಯಕ್ಕೆ ಉತ್ತಮ, ಅಲ್ಲದೆ, ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಅಭಿವೃದ್ಧಿಗೂ ಬಾದಾಮಿ ಉತ್ತಮ ಆಹಾರ ಪದಾರ್ಥವಾಗಿದೆ. ಹಾಗಾಗಿ ಗರ್ಭಿಣಿಯರು ಬಾದಾಮಿ, ಹಾಗೂ ಬಾದಾಮಿ ಎಣ್ಣೆಯನ್ನು ಹೆಚ್ಚಾಗಿ ಬಳಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.

X
Desktop Bottom Promotion